ಬೆಂಗಳೂರು ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ; ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ; ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆ

ಬೆಂಗಳೂರು ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ; ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆ

ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರಿನ ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಪ್ರತ್ಯೇಕ ಪ್ರಕರಣದಲ್ಲಿ ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆಯಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ.(ವರದಿ- ಎಚ್. ಮಾರುತಿ,ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರು ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ; ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆ ನಡೆದಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಅಪರಾಧ ಸುದ್ದಿ; ಬೆಂಗಳೂರು ನೈಸ್ ರಸ್ತೆಯ ಅಂಜನಪುರದಲ್ಲಿ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ; ಪುಲಕೇಶಿನಗರದಲ್ಲಿ ಸಾಲ ಮರಳಿಸದ ವ್ಯಕ್ತಿ ಕೊಲೆ ನಡೆದಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಪರಸ್ಪರ ಪ್ರೀತಿಸುತ್ತಿದ್ದ ವಿವಾಹಿತ ಪುರುಷ ಮತ್ತು ಅವಿವಾಹಿತ ಯುವತಿ ಆತ್ಮಹತ್ಯೆ ಘಟನೆ ಬೆಂಗಳೂರಿನ ಹೊರ ವಲಯದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

25 ವರ್ಷದ ಶ್ರೀಕಾಂತ್ 20 ವರ್ಷದ ಅಂಜನಾ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರು ನೈಸ್ ರಸ್ತೆಯ ಅಂಜನಪುರದ ತುಳಜಾಪುರ ಕೆರೆಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಇವರ ಮೃತ ದೇಹಗಳು ಕೆರೆಯಲ್ಲಿ ಪತ್ತೆಯಾಗಿವೆ.

ಶ್ರೀಕಾಂತ್ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರೆ ಅಂಜನಾ ಬಿಬಿಎ ಪದವಿಗಾಗಿ ಕಾಲೇಜಿಗೆ ಹೋಗುತ್ತಿದ್ದರು. ಶ್ರೀಕಾಂತ್ ಅವರಿಗೆ ಈಗಾಗಲೇ ಮದುವೆಯಾಗಿದ್ದರೂ ಅಂಜನಾ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ವಿವಾಹವಾಗಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀಕಾಂತ್ ಹಾಗೂ ಅಂಜನಾ ಇಬ್ಬರೂ ಆಟೊದಲ್ಲಿ ಅಂಜನಾಪುರದ ಕೆರೆ ಬಳಿಗೆ ಬಂದು ನಮ್ಮ ಸಾವಿಗೆ ಯಾರೂ ಕಾರಣರಲ್ಲ, ನಾವು ಒಟ್ಟಿಗೆ ಬದುಕಲು ಅಸಾಧ್ಯ ಎನ್ನುವುದನ್ನು ಅರಿತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೊಬೈಲ್‌ನಲ್ಲಿ ವಿಡಿಯೊ ಮಾಡಿ ಆಟೊದಲ್ಲಿ ಇರಿಸಿದ್ದರು. ನಂತರ ಇಬ್ಬರೂ ಕೆರೆಗೆ ಹಾರಿ ಆತ್ಮಹತ್ಯೆ.ಮಾಡಿಕೊಂಡಿದ್ದಾರೆ.

ಇವರಿಬ್ಬರೂ ಕಾಣೆಯಾಗಿರುವ ಬಗ್ಗೆ ಕೋಣನಕುಂಟೆ ಹಾಗೂ ತಲಘಟ್ಟಪುರ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಕಾಂತ್‌ಗೆ 2 ವರ್ಷಗಳ ಹಿಂದೆಯೇ ಮದುವೆ ಆಗಿತ್ತು. ಈ ಮದುವೆಯ ನಂತರವೂ ಓದನ್ನು ಮುಂದುವರಿಸಿದ್ದರು. ಅದೇ ಕಾಲೇಜಿನಲ್ಲಿ ಓದುತ್ತಿದ್ದ ಅಂಜನಾ ಅವರ ಪರಿಚಯವಾಗಿದೆ. ಪರಸ್ಪರ ಸ್ನೇಹ ಪ್ರೀತಿಗೆ ತಿರುಗಿದೆ. ಈ ವಿಷಯವನ್ನು ಪತ್ನಿಗೆ ತಿಳಿಸಿದ್ದ ಶ್ರೀಕಾಂತ್ ಅಂಜನಾ ಇಲ್ಲದಿದ್ದರೆ ಬದುಕುವುದಿಲ್ಲ ಎಂದು ಹೇಳಿಕೊಂಡಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಅವರ ಪತ್ನಿ, ನಾವು ವಿಚ್ಛೇದನ ಪಡೆದು ಕೊಳ್ಳೋಣ. ನಂತರ ನೀವಿಬ್ಬರೂ ಮದುವೆಯಾಗಿ ಎಂದು ಭರವಸೆ ನೀಡಿದ್ದಾರೆ. ಆದರೂ ಶ್ರೀಕಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಬ್ಬರ ಕುಟುಂಬದವರ ದೂರಿನ ಮೇರೆಗೆ ಎರಡು ಪ್ರತ್ಯೇಕ ಅಸಹಜ ಸಾವು ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ ಲೋಕೇಶ್ ಬಿ. ಜಗಲಾಸ‌ ತಿಳಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮ್ಮನ್ನು ಪ್ರೀತಿಸುವ, ಬೆಂಬಲಿಸುವ ಆಪ್ತರು ಇದ್ದೇ ಇರುತ್ತಾರೆ. ನಿಮ್ಮ ಸಮಸ್ಯೆಗಳನ್ನು ಅಂಥವರೊಂದಿಗೆ ಹಂಚಿಕೊಂಡು ನೆರವು ಪಡೆಯಿರಿ. ಆತ್ಮಹತ್ಯೆಯ ಆಲೋಚನೆಗಳು ಮನಸ್ಸಿಗೆ ಪದೇಪದೆ ಬರುತ್ತಿದ್ದರೆ ಹಿಂಜರಿಕೆಯಿಲ್ಲದೆ ಆಪ್ತಸಮಾಲೋಚಕರ ಮಾರ್ಗದರ್ಶನ ಪಡೆದುಕೊಳ್ಳಿ. ತುರ್ತು ಸಂದರ್ಭದಲ್ಲಿ ಬೆಂಗಳೂರಿನ SAHAI ಸಹಾಯವಾಣಿ (080 - 25497777) ಅಥವಾ ನಿಮ್ಹಾನ್ಸ್‌ ಸಹಾಯವಾಣಿಯ (080 – 4611 0007) ನೆರವು ಪಡೆಯಿರಿ

