Bengaluru Encroachment: ಬೆಂಗಳೂರಿನ ದೊಡ್ಡನೆಕ್ಕುಂದಿ, ಹೊಯ್ಸಳನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ; ಮಾಜಿ ಶಾಸಕನಿಂದ ಅಡ್ಡಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Encroachment: ಬೆಂಗಳೂರಿನ ದೊಡ್ಡನೆಕ್ಕುಂದಿ, ಹೊಯ್ಸಳನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ; ಮಾಜಿ ಶಾಸಕನಿಂದ ಅಡ್ಡಿ

Bengaluru Encroachment: ಬೆಂಗಳೂರಿನ ದೊಡ್ಡನೆಕ್ಕುಂದಿ, ಹೊಯ್ಸಳನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯ; ಮಾಜಿ ಶಾಸಕನಿಂದ ಅಡ್ಡಿ

ದೊಡ್ಡನೆಕ್ಕುಂದಿಯ ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದಾರೆ.

ಬೆಂಗಳೂರಿನ ದೊಡ್ಡನೆಕ್ಕುಂದಿಯ ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದಾರೆ.
ಬೆಂಗಳೂರಿನ ದೊಡ್ಡನೆಕ್ಕುಂದಿಯ ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದಾರೆ.

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಯ ದೊಡ್ಡನೆಕುಂದಿ ಹಾಗೂ ಹೊಯ್ಸಳನಗರ ವ್ಯಾಪ್ತಿಯಲ್ಲಿ ಸೋಮವಾರ (ಜೂನ್ 19) ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು (Bengaluru Encroachment) ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ಮಹದೇವಪುರ ವಲಯ ದೊಡ್ಡನೆಕ್ಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸರ್ವೇ ಸಂ. 24/1, 3, 4 ಮತ್ತು 5ರ ಫರ್ನ್ ಸಿಟಿಯಲ್ಲಿ ಹಾದುಹೋಗಿರುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಸುಮಾರು 200 ಮೀಟರ್ ಉದ್ದದ ರಾಜಕಾಲುವೆ ಮೇಲೆ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಕಾಂಪೌಂಡ್ ಗೋಡೆ, ಕ್ಲಬ್ ಹೌಸ್ ಕಟ್ಟಡ, ಸ್ವಿಮ್ಮಿಂಗ್ ಫೂಲ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್.ಟಿ.ಪಿ), ಕಟ್ಟಡ ಹಾಗೂ ಕಾಂಪೌಂಡ್ ಗೋಡೆಯನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದರು.

ಫರ್ನ್ ಸಿಟಿ ನಂತರದ ಸ್ಥಳ ಸುಮಾರು 200 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದ ಖಾಲಿ ಸ್ಥಳ, ಗೌಡ್ರು ರಾಜಣ್ಣ ಹೋಟೆಲ್ ಶೆಡ್ ಅನ್ನು ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು. ಇನ್ನು ಭಗಿನಿ ಹೋಟೆಲ್ ಅನ್ನು ತೆರವುಗೊಳಿಸಲು ಮುಂದಾದಾಗ ಹೋಟೆಲ್‌ನವರೇ ಸ್ವಯಂ ತೆರವುಗೊಳಿಸಿಕೊಳ್ಳುವುದಾಗಿ ತಿಳಿಸಿದ್ದರಿಂದ, ಈ ಪೈಕಿ ತ್ವರಿತವಾಗಿ ತೆರವು ಮಾಡಲು ಅಧಿಕಾರಿಗಳು ಹೋಟೆಲ್ ಮಾಲೀಕರಿಗೆ ಸೂಚನೆ ನೀಡಿದರು.

ಮಹದೇವಪುರ ವ್ಯಾಪ್ತಿಯಲ್ಲಿ ರಾಜಕಾಲುವೆಯನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಗುರುತಿಸಿ ಭೂಮಾಪಕರ ಮುಖಾಂತರ ಗಡಿ ಗುರುತಿಸಿ, ತಹಶೀಲ್ದಾರ್ ಮೂಲಕ ಒತ್ತುವರಿ ಮಾಡಿರುವವರಿಗೆ ಆದೇಶಗಳನ್ನು ಜಾರಿಗೊಳಿಸಿ ಹಂತ-ಹಂತವಾಗಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ಫರ್ನ್ ಸಿಟಿ ಆವರಣದಲ್ಲಿ ಒತ್ತುವರಿ ತೆರವುಗೊಳಿಸಲಾಗಿದ್ದು, ಮಧ್ಯಾಹ್ನದ ನಂತರ ಫರ್ನ್ ಸಿಟಿ ಮಾಲೀಕರು ಮಾನ್ಯ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಫರ್ನ್ ಸಿಟಿ ಸೇರಿದಂತೆ ತಡೆಯಾಜ್ಞೆ ತಂದಿರುವಂತಹ ಒತ್ತುವರಿಗಳನ್ನು ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿಕೊಂಡು ಒತ್ತುವರಿಗಳನ್ನು ತೆರವುಗೊಳಿಸಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಕಾಲುವೆಗಳ ನಿರ್ಮಾಣ ಮಾಡಲಾಗುವುದು ಎಂದು ಬೃಹತ್ ನೀರುಗಾಲುವೆ ವಿಭಾಗದ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ತಿಳಿಸಿದ್ದಾರೆ.

ಒತ್ತುವರಿ ತೆರವಿಗೆ ಅಡ್ಡಿಪಡಿಸಿದ ಮಾಜಿ ಶಾಸಕ ನಂದೀಶ್ ರೆಡ್ಡಿ

ದೊಡ್ಡನೆಕ್ಕುಂದಿಯ ಫರ್ನ್ ಸಿಟಿ ಬಡಾವಣೆಯ ವಿಲ್ಲಾದಲ್ಲಿ ಒತ್ತುವರಿ ಮಾಡಿಕೊಂಡಿರುವ ಐಶಾರಾಮಿ ಕ್ಲಬ್ ಹೌಸ್ ಮತ್ತು ಈಜುಕೊಳ ತೆರವು ಕಾರ್ಯಚರಣೆ ವೇಳೆ ಮಾಜಿ ಶಾಸಕ ನಂದೀಶ್ ರೆಡ್ಡಿ ಜೆಸಿಬಿ ಕೀ ಕಿತ್ತುಕೊಂಡು ತೆರವಿಗೆ ಅಡ್ಡಿಪಡಿಸಿದ್ದಾರೆ.

ನೂರಕ್ಕೂ ಹೆಚ್ಚು ವಿಲ್ಲಾ ನಿವಾಸಿಗಳ ಜೊತೆ ಬಂದ ನಂದೀಶ್ ರೆಡ್ಡಿ ಬಿಬಿಎಂಪಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ನೀವು ಪಕ್ಷಪಾತ ಮಾಡುತ್ತಿದ್ದಿರಿ. ತೆರವು ಮಾಡಲು ಬಂದರೆ ಜೆಸಿಬಿ ಅಡ್ಡವಾಗಿ ಕುಳಿತುಕೊಳ್ಳುತ್ತೇನೆ, ನೀವು ತೆರವು ಮಾಡಿ ಎಂದು ಏರುಧ್ವನಿಯಲ್ಲಿ ಅಧಿಕಾರಿಗಳಿಗೆ ಧಮಕಿ ಹಾಕಿದರು. ಗರುಡಚಾರಪಾಳ್ಯ ಕೆರೆಯ ಆರಂಭದಿಂದ ತೆರವು ಮಾಡಿಕೊಂಡು ಬಂದರೆ ಮಾತ್ರ ಇಲ್ಲಿ ತೆರವು ಮಾಡಲು ಬಿಡುತ್ತೇವೆ ಇಲ್ಲದಿದ್ದರೆ ತೆರವು ಮಾಡಲು ಬಿಡುವುದಿಲ್ಲ ಎಂದು ಕೆಲ ಸಮಯ ಬಿಗಿಪಟ್ಟುಹಿಡಿದು ಕುಳಿತರು.

ಬೇರೆ ಎಲ್ಲಾ ಕಡೆ ಹೈಕೋರ್ಟ್ ತಡೆಯಾಜ್ಞೆ ಇದೆ ಇಲ್ಲಿ ಮಾತ್ರ ಒತ್ತುವರಿ ತೆರವಿಗೆ ಮುಂದಾಗಿದ್ದಿರಿ ತೆರವು ಮಾಡುವ ಅಗತ್ಯವೇನಿದೆ. ಆರಂಭದಿಂದ ತೆರವು ಮಾಡಲು ಬಿಟ್ಟು ಮಧ್ಯದಲ್ಲಿ ತೆರವು ಮಾಡಿದರೆ ಮಳೆ ನೀರು ಹೋಗುತ್ತಾ ಎಂದು ಪ್ರಶ್ನಿಸಿದರು. ಬಿಬಿಎಂಪಿ ಅಧಿಕಾರಿಗಳ ನಡುವೆ ಕೆಲಕಾಲ ಘರ್ಷಣೆ ಉಂಟಾಯಿತು. ನಿವಾಸಿಗಳನ್ನು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಲು ಪೊಲೀಸ್ ಅಧಿಕಾರಿಗಳು ಹರಸಹಾಸ ಪಟ್ಟರು.

ನಾವು ಯಾರು ರಾಜಕಾಲುವೆ ಒತ್ತುವರಿ ತೆರವಿನ ವಿರೋಧಿಗಳಲ್ಲ. ನನ್ನದು ಖಾಲಿ ಜಾಗವು ಇಲ್ಲಿಲ್ಲ. ಇದ್ದರೆ ತೆರವು ಮಾಡಿ. ಆರಂಭದಿಂದ ಒತ್ತುವರಿ ತೆರವು ಮಾಡಲು ಬಿಟ್ಟು ಮಧ್ಯದಲ್ಲಿ ತೆರವು ಮಾಡಿದರೆ ಪ್ರವಾಹ ಉಂಟಾಗುತ್ತದೆ ಎಂದು ಮಾಜಿ ಶಾಸಕ ನಂದೀಶ್ ರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು.

ನಿವಾಸಿಗಳ ನಡುವೆ ಕಿತ್ತಾಟ: ಬಿಬಿಎಂಪಿ ಅಧಿಕಾರಿಗಳು ವಿಲ್ಲಾ ಬಳಿ ತೆರವು ಮಾಡುವ ವೇಳೆ ಅಡ್ಡಿಪಡಿಸಲು ನೆರವಿಗೆ ಧಾವಿಸಲಿಲ್ಲ ಎಂದು ನಿವಾಸಿಗಳ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಪೊಲೀಸರು ನಿವಾಸಿಗಳನ್ನು ಚದುರಿಸಿದರು.

Whats_app_banner