Gruha Lakshmi: ಮಹಿಳೆಯರಿಗೆ 2 ಸಾವಿರ ರೂ. ನೆರವು ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ನಾಲ್ಕನೇ ಗ್ಯಾರಂಟಿಯೂ ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Gruha Lakshmi: ಮಹಿಳೆಯರಿಗೆ 2 ಸಾವಿರ ರೂ. ನೆರವು ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ನಾಲ್ಕನೇ ಗ್ಯಾರಂಟಿಯೂ ಜಾರಿ

Gruha Lakshmi: ಮಹಿಳೆಯರಿಗೆ 2 ಸಾವಿರ ರೂ. ನೆರವು ನೀಡುವ ಗೃಹಲಕ್ಷ್ಮಿ ಯೋಜನೆಗೆ ಚಾಲನೆ: ನಾಲ್ಕನೇ ಗ್ಯಾರಂಟಿಯೂ ಜಾರಿ

Fourth Guarantee implemented ಕರ್ನಾಟಕದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಮೂರು ಗ್ಯಾರಂಟಿ ಜಾರಿಗೊಳಿಸಿದ್ದು ನಾಲ್ಕನೆಯದಾಗಿ ಗೃಹಲಕ್ಷ್ಮಿ ಯೋಜನೆಗೂ ಬುಧವಾರ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ. ಯೋಜನೆ ಉದ್ಘಾಟನೆ ಕಾರ್ಯಕ್ರಮ, ಯೋಜನೆ ಕುರಿತು ವಿವರಗಳು ಇಲ್ಲಿವೆ.

ಬೆಂಗಳೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.
ಬೆಂಗಳೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಸಂಜೆ ಚಾಲನೆ ನೀಡಲಾಯಿತು.

ಬೆಂಗಳೂರು: ಕರ್ನಾಟಕ ಸರ್ಕಾರದ ಮಹಾತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಬುಧವಾರ ಜಾರಿಯಾಯಿತು. ಈ ಮೂಲಕ ಕಾಂಗ್ರೆಸ್‌ ಚುನಾವಣೆಗೂ ಮುನ್ನ ನೀಡಿದ ಐದು ಭರವಸೆಗಳಲ್ಲಿ ನಾಲ್ಕನೇ ಯೋಜನೆಗೂ ಚಾಲನೆ ನೀಡಿದಂತಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಮಹಿಳಾ ಮತ್ತು ಅಭಿವೃದ್ದಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ಬುಧವಾರ ಸಂಜೆ ಚಾಲನೆ ದೊರೆಯಿತು. ಅಲ್ಲದೇ ಈ ಯೋಜನೆಗೆ ಸಹಕರಿಸಲು ಪ್ರಜಾಪ್ರತಿನಿಧಿಗಳ ನೇಮಕವನ್ನೂ ಅಧಿಕೃತವಾಗಿ ಘೋಷಿಸಲಾಯಿತು.

ಸಾಂಕೇತಿಕವಾಗಿ ಆನಂದಿ ಲಿಂಗಯ್ಯ, ಸುಮಾ ಪ್ರಭಾಕರ್‌, ಸತ್ಯಭರತ್‌ ಅವರಿಗೆ ಮಹಿಳೆಯರ ಪರವಾಗಿ ಗೃಹಲಕ್ಷ್ಮಿಯೋಜನೆ ಪತ್ರಗಳನ್ನು ಹಸ್ತಾಂತರಿಸಲಾಯಿತು.

ಈಗಾಗಲೇ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ. ಉಚಿತವಾಗಿ ಐದು ಕೆಜಿ ಅಕ್ಕಿ ಹಾಗೂ ಐದು ಕೆಜಿ ಅಕ್ಕಿ ಹಣ ನೀಡುವ ಅನ್ನಭಾಗ್ಯ,200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ನೀಡುವ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲಾಗಿದೆ. ಈಗ 2000 ರೂ.ಗಳನ್ನು ಮಹಿಳೆಯರಿಗೆ ನೀಡುವ ಗೃಹಲಕ್ಷ್ಮಿ ಕೂಡ ಆರಂಭವಾಗಿದೆ.

ಇದರೊಂದಿಗೆ ಈ ಯೋಜನೆಗೆ ನೋಂದಣಿ ಪ್ರಕ್ರಿಯೆಯೂ ಆರಂಭವಾಗಲಿದೆ.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌, ಯೋಜನೆ ಜಾರಿಗೆ ಕೆಲ ದಿನಗಳಿಂದ ತಯಾರಿ ಮಾಡಲಾಗಿದ್ದು, ಹಲವರು ಸಹಕಾರ ನೀಡಿದ್ದಾರೆ. ಈ ಹಣದಿಂದ ಮಹಿಳೆಯರ ಬದುಕು ಸುಧಾರಿಸಲಿ. ಗುರುವಾರದಿಂದಲೇ ನೋಂದಣಿ ಶುರುವಾಗಲಿದೆ ಎಂದು ಹೇಳಿದರು.

