ಬೆಂಗಳೂರು ಸಿಐಡಿ ಜೊತೆ ಇನ್ಫೋಸಿಸ್ ಒಪ್ಪಂದ; ಸೈಬರ್ ಅಪರಾಧಗಳ ತಡೆಗೆ 33 ಕೋಟಿ ರೂಪಾಯಿಗಳ ಅನುದಾನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಸಿಐಡಿ ಜೊತೆ ಇನ್ಫೋಸಿಸ್ ಒಪ್ಪಂದ; ಸೈಬರ್ ಅಪರಾಧಗಳ ತಡೆಗೆ 33 ಕೋಟಿ ರೂಪಾಯಿಗಳ ಅನುದಾನ

ಬೆಂಗಳೂರು ಸಿಐಡಿ ಜೊತೆ ಇನ್ಫೋಸಿಸ್ ಒಪ್ಪಂದ; ಸೈಬರ್ ಅಪರಾಧಗಳ ತಡೆಗೆ 33 ಕೋಟಿ ರೂಪಾಯಿಗಳ ಅನುದಾನ

ಕರ್ನಾಟಕ ಪೊಲೀಸರ ಸೈಬರ್ ಅಪರಾಧ ತನಿಖಾ ಸಾಮರ್ಥ್ಯವನ್ನು ಬಲಪಡಿಸಲು ಇನ್ಫೋಸಿಸ್ ಫೌಂಡೇಶನ್ 33 ಕೋಟಿ ರೂ.ಗಳ ಅನುದಾನ ನೀಡಲು ಮುಂದಾಗಿದೆ.

ಸೈಬರ್ ಅಪರಾಧಗಳ ವಿರುದ್ಧದ ಹೋರಾಟಕ್ಕಾಗಿ ಬೆಂಗಳೂರು ಸಿಐಡಿ ಪೊಲೀಸರಿಗೆ ಇನ್ಫೋಸಿಸ್ 33 ಕೋಟಿ ರೂಪಾಯಗಳ ಅನುದಾನ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. (ಇನ್ಫೋಸಿಸ್ ಎಕ್ಸ್)
ಸೈಬರ್ ಅಪರಾಧಗಳ ವಿರುದ್ಧದ ಹೋರಾಟಕ್ಕಾಗಿ ಬೆಂಗಳೂರು ಸಿಐಡಿ ಪೊಲೀಸರಿಗೆ ಇನ್ಫೋಸಿಸ್ 33 ಕೋಟಿ ರೂಪಾಯಗಳ ಅನುದಾನ ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. (ಇನ್ಫೋಸಿಸ್ ಎಕ್ಸ್)

ಬೆಂಗಳೂರು: ಸೈಬರ್ ಅಪರಾಧಗಳಿಗೆ (Cyber Crime) ಕಡಿವಾಣ ಹಾಕಲು ಕರ್ನಾಟಕ ಪೊಲೀಸ್ ಇಲಾಖೆಗೆ (Karnataka Police Deportment) ಆರ್ಥಿಕವಾಗಿ ನೆರವಾಗಲು ಇನ್ಫೋಸಿಸ್ ಫೌಂಡೇಶನ್ (Infosys Foundation) ಮುಂದಾಗಿದೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ (Home Minister G Parameshwar) ಅವರ ಮುಂದಾಳತ್ವದಲ್ಲಿ ಪೊಲೀಸ್ ಇಲಾಖೆ ಮತ್ತು ಇನ್ಪೋಸಿಸ್ ಬುಧವಾರ (ಏಪ್ರಿಲ್ 10) ಒಪ್ಪಂದ ಮಾಡಿಕೊಂಡಿದೆ. ಇನ್ಫೋಸಿಸ್ ಸಿಎಸ್ಆರ್ ಅಂಗವಾದ ಇನ್ಫೋಸಿಸ್ ಫೌಂಡೇಶನ್ ಕರ್ನಾಟಕ ಪೊಲೀಸರ ಸೈಬರ್ ಅಪರಾಧ ತನಿಖಾ ಸಾಮರ್ಥ್ಯವನ್ನು ಬಲಪಡಿಸಲು 33 ಕೋಟಿ ರೂ.ಗಳ ಅನುದಾನಕ್ಕೆ ಬದ್ಧವಾಗಿರುವುದಾಗಿ ಹೇಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಕರ್ನಾಟಕ ಪೊಲೀಸರ ಸೈಬರ್ ಕ್ರೈಂ ತನಿಖಾ ಸಾಮರ್ಥ್ಯವನ್ನು ಬಲಪಡಿಸಲು ಇನ್ಫೋಸಿಸ್ ಫೌಂಡೇಶನ್ 33 ಕೋಟಿ ರೂ.ಗಳ ಅನುದಾನವನ್ನು ನೀಡಲು ಬದ್ಧವಾಗಿರುವುದಾಗಿ ಹೇಳಿದೆ. ಈ ಒಪ್ಪಂದವು ಡಿಜಿಟಲ್ ವಿಧಿವಿಜ್ಞಾನ ಮತ್ತು ಸೈಬರ್ ಅಪರಾಧ ತನಿಖೆಯಲ್ಲಿ ತರಬೇತಿ ಮತ್ತು ಸಂಶೋಧನೆಯ ಮೂಲಕ ರಾಜ್ಯ ಪೊಲೀಸ್ ಪಡೆಯ ಸೈಬರ್ ಕ್ರೈಮ್ ಪ್ರಾಸಿಕ್ಯೂಷನ್ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಇನ್ಫೋಸಿಸ್ ತಿಳಿಸಿದೆ.

