Bengaluru Life: ಉದ್ಯೋಗ ಕಳೆದುಕೊಂಡ ಎಂಜಿನಿಯರ್ ಈಗ ರ್‍ಯಾಪಿಡೋ ಚಾಲಕ, ಬೆಂಗಳೂರಿನ ವಾಸ್ತವದ ಕಥೆಯಿದು
ಬೆಂಗಳೂರಿನಲ್ಲಿ ರ್‍ಯಾಪಿಡೋ ರೈಡ್ ಮಾಡಿದ ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್ ಓದಿರುವ ಚಾಲಕ ರ್‍ಯಾಪಿಡೋ ವಾಹನ ಓಡಿಸುತ್ತಿದ್ದ ಎಂದು ಅವರು ಬರೆದಿದ್ದಾರೆ. ಇದು ಉದ್ಯೋಗ ಭದ್ರತೆ, ಗಿಗ್ ಉದ್ಯೋಗ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದೆ.

ರೆಡ್ಡಿಟ್ ತಾಣದಲ್ಲಿ ವ್ಯಕ್ತಿಯೊಬ್ಬರು ಬೆಂಗಳೂರಿನ ಅನುಭವನ್ನು ಬರೆದಿದ್ದಾರೆ. ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ರ್‍ಯಾಪಿಡೋ ರೈಡ್ ಬುಕ್ ಮಾಡಿದ್ದರು. ಪ್ರಯಾಣದ ಸಮಯದಲ್ಲಿ ಚಾಲಕನೊಂದಿಗೆ ಮಾತನಾಡಿದ್ದಾರೆ ಈ ಸಮಯದಲ್ಲ ಆ ಚಾಲಕ "ನೀವು ಎಲ್ಲಿ ಕೆಲಸ ಮಾಡುವುದು, ಐಟಿಯ ಯಾವ ವಿಭಾಗದಲ್ಲಿ ಕೆಲಸ ಮಾಡುವುದು?" ಎಂದೆಲ್ಲ ಕೇಳಿದಾಗ ಅಚ್ಚರಿಯಾಯಿತು ಎಂದು ಬರೆದಿದ್ದಾರೆ. ಬಳಿಕ ಆ ಚಾಲಕ ಈ ಹಿಂದೆ ಎಂಜಿನಿಯರ್ ಆಗಿದ್ದರು ಎಂಬ ವಿಷಯವನ್ನು ತಿಳಿದುಕೊಂಡಿದ್ದಾರೆ.
"ರ್‍ಯಾಪಿಡೋದಲ್ಲಿ ಪ್ರಯಣಿಸುವಾಗ ಚಾಲಕನ ಜತೆ ಮಾತನಾಡಿದೆ. ಆತ ರ್‍ಯಾಪಿಡೋ ಚಾಲಕನಾಗುವ ಮೊದಲು ಏನು ಮಾಡುತ್ತಿದ್ದ ಎಂದು ಕೇಳಿದೆ. ಆತ ಆಟೋಮೇಷನ್ ಎಂಜಿನಿಯರ್ ಆಗಿದ್ದ ಎಂದು ತಿಳಿದಾಗ ನಿಜಕ್ಕೂ ನನಗೆ ಅಚ್ಚರಿಯಾಯಿತು. ಇತ್ತೀಚೆಗೆ ಕಂಪನಿಯು ಉದ್ಯೋಗ ಕಡಿತ ಮಾಡಿತ್ತು. ಹೀಗಾಗಿ ರ್‍ಯಾಪಿಡೋ ಓಡಿಸುತ್ತಿರುವೆ ಎಂದು ಆತ ತಿಳಿಸಿದ. ಇದೇ ಸಮಯದಲ್ಲಿ ಹೊಸ ಉದ್ಯೋಗ ಪಡೆಯಲು ಸಿದ್ಧತೆ ನಡೆಸುತ್ತಿರುವುದಾಗಿ ಆತ ತಿಳಿಸಿದ. ಈ ಹೊಸ ಉದ್ಯೋಗ ಹುಡುಕುವುದು ತುಂಬಾ ಕಷ್ಟ ಎಂಬ ಅಂಶವನ್ನೂ ಆತ ತಿಳಿಸಿದ್ದಾನೆ" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಅನುಭವ ಹಂಚಿಕೊಂಡಿದ್ದಾರೆ.
"ಈತ ಈ ರೀತಿ ಹೇಳಿದು ನನಗೆ ನಿಜಕ್ಕೂ ಯೋಚಿಸುವಂತೆ ಮಾಡಿತು. ಕಂಪನಿಗಳು ಸರಳವಾಗಿ ಉದ್ಯೋಗ ಕಡಿತ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತವೆ. ಆದರೆ, ಅದು ಉದ್ಯೋಗಿಗಳ ಬದುಕಿನ ಮೇಲೆ ಯಾವ ರೀತಿ ಪರಿಣಾಮ ಬರುತ್ತದೆ. ಒಂದು ಸಮಯದಲ್ಲಿ ವೆಬ್‌ಡೆವಲಪರ್, ಟೆಕ್ನಿಕಲ್ ಹುದ್ದೆಯಲ್ಲಿ ಕೆಲಸ ಮಾಡಿದಾತ ಈಗ ಸಂಪೂರ್ಣವಾಗಿ ಹೊಸ ಉದ್ಯೋಗ ಆಯ್ಕೆ ಮಾಡಿಕೊಳ್ಳಬೇಕಿದೆ. ಈ ಕಾಲದ ಉದ್ಯೋಗ ಭದ್ರತೆ ಕುರಿತು ನನಗೆ ನಿಜಕ್ಕೂ ಬೇಸರವಾಗುತ್ತದೆ" ಎಂದು ಅವರು ಬರೆದಿದ್ದಾರೆ.
