ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ ಖಾಸಗಿ ಕೈಗಾರಿಕೆಗಳಲ್ಲಿ ಸಿ, ಡಿ ಗುಂಪಿನ ಉದ್ಯೋಗ ಕನ್ನಡಿಗರಿಗೆ; 100 ಪ್ರತಿಶತ ಮೀಸಲಾತಿ ಜಾರಿಗೆ ಚಿಂತನೆ- ವರದಿ

ಕರ್ನಾಟಕದ ಖಾಸಗಿ ಕೈಗಾರಿಕೆಗಳಲ್ಲಿ ಸಿ, ಡಿ ಗುಂಪಿನ ಉದ್ಯೋಗ ಕನ್ನಡಿಗರಿಗೆ; 100 ಪ್ರತಿಶತ ಮೀಸಲಾತಿ ಜಾರಿಗೆ ಚಿಂತನೆ- ವರದಿ

ಕರ್ನಾಟಕದಲ್ಲಿ ಖಾಸಗಿ ಕೈಗಾರಿಕಾ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಚಾರ ಬಹಳ ಚರ್ಚೆಗೆ ಒಳಗಾಗಿರುವಂಥದ್ದು. ಕರ್ನಾಟಕದ ಖಾಸಗಿ ಕೈಗಾರಿಕೆಗಳಲ್ಲಿ ಸಿ, ಡಿ ಗುಂಪಿನ ಉದ್ಯೋಗ ಕನ್ನಡಿಗರಿಗೆ ಒದಗಿಸಲು 100 ಪ್ರತಿಶತ ಮೀಸಲಾತಿ ಜಾರಿಗೆ ಚಿಂತನೆ ನಡೆದಿದೆ ಎಂದು ವರದಿ ಹೇಳಿದೆ.

ಕರ್ನಾಟಕದ ಖಾಸಗಿ ಕೈಗಾರಿಕೆಗಳಲ್ಲಿ ಸಿ, ಡಿ ಗುಂಪಿನ ಉದ್ಯೋಗ ಕನ್ನಡಿಗರಿಗೆ; 100 ಪ್ರತಿಶತ ಮೀಸಲಾತಿ ಜಾರಿಗೆ ಚಿಂತನೆ- ವರದಿ
ಕರ್ನಾಟಕದ ಖಾಸಗಿ ಕೈಗಾರಿಕೆಗಳಲ್ಲಿ ಸಿ, ಡಿ ಗುಂಪಿನ ಉದ್ಯೋಗ ಕನ್ನಡಿಗರಿಗೆ; 100 ಪ್ರತಿಶತ ಮೀಸಲಾತಿ ಜಾರಿಗೆ ಚಿಂತನೆ- ವರದಿ

ಬೆಂಗಳೂರು: ಖಾಸಗಿ ವಲಯದಲ್ಲಿ ಸಿ ಮತ್ತು ಡಿ ಗ್ರೂಪ್ ಉದ್ಯೋಗಗಳನ್ನು ಸ್ಥಳೀಯರಿಗೆ ಮೀಸಲಿಡುವ ಮತ್ತೊಂದು ಪ್ರಯತ್ನವನ್ನು ಕರ್ನಾಟಕ ಸರ್ಕಾರ ನಡೆಸಲು ಮುಂದಾಗಿದೆ. ಕರ್ನಾಟಕ ಸರ್ಕಾರವು ಈ ವರ್ಗಗಳಲ್ಲಿ ಕನ್ನಡಿಗರಿಗೆ ಶೇಕಡಾ 100 ಉದ್ಯೋಗ ಮೀಸಲಾತಿಯನ್ನು ಮತ್ತು ರಾಜ್ಯದ ಪ್ರಯೋಜನಗಳನ್ನು ಪಡೆದ ಖಾಸಗಿ ವಲಯದ ಕೈಗಾರಿಕೆಗಳಲ್ಲಿ ವಿಕಲಚೇತನರಿಗೆ 5 ಶೇಕಡ ಉದ್ಯೋಗ ಮೀಸಲಾತಿಯನ್ನು ತರಲು ಚಿಂತನೆ ನಡೆಸಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್‌ ಅವರು ಈ ವಿಚಾರವಾಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಸೀಮಿತವಾದ ಮಾತುಕತೆಯನ್ನು ಗುರುವಾರ ನಡೆಸಿದರು. ಅಲ್ಲಿ, ಪ್ರಸ್ತಾವಿತ ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯೀ ಆದೇಶ) (ತಿದ್ದುಪಡಿ) ನಿಯಮ 2024ರ ಕುರಿತು ಸಮಾಲೋಚನೆ ನಡೆದಿದ್ದು, ಇದು ಜಾರಿಗೆ ಬಂದರೆ ಖಾಸಗಿ ವಲಯದಲ್ಲಿ ಕಡ್ಡಾಯ ಮೀಸಲಾತಿ ಅನುಷ್ಠಾನಗೊಳ್ಳಲಿದೆ. ಇದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂದು ದ ಹಿಂದೂ ವರದಿ ಮಾಡಿದೆ.

