ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಅವಾಂತರ; ರಸ್ತೆಗಳಲ್ಲಿ ನೀರು, ವಾಹನ ಸವಾರರ ಪರದಾಟ

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಅವಾಂತರ; ರಸ್ತೆಗಳಲ್ಲಿ ನೀರು, ವಾಹನ ಸವಾರರ ಪರದಾಟ

ಬೆಂಗಳೂರಿನಲ್ಲಿ ಶನಿವಾರ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ನೀರು ಉಕ್ಕಿ ಹರಿದ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಅವಾಂತರ; ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಿಂದ ಅವಾಂತರ; ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರ ಪರದಾಡುವಂತಾಗಿದೆ. (@blrcitytraffic/X)

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ (Bengaluru Rain) ಶನಿವಾರ ಮಧ್ಯಾಹ್ನದಿಂದ ಆರಂಭವಾದ ಧಾರಾಕಾರ ಮಳೆ ಹಲವು ಗಂಟೆಗಳ ಕಾಲ ಮುಂದುವರಿದು ರಾತ್ರಿಯವರೆಗೂ ಸುರಿಯಿತು. ಗುಡುಗು ಮತ್ತು ಆಲಿಕಲ್ಲು ಸಹಿತ ಮಳೆಗೆ (Hailstorms) ನಗರದ ಮಂದಿ ಹೈರಾಣವಾಗಿದ್ದಾರೆ. ನಗರದ ಹಲವಾರು ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡು ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದ್ದರಿಂದ ಸಂಚಾರ ದಟ್ಟಣೆ ವರದಿಯಾಗಿದೆ. ನಗದಲ್ಲಿ ವರುಣ ತಂದ ಅವಾಂತರಗಳನ್ನು ಜನರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿಲ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶನಿವಾರ ಬೆಳಗ್ಗೆಯಿಂದ ಬಿಸಿಲಿನಿಂದ ಕೂಡದ ವಾತಾವರಣ ಇತ್ತು. ಆದರೆ ಮಧ್ಯಾಹ್ನಹದ ನಂತರ ಹವಾಮಾನ ತೀವ್ರ ಬದಲಾವಣೆಗೆ ಬೆಂಗಳೂರು ಸಾಕ್ಷಿಯಾಯಿತು. ಸಂಪೂರ್ಣವಾಗಿ ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು ಮಿಂಚು ಹಾಗೂ ಬಿರುಗಾಳಿಯೂ ಆರಂಭವಾಯಿತು. ಜನರು ಎಚ್ಚರಿಕೆಯಿಂದ ಇರಬೇಕು. ಮನೆಯೊಳಗೆಯೇ ಇರಬೇಕೆಂದು ಸೂಚಿಸಿದರು. ಮಧ್ಯಾಹ್ನದ ಬಳಿಕ ವರುಣ ಅಬ್ಬರಿಸೋಕೆ ಶುರು ಮಾಡಿದ. ಎಂಜಿ ರಸ್ತೆ, ಕಬ್ಬನ್ ಪಾರ್ಕ್, ವಿಧಾನಸೌಧ, ವಸಂತನಗರ, ಶಿವಾಜಿನಗರ, ಆರ್‌ಟಿ ನಗರ, ಹೆಬ್ಬಾಳ, ಮುನಿರೆಡ್ಡಿಪಾಳ್ಯ, ಸುಲ್ತಾನ್ ಪಾಳ್ಯ, ಯಶವಂತಪುರ, ದೊಡ್ಡಬೊಮ್ಮಸಂದ್ರ, ಕಲ್ಯಾಣನಗರ, ನಾಗವಾರ ಸೇರಿದಂತೆ ಹಲವೆಡೆ ಭರ್ಜರಿ ಮಳೆ ಸುರಿದಿದೆ.

"ಕೋಣನಕುಂಟೆ ಕ್ರಾಸ್‌ನಲ್ಲಿ ಇಂದಿನ ಆಲಿಕಲ್ಲು ಮತ್ತು ಮಳೆ ನೋಟ" ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು 'ಎಕ್ಸ್' ನಲ್ಲಿ ಹಂಚಿಕೊಂಡಿದ್ದಾರೆ.

"ಬೆಂಗಳೂರಿನಲ್ಲಿ ಭಾರಿ ಮಳೆ. ಸ್ಥಳ: ಎಲೆಕ್ಟ್ರಾನಿಕ್ ಸಿಟಿ" ಎಂದು ಪ್ರಿಯತೋಷ್ ಎಂಬ ಮತ್ತೊಬ್ಬ ನೆಟ್ಟಿಗರು ವಿಡಿಯೊ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ.

"ಬೆಂಗಳೂರಿನ ಪೀಣ್ಯದಲ್ಲಿ ತೀವ್ರ ಮಳೆಯಾಗುತ್ತಿದೆ" ಎಂದು ಮತ್ತೊಬ್ಬರು ಬರೆದಿದ್ದಾರೆ.

"ಬೆಂಗಳೂರು ವಿಶ್ವವಿದ್ಯಾಲಯದಿಂದ ಭಾರಿ ಮಳೆಯಾಗುತ್ತಿದೆ" ಎಂದು ಮತ್ತೊಂದು ಪೋಸ್ಟ್‌ನಲ್ಲಿ ನೆಟ್ಟಿಗರು ಮಾಹಿತಿ ಹಂಚಿಕೊಂಡಿದ್ದಾರೆ.

"

ರಸ್ತೆಯ ಮೇಲೆ ಮರದ ಕೊಂಬೆ ಬಿದ್ದ ಕಾರಣ ದಾಲ್ಮಿಯಾ ಜಂಕ್ಷನ್ ಕಡೆಗೆ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ" ಎಂದು ಮೈಕೋ ಲೇಔಟ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸಂಚಾರ ಸಲಹೆ: ಕಸ್ತೂರಿ ನಗರದಲ್ಲಿ ರಸ್ತೆಯ ಮೇಲೆ ನೀರು ನಿಂತಿರುವುದರಿಂದ ಹೆಬ್ಬಾಳ ಕಡೆಗೆ ಹೋಗುವ ವಾಹನ ನಿಧಾನಗತಿಯ ಸಂಚಾರವಿರುತ್ತದೆ. ವಾಹನ ಸವಾರರು ಸಹಕರಿಸಲು ಕೋರಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

"ಮಾರ್ಕೆಟ್ ಡೌನ್ ರ‍್ಯಾಂಪ್‌ನಿಂದ ಟೌನ್ ಹಾಲ್ ಕಡೆಗೆ ನೀರು ನಿಂತಿದ್ದರಿಂದ ವಾಹನಗಳ ನಿಧಾನವಾಗಿ ಸಂಚರಿಸುತ್ತಿವೆ. ವಾಹನ ಪ್ರಯಾಣಿಕರು ದಯವಿಟ್ಟು ಸಹಕರಿಸಿ" ಎಂದು ಸಂಚಾರ ಪೊಲೀಸರು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024