ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರ ಸೆರೆ, ವಾಹನ ಕಳವು ಪ್ರಕರಣ 37 ಆರೋಪಿಗಳ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರ ಸೆರೆ, ವಾಹನ ಕಳವು ಪ್ರಕರಣ 37 ಆರೋಪಿಗಳ ಬಂಧನ

ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರ ಸೆರೆ, ವಾಹನ ಕಳವು ಪ್ರಕರಣ 37 ಆರೋಪಿಗಳ ಬಂಧನ

ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ 4 ಆರೋಪಿಗಳ ಸೆರೆಯಾಗಿದೆ. ಅದೇ ರೀತಿ, ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ಒಟ್ಟು 37 ಆರೋಪಿಗಳನ್ನು ಬಂಧಿಸಿ 67 ವಾಹನ ಜಪ್ತಿ ಮಾಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರ ಸೆರೆ, ವಾಹನ ಕಳವು ಪ್ರಕರಣ 37 ಆರೋಪಿಗಳ ಬಂಧನ (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಬುರ್ಖಾ ಧರಿಸಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರ ಸೆರೆ, ವಾಹನ ಕಳವು ಪ್ರಕರಣ 37 ಆರೋಪಿಗಳ ಬಂಧನ (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಚಿನ್ನಾಭರಣ ಮಳಿಗೆಗಳಲ್ಲಿ ಉದ್ಯೋಗಿಗಳ ಗಮನವನ್ನು ಬೇರೆಡೆಗೆ ಸೆಳೆದು ಆಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕುಮಾರಸ್ವಾಮಿ ಲೇ ಔಟ್‌ ಪೊಲೀಸ್‌ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಚಿತ್ರದುಗ ಜಿಲ್ಲೆಯ ಭರಮಸಾಗರ ನಿವಾಸಿಗಳಾದ ಶಹೀದಾಬಾನು, ಶೀನಾ ಬಾನು, ಅಮೀನಾಬಿ ಮತ್ತು ಶಫೀವುಲ್ಲಾ ಎಂದು ಪೊಲೀಸರು ಹೇಳಿದ್ದಾರೆ.

ಕುಮಾರಸ್ವಾಮಿ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿನ್ನಾಭರಣ ಅಂಗಡಿಯ ಮಾಲೀಕರೊಬ್ಬರು ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿ ಅವರಿಂದ 5 ಲಕ್ಷ ರೂ. ಮೌಲ್ಯದ 78 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳಲ್ಲಿ ಇಬ್ಬರು ಬುರ್ಖಾ ಧರಿಸಿ ಮಳಿಗೆಗೆ ಆಗಮಿಸಿದ್ದರು. ಅಲ್ಲಿನ ಉದ್ಯೋಗಿಗಳು ಚಿನ್ನದ ಆಭರಣಗಳನ್ನು ತೋರಿಸುತ್ತಿರುವಾಗ 78 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿದ್ದರು.

ಇಸ್ರೋ ಲೇ ಔಟ್‌ ನಲ್ಲಿ ದೇವರಕೆರೆ ಸಮೀಪದ ಖಾಲಿ ನಿವೇಶನದಲ್ಲಿ ಕಾರು ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು. ಅನುಮಾನಗೊಂಡ ಪೊಲೀಸರು ಇವರನ್ನು ಬಂಧಿಸಿದ್ದಾರೆ. ಇವರು ಕಳವು ಮಾಡಿದ್ದ ಚಿನ್ನದ ಸರವನ್ನು ಭರಮಸಾಗರದ ಚಿನ್ನಾಭರಣ ಮಾಡುವವರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಕಳ್ಳರ ಬಂಧನ; 37 ಮಂದಿ ಬಂಧನ, 67 ವಾಹನ ಜಪ್ತಿ

