ಬೆಂಗಳೂರು ಸೈಬರ್ ಅಪರಾಧ ನಿಯಂತ್ರಣಕ್ಕೆ ಇನ್‌ಫೋಸಿಸ್ ಫೌಂಡೇಶನ್ 33 ಕೋಟಿ ರೂಪಾಯಿ ನೆರವು ಘೋಷಣೆ
ಸೈಬರ್ ಅಪರಾಧ ನಿಯಂತ್ರಣಕ್ಕೆ ಇನ್‌ಫೋಸಿಸ್ ಫೌಂಡೇಶನ್ 33 ಕೋಟಿ ರೂ. ನೆರವು ಘೋಷಿಸಿದೆ. ಬೆಂಗಳೂರು ಸೈಬರ್ ಲ್ಯಾಬ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯ ಪ್ರಕಾರ ಈ ನೆರವು ಪಡೆದುಕೊಳ್ಳುತ್ತಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಹೆಚ್ಚುತ್ತಿರುವ ಸೈಬರ್ ಅಪರಾಧ ಚಟುವಟಿಕೆಗಳಿಗೆ ನಿಯಂತ್ರಣ ಹಾಕುವುದಕ್ಕೆ ನೆರವಾಗುವ ನಿಟ್ಟಿನಲ್ಲಿ ವಿಶ್ವ ಖ್ಯಾತಿ ಪಡೆದಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಇನ್‌ಫೋಸಿಸ್ ಫೌಂಡೇಶನ್ ಕರ್ನಾಟಕ ಪೊಲೀಸ್ ಇಲಾಖೆಗೆ 33 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ಘೋಷಿಸಿದೆ.
ಬೆಂಗಳೂರಿನಲ್ಲಿರುವ ಸಿಐಡಿ ಘಟಕ, ಭಾರತೀಯ ದತ್ತಾಂಶ ಭದ್ರತಾ ಸಮಿತಿ (ಡಿಎಸ್‌ಸಿಐ) ಮತ್ತು ಸೈಬರ್ ಅಪರಾಧಗಳ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರದ (ಸಿಸಿಐಟಿಆರ್) ಜೊತೆಗಿನ ಒಡಂಬಡಿಕೆಗೆ ಇನ್ ಫೋಸಿಸ್ ಫೌಂಡೇಶನ್ ಸಹಿ ಹಾಕಿದೆ.
ಸೈಬರ್ ಅಪರಾಧಗಳ ತನಿಖಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಈ ನೆರವನ್ನು ಪ್ರಕಟಿಸಲಾಗಿದೆ. ಇದಕ್ಕಾಗಿ ಸಿಸಿಐಟಿಆರ್ ಜೊತೆಗಿನ ಸಹಭಾಗಿತ್ವವನ್ನು ಇನ್ ಫೋಸಿಸ್ ಮತ್ತೆ ನಾಲ್ಕು ವರ್ಷಗಳ ಅವಧಿಗೆ ವಿಸ್ತರಿಸಿದೆ. ಡಿಜಿಟಲ್ ಫೊರೆನ್ಸಿಕ್ ಮತ್ತು ಸೈಬರ್ ಅಪರಾಧಗಳ ತನಿಖೆ ಕುರಿತಾದ ತರಬೇತಿ ಮತ್ತು ಸಂಶೋಧನೆಗೆ ಇದರಿಂದ ನೆರವಾಗಲಿದೆ ಎಂದು ಇನ್ ಫೋಸಿಸ್ ಫೌಂಡೇಶನ್ ಅಭಿಪ್ರಾಯಪಟ್ಟಿದೆ.
ಅಗತ್ಯ ಭೂಮಿಗೆ ಲೆನ್ಸ್ ಕಾರ್ಟ್ ಬೇಡಿಕೆ, ಮಿಂಚಿನ ವೇಗದಲ್ಲಿ ಸಚಿವರ ಸ್ಪಂದನೆ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 60 ಕಿ.ಮೀ. ಆಸುಪಾಸಿನಲ್ಲಿ ತಮ್ಮ ಉದ್ಯಮ ಘಟಕ ಸ್ಥಾಪಿಸಲು 25 ಎಕರೆ ಭೂಮಿ ಅಗತ್ಯವಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಲೆನ್ಸ್ ಕಾರ್ಟ್ ಸಮೂಹದ ಮನವಿಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಕೇವಲ ಐದು ನಿಮಿಷಗಳಲ್ಲಿ ಸ್ಪಂದಿಸಿ, ಗಮನ ಸೆಳೆದಿದ್ದಾರೆ.
