ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ
ಕನ್ನಡ ಸುದ್ದಿ  /  ಕರ್ನಾಟಕ  /  ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

ಉತ್ತರ ಕನ್ನಡದಲ್ಲಿ ಕಳೆದ ಒಂದು ವಾರ ಸುರಿದ ಭಾರಿ ಮಳೆಯ ಸಂದರ್ಭದಲ್ಲಿ ಜುಲೈ 16 ರಂದು ಶಿರೂರು ಭೂಕುಸಿತ ಸಂಭವಿಸಿತ್ತು. ಮುಂದುವರಿದ ಶೋಧ ಕಾರ್ಯದ ಕಾರಣ ವಾರದ ಬಳಿಕ ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.

ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ
ಶಿರೂರು ಭೂಕುಸಿತ; ಗಂಗಾವಳಿ ನದಿಯಲ್ಲಿ 65 ವರ್ಷದ ಮಹಿಳೆಯ ಶವ ಪತ್ತೆ, ಸಾವಿನ ಸಂಖ್ಯೆ 8ಕ್ಕೆ ಏರಿಕೆ, ಮುಂದುವರಿದ ಶೋಧ ಕಾರ್ಯ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಭೂಕುಸಿತದಿಂದ ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಗಂಗಾವಳಿ ನದಿಯಲ್ಲಿ ಮಂಗಳವಾರ (ಜುಲೈ 23) ಶೋಧ ಕಾರ್ಯಾಚರಣೆ ವೇಳೆ ಪತ್ತೆಯಾಗಿದೆ. ಇದರೊಂದಿಗೆ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ನೌಕಾಪಡೆಯು ಸ್ಥಳದಲ್ಲಿ ಮತ್ತು ಗಂಗವಳ್ಳಿ ನದಿಯಲ್ಲಿ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಂಗಾವಳಿ ನದಿಯಲ್ಲಿ ಸಿಕ್ಕಿತು 65 ವರ್ಷದ ಮಹಿಳೆಯ ಶವ

"ಶೋಧನಾ ಕಾರ್ಯಾಚರಣೆಯಲ್ಲಿ, ನಾವು ಇನ್ನೂ ಒಂದು ಶವವನ್ನು ಪತ್ತೆ ಹಚ್ಚಿ ಹೊರತೆಗೆದಿದ್ದೀವೆ. ಅದು 65 ವರ್ಷದ ಮಹಿಳೆಯದ್ದು. ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿತ್ತು. ಗಂಗವಳ್ಳಿ ನದಿಯಿಂದ ಶವ ಹೊರತೆಗೆಯಲಾಗಿದೆ. ಕೇರಳದ ಲಾರಿ ಚಾಲಕ (ಅರ್ಜುನ್) ಸೇರಿ ಇನ್ನೂ ಮೂವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ " ಎಂದು ಕಾರವಾರ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ ಅವರು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ದುರಂತ ಸ್ಥಳದಲ್ಲಿ ರಕ್ಷಣಾ ಉಪಕರಣಗಳ ಹೊರತಾಗಿ, ಸೇನಾ ತಂಡದ ಬಳಿ ನೆಲದ ಒಳಹೊಕ್ಕು ಶೋಧಿಸುವ ರಾಡಾರ್‌ಗಳು, ಡೀಪ್ ಸರ್ಚ್ ಮೆಟಲ್ ಡಿಟೆಕ್ಟರ್‌ಗಳು, ಓವರ್‌ಬೋರ್ಡ್ ಮೋಟಾರ್‌ಗಳನ್ನು ಹೊಂದಿರುವ ರಾಫ್ಟ್‌ಗಳು ಮತ್ತು ವಿಶೇಷ ಕ್ಲೈಂಬಿಂಗ್ ಉಪಕರಣಗಳು ಸೇರಿ ವಿಶೇಷ ಸಾಧನಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುರಂತ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಕೆ

ಭಾರತೀಯ ಸೇನೆಯ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ತಂಡವು ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್‌ನ ಅಧಿಕಾರಿ, ಇಬ್ಬರು ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 55 ಇತರರು, ಅದೇ ರೀತಿ ಪುಣೆಯ ಕಾಲೇಜ್ ಆಫ್ ಮಿಲಿಟರಿ ಇಂಜಿನಿಯರಿಂಗ್‌ನ ಒಬ್ಬ ಜೂನಿಯರ್ ಕಮಿಷನ್ಡ್ ಅಧಿಕಾರಿ ಮತ್ತು ಇಬ್ಬರನ್ನು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.

ಜುಲೈ 16 ರಂದು ಭಾರೀ ಭೂಕುಸಿತದ ದಿನದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಉಪಗ್ರಹ ಚಿತ್ರಗಳ ಪ್ರಕಾರ, ಟ್ರಕ್ ಒಂದು ನದಿಗೆ ತಳ್ಳಲ್ಪಟ್ಟಿರುವ ಸಾಧ್ಯತೆಯಿದೆ. ಸೇನಾ ತಂಡವು ಫೆರೆಕ್ಸ್ ಲೊಕೇಟರ್ - ಜಿಪಿಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ಅಂದರೆ ನೀರು ಮತ್ತು ಮಣ್ಣಿನ ಲೋಹಗಳ ಅಡಿಯಲ್ಲಿ ಪತ್ತೆಹಚ್ಚಲು ಒಂದು ನಿರ್ದಿಷ್ಟ ಸಾಧನದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ.

ಈ ಭೂಕುಸಿತದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner