ಕನ್ನಡ ಸುದ್ದಿ  /  ಕರ್ನಾಟಕ  /  ಸಿನಿಮಾ, ಲವ್, ಅಧಿಕಾರ ಸೇರಿ ಈ ವಿಷಯಗಳ ಬಗ್ಗೆ ನಿಮ್ಮ ಬಳಿ ಸ್ಟೋರಿಗಳಿವೆಯಾ? ವೀರಲೋಕಕ್ಕೆ ಕಥೆ ಕಳಿಸಿ ಸಂಭಾವನೆ ಪಡೆಯಿರಿ

ಸಿನಿಮಾ, ಲವ್, ಅಧಿಕಾರ ಸೇರಿ ಈ ವಿಷಯಗಳ ಬಗ್ಗೆ ನಿಮ್ಮ ಬಳಿ ಸ್ಟೋರಿಗಳಿವೆಯಾ? ವೀರಲೋಕಕ್ಕೆ ಕಥೆ ಕಳಿಸಿ ಸಂಭಾವನೆ ಪಡೆಯಿರಿ

ವಿವಿಧ ವಿಷಯಗಳ ಮೇಲೆ ಸ್ಟೋರಿಗಳನ್ನು ಬರೆಯುವ ಹವ್ಯಾಸ ನಿಮಗಿದ್ದರೆ ಸುಲಭವಾಗಿ ಹಣ ಗಳಿಸಬಹುದು. ಇದಕ್ಕಾಗಿ ವೀರಲೋಕ ವೇದಿಕೆಯನ್ನು ಒದಗಿಸಿದೆ. ವೀರಲೋಕಕ್ಕೆ ಯಾವ ರೀತಿಯ ಕಥೆಗಳನ್ನು ಬರೆದು ಕಳಿಸಿ ಸಂಭಾವನೆ ಪಡೆಯಬಹುದು ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿನಿಮಾ, ಲವ್, ಅಧಿಕಾರ ಸೇರಿ ಈ ವಿಷಯಗಳ ಬಗ್ಗೆ ನಿಮ್ಮ ಬಳಿ ಸ್ಟೋರಿಗಳಿವೆಯಾ? ವೀರಲೋಕಕ್ಕೆ ಕಥೆ ಕಳಿಸಿ ಸಂಭಾವನೆ ಪಡೆಯಿರಿ
ಸಿನಿಮಾ, ಲವ್, ಅಧಿಕಾರ ಸೇರಿ ಈ ವಿಷಯಗಳ ಬಗ್ಗೆ ನಿಮ್ಮ ಬಳಿ ಸ್ಟೋರಿಗಳಿವೆಯಾ? ವೀರಲೋಕಕ್ಕೆ ಕಥೆ ಕಳಿಸಿ ಸಂಭಾವನೆ ಪಡೆಯಿರಿ

ಬೆಂಗಳೂರು: ನೀವೇನಾದರೂ ನಿಮ್ಮ ಇಷ್ಟದ ವಿಷಯಗಳ ಮೇಲೆ ಅತ್ಯುತ್ತಮವಾಗಿ ಸ್ಟೋರಿಗಳನ್ನು ಬರೆಯುವವರಾಗಿದ್ದಾರೆ. ನಿಮಗಾಗಿ ವೀರಲೋಕ ಬುಕ್ಸ್‌ ಕಡೆಯಿಂದ ವೇದಿಕೆಯೊಂದನ್ನು ಕಲ್ಪಿಸಲಾಗಿದೆ. ಮನೆಯಿಂದಲೇ ಸ್ಟೋರಿಯನ್ನು ಬರೆದು ಕಳುಹಿಸಿ ಸಂಭಾವನೆ ಪಡೆಯಬಹುದು. ವೀರಲೋಕ ಬುಕ್ಸ್ (Veeraloka Books) ಸಂಸ್ಥೆ ಆಸಕ್ತರಿಂದ ವಿವಿಧ ವಿಷಯಗಳ ಮೇಲೆ ಕಥೆಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಸ್ಟೋರಿಗಳಿಗೆ ತುಸು ಹೆಚ್ಚೇ ಸಂಭಾವನೆ ನೀಡಲಾಗುತ್ತದೆ ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಅಲ್ಲದೆ, ನಿಮ್ಮ ಕೃತಿಗಳನ್ನು 2024ರ ಸೆಪ್ಟೆಂಬರ್ 30 ರೊಳಗೆ ವೀರಲೋಕ ವಿಳಾಸಕ್ಕೆ ಕಳುಹಿಸುವಂತೆ ಸೂಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಹಾಗಿದ್ದರೆ ಎಂತಹ ಸ್ಟೋರಿಗಳನ್ನು ಕಳುಹಿಸಬೇಕು? ಹೇಗೆ ಕಳುಹಿಸಬೇಕು? ಏನಾದರೂ ನಿಯಮಗಳು, ಷರತ್ತುಗಳು ಇವೆಯೇ ಎಂಬುದನ್ನು ನೋಡುವುದಾದರೆ ನೀವು ಬರೆದ ಕಥೆ ಅಥವಾ ಪುಟ್ಟ ಕಥೆಗಳನ್ನು ಯೂನಿಕೋಡ್ ಅಥವಾ ನುಡಿಯಲ್ಲಿ ಟೈಪ್ ಮಾಡಿ ಪ್ರಿಂಟ್ ತೆಗೆದು ಅದರ ಪ್ರತಿಯನ್ನು ವೀರಲೋಕ ಬುಕ್ಸ್ ವಿಳಾಸಕ್ಕೆ ಕಳುಹಿಸಬೇಕು.

