ಬೆಂಗಳೂರಲ್ಲಿ ವಾರಾಂತ್ಯದಲ್ಲೇ ಹೆಚ್ಚು ಮಾರಣಾಂತಿಕ ಅಪಘಾತ; 2023ರ ಅಂಕಿ ಅಂಶದ ವಿವರ ವರದಿ ಹೀಗಿದೆ
ಬೆಂಗಳೂರು ಮಹಾನಗರದಲ್ಲಿ ರಸ್ತೆ ಅಪಘಾತಗಳು ನಡೆಯುವುದು ಹೊಸದೇನಲ್ಲ. ಹಾಗಂತ ಸಂಖ್ಯೆಯೂ ಕಡಿಮೆಯೇನಲ್ಲ. ಬೆಂಗಳೂರಲ್ಲಿ ವಾರಾಂತ್ಯದಲ್ಲೇ ಹೆಚ್ಚು ಮಾರಣಾಂತಿಕ ಅಪಘಾತ; 2023ರ ಅಂಕಿ ಅಂಶದ ವಿವರ ವರದಿ ಹೀಗಿದೆ ನೋಡಿ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ವಾರದ ದಿನಗಳಿಗೆ ಹೋಲಿಸಿದರೆ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆ ಮಾರಣಾಂತಿಕ ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಬೆಂಗಳೂರು ಸಂಚಾರ ಪೊಲೀಸರು ಒದಗಿಸಿರುವ ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 2023ರ ಒಂದು ವರ್ಷದ ಅವಧಿಯನ್ನು ಗಮನಿಸಿದರೆ, ನಿತ್ಯವೂ ಅಪಘಾತವಾಗುತ್ತಿರುವುದಾದರೂ ವಾರದ ಇತರೆ ದಿನಗಳಿಗೆ ಹೋಲಿಸಿದಾಗ ಭಾನುವಾರ ಅತಿ ಹೆಚ್ಚು ಅಪಘಾತ ಸಂಭವಿಸಿರುವುದು ಕಂಡುಬಂದಿದೆ.
ಬೆಂಗಳೂರಲ್ಲಿ ಶನಿವಾರ, ಭಾನುವಾರ ಅಪಘಾತಗಳು
ಕರ್ನಾಟಕ ರಾಜಧಾನಿ ಬೆಂಗಳೂರಲ್ಲಿ 2023ರ ಅವಧಿಯಲ್ಲಿ ಶನಿವಾರ ಮತ್ತು ಭಾನುವಾರಗಳೆರಡೂ ದಿನಗಳಲ್ಲಿ ಸಂಭವಿಸಿದ ಅಪಘಾತಗಳ ಪ್ರಮಾಣ ಒಟ್ಟು ಅಪಘಾತಗಳಲ್ಲಿ ಶೇಕಡ 32. ಅಂದರೆ ಒಟ್ಟು ಮಾರಣಾಂತಿಕ ಅಪಘಾತಗಳ ಪೈಕಿ ಭಾನುವಾರ 152 ಮತ್ತು ಶನಿವಾರ 133 ಅಪಘಾತಗಳು ಸಂಭವಿಸಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ವಾರಾಂತ್ಯದ ದಿನಗಳಲ್ಲಿ ಅಂದರೆ ಶನಿವಾರ, ಭಾನುವಾರ ವಾಹನ ದಟ್ಟಣೆ ಕಡಿಮೆ ಇರುತ್ತದೆ. ಹೀಗಾಗಿ ಬೈಕುಗಳು, ಕಾರುಗಳು ಸಾಮಾನ್ಯಕ್ಕಿಂತ ಹೆಚ್ಚು ವೇಗದಲ್ಲಿ ಚಲಿಸುತ್ತಿರುತ್ತವೆ. ಇದರ ಪರಿಣಾಮವೇ ಈ ಮಾರಣಾಂತಿಕ ಅಪಘಾತಗಳು ಎಂದು ವರದಿ ವಿವರಿಸಿದೆ.
ಬೆಂಗಳೂರಲ್ಲಿ 2023ರಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತಗಳ ಅಂಕಿನೋಟ
ಬೆಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ 2023ರಲ್ಲಿ ಸಂಭವಿಸಿದ ಮಾರಣಾಂತಿಕ ಅಪಘಾತಗಳಲ್ಲಿ ಬಲಿಯಾದವರು ಹೆಚ್ಚಿನವರು ಪುರುಷರು ಎಂದು ವರದಿ ಹೇಳಿದೆ. ಇದಕ್ಕೆ ಸಂಬಂಧಿಸಿದ ಅಂಕಿನೋಟ ಹೀಗಿದೆ
1) ಬೆಂಗಳೂರಲ್ಲಿ 2023ರ ಒಟ್ಟು ಮಾರಣಾಂತಿಕ ಅಪಘಾತಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆ 913.