ಯೋಜನೆಗೆ ನೋಂದಣಿ ಹೀಗೆ ಮಾಡಿಸಿ

ಯೋಜನೆಯಡಿ ನೋಂದಾಯಿಸಲು ಪಡಿತರ ಚೀಟಿ ಸಂಖ್ಯೆ, ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ಮಾಹಿತಿ ನೀಡಬೇಕು. ಆಧಾರ್‌ ನಂಬರ್‌ ಜೋಡಣೆಯಾಗಿರುವ ಬ್ಯಾಂಕ್‌ ಖಾತೆ ಹೊರತುಪಡಿಸಿ ಪರ್ಯಾಯ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಆಗಬೇಕಾಗಿದ್ದಲ್ಲೆ ಆ ಬ್ಯಾಂಕ್‌ ಖಾತೆಯ ಪಾಸ್‌ ಬುಕ್‌ ನೀಡಬೇಕು.

ನಿಗದಿತ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿಕೊಂಡಾಗ ಮಂಜೂರಾತಿ ಪತ್ರವನ್ನು ನೀಡಲಾಗುವುದು. ಪ್ರಜಾಪ್ರತಿನಿಧೀ ಮೂಲಕ ನೋಂದಾಯಿಸಿಕೊಂಡಲ್ಲಿ ಮಂಜೂರಾತಿ ಪತ್ರ ತದನಂತರ ಮನೆಗೆ ತಲುಪಲಿದೆ .

ಒನ್‌ ಸೇವೆಯ ಮೂಲಕವೂ ನೋಂದಣಿ ಮಾಡಿಸಿಕೊಂಡಿದ್ದಲ್ಲಿ ಅರ್ಜಿದಾರರು ನೀಡುವ ಮೊಬೈಲ್‌ ಸಂಖ್ಯೆಗೆ ಎಸ್‌ಎಂಎಸ್‌ ಮೂಲಕ ಮಂಜೂರಾತಿ ಸಂದೇಶ ರವಾನೆಯಾಗಲಿದೆ. ಒಂದು ವೇಳೆ ಫಲಾನುಭವಿ ಯಾವುದಾದರೂ ಒಂದು ಕಡೆ ನೊಂದಾಯಿಸಿಕೊಂಡಿದ್ದರೆ ಮತ್ತೊಮ್ಮೆ ನೋಂದಾಯಿಸಲು ಅವಕಾಶ ಇರುವುದಿಲ್ಲ. ಬದಲಿಗೆ ನೋಂದಾಯಿಸಲು ಪ್ರಯತ್ನಿಸಿದ ಮಾಹಿತಿ ಮೊಬೈಲ್‌ಗೆ ಬರಲಿದೆ.

ಈಗಾಗಲೇ ಆಧಾರ್‌ ಜೋಡಣೆಯಾಗಿರುವ ಫಲಾನುಭವಿಯ ಖಾತೆಗೆ ಪ್ರತಿ ತಿಂಗಳು 2ಸಾವಿರ ರೂ. ನೇರ ಖಾತೆಗೆ ತಲುಪಲಿದೆ. ಪರ್ಯಾಯ ಖಾತೆ ನೀಡಿದರೆ ಆರ್‌ಟಿಜಿಎಸ್‌ ಮೂಲಕ 2ಸಾವಿರ ರೂ ಜಮೆ ಮಾಡಲಾಗುವುದು.

ಈ ಯೋಜನೆಯಡಿ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ. ನೋಂದಣಿ ಪ್ರಕ್ರಿಯೆ ಸಂಪೂರ್ಣ ಉಚಿತ. ಈ ಯೋಜನೆಯಡಿ ನೋಂದಣಿಗೆ ಅಂತಿಮ ದಿನಾಂಕ ಅಥವಾ ನಿಗದಿಪಡಿಸಿಲ್ಲ. ಒಂದು ವೇಳೆ ಈಗಲೇ ನೋಂದಣಿ ಮಾಡಿಸಿಕೊಳ್ಳಲು ಆಗದೇ ಇದ್ದರೆ ಮುಂದೆ ಯಾವುದೇ ದಿನಾಂಕ ಅಥವಾ ಸಮಯದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.

ಪ್ರತಿ ಫಲಾನುಭವಿ ನೊಂದಣಿಗೆ ನಿಗದಿಪಡಿಸಿರುವ ದಿನಾಂಕ, ಸಮಯ ಮತ್ತು ಸ್ಥಳವನ್ನು1902 ಕರೆ ಮಾಡಿ ತಿಳಿಸಿಕೊಳ್ಳಬಹುದು. ಇಲ್ಲದೇ ಇದ್ದರೆ 8147500500 ಗೆ ಎಸ್‌ಎಂಎಸ್‌ ಅಥವಾ ವಾಟ್ಸ್‌ ಆಪ್‌ ಮೂಲಕ ಸಂದೇಶ ಕಳುಹಿಸಿ ವಿವರ ಪಡೆದುಕೊಳ್ಳಬಹುದು ಎನ್ನುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

Whats_app_banner