ಮಾಣೀಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಂಚಾರ ವ್ಯವಸ್ಥೆ ಮಾರ್ಗಸೂಚಿ ಪ್ರಕಟಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು-bengaluru news indian independence day at manekshaw parade ground bangalore traffic advisory published check dets mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮಾಣೀಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಂಚಾರ ವ್ಯವಸ್ಥೆ ಮಾರ್ಗಸೂಚಿ ಪ್ರಕಟಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಮಾಣೀಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ; ಸಂಚಾರ ವ್ಯವಸ್ಥೆ ಮಾರ್ಗಸೂಚಿ ಪ್ರಕಟಿಸಿದ ಬೆಂಗಳೂರು ಟ್ರಾಫಿಕ್ ಪೊಲೀಸರು

ಬೆಂಗಳೂರಿನ ಮಾಣೀಕ್‌ ಷಾ ಪೆರೆಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಸಂಚಾರ ಪೊಲೀಸರು, ಸಂಚಾರ ವ್ಯವಸ್ಥೆ ಮಾರ್ಗಸೂಚಿ ಪ್ರಕಟಿಸಿದ್ದು, ವಾಹನ ಸಂಚಾರ ಮತ್ತು ನಿಲುಗಡೆ ವಿವರ ಒದಗಿಸಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಮಾಣೀಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಸಂಚಾರ ವ್ಯವಸ್ಥೆ ಬದಲಾವಣೆ ಸಂಬಂಧಿಸಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದರು. ಮೈದಾನದಲ್ಲಿ ಕವಾಯತು ನಡೆದ ಸಂದರ್ಭದ ಫೋಟೋವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಮಾಣೀಕ್‌ ಷಾ ಪೆರೇಡ್‌ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಸಂಚಾರ ವ್ಯವಸ್ಥೆ ಬದಲಾವಣೆ ಸಂಬಂಧಿಸಿ ಬೆಂಗಳೂರು ಟ್ರಾಫಿಕ್ ಪೊಲೀಸರು ಮಾರ್ಗಸೂಚಿ ಪ್ರಕಟಿಸಿದರು. ಮೈದಾನದಲ್ಲಿ ಕವಾಯತು ನಡೆದ ಸಂದರ್ಭದ ಫೋಟೋವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಂಗಳೂರಿನ ಕಬ್ಬನ್‌ ರಸ್ತೆಯಲ್ಲಿರುವ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಕವಾಯತು ಮೈದಾನದಲ್ಲಿ- 2024ರ ಸ್ವಾತಂತ್ರ್ಯ ದಿನಾಚರಣೆಯ ಪ್ರಧಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದು ಗೌರವವಂದನೆ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಆಕರ್ಷಕ ಕವಾಯತು ನಡೆಯಲಿದೆ. ಮುಖ್ಯಮಂತ್ರಿಗಳು ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಸಮಾರಂಭದ ಅಂಗವಾಗಿ ಬೆಂಗಳೂರು ನಗರ ಸಂಚಾರ ಪೊಲೀಸರು ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಮೈದಾನದ ಒಳಗೆ ಮತ್ತು ಸುತ್ತಮುತ್ತ ಸಂಚಾರ ಬಂದೋಬಸ್ತ್‌ ಕಲ್ಪಿಸಿರುತ್ತಾರೆ. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿರುತ್ತದೆ. ನಿಗದಿಪಡಿಸಿರುವ ಸ್ಥಳಗಳಲ್ಲೇ ವಾಹನಗಳ ಪಾರ್ಕಿಂಗ್‌ ಮಾಡುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.

ಪಾಸ್‌ ಹೊಂದಿದವರಿಗೆ ಮೈದಾನಕ್ಕೆ ಪ್ರವೇಶಾವಕಾಶ

ಕಾರ್‌ ಪಾಸ್‌ ಹೊಂದಿರುವ ಎಲ್ಲ ಆಹ್ವಾನಿತರು ತಮ್ಮ ಪಾಸ್‌ ಗಳಲ್ಲಿ ನಿಗದಿಪಡಿಸಿರುವ ದ್ವಾರಗಳಲ್ಲಿ ಇಳಿದುಕೊಳ್ಳಬೇಕಾಗಿರುತ್ತದೆ ಮತ್ತು ಪಾಸ್ ನಲ್ಲಿ ನಿಗದಿಪಡಿಸಿರುವ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕಾಗಿರುತ್ತದೆ.

ತುರ್ತು ವಾಹನಗಳಾದ ಆಂಬುಲೆನ್ಸ್‌, ಅಗ್ನಿ ಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್‌, ಕೆ ಎಸ್.ಆರ್.ಪಿ, ಕ್ಯೂ.ಆರ್‌. ಟಿ. ಬಿಬಿಎಂಪಿ, ಹಾಗೂ ಲೋಕೋಪಯೋಗಿ ವಾಹನಗಳು ಪ್ರವೇಶ ದ್ವಾರ-2ರ ಮುಖಾಂತರ ಮೈದಾನವನ್ನು ಪ್ರವೇಶಿಸಿ ನಂತರ ಪೋರ್ಟ್‌ ವಾಲ್‌ ಹಿಂಭಾಗದಲ್ಲಿ ವಾಹನಗಳನ್ನು ನಿಲ್ಲಿಸಬಹುದಾಗಿದೆ.

ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷಿದ್ಧ

ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಆರಂಭವಾಗಿ ಮುಗಿಯುವವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ.

ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರವರೆಗೆ; ಕಬ್ಬನ್‌ ರಸ್ತೆ, ಸಿಟಿಒ ರಸ್ತೆ, ಕೆ. ಆರ್.‌ ರಸ್ತೆ ಮತ್ತು ಕಬ್ಬನ್‌ ಜಂಕ್ಷನ್‌ ವರೆಗೆ, ಎಂಜಿ ರಸ್ತೆಯಿಂದ ಅನಿಲ್‌ ಕುಂಬ್ಳೆ ವೃತ್ತದವರೆಗೆ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಮಾಣಿಕ್‌ ಷಾ ಮೈದಾನ ಮತ್ತು ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಮತ್ತು ವಾಹನಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಅನಿವಾರ್ಯತೆ ಇರುತ್ತದೆ. ಆದ್ದರಿಂದ ಸಮಾರಂಭವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರು ಬಿಎಂಟಿಸಿ ಮತ್ತು ಮೆಟ್ರೋ ರೈಲು ಸಂಚಾರವನ್ನು ಬಳಸಲು ಪೊಲೀಸರು ಕೋರಿಕೊಂಡಿದ್ದಾರೆ.

ಇಲ್ಲಿ ನಡೆಯುವ ಆಕರ್ಷಕ ಕವಾಯತು ನೋಡಲೆಂದೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ವಿವಿಧ ಪೊಲೀಸ್‌ ತುಕಡಿಗಳು, ಎನ್.ಸಿ.ಸಿ, ವಿವಿಧ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಕವಾಯತಿನಲ್ಲಿ ಭಾಗವಹಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾರಂಭದಲ್ಲಿ ಸಚಿವರು, ಶಾಸಕರು, ಸ್ವಾತಂತ್ರ್ಯ ಹೋರಾಟಗಾರರು ಭಾಗವಹಿಸಲಿದ್ದಾರೆ.

(ವರದಿ- ಎಚ್ ಮಾರುತಿ, ಬೆಂಗಳೂರು)