ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: 5 ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ್‌ ರಸ್ತೆ ಸಂಚಾರಕ್ಕೆ ಮುಕ್ತ, ನಮ್ಮ ಮೆಟ್ರೋ ಕಾಮಗಾರಿಗಾಗಿ ಮುಚ್ಚಿದ್ದ ಮಾರ್ಗ

ಬೆಂಗಳೂರು: 5 ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ್‌ ರಸ್ತೆ ಸಂಚಾರಕ್ಕೆ ಮುಕ್ತ, ನಮ್ಮ ಮೆಟ್ರೋ ಕಾಮಗಾರಿಗಾಗಿ ಮುಚ್ಚಿದ್ದ ಮಾರ್ಗ

ಕಳೆದ 5 ವರ್ಷಗಳಿಂದ ಬಂದ್ ಆಗಿದ್ದ ಬೆಂಗಳೂರಿನ ಕಾಮರಾಜ್‌ ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ನಮ್ಮ ಮೆಟ್ರೋ ಕಾಮಗಾರಿ ಕಾರಣ ಈ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಈಗ ಸಂಚಾರಕ್ಕೆ ರಸ್ತೆಯ ಒಂದು ಭಾಗವನ್ನು ತೆರೆದು ಬಿಟ್ಟಿರುವುದು ಸಾರ್ವಜನಿಕರಲ್ಲಿ ಹರ್ಷ ಮೂಡಿಸಿದೆ. ಕಮರ್ಷಿಯಲ್‌ ಸ್ಟ್ರೀಟ್‌ ನತ್ತ ಸಾಗುವವರು ನಿರಾಳವಾಗಿ ಸಾಗಬಹುದು. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು: 5 ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ್‌ ರಸ್ತೆ ಸಂಚಾರಕ್ಕೆ ಮುಕ್ತ, ನಮ್ಮ ಮೆಟ್ರೋ ಕಾಮಗಾರಿಗಾಗಿ ಮುಚ್ಚಿದ್ದ ಮಾರ್ಗ
ಬೆಂಗಳೂರು: 5 ವರ್ಷಗಳಿಂದ ಬಂದ್ ಆಗಿದ್ದ ಕಾಮರಾಜ್‌ ರಸ್ತೆ ಸಂಚಾರಕ್ಕೆ ಮುಕ್ತ, ನಮ್ಮ ಮೆಟ್ರೋ ಕಾಮಗಾರಿಗಾಗಿ ಮುಚ್ಚಿದ್ದ ಮಾರ್ಗ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋದ ಗುಲಾಬಿ ಮಾರ್ಗದ ಕಾಮಗಾರಿಗಾಗಿ 5 ವರ್ಷಗಳ ಹಿಂದೆ ಮುಚ್ಚಲಾಗಿದ್ದ ಎಂಜಿ ರಸ್ತೆ ಮತ್ತು ಕಬ್ಬನ್‌ ರಸ್ತೆಯನ್ನು ಸಂಪರ್ಕಿಸುವ ಕಾಮರಾಜ್‌ ರಸ್ತೆಯ ಒಂದು ಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದ ಎಂಜಿ ರಸ್ತೆ, ಮತ್ತು ಅಕ್ಕಪಕ್ಕದ ಮಾರ್ಗಗಳಲ್ಲಿ ಸಂಚರಿಸುವ ಸಾವಿರಾರು ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅನಿಲ್‌ ಕುಂಬ್ಳೆ ಜಂಕ್ಷನ್‌ ಕಡೆಯಿಂದ ಆಗಮಿಸುವ ವಾಹನಗಳು ಎಂಜಿ ರಸ್ತೆಯಲ್ಲಿರುವ ಕಾವೇರಿ ಎಂಪೋರಿಯಂ ಜಂಕ್ಷನ್‌ ನಲ್ಲಿ ಎಡ ತಿರುವು ಪಡೆದು ಕಾಮರಾಜ ರಸ್ತೆಯತ್ತ ಸಾಗಬೇಕು. ನಂತರ ಕಬ್ಬನ್‌ ರಸ್ತೆ ಜಂಕ್ಷನ್‌ ನಲ್ಲಿ ನೇರವಾಗಿ ಸಾಗಿ ಕಮರ್ಷಿಯಲ್‌ ರಸ್ತೆ ಕಡೆಗೆ ಸಾಗಬಹುದಾಗಿದೆ. ಕಬ್ಬನ್‌ ರಸ್ತೆಯ ಜಂಕ್ಷನ್‌ ನಲ್ಲಿ ಎಡ ತಿರುವು ಪಡೆದು ಬಿ ಆರ್‌ ವಿ ಮೈದಾನದತ್ತ ಸಾಗಬಹುದು. ಬಲ ತಿರುವು ಪಡೆದರೆ ಹಲಸೂರಿನತ್ತ ಸಾಗಬಹುದು.