ಸರೋಜಿನಿ ಮಹಿಷಿ ವರದಿ ಆಧರಿಸಿದ ಕಾನೂನು

"ಸರೋಜಿನಿ ಮಹಿಷಿ ವರದಿಯು ಇಲ್ಲಿಯವರೆಗೆ ಒಂದು ನೀತಿಯಾಗಿತ್ತು. ಈಗ ತರುವ ಬದಲಾವಣೆಗಳು ವರದಿಯಲ್ಲಿ ಉಲ್ಲೇಖಿಸಿದ ಮೀಸಲಾತಿ ನೀತಿಯನ್ನು ಕಾನೂನನ್ನಾಗಿ ಮಾಡುತ್ತದೆ. ನಿಯಮಗಳನ್ನು ತಿದ್ದುಪಡಿ ಮಾಡಲಾಗುವುದು ಮತ್ತು ಮೀಸಲಾತಿಯನ್ನು ಕಡ್ಡಾಯವಾಗಿ ಮಾಡಲು ಸೂಚಿಸಲಾಗುವುದು. ಬದಲಾವಣೆ ತರಲು ಸಚಿವ ಸಂಪುಟದ ಒಪ್ಪಿಗೆ ಅಗತ್ಯ. 50 ಕ್ಕಿಂತ ಹೆಚ್ಚು ಕೆಲಸಗಾರರನ್ನು ನೇಮಿಸಿಕೊಳ್ಳುವ ಎಲ್ಲಾ ಕೈಗಾರಿಕೆಗಳು ಬದಲಾವಣೆಗಳಿಗೆ ಅನುಗುಣವಾಗಿರುವುದು ಕಡ್ಡಾಯವಾಗಿದೆ." ಎಂದು ಸಚಿವ ಸಂತೋಷ್ ಲಾಡ್ ತಿಳಿಸಿದ್ದಾಗಿ ವರದಿ ಹೇಳಿದೆ.

1984 ರಲ್ಲಿ ಸ್ಥಾಪಿಸಲಾದ ಆಯೋಗದ ನೇತೃತ್ವ ವಹಿಸಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಸರೋಜಿನಿ ಮಹಿಷಿ ಅವರು 1986 ರಲ್ಲಿ ವರದಿಯನ್ನು ಸಲ್ಲಿಸಿ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ 85 ಪ್ರತಿಶತ ಮೀಸಲಾತಿಯನ್ನು ಶಿಫಾರಸು ಮಾಡಿದ್ದರು. ವರದಿಯನ್ನು ಮಾನದಂಡವಾಗಿ ನೋಡಲಾಗುತ್ತದೆ.

