ಕರ್ನಾಟಕದಿಂದ ಅಯೋಧ್ಯೆಗೆ ಬಸ್ ಇದೆಯಾ; ಸಮಯ, ಮಾರ್ಗ, ಅಂತರ ಸೇರಿ ಇತರೆ ಮಾಹಿತಿ ಇಲ್ಲಿದೆ
ಕರ್ನಾಟಕದಿಂದ ಅಯೋಧ್ಯೆಗೆ ಬಸ್ ಸೇವೆ ಇದೆಯಾ? ನೇರ ಸಂಪರ್ಕ ಇಲ್ಲದಿದ್ದರೆ ಎಲ್ಲಿಂದ ಹೋದರೆ ಅನುಕೂಲವಾಗುತ್ತದೆ, ರಸ್ತೆ ಮಾರ್ಗ, ಅಂತರದ ಮಾಹಿತಿ ಇಲ್ಲಿದೆ
ಬೆಂಗಳೂರು: ರಾಮನೂರು ಅಯೋಧ್ಯೆ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿ ಬದಲಾಗುತ್ತಿದ್ದು, ದೇಶದ ಮೂಲೆ ಮೂಲೆಗಳಿಂದ ಇಲ್ಲಿಗೆ ಜನರು ಬರಲು ಆರಂಭಿಸಿದ್ದಾರೆ. ಜನವರಿ 22ರ ಸೋಮವಾರ ರಾಮಮಂದಿರ ಪ್ರಾಣ ಪ್ರತಿಷ್ಠಾನ ನಡೆಯಲಿದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಅಯೋಧ್ಯೆಯಲ್ಲಿ ಸೇರುವ ಸಾಧ್ಯತೆ ಇದೆ. ಸರ್ಕಾರ ಕೂಡ ವಿವಿಧ ಕ್ಷೇತ್ರದ ಗಣ್ಯರಿಗೆ ಆಹ್ವಾನ ನೀಡಿದೆ.
ಉತ್ತರ ಪ್ರದೇಶ ಸುತ್ತಮುತ್ತಲಿನ ರಾಜ್ಯಗಳ ಜನರು ಬಸ್, ಕಾರು, ಬೈಕ್ ಹೀಗೆ ತಮ್ಮದೇ ವಾಹನಗಳ ಮೂಲಕ ಅಯೋಧ್ಯೆಗೆ ಸುಲಭವಾಗಿ ತೆರಳುತ್ತಾರೆ. ಆದರೆ ಕರ್ನಾಟಕದಂತಹ ದಕ್ಷಿಣ ಭಾಗದ ರಾಜ್ಯಗಳಿಗೆ ಅಯೋಧ್ಯೆ ತುಂಬಾ ದೂರದ ಸ್ಥಳ. ರಾಜಧಾನಿ ಬೆಂಗಳೂರಿನಿಂದ ಲೆಕ್ಕಾ ಹಾಕಿಕೊಂಡಿರು ಇಲ್ಲಿಂದ ಅಯೋಧ್ಯೆಗೆ ಸುಮಾರು 1,897 ಕಿಲೋ ಮೀಟರ್ ಅಂತರವಿದೆ. ಅಯೋಧ್ಯೆಯ ರಾಮಮಂದಿರ ನೋಡಲು ಕಾರು, ಟಿಟಿ ಅಥವಾ ಬಸ್ ಮೂಲಕ ಹೋಬೇಕೆಂದರೆ ಕನಿಷ್ಠ 34 ಗಂಟೆಗಳ ಸಮಯ ಬೇಕಾಗುತ್ತದೆ.
ಕರ್ನಾಟಕದಿಂದ ಅಯೋಧ್ಯೆಗೆ ನೇರ ಬಸ್ ಇಲ್ಲದಿದ್ದರೂ ಸಮೀಪದ ಯಾವ ನಗರಕ್ಕೆ ಹೋಗಿ ಅಲ್ಲಿಂದ ಈ ಧಾರ್ಮಿಕ ಕ್ಷೇತ್ರವನ್ನು ತಲುಪಬಹುದು. ಕರ್ನಾಟಕದ ಯಾವ ಮೂಲೆಯಿಂದ ಅಯೋಧ್ಯೆಗೆ ಹತ್ತಿರವಾಗುತ್ತದೆ. ಕ್ಯಾಬ್, ಖಾಸಗಿ ಬಸ್ ಎಲ್ಲಿಯ ವರೆಗೆ ಹೋಗುತ್ತವೆ. ಇವುಗಳ ಸಮಯ, ದಿನಾಂಕ ಎಲ್ಲವನ್ನೂ ನೋಡೋಣ.
ಬೆಂಗಳೂರಿನಿಂದ ಅಯೋಧ್ಯೆಗೆ ರಸ್ತೆ ಮಾರ್ಗದಲ್ಲಿ ಹೇಗೆ ತಲುವುದು?