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ 10 ಮಂದಿಯನ್ನು ಬಂಧಿಸಿರುವ ಪೊಲೀಸರು ರೂ.37.74 ಲಕ್ಷ ರೂ ಮೌಲ್ಯದ 37 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಸರಘಟ್ಟ ರಸ್ತೆಯ ಬಾಗಲಕುಂಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನವೊಂದು ಕಳವಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ಶೆಟ್ಟಿಹಳ್ಳಿ ಗೇಟ್‌ ಹತ್ತಿರ ಉತ್ತರಹಳ್ಳಿಯ ದರ್ಶನ್‌ ಮತ್ತು ಮಂಡ್ಯ ಮೂಲದ ದರ್ಶನ್‌ ಎಲೆಕ್ಟ್ರಾನಿಕ್ಸ್‌ ಸಿಟಿ ನಿವಾಸಿ ಭುವನ್‌ ಅವರನ್ನು ಬಂಧಿಸಿದ್ದಾರೆ.

ಕಳವು ಮಾಡಿದ್ದನ್ನು ಒಪ್ಪಿಕೊಂಡ ಆರೋಪಿಗಳು 15 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಈಗಾಗಲೇ ಮಾರಾಟ ಮಾಡಿದ್ದ 20 ಲಕ್ಷ ರೂ. ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದ ಎಂದು ಪೊಲೀಸರು ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗಿರಿನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ 11 ಲಕ್ಷ ರೂ. ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಸತೀಶ್‌ ಮತ್ತು ಅಶೋಕ್‌ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಇವರಿಂದ 43 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಳ್ಳತನ ಮಾಡುತ್ತಿದ್ದ ಮಾಜಿ ಸೈನಿಕನ ಬಂಧನ

ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ ಮೊದಲಾದ ಕಡೆ ಹೂಡಿಕೆ ಮಾಡಿ ಅಪಾರ ನಷ್ಟ ಅನುಭವಿಸಿ ಕಳ್ಳತನಕ್ಕಿಳಿದಿದ್ದ ಮಾಜಿ ಸೈನಿಕನೊಬ್ಬನನ್ನು ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಈ ಅರೋಪಿಯಿಂದ 5.50 ಲಕ್ಷ ರೂ. ಮೌಲ್ಯದ 73 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಕತೀಯನಗರದ ನಿವಾಸಿಯೊಬ್ಬರು ಚಿನ್ದದ ಸರ ಕಳವಾಗಿದೆ ಎಂದೂ ದೂರು ನೀಡಿದ್ದರು. ಅದರನ್ವಯ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ಲಂಬರ್‌ ಕೆಲಸ ಮಾಡುವುದಾಗಿ ಮನೆಯೊಂದಕ್ಕೆ ಪ್ರವೇಶಿಸಿದ್ದ ಆರೋಪಿ ಪಿಸ್ತೂಲ್‌ನಿಂದ ಮಹಿಳೆಯ ತಲೆಗೆ ಹೊಡೆದು ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಕೂಡಲೇ ಆಗಮಿಸಿದ ಹೊಯ್ಸಳ ಪೊಲೀಸರು ಈತನ ಬೆನ್ನತ್ತಿ ಬಂಧಿಸಿದ್ದಾರೆ.

ಈತ ನಿವೃತ್ತಿ ಹೊಂದಿದ ನಂತರ ಬಂದಿದ್ದ 31 ಲಕ್ಷ ರೂ. ಹಣವನ್ನು ಹಲವು ಕಡೆ ಹೂಡಿಕೆ ಮಾಡಿದ್ದ. ಆದರೆ ನಷ್ಟ ಉಂಟಾಗಿತ್ತು. ನಂತರ ಜಮೀನನ್ನೂ ಮಾರಾಟ ಮಾಡಿ ಮತ್ತೆ 30 ಲಕ್ಷ ರೂ. ಹೂಡಿಕೆ ಮಾಡಿದ್ದ. ಅಗಲೂ ಹಣ ಕಳೆದುಕೊಂಡಿದ್ದಾನೆ. ಹೀಗಾಗಿ ಕಳ್ಲತನಕ್ಕಿಳಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner