ಕರ್ನಾಟಕದಿಂದ ಅಯೋಧ್ಯೆಗೆ ರೈಲಲ್ಲಿ ಹೋಗುವುದು ಹೇಗೆ; ರೈಲುಗಳ ಹೆಸರು, ಸಮಯ, ದಿನಾಂಕ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಿಂದ ಅಯೋಧ್ಯೆಗೆ ರೈಲಲ್ಲಿ ಹೋಗುವುದು ಹೇಗೆ; ರೈಲುಗಳ ಹೆಸರು, ಸಮಯ, ದಿನಾಂಕ ಹೀಗಿದೆ

ಕರ್ನಾಟಕದಿಂದ ಅಯೋಧ್ಯೆಗೆ ರೈಲಲ್ಲಿ ಹೋಗುವುದು ಹೇಗೆ; ರೈಲುಗಳ ಹೆಸರು, ಸಮಯ, ದಿನಾಂಕ ಹೀಗಿದೆ

ಕರ್ನಾಟಕದ ಪ್ರಮುಖ ನಗರಗಳಿಂದ ಅಯೋಧ್ಯೆಗೆ ರೈಲಿನಲ್ಲಿ ಹೋಗಬಹುದು. ಇದಕ್ಕಾಗಿ ಸ್ವಲ್ಪ ದಿನಗಳ ಕಾಲ ಕಾಯಬೇಕು. ಪ್ರಸ್ತುತ ಅಯೋಧ್ಯೆಗೆ ಇರುವ ರೈಲು ಸೇವೆಯ ಮಾಹಿತಿ ಇಲ್ಲಿದೆ.

ಕರ್ನಾಟಕದಿಂದ ಅಯೋಧ್ಯೆಗೆ ಇರುವ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕದಿಂದ ಅಯೋಧ್ಯೆಗೆ ಇರುವ ರೈಲುಗಳ ಸಂಪೂರ್ಣ ಮಾಹಿತಿ ಇಲ್ಲಿದೆ

ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮಂದಿರದ ಪ್ರಾಣ ಪ್ರತಿಷ್ಠಾನೆ ನಡೆಯಲಿದೆ. ರಾಮಮಂದಿರ ಜೊತೆಗೆ ಆ ಭಾಗದಲ್ಲಿನ ಪ್ರವಾಸಿ ತಾಣಗಳನ್ನೂ ಕಣ್ತುಂಬಿಕೊಳ್ಳಲು ಕೆಲವರು ಈಗಾಗಲೇ ಬಸ್, ಕ್ಯಾಬ್, ವಿಮಾನ, ರೈಲಿನ ಮೂಲಕ ಅಯೋಧ್ಯೆಗೆ ತೆರಳಲು ಸಿದ್ದತೆಗಳನ್ನು ಮಾಡಿಕೊಂಡಿರುತ್ತಾರೆ.

ಅತಿ ಕಡಿಮೆ ದರ ಹಾಗೂ ಸುರಕ್ಷಿತ ಪ್ರಯಾಣದ ಸೌಲಭ್ಯವಾಗಿರುವ ರೈಲಿನ ಮೂಲಕ ಅಯೋಧ್ಯೆಗೆ ಹೋಗುವುದು ಹೇಗೆ, ಕರ್ನಾಟಕದ ಯಾವ ಯಾವ ಭಾಗದಿಂದ ಅಯೋಧ್ಯೆಗೆ ರೈಲು ಸೇವೆ (Karnataka to Ayodhya Train) ಇದೆ, ಪ್ರಸ್ತುತ ಇರುವ ರೈಲು ಸೇವೆಗಳ ಸಮಯ, ದಿನಾಂಕ, ದರಗಳು, ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಅಯೋಧ್ಯೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಸದ್ಯಕ್ಕೆ ಕರ್ನಾಟಕದಿಂದ ಅಯೋಧ್ಯೆಗೆ ಹೋಗಲು ಬೆಂಗಳೂರಿನಿಂದ ಮಾತ್ರ ರೈಲು ಸೇವೆಗಳು ಲಭ್ಯ ಇವೆ. ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಗೊಯಿಬಿಬೋ ಮಾಹಿತಿ ಪ್ರಕಾರ ಒಟ್ಟು 9 ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರ ಮಾಡುತ್ತಿದ್ದು, ಇದರಲ್ಲಿ 8 ರೈಲು ಸೇವೆಗಳು ಚಾಲ್ತಿಯಲ್ಲಿವೆ.