ಲೆನ್ಸ್ ಕಾರ್ಟ್ ಉನ್ನತಾಧಿಕಾರಿ ಪೀಯೂಷ್ ಬನ್ಸಾಲ್ ಅವರು ಎಕ್ಸ್ ನಲ್ಲಿ ತಮ್ಮ ಅಗತ್ಯ ಕುರಿತು ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅವರು, ಯಾವುದಾದರೂ ಉದ್ಯಮ ಸಂಸ್ಥೆಗೆ ಜಮೀನು ಮಾರಾಟ ಮಾಡಲು ಆಸಕ್ತಿ ಇದ್ದರೆ ತಮಗೆ ಇ-ಮೇಲ್ ಕಳಿಸುವಂತೆ ಕೋರಿದ್ದರು.
ಇದನ್ನು ಗಮನಿಸಿದ ಸಚಿವರು ಕೂಡಲೇ ಕಾರ್ಯಪ್ರವೃತ್ತರಾಗಿ, ಕೈಗಾರಿಕಾ ಇಲಾಖೆಯು ನಿಮ್ಮ ಬೆಂಬಲಕ್ಕಿದ್ದು, ನಿಮ್ಮ ಅಗತ್ಯಗಳನ್ನೆಲ್ಲ ಪೂರೈಸಲಿದೆ. ನಮ್ಮ ಅಧಿಕಾರಿಗಳು ತಕ್ಷಣವೇ ನಿಮ್ಮನ್ನು ಸಂಪರ್ಕಿಸಲಿದ್ದಾರೆ. ನೀವು ಇರಬೇಕಾದ ಜಾಗ ಕರ್ನಾಟಕ! ಎಂದು ಮರುಪೋಸ್ಟ್ ಮಾಡಿ, ಭರವಸೆ ನೀಡಿದ್ದಾರೆ. ಜೊತೆಗೆ ಅಧಿಕಾರಿಗಳಿಗೆ ಅವರು ಅಗತ್ಯ ಸೂಚನೆಗಳನ್ನು ಸಹ ಕೊಟ್ಟಿದ್ದಾರೆ. ಸಚಿವರ ಈ ನಡೆಗೆ ಎಕ್ಸ್ ನಲ್ಲಿ ಸಾರ್ವಜನಿಕರು ಮತ್ತು ಉದ್ಯಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
(ವರದಿ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಬಾಗಲಕೋಟೆ-ಮುಗಳೊಳ್ಳಿ ಮತ್ತು ಆಲಮಟ್ಟಿ-ಜಡ್ರಾಮಕುಂಟಿ ನಿಲ್ದಾಣಗಳ ನಡುವೆ ಅಗತ್ಯ ಕಾಮಗಾರಿ, ರೈಲು ಸಂಚಾರ ವಿಳಂಬ - ವಿವರ ವರದಿ ಇಲ್ಲಿದೆ
2) ವೇದಾಸಕ್ತರು ಗಮನಿಸಿ; ಉಚಿತ ವೇದಾಧ್ಯಯನ ಮಾಡುವ ಜೊತೆಗೆ 10 ಲಕ್ಷ ಬಹುಮಾನವನ್ನೂ ಗೆಲ್ಲುವ ವಿಶೇಷ ಅವಕಾಶ ಇಲ್ಲಿದೆ
3) ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಿಥುನ ರಾಶಿಯವರಿಗೆ ಸೂಕ್ತ ಎನಿಸುವ, ಸಾಧನೆಗೆ ಅವಕಾಶ ಇರುವ ವೃತ್ತಿಗಳಿವು- ಪೂರ್ಣ ವಿವರಕ್ಕೆ ಓದಿ
4) ಅಯೋಧ್ಯೆಯಲ್ಲಿ ರಾಮ ನವಮಿ; 500 ವರ್ಷಗಳ ಬಳಿಕ ರಾಮಮಂದಿರದಲ್ಲಿ ರಾಮಜನ್ಮೋತ್ಸವ ಆಚರಣೆ, 50 ಕ್ವಿಂಟಾಲ್ ಹೂ ಅಲಂಕಾರ, ಸೂರ್ಯ ತಿಲಕ ವಿಶೇಷ- ವಿವರ ಇಲ್ಲಿದೆ