ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತ; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ- ಹವಾಮಾನ ಮುನ್ಸೂಚನೆ-bengaluru news late night heavy rain disrupts life traffic in bengaluru braces for week long downpour imd alert uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತ; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ- ಹವಾಮಾನ ಮುನ್ಸೂಚನೆ

ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತ; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ- ಹವಾಮಾನ ಮುನ್ಸೂಚನೆ

Bengaluru Weather; ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಮಳೆಗೆ ರಸ್ತೆಗಳು, ಅಂಡರ್‌ಪಾಸ್‌ಗಳು ಜಲಾವೃತವಾಗಿವೆ. ಹೀಗಾಗಿ ಇಂದು (ಆಗಸ್ಟ್ 12) ವಿವಿಧ ರಸ್ತೆಗಳಲ್ಲಿ ಸಂಚಾರ ದಟ್ಟಣೆ ತುಸು ಹೆಚ್ಚೇ ಕಂಡುಬಂತು. ಹೀಗಾಗಿ ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತ; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ- ಹವಾಮಾನ ಮುನ್ಸೂಚನೆ. (ಸಾಂದರ್ಭಿಕ ಚಿತ್ರ)
ತಡರಾತ್ರಿ ಸುರಿದ ಮಳೆಗೆ ಸಂಚಾರ ಅಸ್ತವ್ಯಸ್ತ; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ- ಹವಾಮಾನ ಮುನ್ಸೂಚನೆ. (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿ ನಿನ್ನೆ (ಆಗಸ್ಟ್ 11) ತಡರಾತ್ರಿ ಭಾರಿ ಮಳೆ ಸುರಿದ ಕಾರಣ ಹಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿದೆ. ಅಂಡರ್‌ಪಾಸ್‌ಗಳಲ್ಲೂ ನೀರು ನಿಂತಿದ್ದು, ಬಹುತೇಕ ಕಡೆ ಸೋಮವಾರ (ಆಗಸ್ಟ್ 12) ಬೆಳಗ್ಗೆ ನಿಧಾನಗತಿಯ ವಾಹನ ಸಂಚಾರ ಕಂಡುಬಂತು.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ನಡುವೆ, ಬೆಂಗಳೂರು ಹವಾಮಾನ ಇನ್ನೂ ಒಂದು ವಾರ ಹೀಗೆಯೇ ಇರಲಿದ್ದು, ಮಳೆ ಸುರಿಯಲಿದೆ. ಮಳೆ ಸ್ವಲ್ಪ ಹೆಚ್ಚು ಬೀಳಬಹುದಾದ ಕಾರಣ ಯೆಲ್ಲೋ ಅಲರ್ಟ್ ಷೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಬೆಂಗಳೂರಲ್ಲಿ ತಡರಾತ್ರಿ ಮಳೆಗೆ ರಸ್ತೆ, ಅಂಡರ್‌ಪಾಸ್ ಜಲಾವೃತ

ಬೆಂಗಳೂರು ಸಂಚಾರ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯ ಕಾರಣ ಹಲವೆಡೆ ಸಂಚಾರ ದಟ್ಟಣೆ ಕಂಡುಬಂದಿದೆ.

ಹೊರವರ್ತುಲ ರಸ್ತೆಯಲ್ಲಿ ನಾಗವಾರ ಜಂಕ್ಷನ್‌ ಮತ್ತು ಹೆಬ್ಬಾಳ ನಡುವೆ ನೀರು ತುಂಬಿಕೊಂಡಿದೆ. ಇದರಿಂದಾಗಿ ಎರಡೂ ಬದಿಗೆ ವಾಹನ ಸಂಚಾರ ನಿಧಾನವಾಗಿದೆ.

ಹೆಬ್ಬಾಳ ಮೇಲ್ಸೇತುವೆಯಲ್ಲೂ ಸಂಚಾರ ದಟ್ಟಣೆ ಕಂಡುಬಂದಿದ್ದು, ಎಸ್ಟೀಮ್ ಮಾಲ್‌ ಕಡೆಗೆ ಮೇಖ್ರಿ ಸರ್ಕಲ್‌ನಲ್ಲಿ ನಿಧಾನಗತಿಯ ವಾಹನ ಸಂಚಾರವಿದೆ.

ಇಲೆಕ್ಟ್ರಾನಿಕ್‌ ಸಿಟಿ ಎಲಿವೇಟೆಡ್‌ ರೋಡ್‌ನಲ್ಲಿ ವೀರಸಂದ್ರದಲ್ಲಿ ಹೊರಕ್ಕೆ ಹೋಗುವ ವಾಹನ ಸಂಚಾರ ನಿಧಾನವಾಗಿದೆ.