2) ಮಾರಣಾಂತಿಕ ಅಪಘಾತಗಳಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 913ರಲ್ಲಿ 770 ಪುರುಷರು.
3) ಮೃತಪಟ್ಟ 770 ಪುರುಷರ ಪೈಕಿ ಅರ್ಧಕ್ಕಿಂತ ಹೆಚ್ಚು ಪುರುಷರು 20 ವರ್ಷದಿಂದ 40 ವರ್ಷ ವಯೋಮಾನದವರು.
4) ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಮೃತಪಟ್ಟವರೇ ಹೆಚ್ಚು.
5) 2022 ಕ್ಕೆ ಹೋಲಿಸಿದರೆ 2023 ರಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. 2022ರಲ್ಲಿ ಬೆಂಗಳೂರಿನಲ್ಲಿ ರಸ್ತೆ ಅಪಘಾತಗಳಿಂದ 772 ಮಂದಿ ಮೃತಪಟ್ಟಿದ್ದು, ಅವರಲ್ಲಿ 752 ಮಂದಿ ಪುರುಷರು.
ಕರ್ನಾಟಕದಲ್ಲಿ ರಸ್ತೆ ಅಪಘಾತಗಳಲ್ಲಿ ಬೈಕ್ ಸವಾರರು ಹೆಚ್ಚಿನ ಬಲಿಪಶುಗಳಾಗಿದ್ದಾರೆ ಎಂದು ಈ ಹಿಂದೆ ಅಂಕಿ ಅಂಶಗಳು ಸೂಚಿಸಿದ್ದವು. ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಲ್ಲಿ ಶೇಕಡಾ 60 ರಷ್ಟು ಕರ್ನಾಟಕದಲ್ಲಿ ಬೈಕ್ ಸವಾರರು ಎಂದು ಕರ್ನಾಟಕ ಪೊಲೀಸ್ ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಲೋಕಸಭಾ ಚುನಾವಣೆ; ಪ್ರಚಾರದ ನಡುವೆ ವಿವಿಧ ರಾಜಕೀಯ ಪಕ್ಷಗಳು ಪ್ರಸ್ತಾಪಿಸುತ್ತಿರುವ 7 ಪ್ರಮುಖ ಸಂಗತಿಗಳಿವು - ವರದಿಗೆ ಇಲ್ಲಿ ಕ್ಲಿಕ್ ಮಾಡಿ
2) ತಿರುಪತಿಯಲ್ಲಿ ಅದ್ಧೂರಿಯಾಗಿ ನೆರವೇರಿದ ವಸಂತೋತ್ಸವ; ಕಾರ್ಯಕ್ರಮ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು- ಫೋಟೋಸ್ ನೋಡಿ
3) ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಇತಿಹಾಸ ನಿರ್ಮಿಸಿದ ಡಿ ಗುಕೇಶ್; ಈ ಸಾಧನೆ ಮಾಡಿದ ವಿಶ್ವದ ಅತ್ಯಂತ ಕಿರಿಯ ಆಟಗಾರ- ಇಲ್ಲಿದೆ ವರದಿ
4) ಕರ್ನಾಟಕ ಹವಾಮಾನ ಏಪ್ರಿಲ್ 22; ಕಲಬುರಗಿ, ಬೀದರ್, ಮೈಸೂರು, ದಕ್ಷಿಣ ಕನ್ನಡ ಸೇರಿ 16 ಜಿಲ್ಲೆಗಳಲ್ಲಿ ಕೆಲವೆಡೆ ಮಳೆ, ಉಳಿದೆಡೆ ಒಣಹವೆ- ವಿವರ ವರದಿ ಹೀಗಿದೆ
5) ಬಕೆಟ್‌ನಲ್ಲಿ ಕಾಫಿ ಕುಡಿದು, ಗಜಗಾತ್ರದ ಕ್ರೋಸೆಂಟ್ ಸವಿದ ದರ್ಶನ್ ಪತ್ನಿ ವಿಜಯಲಕ್ಷ್ಮೀ! ಕಣ್ ಕಣ್ ಬಿಟ್ಟು ಹುಬ್ಬೇರಿಸಿದ ನೆಟ್ಟಿಗರು- ನೀವೂ ನೋಡಿ
(This copy first appeared in Hindustan Times Kannada website. To read more like this please logon to kannada.hindustantimes.com)