ಬೆಂಗಳೂರು ನೀರಿನ ಸಮಸ್ಯೆ: ನೀರು ದುರ್ಬಳಕೆಗೆ 5000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌-bengaluru news housing society in whitefield introduces rs 5000 fine for water misuse bengaluru water crisis uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೀರಿನ ಸಮಸ್ಯೆ: ನೀರು ದುರ್ಬಳಕೆಗೆ 5000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌

ಬೆಂಗಳೂರು ನೀರಿನ ಸಮಸ್ಯೆ: ನೀರು ದುರ್ಬಳಕೆಗೆ 5000 ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಸಿದ ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌

ಬೆಂಗಳೂರಿನ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಇದನ್ನು ನಿಭಾಯಿಸಲು ವೈಟ್‌ಫೀಲ್ಡ್‌ ಪ್ರದೇಶದಲ್ಲಿ ಹೌಸಿಂಗ್ ಸೊಸೈಟಿ ತೆಗೆದುಕೊಂಡಿರುವ ಕಠಿಣ ಕ್ರಮ ವ್ಯಾಪಕವಾಗಿ ಚರ್ಚೆಗೆ ಒಳಗಾಗಿದೆ. 5,000 ರೂಪಾಯಿ ದಂಡವಷ್ಟೇ ಅಲ್ಲ, ಇನ್ನೂ ಕೆಲವು ಕ್ರಮಗಳನ್ನು ಅದು ಘೋಷಿಸಿದೆ. ಇಲ್ಲಿದೆ ಆ ವಿವರ.

ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ)
ಬೆಂಗಳೂರು ನೀರಿನ ಸಮಸ್ಯೆ (ಸಾಂಕೇತಿಕ ಚಿತ್ರ) (LM )

ಬೆಂಗಳೂರಿನ ನೀರಿನ ಸಮಸ್ಯೆ ನಗರವಾಸಿಗಳಿಗೆ ಕ್ಷಣಕ್ಷಣಕ್ಕೂ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ನೀರಿನ ಸಮಸ್ಯೆ ನಿವಾರಿಸಲು, ಸರ್ಕಾರ ತೆಗೆದುಕೊಳ್ಳುತ್ತಿರುವ ಪರಿಹಾರ ಉಪಕ್ರಮಗಳ ನಡುವೆಯೂ, ಬೆಂಗಳೂರು ಮಹಾನಗರದ ಕೆಲವು ಭಾಗಗಳಲ್ಲಿ ಜನಜೀವನ ಸಂಕಷ್ಟಕ್ಕೆ ಒಳಗಾಗಿದೆ. ಅನೇಕ ಕಡೆ ಕುಡಿಯುವ ನೀರಿನ ಬಿಕ್ಕಟ್ಟು ಎದುರಾಗಿದೆ. ನೀರಿನ ಟ್ಯಾಂಕರ್‌ಗಳನ್ನು ಆಶ್ರಯಸಿದ್ದವರಿಗೆ ಟ್ಯಾಂಕರ್ ನೀರು ಸಿಗದಂತಾಗಿದೆ. ಈ ನಡುವೆ, ಅಪಾರ್ಟ್‌ಮೆಂಟ್‌ಗಳ ಕ್ರಮಗಳು ಸೋಷಿಯಲ್ ಮೀಡಿಯಾದಲ್ಲಿ ಗಮನಸೆಳೆಯುತ್ತಿವೆ.

ಬೆಂಗಳೂರಿನ ವೈಟ್‌ಫೀಲ್ಡ್‌ ಪ್ರದೇಶದ ಹೌಸಿಂಗ್ ಸೊಸೈಟಿ ಕುಡಿಯುವ ನೀರಿನ ದುರ್ಬಳಕೆ ಮಾಡಿದರೆ 5,000 ರೂಪಾಯಿ ದಂಡ ವಿಧಿಸುವುದಾಗಿ ತನ್ನ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಷ್ಟೇ ಅಲ್ಲ, ನಿಗಾವಹಿಸುವುದಕ್ಕೆ ಸೆಕ್ಯೂರಿಟಿ ಗಾರ್ಡ್ ಅನ್ನೂ ನಿಯೋಜಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ವೈಟ್‌ಫೀಲ್ಡ್‌ ಅಪಾರ್ಟ್‌ಮೆಂಟ್‌ನ ಈ ನಡೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಎದುರಿಸುತ್ತಿರುವ ಪ್ರದೇಶಗಳ ಪಯಕಿ ವೈಟ್‌ಫೀಲ್ಡ್ ಪ್ರಮುಖವಾದುದು. ಇದಾಗಿ, ಯಲಹಂಕ, ಕನಕಪುರ ಪ್ರದೇಶಗಳಲ್ಲೂ ನೀರಿನ ಕೊರತೆ ಇದೆ.