ಕನ್ನಡಿಗರಿಗೆ 100 ಪ್ರತಿಶತ ಉದ್ಯೋಗ ಮೀಸಲಾತಿ ಬೇಡಿಕೆಯ ನಡುವೆ, ಸರ್ಕಾರವು 2019 ರಲ್ಲಿ ಸ್ಥಾಯಿ ಆದೇಶದ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದ್ದು, ಉದ್ಯೋಗದಲ್ಲಿ ಕನ್ನಡಿಗರಿಗೆ "ಆದ್ಯತೆ" ಒದಗಿಸಲು ಖಾಸಗಿ ವಲಯವನ್ನು ಕೇಳಿದೆ. ಆದಾಗ್ಯೂ, ಅಧಿಸೂಚನೆಯು ಶೇಕಡವಾರು ಮೀಸಲಾತಿ ನಿಗದಿಪಡಿಸುವುದನ್ನು ನಿರಾಕರಿಸಿದೆ. ಇದರಂತೆ, ಕನ್ನಡಿಗ ಎಂಬುದನ್ನು ದೃಢೀಕರಿಸಬೇಕಾದರೆ ಕರ್ನಾಟಕದಲ್ಲಿ 15 ವರ್ಷದಿಂದ ವಾಸ್ತವ್ಯ ಹೂಡಿರಬೇಕಾದ್ದು ಅಗತ್ಯ. ಇದಕ್ಕೆ ಸಂಬಂಧಿಸಿದ ದಾಖಲೆಯೂ ಇರಬೇಕು.

ಕೇಂದ್ರ ಕಾನೂನು, ರಾಜ್ಯಕ್ಕೂ ನಿಯಮ ರೂಪಿಸಲು ಅಧಿಕಾರ

ಇಂಡಸ್ಟ್ರಿಯಲ್ ಎಂಪ್ಲಾಯ್‌ಮೆಂಟ್ ಸ್ಟ್ಯಾಂಡಿಂಗ್ ಆರ್ಡರ್ ಆಕ್ಟ್, 1946 ಎಂಬ ಕೇಂದ್ರ ಕಾಯಿದೆಯು ರಾಜ್ಯಗಳಿಗೆ ನಿಯಮಗಳನ್ನು ರೂಪಿಸಲು, ಅಗತ್ಯ ನಿಯಮಗಳನ್ನು ಸೇರಿಸುವ ಅಧಿಕಾರವನ್ನು ಒದಗಿಸುತ್ತದೆ. ಇದು ವಜಾಗೊಳಿಸುವಿಕೆ ಮತ್ತು ಮುಕ್ತಾಯ ಸೇರಿ ಸೇವಾ ಷರತ್ತುಗಳ ಮೇಲೆ ಸ್ಪಷ್ಟತೆಯನ್ನು ಒದಗಿಸುತ್ತದೆ.

ಇದರಂತೆ, ರಾಜ್ಯ ಸರ್ಕಾರವು ಕ್ಲೆರಿಕಲ್ ಮತ್ತು ಕ್ಲರಿಕಲ್ ಅಲ್ಲದ ಸಿಬ್ಬಂದಿಗೆ ಮಾದರಿ ಸ್ಥಾಯಿ ಆದೇಶವನ್ನು ಮಾಡುತ್ತದೆ ಮತ್ತು 50 ಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರುವ ಕೈಗಾರಿಕೆಗಳು ರಾಜ್ಯ ಅಥವಾ ಕೇಂದ್ರ ಸರ್ಕಾರದ ಮಾದರಿ ಸ್ಥಾಯಿ ಆದೇಶಕ್ಕೆ ಅನುಗುಣವಾಗಿ ತಮ್ಮದೇ ಆದ ಸ್ಥಾಯಿ ಆದೇಶಗಳನ್ನು ಕಡ್ಡಾಯವಾಗಿ ರೂಪಿಸಬೇಕಾಗುತ್ತದೆ ಎಂದು ವರದಿ ಹೇಳಿದೆ.