BESCOM Updates; ಬೆಸ್ಕಾಂ ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಕರೆಂಟ್‌ ಕಟ್‌ ಮಾಡ್ತಾರೆ ಲೈನ್‌ಮ್ಯಾನ್-bengaluru news from sept 1 power disconnection for unpaid bills bescom announces strict enforcement uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bescom Updates; ಬೆಸ್ಕಾಂ ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಕರೆಂಟ್‌ ಕಟ್‌ ಮಾಡ್ತಾರೆ ಲೈನ್‌ಮ್ಯಾನ್

BESCOM Updates; ಬೆಸ್ಕಾಂ ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಕರೆಂಟ್‌ ಕಟ್‌ ಮಾಡ್ತಾರೆ ಲೈನ್‌ಮ್ಯಾನ್

Bengaluru News; ಬೆಸ್ಕಾಂ ವ್ಯಾಪ್ತಿಯಲ್ಲಿ ಇನ್ನು, ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಲೈನ್‌ಮ್ಯಾನ್ ಬಂದು ಕರೆಂಟ್‌ ಕಟ್‌ ಮಾಡ್ತಾರೆ. ಬಿಲ್‌ನ 30 ದಿನಗಳ ಗಡುವು ಮೀರಿದಲ್ಲಿಈ ಕ್ರಮ ಜರುಗಿಸಲು ಬೆಸ್ಕಾಂ ಮುಂದಾಗಿದೆ. ಇದರ ವಿವರ ಈ ವರದಿಯಲ್ಲಿದೆ.

ಬೆಸ್ಕಾಂ ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಕರೆಂಟ್‌ ಕಟ್‌ ಮಾಡ್ತಾರೆ ಲೈನ್‌ಮ್ಯಾನ್. (ಸಾಂಕೇತಿಕ ಚಿತ್ರ)
ಬೆಸ್ಕಾಂ ಬಿಲ್ ಮುಂದಿನ ತಿಂಗಳು ಕಟ್ಟೋಣ ಅಂತ ಬಾಕಿ ಉಳಿಸಬೇಡಿ, ಸೆ 1 ರಿಂದ ಕರೆಂಟ್‌ ಕಟ್‌ ಮಾಡ್ತಾರೆ ಲೈನ್‌ಮ್ಯಾನ್. (ಸಾಂಕೇತಿಕ ಚಿತ್ರ)

ಬೆಂಗಳೂರು: ಬೆಸ್ಕಾಂ ಬಿಲ್‌ ಬಂದ 30 ದಿನಗಳ ಒಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದೇ ಇದ್ದರೆ, ಕೆಇಆರ್‌ಸಿ ನಿಯಮದ ಪ್ರಕಾರ, ಗ್ರಾಹಕರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಸಿದೆ.

ಈ ನಿಯಮವನ್ನು ಮುಂದಿನ ತಿಂಗಳಿನಿಂದಲೇ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಹೇಳಿರುವ ಬೆಸ್ಕಾಂ, ಸರಿಯಾದ ಸಮಯಕ್ಕೆ ಬಿಲ್ ಪಾವತಿ ಮಾಡುವಂತೆ ಬಳಕೆದಾರರಲ್ಲಿ ಮನವಿ ಮಾಡಿದೆ.

ಬೆಸ್ಕಾಂ ಬಿಲ್ ಪಾವತಿ ನಿಯಮ ಬಿಗಿ; ಸೆ.1 ರಿಂದ ಕಟ್ಟುನಿಟ್ಟಾಗಿ ಜಾರಿ

ಬೆಸ್ಕಾಂ ಈ ನಿಯಮವನ್ನು ಸೆಪ್ಟೆಂಬರ್‌ 1ರಿಂದ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಿದ್ದು, ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‌ಮೆಂಟ್‌ಗಳು ಹಾಗೂ ತಾತ್ಕಲಿಕ ವಿದ್ಯುತ್‌ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್‌ ಪಾವತಿಸದಿದ್ದಲ್ಲಿ ಮೀಟರ್‌ ರೀಡಿಂಗ್‌ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವುದಾಗಿ ಹೇಳಿದೆ. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಎಂದು ಬೆಸ್ಕಾಂ ಪ್ರಕಟಣೆ ಕೋರಿದೆ.

ವಿದ್ಯುತ‌ ಬಿಲ್‌ ಪಾವತಿಗೆ ಅಂತಿಮ ದಿನಾಂಕದವರೆಗೆ (ಅಂದರೆ ಬಿಲ್ ನೀಡಿದ 15 ದಿನಗಳು) ಯಾವುದೇ ಬಡ್ಡಿಯಿಲ್ಲದೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಅಂತಿಮ ದಿನಾಂಕದ ನಂತರವೂ ಬಡ್ಡಿಸಹಿತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಆದಾಗ್ಯೂ ಗ್ರಾಹಕರು ಬಿಲ್ ಪಾವತಿಸದಿದ್ದಲ್ಲಿ ಮುಂದಿನ‌ ಮೀಟರ್ ರೀಡಿಂಗ್ ದಿನವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ವಿದ್ಯುತ್ ಬಿಲ್ ಬಾಕಿ ಮೊತ್ತ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ 100 ರೂಪಾಯಿಗಿಂತ ಅಧಿಕವಾಗಿದ್ದಲ್ಲಿ, ಅಂತಹ ಸ್ಥಾಪನಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಇದುವರೆಗೆ ಏನು ಮಾಡುತ್ತಿದ್ದರು; ಗ್ರಾಹಕರಿಗೆ ವಿಶೇಷ ಸೂಚನೆ

ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್‌ ಮಾಪನ ಮಾಡಿದ ಬಳಿಕ, ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಲೈನ್‌ಮೆನ್‌ಗಳ ಜತೆ ಮೀಟರ್ ರೀಡಿಂಗ್ ಮಾಡುವವರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಫ್ಯೂಸ್ ತಗೊಂಡು ಹೋಗ್ತಾ ಇದ್ದರು. ಆದರೆ ಇನ್ನು ಮುಂದೆ ಮೀಟರ್ ರೀಡಿಂಗ್ ಮಾಡುವವರ ಜೊತೆಗೆ ಲೈನ್‌ಮನ್‌ಗಳು ಕೂಡ ಬರುತ್ತಾರೆ.

ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಇನ್ನು ಮುಂದೆ ಮಾಪಕ ಓದುಗರೊಂದಿಗೆ ಇರುವ ಲೈನ್‌ಮೆನ್‌ಗಳು ವಿದ್ಯುತ್‌ ಬಿಲ್‌ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.

ಆನ್‌ಲೈನ್ ಮೂಲಕ ವಿದ್ಯುತ್‌ ಬಿಲ್‌ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಬೆಸ್ಕಾಂ ಸಾಫ್ಟ್‌ವೇರ್‌ನಲ್ಲಿ ವಿವರ ನಮೂದಾಗದೇ ಇದ್ದಾಗ, ಬಾಕಿ ತೋರಿಸುವ ಸಾಧ್ಯತೆ ಇರುತ್ತದೆ. ಇಂಥ ಸಂದರ್ಭದಲ್ಲಿ ವಿದ್ಯುತ್‌ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್‌ ರಸೀದಿ ತೋರಿಸಿ. ಅಂತಹ ಸಂದರ್ಭದಲ್ಲಿ ವಿದ್ಯುತ್‌ ಕಡಿತ ಮಾಡಲಾಗುವುದಿಲ್ಲ. ಹಾಗಾಗಿ, ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ಬೆಸ್ಕಾಂ ತಿಳಿಸಿದೆ.