ಬೆಂಗಳೂರು ನೀರಿನ ಸಮಸ್ಯೆ; ವೈಟ್‌ಫೀಲ್ಡ್ ಅಪಾರ್ಟ್‌ಮೆಂಟ್‌ ಕ್ರಮವೇನು

ವೈಟ್‌ಫೀಲ್ಡ್‌ನ ಪಾಮ್ ಮೆಡೋಸ್‌ ಹೌಸಿಂಗ್ ಸೊಸೈಟಿ ಇಂತಹ ಕ್ರಮ ತೆಗೆದುಕೊಂಡಿರುವುದು. ಬೆಂಗಳೂರು ಜಲ ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಳೆದ ನಾಲ್ಕು ದಿನಗಳಿಂದ ನೀರು ಪೂರೈಸಿಲ್ಲ. ಬೋರ್‌ವೆಲ್‌ನಲ್ಲಿ ನೀರು ಸಾಕಷ್ಟುಇ ಲ್ಲ. ಹೀಗಾಗಿ ಎಲ್ಲ ಅಪಾರ್ಟ್‌ಮೆಂಟ್‌ಗಳಿಗೆ ನೀರು ಪೂರೈಸುವುದು ಕಷ್ಟವಾಗುತ್ತದೆ ಎಂದು ಸೊಸೈಟಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

"ನಾವು ನಮ್ಮ ಕೊಳವೆಬಾವಿಗಳನ್ನು ನಿರ್ವಹಿಸುತ್ತಿದ್ದೇವೆ. ಆದಾಗ್ಯೂ ಶೀಘ್ರದಲ್ಲೇ ಅಂತರ್ಜಲ ಕ್ಷೀಣಿಸುವ ಅಪಾಯವನ್ನು ಎದುರಿಸುತ್ತಿದ್ದೇವೆ" ಎಂದು ಸೊಸೈಟಿಯ ಅಪಾರ್ಟ್‌ಮೆಂಟ್ ಮಾಲೀಕರ ಸಂಘವನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಸೊಸೈಟಿ ತೆಗೆದುಕೊಂಡ ಕ್ರಮಗಳಿವು -

1) ಹೌಸಿಂಗ್ ಸೊಸೈಟಿಯ ಪ್ರತಿ ಮನೆಯವರೂ ನೀರಿನ ಬಳಕೆಯನ್ನು ಶೇಕಡ 20 ಕಡಿಮೆ ಮಾಡಬೇಕು. ಇದು ಎಲ್ಲರೂ ಸೇರಿ ತೆಗೆದುಕೊಂಡ ತೀರ್ಮಾನ.

2) ನೀರಿನ ಬಳಕೆಯನ್ನು ಶೇಕಡ 20 ಕಡಿಮೆ ಮಾಡುವುದು ಸಾಧ್ಯವಾಗದೇ ಹೋದರೆ 5,000 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕು.

3) ನೀರಿನ ಪೂರೈಕೆಗೆ ಅನುಗುಣವಾಗಿ ನೀರಿನ ಲಭ್ಯತೆ ಇರಲಿದ್ದು, ಬೇಸಿಗೆಯ ಕೊನೆಯ ಹಂತದಲ್ಲಿ ನೀರಿನ ಬಳಕೆಯನ್ನು ಶೇಕಡ 40 ರಷ್ಟು ಕಡಿಮೆ ಮಾಡಬೇಕಾದೀತು.

4) ನೀರಿನ ಬಳಕೆ ಕಡಿಮೆ ಮಾಡಿಸುವುದಕಕೆ ಭದ್ರತಾ ಸಿಬ್ಬಂದಿ ನೇಮಕ ಮಾಡುತ್ತಿರುವುದಾಗಿಯೂ ಸೊಸೈಟಿ ಹೇಳಿದೆ.

ಇತರ ಹೌಸಿಂಗ್ ಸೊಸೈಟಿಗಳು

ಬೆಂಗಳೂರಿನ ಹಲವಾರು ಹೌಸಿಂಗ್ ಸೊಸೈಟಿಗಳು ಸಹ ತಮ್ಮ ನಿವಾಸಿಗಳಿಗೆ ತಮ್ಮ ದೈನಂದಿನ ನೀರಿನ ಬಳಕೆಯ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿವೆ.

ಏತನ್ಮಧ್ಯೆ, ಬೆಂಗಳೂರಿನಲ್ಲಿ ಕುಡಿಯುವ ನೀರಿನ ಕೊರತೆಯನ್ನು ಪರಿಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಿರ್ಣಾಯಕ ಸಭೆ ನಡೆಸಿದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

"ನಾನು ಅದನ್ನು ಗಂಭೀರವಾಗಿ ನೋಡುತ್ತಿದ್ದೇನೆ. ನಾನು ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ನೀರು ಲಭ್ಯವಿರುವ ಸ್ಥಳಗಳನ್ನು ನಾವು ಗುರುತಿಸುತ್ತಿದ್ದೇವೆ... ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿಹೋಗಿವೆ. ಮಾರ್ಚ್ 7 ರ ಗಡುವಿನೊಳಗೆ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳದಿದ್ದರೆ ಸರ್ಕಾರವು ಅವರ ಟ್ಯಾಂಕರ್ ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಅವರು ರಾಜ್ಯದ ನೀರಿನ ಟ್ಯಾಂಕರ್ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಈ ವರ್ಷ ಬೇಸಿಗೆಯು ಹೆಚ್ಚು ತೀವ್ರವಾಗುವ ನಿರೀಕ್ಷೆಯಿದ್ದು, ಫೆ.10 ರವರೆಗೆ ಸರ್ಕಾರ ಮಾಡಿದ ಮೌಲ್ಯಮಾಪನದ ಪ್ರಕಾರ ಕರ್ನಾಟಕದಾದ್ಯಂತ ಸುಮಾರು 7,082 ಗ್ರಾಮಗಳು ಮತ್ತು ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 1,193 ವಾರ್ಡ್‌ಗಳಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳಲಿದೆ ಎಂದು ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)