ಹೊರವರ್ತುಲ ರಸ್ತೆಯ ಮಾರತ್ತಹಳ್ಳಿ, ಕಾರ್ತಿಕ್ ನಗರ, ಕಲ್ಯಾಣ ನಗರಗಳಲ್ಲಿ ರಸ್ತೆಯಲ್ಲಿ ಹೆಚ್ಚು ನೀರು ತುಂಬಿಕೊಂಡಿದೆ. ಇದೇ ರೀತಿ, ಪುಟ್ಟೇನಹಳ್ಳಿ, ವರ್ತೂರು ಕೋಡಿ, ಬೆಳ್ಳಂದೂರು ಸಕ್ರ ಹಾಸ್ಪಿಟಲ್ ಸಮೀಪ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗಿದೆ.

ಮೆಜೆಸ್ಟಿಕ್​​, ಓಕಳಿಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ಶಿವಾಜಿನಗರ, ಕಾರ್ಪೊರೇಷನ್​​ ಸರ್ಕಲ್, ಟೌನ್​ಹಾಲ್, ತ್ಯಾಗರಾಜನಗರ, ಜಯನಗರ, ಹನುಮಂತನಗರ, ಶ್ರೀನಗರ, ಮೈಸೂರು ರಸ್ತೆ, ನಾಯಂಡಹಳ್ಳಿ, ಮಾಗಡಿ ರಸ್ತೆ, ವಿಜಯನಗರ, ಶಿವಾನಂದ ಸರ್ಕಲ್, ಯಶವಂತಪುರ, ಶಾಂತಿನಗರ, ಕೋರಮಂಗಲ, ಮೇಖ್ರಿ ಸರ್ಕಲ್​​, ಹೆಬ್ಬಾಳ, ಯಲಹಂಕ, ಕೆಂಗೇರಿ ಮತ್ತು ಇತರೆ ವ್ಯಾಪಕ ಮಳೆಯಾಗಿದೆ. ಹೆಚ್ಚಿನ ಮಳೆಯ ಕಾರಣ ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆ ಜಲಾವೃತವಾಗಿದ್ದು, ಕೆ.ಆರ್‌ ಮಾರುಕಟ್ಟೆ ರಸ್ತೆ ಕೆಸರುಮಯವಾಗಿದೆ.

ಹೊಸೂರು ಮುಖ್ಯರಸ್ತೆಯಲ್ಲಿ ಬೊಮ್ಮನಹಳ್ಳಿಯಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೊಮ್ಮನಹಳ್ಳಿ ರೂಪೇನ ಅಗ್ರಹಾರದವರೆಗೆ ವಾಟರ್ ಲಾಗಿಂಗ್ ಆಗಿದ್ದು ನಗರದ ಒಳಭಾಗಕ್ಕೆ ಬರುವ ಮತ್ತು ಹೊರಭಾಗಕ್ಕೆ ಹೋಗುವ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದು ವಾಹನ ಸವಾರರು ಬದಲಿ ರಸ್ತೆಗಳನ್ನು ಬಳಸಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಬೆಂಗಳೂರು ಹವಾಮಾನ; ಇನ್ನೊಂದು ವಾರ ಮಳೆ ಸಾಧ್ಯತೆ

Bengaluru Weather; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ
Bengaluru Weather; ಬೆಂಗಳೂರಲ್ಲಿ ಇನ್ನೊಂದು ವಾರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ

ಹವಾಮಾನ ಇಲಾಖೆಯ ವೆಬ್‌ಸೈಟ್‌ ನೀಡಿರುವ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ಆಗಸ್ಟ್ 17ರ ತನಕ ಮಳೆ ಬೀಳಲಿದೆ. ಬಹುತೇಕ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುತ್ತ ಇರಬಹುದು. ಆಗಸ್ಟ್‌ 16 ಮತ್ತು 17 ರಂದು ಹೆಚ್ಚಿನ ಮಳೆ ಸುರಿಯುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೆಂಗಳೂರಿನ ತಾಪಮಾನ ಕೂಡ ಗರಿಷ್ಟ 30 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 20 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ವರದಿ ವಿವರಿಸಿದೆ.

ಇನ್ನು, ಕರ್ನಾಟಕದ ಹವಾಮಾನ ಗಮನಿಸುವುದಾದರೆ, ಉತ್ತರ ಒಳನಾಡಿನ ಜಿಲ್ಲೆಗಳು, ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಒಂದು ವಾರ ಕಾಲ ಸಾಧಾರಣ ಮಳೆ ಬೀಳಲಿದೆ. ಭಾರತೀಯ ಹವಾಮಾನ ಇಲಾಖೆ ಈ ಪ್ರದೇಶಗಳಿಗೆ ಯಾವುದೇ ಎಚ್ಚರಿಕೆಗಳನ್ನು ನೀಡಿಲ್ಲ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಪ್ರಕಾರ, ಈ ಅವಧಿಯಲ್ಲಿ ಅಲ್ಲಲ್ಲಿ ಭಾರೀ ಮಳೆಯಾಗಲಿದೆ ಮತ್ತು ಉತ್ತರ ಒಳಗಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯನ್ನು ನಿರೀಕ್ಷಿಸಲಾಗಿದೆ.