ಈ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರು ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. "ನನಗೆ ಇದರಲ್ಲಿ ಏನೂ ವ್ಯತ್ಯಾಸ ಕಾಣಿಸುತ್ತಿಲ್ಲ. ಏಕೆಂದರೆ, ರ್‍ಯಾಪಿಡೋ ಉತ್ತಮ ಉದ್ಯೋಗವಾಗಿದೆ. ನಾನು ಕೂಡ ಬಿಡುವಿನಲ್ಲಿ ಅಥವಾ ಬೋರ್ ಆದಾಗ ರ್‍ಯಾಪಿಡೋ ಚಾಲಕನಾಗಿ ಕೆಲಸ ಮಾಡುವೆ. ಇದು ನಿಮಗೆ ಬೆಂಗಳೂರಿನಲ್ಲಿ ಹೊಸ ದಾರಿಗಳನ್ನು ತೋರಿಸುತ್ತದೆ. ಇದು ಕಾರ್ಪೊರೇಟ್ ಉದ್ಯೋಗದಷ್ಟು ಕೆಟ್ಟದಾಗಿಲ್ಲ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. "ನಾನು ಕೂಡ ಬಿಡುವಿನ ವೇಳೆಯಲ್ಲಿ ಕೇಟರಿಂಗ್ ಉದ್ಯಗ ಮಾಡುವೆ" "ಸಮಸ್ಯೆ ಬಂದಾಗ ಭಯ ಪಡದೆ ಹೊಸ ಉದ್ಯೋಗ ದೊರಕುವ ತನಕ ಈ ರೀತಿಯ ಉದ್ಯೋಗ ಮಾಡುವುದು ಉತ್ತಮ" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
"ಇದು ಜನಸಂಖ್ಯೆ ಹೆಚ್ಚಳದ ಪರಿಣಾಮ. ಇತ್ತೀಚೆಗೆ ನೂರು ಉದ್ಯೋಗಕ್ಕೆ 3 ಸಾವಿರ ಜನರು ಸಂದರ್ಶನಕ್ಕೆ ಬಂದಿದ್ದರು" "ಚೀನಾವನ್ನು ಗಮನಿಸಿ, ಅಲ್ಲಿ ಸರಕಾರವು ಎಲ್ಲರ ಉದ್ಯೋಗದ ಜವಾಬ್ದಾರಿಯನ್ನು ಹೊಂದಿದೆ" "ಆತ ಮನೆಯಲ್ಲಿ ಖಿನ್ನತೆಯಿಂದ ಕುಳಿತುಕೊಳ್ಳುವ ಬದಲು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ, ಈ ರೀತಿ ನಿರುದ್ಯೋಗಿಗಳು ಯೋಚಿಸಬೇಕು" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. "ನನ್ನ ಸಹೋದ್ಯೋಗಿಯೊಬ್ಬರು ಬೆಳಗ್ಗೆ ರ್‍ಯಾಪಿಡೋ ಮತ್ತು ರಾತ್ರಿ ಜೊಮೆಟೊ ಡೆಲಿವರಿ ಕೆಲಸ ಮಾಡುತ್ತಾನೆ. ಹಗಲು ಹೊತ್ತು ತನ್ನ ಐಟಿ ಉದ್ಯೋಗ ಮಾಡುತ್ತಾನೆ" ಎಂದು ಒಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
"ಗುಣಮಟ್ಟದ ಎಂಜಿನಿಯರ್‌ಗಳು ದೊರಕುವುದು ಕಷ್ಟವಾಗಿದೆ. ನಾನು ಎಂಜಿನಿಯರ್ ಹುದ್ದೆಗಳಗೆ (ಜೂನಿಯರ್ ಮತ್ತು ಸೀನಿಯರ ಹುದ್ದೆಗಳಿಗೆ) ನೂರಾರು ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದ್ದೇನೆ. ಶೇಕಡ 70 ಜನರಿಗೆ ಸರಿಯಾಗಿ ಕೋಡ್ ಬರೆಯಲು ಗೊತ್ತಿಲ್ಲ ಐದಾರು ವರ್ಷ ಅನುಭವ ಇರುವವರ ಕತೆಯೂ ಇದೇ ರೀತಿ ಇರುತ್ತದೆ. ಆತನಿಗೆ ರ್‍ಯಾಪಿಡೋ ಚಾಲಕನಾಗು ಎಂದು ಯಾರೂ ಹೇಳಿಲ್ಲ. ಈ ಸಮಯದಲ್ಲಿ ತನ್ನ ಕೌಶಲವೃದ್ಧಿಗೆ ಗಮನ ನೀಡಬೇಕು. ಬಹುಶಃ ಆತ ರ್‍ಯಾಪಿಡೋ ಚಾಲನೆಯ ಜತೆಗೆ ಅಪ್‌ಸ್ಕಿಲ್ ಕಡೆಗೂ ಗಮನ ನೀಡುತ್ತಿದ್ದಾನೆ ಎಂದುಕೊಂಡಿರುವೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