ಎಂಜಿ ರಸ್ತೆಯ ಮೇಯೋಹಾಲ್‌ ಕಡೆಯಿಂದ ಆಗಮಿಸುವ ವಾಹನಗಳು ಕಾವೇರಿ ಎಂಪೋರಿಯಂ ಜಂಕ್ಷನ್‌ ನಲ್ಲಿ ಬಲ ತಿರುವು ಪಡೆದು ಕಾಮರಾಜ ರಸ್ತೆಯಲ್ಲಿ ಸಂಚರಿಸಿ ಕಬ್ಬನ್‌ ರಸ್ತೆಯಲ್ಲಿ ಸಾಗಿ ಕಮರ್ಷಿಯಲ್‌ ಸ್ಟ್ರೀಟ್‌ ನತ್ತ ಸಾಗಬಹುದು. ಕಬ್ಬನ್ ರಸ್ತೆಯ ಜಂಕ್ಷನ್‌ನ ಎಡ ತಿರುವು ಪಡೆದು ಬಿಆರ್‌ವಿ ಮೈದಾನದತ್ತ ಸಾಗಬಹುದು.

ಬಲ ತಿರುವು ಪಡೆದು ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದು. 220 ಮೀಟರ್‌ ಉದ್ದದ ಕಾಮರಾಜ್‌ ರಸ್ತೆಯನ್ನು 2019 ರಲ್ಲಿ ನಾಗವಾರ-ಕಾಳೇನ ಅಗ್ರಹಾರ ಮೆಟ್ರೋ ಮಾರ್ಗದಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ ನಿಂದ ಕಬ್ಬನ್‌ ರಸ್ತೆ ಜಂಕ್ಷನ್‌ ವರೆಗೆ ಇಂಟರ್‌ ಚೇಂಜ್ ಎಂಜಿ ರಸ್ತೆ ಮೆಟ್ರೋ ನಿಲ್ದಾಣ ನಿರ್ಮಿಸಲು ಮುಚ್ಚಲಾಗಿತ್ತು.

ಜಮೀನು ಹಸ್ತಾಂತರ, ಮರಗಳ ತೆರವು ಪ್ರಕ್ರಿಯೆ ವಿಳಂಬವಾಗಿದ್ದರಿಂದ ಕಾಮಗಾರಿ ಮಂದಗತಿಯಲ್ಲಿ ಸಾಗಿತ್ತು. ಜೊತೆಗೆ ಕೋವಿಡ್‌ ಕಾರಣಕ್ಕೂ ಕಾಮಗಾರಿ ತಡವಾಗಿತ್ತು. ಇದರಿಂದ ಶಿವಾಜಿನಗರ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ ಕಡೆಗೆ ಸಾಗಲು ಅನಿಲ್‌ ಕುಂಬ್ಳೆ ಅಥವಾ ಟ್ರಿನಿಟಿ ಸರ್ಕಲ್‌ ವರೆಗೆ ಸಾಗಿ ತಿರುವು ಪಡೆಯಬೇಕಿತ್ತು. ಇದರಿಂದ 5 ವರ್ಷಗಳ ಕಾಲ ಎಂಜಿ ರಸ್ತೆ ಮತ್ತು ಸುತ್ತ ಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಪ್ರತಿದಿನ ಕಾಡುತ್ತಿತ್ತು. ಅದರಲ್ಲೂ ವಾಂತ್ಯದ ದಿನಗಳಲ್ಲಿ ಶಿವಾಜಿನಗರ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ ಗೆ ಸಾಗಲು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸದ್ಯ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಕಾಮರಾಜ್‌ ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತ್ತೊಂದು ಭಾಗದಲ್ಲಿ ಮೆಟ್ರೋ ಕಾಮಗಾರಿಗಳನ್ನು ನಡೆಸಲು ಯಂತ್ರೋಪಕರಣಗಳ ಸಾಗಾಟ ಮತ್ತಿತರ ಉದ್ದೇಶಕ್ಕೆ ಬಳಕೆ ಮಾಆಗುತ್ತದೆ ಎಂದು ಬಿಎಂಆರ್‌ ಸಿ ಎಲ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

(ವರದಿ- ಎಚ್.ಮಾರುತಿ, ಬೆಂಗಳೂರು)