ಪ್ರಮುಖವಾಗಿ ಕರ್ನಾಟಕದ ಯಾವ ಭಾಗದಿಂದಲೂ ಅಯೋಧ್ಯೆಗೆ ನೇರಬಸ್ ವ್ಯವಸ್ಥೆ ಇಲ್ಲ. ಮೊದಲು ರಸ್ತೆ ಮಾರ್ಗವನ್ನು ನೋಡುವುದಾದರೆ ಬೆಂಗಳೂರು, ಚಿಕ್ಕಬಳ್ಳಾಪುರ, ಗುಡಿಬಂಡೆ, ಬಾಗೇಪಲ್ಲಿ ಮಾರ್ಗವಾಗಿ ಸಾಗಿ ಆಂಧ್ರ ಪ್ರದೇಶದ ಪೆನುಕೊಂಡ, ಅನಂತಪುರಂ, ಕರ್ನೂಲು, ಮೆಹಬೂಬ್‌ನಗರ ಮಾರ್ಗವಾಗಿ ಹೈದರಾಬಾದ್‌ನ ಔಟರ್ ರಿಂಗ್ ರೋಡ್ ಮೂಲಕ ರಾಮಯಂಪೇಟ, ಕಾಮರೆಡ್ಡಿ, ಅದಿಲಾ ಬಾದ್ ಮಾರ್ಗವಾಗಿ ಮಹಾರಾಷ್ಟ್ರದ ನಾಗ್ಪುರ್ ತಲುಪಬೇಕು. ನಾಗ್ಬುರ್ ಔಟರ್ ರಿಂಗ್ ರೋಡ್ ಮೂಲಕ ಜಬ್ಬಲ್‌ಪುರಕ್ಕೆ ಹೋಗಿ ಇಲ್ಲಿನ ನಗರದ ಹೊರವಲಯದ ಹೆದ್ದಾರಿ ಮೂಲಕ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ಹೋಗಬೇಕು. ಇಲ್ಲಿಂದ ಸುಲ್ತಾನ್‌ಪುರ್ ಮಾರ್ಗವಾಗಿ ಅಯೋಧ್ಯೆಗೆ ತಲುಪಬಹುದು.
ಕರ್ನಾಟಕದ ಯಾವುದೇ ಭಾಗದಿಂದ ಅಯೋಧ್ಯೆಗೆ ನೇರ ಬಸ್ ಸಂಪರ್ಕ ಇಲ್ಲ. ಹೀಗಾಗಿ ಬೆಂಗಳೂರಿನಿಂದ ಹೈದರಾಬಾದ್, ನಾಗ್ಪುರಕ್ಕೆ ಬಸ್‌ಗಳಿವೆ. ಇಲ್ಲವೇ ನಗರದಿಂದ ನೇರವಾಗಿ ನಾಗ್ಪುರಕ್ಕೆ ತಲುಪಿ ಅಲ್ಲಿಂದ ಬೇರೆ ಬಸ್‌ಗಳನ್ನು ಹಿಡಿದು ಅಯೋಧ್ಯೆಗೆ ತಲುಪಬಹುದು. ಬೆಂಗಳೂರಿನಿಂದ ನಾಗ್ಪುರಕ್ಕೆ ಪ್ರತಿನಿತ್ಯ ಖಾಸಗಿ ಬಸ್‌ಗಳ ಸಂಚಾರವಿದೆ.
ನಾರ್ಥ್ರನ್ ಟ್ರಾವೆಲ್ಸ್‌ನಿಂದ ಮಧ್ಯಾಹ್ನ 1 ಗಂಟೆಗೆ, ಎಸ್‌ಆರ್‌ಎಸ್‌ನಿಂದ ಮಧ್ಯಾಹ್ನ 12, ಆರೆಂಜ್ ಟೂರ್ಸ್ ಅಂಡ್ ಟ್ರಾವೆಲ್ಸ್‌ನಿಂದ ಮಧ್ಯಾಹ್ನ 4, ನಾರ್ಥ್ರನ್ ಟ್ರಾವೆಲ್ಸ್‌ನಿಂದ ಮಧ್ಯಾಹ್ನ 12.55ಕ್ಕೆ ಬಸ್ ಸೇವೆಗಳು ಲಭ್ಯವಿದ್ದು, 1,700 ರೂಪಾಯಿಂದ 2,300 ರೂಪಾಯಿ ವರೆಗೆ ಟಿಕೆಟ್ ದರವಿದೆ. ನಾಗ್ಪುರದಿಂದ ಬೇರೆ ಬಸ್, ಟಿಕೆಟ್ ದರ ಎಲ್ಲವನ್ನು ನೋಡಿಕೊಳ್ಳಬೇಕಾಗುತ್ತದೆ. ಅಯೋಧ್ಯೆಗೆ ಬಸ್‌ನಲ್ಲಿ ಹೋಗಲು ಬಯಸುವವರು ಈ ಮಾರ್ಗವನ್ನು ಅನುಸರಿಸಬಹುದು. ಇಲ್ಲವೇ ತಾವೇ ಕಾರು ಅಥವಾ ಟಿಟಿಗಳ ಮೂಲಕವು ಹೋಗಿ ಬರಬಹುದು.