Bangalore Traffic: ಬೆಂಗಳೂರಿನ ಟಿ. ಸಿ. ಪಾಳ್ಯ ಜಂಕ್ಷನ್‌ ಬಳಿ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಮಾರ್ಗ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  Bangalore Traffic: ಬೆಂಗಳೂರಿನ ಟಿ. ಸಿ. ಪಾಳ್ಯ ಜಂಕ್ಷನ್‌ ಬಳಿ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಮಾರ್ಗ ಬದಲಾವಣೆ

Bangalore Traffic: ಬೆಂಗಳೂರಿನ ಟಿ. ಸಿ. ಪಾಳ್ಯ ಜಂಕ್ಷನ್‌ ಬಳಿ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಮಾರ್ಗ ಬದಲಾವಣೆ

ಬೆಂಗಳೂರಿನ ಟಿ. ಸಿ. ಪಾಳ್ಯ ಜಂಕ್ಷನ್‌ ಬಳಿ ಸಂಚಾರ ದಟ್ಟಣೆ ನಿವಾರಿಸಲು ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಇಲ್ಲಿ ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಅಧಿಸೂಚನೆ ಪ್ರಕಟಿಸಿದ್ದು, ಈ ವಿಷಯವಾಗಿ ವಾಹನ ಸವಾರರು ಸಂಪೂರ್ಣ ಖುಷಿಯಾಗಿದ್ದಾರೆ. (ವರದಿ- ಎಚ್. ಮಾರುತಿ)

ಬೆಂಗಳೂರು ಟ್ರಾಫಿಕ್​  (ಸಾಂಕೇತಿಕ ಚಿತ್ರ)
ಬೆಂಗಳೂರು ಟ್ರಾಫಿಕ್​ (ಸಾಂಕೇತಿಕ ಚಿತ್ರ)

ಬೆಂಗಳೂರಿನ ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಸಿ. ಪಾಳ್ಯ ಜಂಕ್ಷನ್‌ (TC Palya Junction) ಬಳಿ ಸಂಚಾರ ದಟ್ಟಣೆ ನಿವಾರಿಸಲು ಪ್ರಾಯೋಗಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ

ಬೆಂಗಳೂರಿನ ಕೆ ಆರ್ ಪುರಂ ವ್ಯಾಪ್ತಿಯ ಟಿಸಿ ಪಾಳ್ಯ ಜಂಕ್ಷನ್ ನಲ್ಲಿ ಸಂಚಾರ ದಟ್ಟಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ಪೊಲೀಸರು ಪ್ರಾಯೋಗಿಕವಾಗಿ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ. ಈ ಬದಲಾವಣೆ ಕೇವಲ ತಾತ್ಕಾಲಿಕ ಎಂದು ಸ್ಪಷ್ಟಪಡಿಸಲಾಗಿದೆ.

ಟಿಸಿ ಪಾಳ್ಯ ಮಾರ್ಗದಿಂದ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಬಟ್ಟರಹಳ್ಳಿ ಜಂಕ್ಷನ್ ನಲ್ಲಿ ಯೂಟರ್ನ್ ತೆಗೆದುಕೊಂಡು ಹಳೇ ಮದ್ರಾಸ್ ರಸ್ತೆಯಲ್ಲಿ ಮುಂದುವರೆಯಬೇಕು.

ಹೊಸಕೋಟೆಯಿಂದ ಟಿಸಿ ಪಾಳ್ಯಕ್ಕೆ ಆಗಮಿಸುವ ವಾಹನಗಳು ಸರ್ಕಾರಿ ಕಾಲೇಜು ಜಂಕ್ಷನ್ ನಲ್ಲಿ ಯೂಟರ್ನ್ ತೆಗೆದುಕೊಳ್ಳಬೇಕು. ಮೇಡಹಳ್ಳಿಯಿಂದ ಟಿಸಿ ಪಾಳ್ಯಕ್ಕೆ ಸರ್ವೀಸ್ ರಸ್ತೆ ಯಲ್ಲಿ ಸಂಚರಿಸುವ ವಾಹನಗಳು ಟಿಸಿ ಪಾಳ್ಯ ಜಂಕ್ಷನ್ ಗಿಂತ ಮೊದಲು ಸಿಗುವ ಮೀಡಿಯನ್‌ ಓಪನ್‌ ಬಳಿ ಬಂದು ಹಳೇ ಮದ್ರಾಸ್ ರಸ್ತೆ ಮೂಲಕ ಮುಂದಕ್ಕೆ ಚಲಿಸಬೇಕು.

