ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ನಮ್ಮ ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ, ಯುವಕನನ್ನು ರಕ್ಷಿಸಿದ ಮೆಟ್ರೋ ಸಿಬ್ಬಂದಿ

ಬೆಂಗಳೂರು: ನಮ್ಮ ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ, ಯುವಕನನ್ನು ರಕ್ಷಿಸಿದ ಮೆಟ್ರೋ ಸಿಬ್ಬಂದಿ

ಬೆಂಗಳೂರು: ಹೊಸಹಳ್ಳಿಯ ಮೆಟ್ರೊ ನಿಲ್ದಾಣದಲ್ಲಿ ಖಿನ್ನತೆಗೆ ಒಳಗಾದ ಯುವಕನೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ನಡೆದಿದೆ. ಕೂಡಲೇ ಸಂತ್ರಸ್ತ ಯುವಕನನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿದರು. ಪ್ರತ್ಯೇಕ ಪ್ರಕರಣದಲ್ಲಿ, ವಾಲಿಬಾಲ್ ಆಟದ ವಿಷಯಕ್ಕೆ ಮಾರಾಮಾರಿ ಉಂಟಾಗಿತ್ತು. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಖಿತನ್ನತೆ ಒಳಗಾದ ಯುವಕನೊಬ್ಬ ನಮ್ಮ ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದ. ಸಂತ್ರಸ್ತ ಯುವಕನನ್ನು ಮೆಟ್ರೋ ಸಿಬ್ಬಂದಿ ಕೂಡಲೇ ರಕ್ಷಿಸಿದರು. (ಆತ್ಮಹತ್ಯೆ ತಡೆಯ ಚಿತ್ರವನ್ನು ಪ್ರಾಮುಖ್ಯ ನೀಡಿ ಪ್ರಕಟಿಸಲಾಗಿದೆ)
ಬೆಂಗಳೂರು: ಖಿತನ್ನತೆ ಒಳಗಾದ ಯುವಕನೊಬ್ಬ ನಮ್ಮ ಮೆಟ್ರೊ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನ ಮಾಡಿದ್ದ. ಸಂತ್ರಸ್ತ ಯುವಕನನ್ನು ಮೆಟ್ರೋ ಸಿಬ್ಬಂದಿ ಕೂಡಲೇ ರಕ್ಷಿಸಿದರು. (ಆತ್ಮಹತ್ಯೆ ತಡೆಯ ಚಿತ್ರವನ್ನು ಪ್ರಾಮುಖ್ಯ ನೀಡಿ ಪ್ರಕಟಿಸಲಾಗಿದೆ)

ಬೆಂಗಳೂರು: ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರೂ ಸಾರ್ವಜನಿಕರು ರೈಲ್ವೇ ಹಳಿಗಳ ಮೇಲೆ ಹಾರುವ ಪ್ರಕರಣಗಳು ಕಡಿಮೆಯಾಗಿಲ್ಲ. ಬಹುತೇಕ ಮೆಟ್ರೊ ನಿಲ್ದಾಣಗಳಲ್ಲಿ ಹಳಿಗಳ ಮೇಲೆ ಹಾರಲು ಸಾಧ್ಯವಾಗದಂತೆ ನಿರ್ಬಂಧ ಹೇರಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆದರೆ ಸೋಮವಾರ ರಾತ್ರಿ ಹೊಸಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ರೈಲಿನ ಆಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ನಡೆಸಿದ್ದಾನೆ. ಆದರೆ ಬಿಎಂಆರ್‌ಸಿಎಲ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಆ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಈ ಯುವಕ ಸೋಮವಾರ ರಾತ್ರಿ 8.56ಕ್ಕೆ ರೈಲು ಬರುತ್ತಿರುವುದನ್ನು ಕಂಡು ಆತ್ಮಹತ್ಯೆ ಮಾಡಿಕೊಳ್ಳಲು ಹಾರಿದ್ದ. ಆದರೆ ರೈಲಿನ ಕೋಚ್‌ಗೆ ತಾಗಿ ಪಕ್ಕಕ್ಕೆ ಬಿದ್ದಿದ್ಧ. ಕೂಡಲೇ ಬಿಎಂಆರ್‌ಸಿಎಲ್ ಸಿಬ್ಬಂದಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.

ಇದರಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು ಮತ್ತು ವಿದ್ಯುತ್ ಸರಬರಾಜು ನಿಲ್ಲಿಸಲಾಗಿತ್ತು. ಮೆಜೆಸ್ಟಿಕ್‌ ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ಮೈಸೂರು ರಸ್ತೆವರೆಗೆ ಮೆಟ್ರೊ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಮೆಟ್ರೊ ರೈಲುಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಕೊನೆಗೆ ರಾತ್ರಿ 9.30ರಿಂದ ರೈಲು ಸಂಚಾರ ಎಂದಿನಂತೆ ಆರಂಭಗೊಂಡಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2024ರಲ್ಲಿ ಮೆಟ್ರೊ ಹಳಿಗೆ ಹಾರಿದ ನಾಲ್ಕನೇ ಘಟನೆ ಇದಾಗಿದೆ. ಜನವರಿಯಲ್ಲಿ ತುಮಕೂರು ರಸ್ತೆಯ ಜಾಲಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿ ಕೇರಳದ ಯುವಕನೊಬ್ಬ ಹಳಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆದರೆ ಅಪಾಯದಿಂದ ಪಾರಾಗಿದ್ದ. ಇಂದಿರಾನಗರ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೆಳಗೆ ಬಿದ್ದ ಮೊಬೈಲ್ ಎತ್ತಿಕೊಳ್ಳಲು ಕೆಳಗೆ ಹಾರಿದ್ದರು. ಮಾರ್ಚ್‌ನಲ್ಲಿ ಇದೇ ಮಾರ್ಗದ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದಲ್ಲಿ ಯುವಕನೊಬ್ಬ ಹಾರಿ ಪ್ರಾಣ ಕಳೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

ವಾಲಿಬಾಲ್ ಆಟದ ವಿಷಯಕ್ಕೆ ಮಾರಾಮಾರಿ

ರಸ್ತೆ ಬದಿಯಲ್ಲಿ ನೆಟ್ ಕಟ್ಟಿಕೊಂಡು ವಾಲಿಬಾಲ್ ಆಡುತ್ತಿದ್ದ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ದೂರು ಪ್ರತಿದೂರು ದಾಖಲಾಗಿರುವ ಪ್ರಕರಣ ಬೆಂಗಳೂರು ಹೊರ ವಲಯದ ತಲಘಟ್ಟಪುರದ ಆವಲಹಳ್ಳಿಯಲ್ಲಿ

ನಡೆದಿದೆ. ಈ ಘಟನೆಯಲ್ಲಿ ಕಿಡಿಗೇಡಿಗಳು ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ತಲಘಟ್ಟಪುರ ಆವಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನೇತ್ರಾವತಿ ಎಂಬವರು ಭಾಸ್ಕರ್ ಮತ್ತು ಯೋಗೇಶ್ ವಿರುದ್ಧ ದೂರು ನೀಡಿದ್ದಾರೆ. ಭಾಸ್ಕರ್ ಅವರು ನೇತ್ರಾವತಿ ಮತ್ತು ಆಕೆಯ ಪುತ್ರ ಸಂಜಯ್ ವಿರುದ್ಧ ಪ್ರತಿದೂರು ಸಲ್ಲಿಸಿದ್ದಾರೆ. ಪೊಲೀಸರು ಎರಡು ಪ್ರತ್ಯೇಕ ದೂರುಗಳನ್ನು ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೇತ್ರಾವತಿ, ಆಕೆಯ ಪುತ್ರ ಸಂಜಯ್ ಮತ್ತು ಪುತ್ರಿ ಸೇರಿದಂತೆ ಕೆಲವು ಸ್ಥಳೀಯರು ರಸ್ತೆ ಬದಿ ನೆಟ್ ಕಟ್ಟಕೊಂಡು ವಾಲಿಬಾಲ್ ಆಡುತ್ತಿದ್ದರು. ಇದರಿಂದ ಸ್ಥಳೀಯರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು.

ಬಾಲಾಜಿ, ಯೋಗಿ ಹಾಗೂ ಭಾಸ್ಕರ್ ಮೊದಲಾದ ಸ್ಥಳೀಯರು ಇದನ್ನು ಪ್ರಶ್ನಿಸಿದ್ದರು. ಆಗ ಸಂಜಯ್ ಅವರ ತಾಯಿ ಸ್ಥಳಕ್ಕೆ ಆಗಮಿಸಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆಡಿದೆ. ಗಲಾಟೆ ವಿಕೋಪಕ್ಕೆ ಹೋಗಿ ಎರಡೂ ಕಡೆಯವರು ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಕೆಲವರು ನೇತ್ರಾವತಿ ಮತ್ತು ಆಕೆಯ ಪುತ್ರಿಯ ತಲೆ ಕೂದಲು ಹಿಡಿದು ರಸ್ತೆಯಲ್ಲಿ ಎಳೆದಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಅಂಶವು ದೂರಿನಲ್ಲಿಯೂ ದಾಖಲಾಗಿದೆ.

ಭಾಸ್ಕರ್ ಅವರು ನೇತ್ರಾವತಿ ಮತ್ತು ಆಕೆಯ ಪುತ್ರ ಸಂಜಯ್ ವಿರುದ್ದ ಪ್ರತಿದೂರು ದಾಖಲಿಸಿದ್ದಾರೆ. ಎರಡೂ ಗುಂಪುಗಳ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

ಟಿ20 ವರ್ಲ್ಡ್‌ಕಪ್ 2024