1. ರೈಲು ಸಂಖ್ಯೆ 15024 - ವೈಪಿಆರ್ ಜಿಕೆಪಿ ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಸಂಜೆ 4.25ಕ್ಕೆ ಅಯೋಧ್ಯೆಗೆ ತಲುಪುತ್ತದೆ. 1 ದಿನ 16 ಗಂಟೆ, 45 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 820 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಮಾರ್ಗದ ಅಂತರ 1,608 ಕಿಲೋ ಮೀಟರ್.

2. ರೈಲು ಸಂಖ್ಯೆ 22534 - ವೈಪಿಆರ್ (ಯಶವಂತಪುರ) ಜಿಕೆಪಿ (ಗೋರಖ್‌ಪುರ) ಎಕ್ಸ್‌ಪ್ರೆಸ್ - ಈ ರೈಲು ಪ್ರತಿ ಬುಧವಾರ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಸಂಜೆ 3.50ಕ್ಕೆ ಗೋಂಡಾ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪುತ್ತದೆ. 1 ದಿನ 16 ಗಂಟೆ, 10 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 855 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಮಾರ್ಗದ ಅಂತರ 1,641 ಕಿಲೋ ಮೀಟರ್.

3. ರೈಲು ಸಂಖ್ಯೆ 12592 - ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಬೆಳಗ್ಗೆ 5.20ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.52ಕ್ಕೆ ಮಂಕಾಪುರಕ್ಕೆ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 32 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. 865 ರೂಪಾಯಿಯಿಂದ ಟಿಕೆಟ್ ಬೆಲೆ ಆರಂಭವಾಗುತ್ತದೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್.

4. ರೈಲು ಸಂಖ್ಯೆ 01667 - ಯಶ್ವಂತಪುರ ಎರ್ನಾಕುಲಂ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಯಶವಂತಪುರದಿಂದ ರಾತ್ರಿ 11.30ಕ್ಕೆ ಹೊರಟು ಮರುದಿನ ಸುಲ್ತಾನ್‌ಪುರಕ್ಕೆ ಬೆಳಗ್ಗೆ 5.30ಕ್ಕೆ ತಲುಪಲಿದೆ (ಇಲ್ಲಿಂದ ಅಯೋಧ್ಯೆಗೆ 60 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,549 ಕಿಲೋ ಮೀಟರ್. ಗಮನಿಸಿ- ಈ ರೈಲು ಪ್ರಸ್ತುತ ಚಾಲನೆಯಲ್ಲಿ ಇಲ್ಲ.

5. ರೈಲು ಸಂಖ್ಯೆ 05016 - ಯಶ್ವಂತಪುರ ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಪ್ರತಿ ಬುಧವಾರ ಯಶವಂತಪುರ ರೈಲ್ವೆ ನಿಲ್ದಾಣದಿಂದ ರಾತ್ರಿ 11.40ಕ್ಕೆ ಹೊರಟು ಮರುದಿನ ಮಧ್ಯಾಹ್ನ 3.50ಕ್ಕೆ ಗೋಂಡಾ ರೈಲು ನಿಲ್ದಾಣ (ಇಲ್ಲಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ತಲುಪಲಿದೆ. ರೈಲು ಸಂಚಾರ ಮಾರ್ಗದ ಅಂತರ 1,641 ಕಿಲೋ ಮೀಟರ್.

6. ರೈಲು ಸಂಖ್ಯೆ 05024 - ಜಿಕೆಪಿ ಫೆಸ್ಟ್ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲು ಪ್ರತಿ ಗುರುವಾರ ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11.40ಕ್ಕೆ ಹೊರಟು ಮರು ದಿನ ಸಂಜೆ 4.26ಕ್ಕೆ ಅಯೋಧ್ಯೆ ತಲುಪಲಿದೆ. 1 ದಿನ 16 ಗಂಟೆ, 46 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. ರೈಲು ಸಂಚಾರ ಮಾರ್ಗದ ಅಂತರ 1,608 ಕಿಲೋ ಮೀಟರ್.