ಎಂತಹ ಸ್ಟೋರಿಗಳನ್ನು ಕಳುಹಿಸಬಹುದು ಎಂಬುದನ್ನು ನೋಡುವುದಾದರೆ, ಸಾಮಾಜಿಕ ಜಾಲತಾಣ ಎಫ್‌ಬಿಯಲ್ಲಿ ಹಂಚಿಕೊಂಡಿರುವ ಪ್ರಕಟಣೆ ಪ್ರಕಾರ, ಸಿನಿಮಾ ಕಥೆಗಳು, ಗೆಲುವಿನ ಕುರಿತ ಮಾನದಂಡಗಳು, ಸ್ಪೂರ್ತಿದಾಯಕ ಕಥೆಗಳು, ಯುನಿಕ್ ಲವ್ ಸ್ಟೋರಿ, ಗೆಳೆತನದ ಕಥೆಗಳು, ಗೆದ್ದವರ ವ್ಯಥೆಗಳು, ರಾಜಕಾರಣಿಗಳ್ಯಾಗೆ ಹಾಗೆ, ಅಧಿಕಾರ ಏನೆಲ್ಲಾ ಮಾಡ್ಸುತ್ತೆ, ಅಧಿಕಾರಕ್ಕಾಗಿ ಏನೆಲ್ಲಾ ಮಾಡ್ತಾರೆ, ಬಡವರು ದುಡ್ ಮಾಡೋದ್ ಹೇಗೆ, ಶ್ರೀಮಂತರು ದುಡ್ ಬಿಚ್ಚಲ್ಲ ಯಾಕೆ, ಅದ್ಭುತ ಕನಸುಗಳು ಸೋತಿದ್ದು ಹೇಗೆ, ಕೆಟ್ಟ ಯೋಜನೆ ಕ್ಲಿಕ್ ಆಗಿದ್ದು ಹೇಗೆ, ಕ್ಷಣಿಕ ಸುಖ, ಆತುರ, ಕೋಪ, ಒಂದು ತಪ್ಪು ನಿರ್ಧಾರ ಕಷ್ಟಪಟ್ಟು ಕಟ್ಟಿಕೊಂಡ ಸಮ್ರಾಜ್ಯವನ್ನು ಕೆಡವಿದ್ದು ಹೇಗೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಸ್ಟೋರಿಗಳನ್ನು ಬರೆಯಬಹುದು.

ವೀರಲೋಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರಕಟಣೆ ಪ್ರಕಾರ, ನೀವು ಹೊಸಬರಾದರೂ ಚಿಂತೆಯಿಲ್ಲ. ನಿಮಗೆ ವಿಷಯದ ಆಳ ಗೊತ್ತಿದ್ದರೆ ಸಾಕು. ನಿಮ್ಮ ಬರಹಕ್ಕೆ ಆಂಗ್ಲ ಭಾಷೆಯ ಸಾಹಿತ್ಯದಲ್ಲಿರುವ ಹಾಗೆ ಎಡಿಟರರ್ ವ್ಯವಸ್ಥೆಯನ್ನು ಮಾಡಲಾಗುತ್ತದೆ. ನಿಮ್ಮ ಬರಹ ಮೌಲ್ಯಯುತವಾಗಿದ್ದರೆ ಖಂಡಿತ ಪ್ರಕಟಿಸುತ್ತೇವೆ ಎಂದು ಹೇಳಿದೆ.

ಆಸಕ್ತರು ವೀರಲೋಕಕ್ಕೆ ಕಥೆಗಳನ್ನು ಬರೆದು ಕಳುಹಿಸಲು ವಿಳಾಸ - #207, 2ನೇ ಮಹಡಿ, 3ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560018. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ- 70221 22122, 88612 12172.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024