ಯುರೋಪ್‌ನಲ್ಲಿ 120 ಗಂಟೆಗಳ ಕಾಲ ಊಟ, ನೀರಿಲ್ಲದೆ ಹಸಿವನ್ನ ಅನುಭವಿಸಿದ್ದೆ-ನಾರಾಯಣಮೂರ್ತಿ

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು 50 ವರ್ಷಗಳ ಹಿಂದೆ ಯುರೋಪ್‌ನಲ್ಲಿ ಪ್ರಯಾಣಿಸುತ್ತಿದ್ದಾಗ 120 ಗಂಟೆಗಳ ಕಾಲ ನಿರಂತರವಾಗಿ ಹಸಿವನ್ನು ಅನುಭವಿಸಿದ್ದೆ ಎಂದು ಹೇಳಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಭಾರತದ ಖಾಯಂ ಮಿಷನ್ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ 77 ವರ್ಷದ ನಾರಾಯಣಮೂರ್ತಿ, ನಿಮ್ಮಲ್ಲಿ ಹೆಚ್ಚಿನವರು ಹಸಿವನ್ನು ಅನುಭವಿಸಿಲ್ಲ. ಆದರೆ ನಾನು ಅದನ್ನು ಅನುಭವಿಸಿದ್ದೇನೆ ಎಂದಿದ್ದಾರೆ.

50 ವರ್ಷಗಳ ಹಿಂದೆ, "ನಾನು ಯುರೋಪ್‌ನಲ್ಲಿ ಹಿಚ್ಹೈಕಿಂಗ್ ಮಾಡುವಾಗ ಮತ್ತು ಬಲ್ಗೇರಿಯಾ, ಅಂದಿನ ಯುಗೊಸ್ಲಾವಿಯಾ ಹಾಗೂ ಇಂದಿನ ಸೆರ್ಬಿಯಾ ನಡುವಿನ ಗಡಿ ಪಟ್ಟಣವಾದ ನಿಶ್ ಎಂಬ ಸ್ಥಳದಲ್ಲಿ 120 ಗಂಟೆಗಳ ಕಾಲ ನಿರಂತರವಾಗಿ ಹಸಿವನ್ನು ಅನುಭವಿಸಿದೆ ಎಂದು ಹಿಂದಿನ ತಮ್ಮ ಕಷ್ಟದ ಸಂದರ್ಭಗಳನ್ನು ಸ್ಮರಿಸಿದ್ದಾರೆ.

"ಇಲ್ಲಿನ ಹೆಚ್ಚಿನ ಭಾರತೀಯರು ಮತ್ತು ನಾನು ಭಾರತ ಸರ್ಕಾರದಿಂದ ಉತ್ತಮ ಗುಣಮಟ್ಟದ ಮತ್ತು ಹೆಚ್ಚಿನ ಸಬ್ಸಿಡಿ ಶಿಕ್ಷಣವನ್ನು ಪಡೆದಿದ್ದೇವೆ. ಆದ್ದರಿಂದ, ಸುಸಂಸ್ಕೃತ ಜನರಾಗಿ, ನಾವು ನಮ್ಮ ರಾಷ್ಟ್ರಕ್ಕೆ ಕೃತಜ್ಞತೆಯನ್ನು ತೋರಿಸಬೇಕು. ಈ ಅಸಹಾಯಕ, ಬಡ ಮಕ್ಕಳ ಭವಿಷ್ಯದ ಪೀಳಿಗೆಗೆ ಉತ್ತಮ ಶಿಕ್ಷಣವನ್ನು ಪಡೆಯಲು ಸಹಾಯ ಮಾಡಬೇಕು" ಎಂದು ಹೇಳಿದ್ದಾರೆ.

Whats_app_banner