ಟಿಸಿ ಪಾಳ್ಯದಿಂದ ಮೇಡಹಳ್ಳಿವರೆಗೆ ಮತ್ತು ಮೇಡಹಳ್ಳಿಯಿಂದ ಟಿ.ಸಿ ಪಾಳ್ಯದವರೆಗೆ ಸರ್ವಿಸ್‌ ರಸ್ತೆಯ ಎರಡೂ ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕ್ರಮದಿಂದ ಈ ಮಾರ್ಗದಲ್ಲಿ ವಾಹನ ದಟ್ಟಣೆ ಕಡಿಮೆ ಆಗಬಹುದೆಂದು ನಿರೀಕ್ಷಿಸಲಾಗಿದೆ. ಹಳೆ ಮದ್ರಾಸ್ ರಸ್ತೆಯ ಬಟ್ಟರಹಳ್ಳಿ ಜಂಕ್ಷನ್ ಮತ್ತು ಮತ್ತು ಟಿಸಿ ಪಾಳ್ಯದ ಸೇಂಟ್ ಅಂತೋನಿ ಚರ್ಚ್ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತವಾಗಿ ದ್ದು, ವಾಹನಗಳು ಅಮೆ ವೇಗದಲ್ಲಿ ಚಲಿಸುತ್ತಿವೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆ ವಾಹನ ಸವಾರರ ಕಷ್ಟ ಹೇಳತೀರದು.

ಈ ರಸ್ತೆಯನ್ನು ಅಗಲೀಕರಣ ಮಾಡಲು ಕ್ರಮ ಕೈಗೊಂಡಿಲ್ಲ ಮತ್ತು ಅಭಿವೃದ್ದಿಯನ್ನು ಮಾಡಿಲ್ಲ ಎಂದು ವಾಹನ ಸವಾರರು ಆರೋಪಿಸುತ್ತಾರೆ.

ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಅಧಿಸೂಚನೆ: ರಾಷ್ಟ್ರೀಯ ಹೆದ್ದಾರಿ 4ರ (ಹಳೇ ಮದ್ರಾಸ್ ರಸ್ತೆ) ಟಿಸಿ ಪಾಳ್ಯ ಮುಖ್ಯ ರಸ್ತೆಯ ಬಟ್ಟರಹಳ್ಳಿ ಜಂಕ್ಷನ್ ನಿಂದ ಸಂತ ಅಂತೋನಿ ಚರ್ಚ್‌ವರೆಗೆ ರಸ್ತೆಯನ್ನುಅಗಲೀಕರಣಗೊಳಿಸಲು ಬಿಬಿಎಂಪಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. 24

ಮೀಟರ್‌ಗಳ ಅಗಲ ವಿಸ್ತರಣೆಗೆ ಅಧಿಸೂಚನೆ ಹೊರಡಿಸಿದೆ. ಇದಕ್ಕಾಗಿ 17 ಆಸ್ತಿಗಳನ್ನು ಗುರುತಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಭೂಸ್ವಾಧೀನ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಹೇಳಿದ್ದಾರೆ.

ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿ ಮುಂದಾಗಿರುವುದನ್ನು ವಾಹನ ಸವಾರರು ಸ್ವಾಗತಿಸಿದ್ದಾರೆ. ಈ ರಸ್ತೆಯನ್ನು ಅಗಲೀಕರಣ ಮಾಡಿದರೆ ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಈ ರಸ್ತೆ ಟಿಸಿ ಪಾಳ್ಯ ಮತ್ತು ಹಳೇ ಮದ್ರಾಸ್ ರಸ್ತೆ ನಡುವಿನ ಮುಖ್ಯ ಕೊಂಡಿಯಾಗಿದೆ. ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ರಸ್ತೆ ಅಭಿವೃದ್ದಿ ಆಗಿರಲಿಲ್ಲ. ಈಗಲಾದರೂ ಬಿಬಿಎಂಪಿ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳುತ್ತಾರೆ.

Whats_app_banner