Bengaluru News: ಕೆಎಸ್‌ಆರ್‌ಟಿಸಿ ಪ್ರವಾಸ ಪ್ಯಾಕೇಜ್; ಜೋಗ, ಭರಚುಕ್ಕಿ, ಸೋಮನಾಥಪುರ ವಾರಾಂತ್ಯದ ಪ್ರವಾಸಕ್ಕೆ ಸಕಾಲ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಗಳನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಜೋಗ್ ಫಾಲ್ಸ್ ಗೆ ಹಾಗೂ ಬೆಂಗಳೂರಿನಿಂದ ಸೋಮನಾಥಪುರಕ್ಕೆ ವಿಶೇಷವಾದ ಎರಡು ಹೊಸ ಪ್ರವಾಸ ಪ್ಯಾಕೇಜ್ ಗಳನ್ನು ಪ್ರವಾಸಗಳಿಗೆ ನೀಡಿದೆ.
ಬೆಂಗಳೂರು: ಬೆಂಗಳೂರಿನಿಂದ ಒಂದು ದಿನದ ಪ್ರವಾಸ ಕೈಗೊಳ್ಳಬೇಕು ಎಂದು ಬಯಸಿದ್ದೀರಾ. ಹಾಗಿದ್ದರೆ, ಕೆಎಸ್‌ಆರ್‌ಟಿಸಿ ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ವಿನೂತನ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ರಾಜ್ಯದ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಗಳನ್ನು ಪರಿಚಯಿಸಿದೆ. ಬೆಂಗಳೂರಿನಿಂದ ಜೋಗ್ ಫಾಲ್ಸ್ ಗೆ ಹಾಗೂ ಬೆಂಗಳೂರಿನಿಂದ ಸೋಮನಾಥಪುರಕ್ಕೆ ವಿಶೇಷವಾದ ಎರಡು ಹೊಸ ಪ್ರವಾಸ ಪ್ಯಾಕೇಜ್ ಗಳನ್ನು ಪ್ರವಾಸಗಳಿಗೆ ನೀಡಿದೆ. ಪ್ರತಿವಾರಾಂತ್ಯದಲ್ಲಿ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳಲು ಅನುಕೂಲ ವಾಗಲೆಂದು ಹೊಸ ಪ್ರವಾಸ ಪ್ಯಾಕೇಜ್ ಗಳನ್ನು ಕೆಎಸ್ಆರ್‌ಟಿಸಿ ರೂಪಿಸಿದೆ.
ಬೆಂಗಳೂರಿನಿಂದ ಜೋಗ ಜಲಪಾತ
ಬೆಂಗಳೂರು ನಿಂದ ಹೊರಟು ಶಿವಮೊಗ್ಗ ಮಾರ್ಗವಾಗಿ ಸಾಗರದ ಮೂಲಕ ಜೋಗ್ ಫಾಲ್ಸ್ ಗೆ ತೆರಳಬಹುದಾಗಿದೆ. ಈ ವಿಶೇಷ ಪ್ಯಾಕೇಜ್ ಶುಕ್ರವಾರ ಹಾಗೂ ಶನಿವಾರದಂದು ಇರಲಿದೆ ಈ ವಿಶೇಷ ಪ್ಯಾಕೇಜ್ ಆಗಸ್ಟ್ 11 ರಿಂದ ಆರಂಭಗೊಳ್ಳಲಿದೆ. ಪ್ರಯಾಣ ಮುಗಿಸಿ ಸಾಗರದ ಹೋಟೆಲ್ ಒಂದರಲ್ಲಿ ಉಪಹಾರ ಇರಲಿದೆ. ಬಳಿಕ ವರದಹಳ್ಳಿ, ವರದ ಮೂಲ ಇಕ್ಕೇರಿ ಮತ್ತು ಕೆಳದಿ ಸ್ಥಳ ಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಬಳಿಕ 12. 45ಕ್ಕೆ ಸಾಗರಕ್ಕೆ ಹಿಂತಿರುಗಿ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿದೆ. ಊಟ ಮುಗಿದ ನಂತರ ಸಾಗರದಿಂದ ಜೋಗ್ ಫಾಲ್ಸ್ ಗೆ ತೆರಳಿ ಅಲ್ಲಿನ ಸೌಂದರ್ಯವನ್ನು ಸವಿಯಬಹುದು. ಬಳಿಕ ಶಾಪಿಂಗ್ ಮುಗಿಸಿ ರಾತ್ರಿ 8.30 ಕ್ಕೆ ಸಾಗರದಲ್ಲಿ ಮತ್ತೆ ರಾತ್ರಿ ಭೋಜನ ಮುಗಿಸಿ ಬೆಂಗಳೂರಿಗೆ ರಾತ್ರಿ 10 ಗಂಟೆಗೆ ಹಿಂತಿರುಗಲಾಗುವುದು.
ಪ್ಯಾಕೇಜ್ ನಲ್ಲಿ ಪ್ರಯಾಣಿಸುವವರಿಗೆ ಒಬ್ಬರಿಗೆ 2500 ಶುಲ್ಕ ಹಾಗೂ ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಶುಲ್ಕ ನಿಗದಿಪಡಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರದಂದು ರಾತ್ರಿ 9:30ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 5 ಗಂಟೆಗೆ ಸಾಗರಕ್ಕೆ ಬಂದು ತಲುಪಲಿದೆ.
ಬೆಂಗಳೂರಿನಿಂದ ಸೋಮನಾಥಪುರ
ಕೆ ಎಸ್ ಆರ್ ಟಿ ಸಿ ಮತ್ತೊಂದು ವಿಶೇಷ ಪ್ಯಾಕೇಜ್ ಅನ್ನು ಪರಿಚಯಿಸಿದೆ ಅದು ಬೆಂಗಳೂರಿನಿಂದ ಸೋಮನಾಥಪುರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಬೆಂಗಳೂರಿನಿಂದ ಸೋಮನಾಥಪುರ ತಲಕಾಡು ಮಧ್ಯರಂಗ ಭರಚುಕ್ಕಿ ಗಗನಚುಕ್ಕಿ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ. ಈ ಪ್ಯಾಕೇಜ್ ಪ್ರವಾಸವು ಪ್ರಯಾಣಿಕರಿಗೆ ಅನುಕೂಲವಾಗಲೆಂದು ಶನಿವಾರ ಮತ್ತು ಭಾನುವಾರ ಇರಲಿದೆ. ಆಗಸ್ಟ್ 12ರ ಶನಿವಾರ ಹಾಗೂ ಭಾನುವಾರದಂದು ಬೆಳಿಗ್ಗೆ ಆರು ಮೂವತ್ತಕ್ಕೆ ಹೊರಡಲಿದೆ ಬೆಳಗ್ಗೆ 8:30 ಕ್ಕೆ ಮದ್ದೂರಿನಲ್ಲಿ ಉಪಹಾರ ಸೇವಿಸಿ ನಂತರ 9 ಗಂಟೆಗೆ ಸೋಮನಾಥಪುರ ತಲುಪಲಿದೆ. ಬಳಿಕ 11:30ಕ್ಕೆ ತಲಕಾಡು ಪಂಚಲಿಂಗೇಶ್ವರ ದರ್ಶನ ಪಡೆದು ಮಧ್ಯಾಹ್ನದ ಊಟ ಸವಿದು ಮೂರು ಗಂಟೆಗೆ ಮಧ್ಯರಂಗಕ್ಕೆ ಬರಲಿದೆ. ರಂಗನಾಥನ ದರ್ಶನ ಪಡೆದು ಅಲ್ಲಿಂದ ನಾಲ್ಕು ಗಂಟೆಗೆ ಭರಚುಕ್ಕಿ ಹಾಗೂ ಗಗನಚುಕ್ಕಿ ಜಲಪಾತಗಳಿಗೆ ಪ್ರವಾಸಿಗರನ್ನು ಬಸ್ ಕರೆತರಲಿದೆ.
ಈ ಪ್ರವಾಸವು ಒಬ್ಬರಿಗೆ 450 ರೂ. ಹಾಗೂ ಆರು ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ 300 ರೂ.ದರವನ್ನು ನಿಗದಿಪಡಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಕುಟುಂಬ ಸಮೇತ ಒಂದು ದಿನದ ಪ್ರವಾಸವನ್ನು ಪ್ರವಾಸಿಗರು ಕೈಗೊಳ್ಳಬಹುದು ಎಂದು ಕೆ ಎಸ್ ಆರ್ ಟಿ ಸಿ ತಿಳಿಸಿದೆ.
(ವರದಿ: ಅಕ್ಷರ)