ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಸಾರಿಗೆ ಇಲಾಖೆಗೆ ಆಟೋ, ಕ್ಯಾಬ್‌ ಚಾಲಕರ ಮುತ್ತಿಗೆ, ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ

ಬೆಂಗಳೂರು: ಸಾರಿಗೆ ಇಲಾಖೆಗೆ ಆಟೋ, ಕ್ಯಾಬ್‌ ಚಾಲಕರ ಮುತ್ತಿಗೆ, ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ

ಬೆಂಗಳೂರು ಸಾರಿಗೆ ಇಲಾಖೆಗೆ ಆಟೋ, ಕ್ಯಾಬ್ ಚಾಲಕರು ಮುತ್ತಿಗೆ ಹಾಕಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದರು. ಗುರುವಾರ ಈ ಪ್ರತಿಭಟನೆ ವ್ಯಕ್ತವಾಗಿದ್ದು, ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆಯಾಗಿದೆ. ಈ ತಂಡಗಳು ಇಂದಿನಿಂದ ಅಕ್ರಮ ಬೈಕ್‌ ಟ್ಯಾಕ್ಸಿಗಳ ವಿರುದ್ಧ ಕಾರ್ಯಾಚರಿಸಲಿವೆ.

ಬೆಂಗಳೂರು: ಸಾರಿಗೆ ಇಲಾಖೆಗೆ ಆಟೋ, ಕ್ಯಾಬ್‌ ಚಾಲಕರ ಮುತ್ತಿಗೆ ಬಳಿಕ, ಸಾರಿಗೆ ಇಲಾಖೆ ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ ಮಾಡಿದೆ.
ಬೆಂಗಳೂರು: ಸಾರಿಗೆ ಇಲಾಖೆಗೆ ಆಟೋ, ಕ್ಯಾಬ್‌ ಚಾಲಕರ ಮುತ್ತಿಗೆ ಬಳಿಕ, ಸಾರಿಗೆ ಇಲಾಖೆ ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ ಮಾಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಇ ಬೈಕ್ ಟ್ಯಾಕ್ಸಿ ಸೇರಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ಚಾಲನೆಗೆ ತಡೆಯೊಡ್ಡುವ ಕೆಲಸ ಇಂದಿನಿಂದ ಶುರುವಾಗಲಿದೆ. ಹೌದು, ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇರಿದಂತೆ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡಗಳನ್ನು ರಚಿಸುವಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (ಆರ್‌ಟಿಒ) ಕರ್ನಾಟಕ ಸಾರಿಗೆ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.

ಖಾಸಗಿ ಬಳಕೆಯ ದ್ವಿಚಕ್ರ ವಾಹನಗಳನ್ನು ಟ್ಯಾಕ್ಸಿಗಳನ್ನಾಗಿ ಚಲಾಯಿಸಲು ಪರವಾನಗಿ ರಾಪಿಡೋ ಕಂಪನಿಗೂ ಸಿಕ್ಕಿಲ್ಲ. ಆದ್ದರಿಂದ ರಾಪಿಡೋ ಬೈಕ್‌ಗಳ ಸವಾರಿಗೆ ಅವಕಾಶ ಇಲ್ಲ. ಆದ್ದರಿಂದ ಈ ಆದೇಶ ರಾಪಿಡೋಗೂ ಅನ್ವಯ ಎಂದು ಆರ್‌ಟಿಒ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಆದಾಗ್ಯೂ, ರಾಪಿಡೋ ಕಾರ್ಯಾಚರಣೆಗೆ ತಡೆಯೊಡ್ಡದಂತೆ ಕೋರ್ಟ್ ನಿರ್ದೇಶನ ಇದೆ. ಅನಧಿಕೃತ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದರೆ ಮೋಟಾರು ವಾಹನ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲು ಸಾರಿಗೆ ಇಲಾಖೆ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾಗಿ ವರದಿ ಹೇಳಿದೆ.

ಟ್ರೆಂಡಿಂಗ್​ ಸುದ್ದಿ

ಬೈಕ್ ಟ್ಯಾಕ್ಸಿಗಳ ವಿರುದ್ಧ ಆಟೋ, ಕ್ಯಾಬ್‌ ಚಾಲಕರ ಪ್ರತಿಭಟನೆ ಮತ್ತು ಕರ್ನಾಟಕ ಸರ್ಕಾರದ ಆದೇಶ

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಆಟೋ-ರಿಕ್ಷಾ ಮತ್ತು ಕ್ಯಾಬ್ ಚಾಲಕರು ಕರ್ನಾಟಕ ಸಾರಿಗೆ ಇಲಾಖೆ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಅವರು, “ಒಂದು ನಗರ, ಒಂದು ಕ್ಯಾಬ್ ದರ” ನೀತಿಯನ್ನು ಜಾರಿಗೊಳಿಸಬೇಕು. ಪ್ರಯಾಣ ದರ, ಶಾಲಾ ಕ್ಯಾಬ್‌ಗಳಿಗೆ ಪರ್ಮಿಟ್ ನೀಡುವುದು ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದರು.

ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿ, ಒಂದು ಸಿಟಿ-ಒನ್ ಜಾರಿಗೊಳಿಸುವಂತೆ ಒತ್ತಾಯಿಸಿ ನಟರಾಜ್ ಶರ್ಮಾ ನೇತೃತ್ವದ ಹಲವಾರು ಆಟೋರಿಕ್ಷಾ, ಕ್ಯಾಬ್ ಮತ್ತು ಬಸ್ ನಿರ್ವಾಹಕರನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಪ್ರೈವೇಟ್ ಟ್ರಾನ್ಸ್‌ಪೋರ್ಟ್ ಆಪರೇಟರ್ಸ್ ಅಸೋಸಿಯೇಷನ್ ​​ಗುರುವಾರ (ಜುಲೈ 4) ಮಧ್ಯಾಹ್ನ ಸಾರಿಗೆ ಆಯುಕ್ತರನ್ನು ಭೇಟಿ ಮಾಡಿದ ನಂತರ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಯಿತು. ಈ ಪ್ರತಿಭಟನೆ ಬಳಿಕ ಕರ್ನಾಟಕ ಸರ್ಕಾರ ಈ ಆದೇಶ ನೀಡಿದೆ.

ಕರ್ನಾಟಕ ಸರ್ಕಾರವು ಮಾರ್ಚ್ 6 ರಂದು ಸರ್ಕಾರಿ ಆದೇಶದ ಮೂಲಕ ಇ-ಬೈಕ್ ಟ್ಯಾಕ್ಸಿ ಯೋಜನೆ 2021 ರ ಅಧಿಸೂಚನೆಯನ್ನು ಹಿಂಪಡೆದಿದೆ. ಇ-ಬೈಕ್ ಟ್ಯಾಕ್ಸಿ ಯೋಜನೆಯ ಅನುಷ್ಠಾನವು ಸಂಚಾರ ವ್ಯವಸ್ಥೆಗೆ "ಪೂರಕ" ಅಲ್ಲ ಎಂದು ಆದೇಶವು ಉಲ್ಲೇಖಿಸಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌) ನ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿ ಈ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿತ್ತು. ಈ ವರದಿ ಪ್ರಕಾರ ಸರ್ಕಾರ ಕ್ರಮ ತೆಗೆದುಕೊಂಡಿತ್ತು.

“ಎಲೆಕ್ಟ್ರಾನಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ಅನ್ನು ಹಿಂಪಡೆಯಲಾಗಿದೆ. ಬೈಕ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ತಿಳಿಸಲಾಗಿದೆ. ಜುಲೈ 5 ರಿಂದ ಮುಂದಿನ ಆದೇಶದವರೆಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸೇರಿ ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬೆಂಗಳೂರಿನ 10 ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ" ಎಂದು ಸರ್ಕಾರದ ಆದೇಶ ತಿಳಿಸಿದೆ.

ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ
ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ 10 ತಂಡ ರಚನೆ

ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ತಡೆಯುವಂತಿಲ್ಲ; ಸಂಘಟನೆ ಎಚ್ಚರಿಕೆ

"ಉಬರ್ / ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ಅಥವಾ ಬೆದರಿಕೆ ಹಾಕಲು" ಪ್ರಯತ್ನಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ​​ಅಧ್ಯಕ್ಷ ಆದಿ ನಾರಾಯಣ ಎಚ್ಚರಿಸಿದ್ದಾರೆ.

“ಕೆಲವು ಸಾಮಾಜಿಕ ಮಾಧ್ಯಮ ವರದಿಗಳು ಮತ್ತು ಪೋಸ್ಟ್‌ಗಳು ಇವಿ-ಬೈಕ್ ಮತ್ತು ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಳ್ಳಲು ಸಾರಿಗೆ ಆಯುಕ್ತರ ಕಚೇರಿಯ ಆದೇಶವನ್ನು ಶೇರ್ ಮಾಡಿವೆ. ಅದರ ಆಧಾರದ ಮೇಲೆ ಕೆಲವು ಆಟೋ ರಿಕ್ಷಾ ಯೂನಿಯನ್‌ಗಳು ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಡೆಸುವುದನ್ನು ಬಲವಂತವಾಗಿ ನಿಲ್ಲಿಸುವುದಾಗಿ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವುದಾಗಿ ಹೇಳಿಕೆಗಳನ್ನು ನೀಡಿವೆ. ಇದು ಸರಿಯಾದ ಕ್ರಮ ಅಲ್ಲ ಎಂದು ಆದಿ ನಾರಾಯಣ ಎಚ್ಚರಿಸಿದ್ದಾರೆ.

ಮೊದಲನೆಯದಾಗಿ, ಆದೇಶವು EV ಬೈಕ್ ಟ್ಯಾಕ್ಸಿಗಳ ಕುರಿತಾದುದು ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ಎರಡನೆಯದಾಗಿ, ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಕರ್ನಾಟಕದ ಗೌರವಾನ್ವಿತ ಹೈಕೋರ್ಟ್‌ ಆದೇಶಗಳ ರಕ್ಷಣೆ ಇದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ” ಆದಿನಾರಾಯಣ ಸ್ಪಷ್ಟಪಡಿಸಿದ್ದಾಗಿ ವರದಿ ಹೇಳಿದೆ.