7. ರೈಲು ಸಂಖ್ಯೆ 02592 - ವೈಪಿಆರ್ ಜೆಕೆಪಿ ಎಕ್ಸ್‌ಪ್ರೆಸ್ ರೈಲು ಪ್ರತಿ ಸೋಮವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5.20ಕ್ಕೆ ಹೊರಟು ಮರು ದಿನ ಮಧ್ಯಾಹ್ನ 1.17ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 19 ಗಂಟೆ, 57 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್.

8. ರೈಲು ಸಂಖ್ಯೆ 06593 - ವೈಪಿಆರ್ ಎನ್‌ಝೆಡ್‌ಎಂ ಎಕ್ಸ್‌ಪ್ರೆಸ್ ರೈಲು ಪ್ರತಿ ಭಾನುವಾರ ಬೆಂಗಳೂರಿನ ಯಶವಂತಪುರದಿಂದ ಸಂಜೆ 5.20ಕ್ಕೆ ಹೊರಟು ಮರು ದಿನ ಸಂಜೆ 5.13ಕ್ಕೆ ಮಂಕಾಪುರ (ಇಲ್ಲಿಂದ ಅಯೋಧ್ಯೆಗೆ 28 ಕಿಲೋ ಮೀಟರ್) ತಲುಪಲಿದೆ. 1 ದಿನ 23 ಗಂಟೆ, 53 ನಿಮಿಷಗಳ ಸಮಯವನ್ನು ತೆಗೆದುಕೊಳ್ಳುತ್ತೆ. ರೈಲು ಸಂಚಾರ ಮಾರ್ಗದ ಅಂತರ 1,636 ಕಿಲೋ ಮೀಟರ್.

9. ರೈಲು ಸಂಖ್ಯೆ 15016 ವೈಎಲ್‌ಕೆ (ಯಲಹಂಕ) ಗೋರಖ್‌ಪುರ್ ಎಕ್ಸ್‌ಪ್ರೆಸ್ ಪ್ರತಿ ಗುರುವಾರ ಬೆಳಗ್ಗೆ 7.45ಕ್ಕೆ ಯಲಹಂಕ ರೈಲು ನಿಲ್ದಾಣದಿಂದ ಹೊರಟು ಎರಡನೇ ದಿನದ ಬೆಳಗ್ಗೆ 10.35ಕ್ಕೆ ಗೋಂಡ ರೈಲು ನಿಲ್ದಾಣ ತಲುಪುತ್ತದೆ. (ಈ ನಿಲ್ದಾಣದಿಂದ ಅಯೋಧ್ಯೆಗೆ 46 ಕಿಲೋ ಮೀಟರ್) ಈ ರೈಲು 2 ದಿನ 2 ಗಂಟೆ 50 ನಿಮಿಷ ಸಮಯವನ್ನು ತೆಗೆದುಕೊಳ್ಳುತ್ತದೆ. 1,629 ಅಂತರ ಇರಲಿದೆ.

ಸದ್ಯ ಇಷ್ಟು ರೈಲುಗಳು ಬೆಂಗಳೂರಿನಿಂದ ಅಯೋಧ್ಯೆಗೆ ಸಂಚಾರಿಸುತ್ತಿವೆ. 2023ರ ಫೆಬ್ರವರಿಯಿಂದ ಅಯೋಧ್ಯೆಗೆಕರ್ನಾಟಕದ ಇತರೆ ಭಾಗಗಳಿಂದಲೂ ರೈಲು ಸೇವೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಮೂಲಗಳು ತಿಳಿಸಿವೆ. ಈ 11 ರೈಲುಗಳ ಪೈಕಿ ಬೆಂಗಳೂರಿನಿಂದ 3, ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರಿನಿಂದ ತಲಾ 2, ಶಿವಮೊಗ್ಗ, ಬೆಳಗಾವಿಯಿಂದ ತಲಾ 1 ರೈಲು ಅಯೋಧ್ಯೆಗೆ ಹೊರಡಲಿವೆ. ದಿನಾಂಕ, ಸಮಯ ಹಾಗೂ ದರಗಳನ್ನು ಇನ್ನಷ್ಟೇ ನಿಗದಿ ಮಾಡಬೇಕು ಎಂದು ಐಆರ್‌ಸಿಟಿಸಿ ತಿಳಿಸಿದೆ.

Whats_app_banner