ಕಣ್ಣು ಕುಕ್ಕುವ ಲೈಟ್ ಅಳವಡಿಸಿಕೊಂಡಿದ್ದ ವಾಹನಗಳ ವಿರುದ್ಧ ಕ್ರಮ

ಕಣ್ಣು ಕುಕ್ಕುವ ಎಲ್ ಇ ಡಿ ದೀಪಗಳನ್ನು (ಹೈ ಭೀಮ್ ಲೈಟ್) ಅಳವಡಿಸಿಕೊಂಡಿದ್ದ 266 ವಾಹನಗಳ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಶ್ಚಿಮ ಸಂಚಾರ ವಿಭಾಗದ ಪೊಲೀಸರು ಕೇಂದ್ರ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ ಬಿ. ಹದ್ದಣ್ಣವ‌ರ್ ಮಾಹಿತಿ ನೀಡಿದ್ದಾರೆ.

ಕಣ್ಣುಕುಕ್ಕುವ ದೀಪಗಳಿಂದಾಗಿ ಎದುರು ಕಡೆಯಿಂದ ಬರುವ ವಾಹನಗಳಿಗೆ ರಸ್ತೆ ಸರಿಯಾಗಿ ಕಾಣದೇ ಅಪಘಾತಗಳು ಸಂಭವಿಸುತ್ತಿದ್ದವು. ಇಂತಹ ಅಪಘಾತಗಳನ್ನು ನಿಯಂತ್ರಿಸುವ ಪ್ರಯತ್ನವಾಗಿ ಪಶ್ಚಿಮ ಸಂಚಾರ ವಿಭಾಗದ ಎಲ್ಲ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜುಲೈ 1 ರಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಲ ಮರಳಿಸದ ವ್ಯಕ್ತಿ ಕೊಲೆ

ಬಡ್ಡಿಗೆ ಸಾಲ ಪಡೆದು ಅಸಲು ಮತ್ತು ಬಡ್ಡಿ ಎರಡನ್ನೂ ನೀಡದ ವ್ಯಕ್ತಿಯೊಬ್ಬರನ್ನು ಬೆಂಗಳೂರಿನ ಪುಲಿಕೇಶಿ ನಗರದ ದೊಡ್ಡಗುಂಟೆಯಲ್ಲಿ ನಡೆದಿದೆ.

ಬಾಣಸವಾಡಿ ನಿವಾಸಿ 35 ವರ್ಷದ ಅಜಿತ್ ಕೊಲೆಯಾದ ವ್ಯಕ್ತಿ. ಅಜಿತ್ ಐಟಿಸಿ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಅಜಿತ್ ಸಾಲ ಪಡೆದು ತೀರಿಸಲಾಗದೆ ತಲೆತಪ್ಪಿಸಿಕೊಂಡು ಓಡಾಟ ನಡೆಸುತ್ತಿದ್ದರು. ಹೀಗೆ ಬುಧವಾರ ಬೆಳಿಗ್ಗೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ನಾಲ್ವರು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಜಿತ್ ತುಂಬಾ ಜನರ ಬಳಿ ಬಡ್ಡಿಗೆ ಹಣ ಪಡೆದು ಹಿಂತಿರುಗಿಸದೆ ಸತಾಯಿಸುತ್ತಿದ್ದರು. ದುಷ್ಕರ್ಮಿಗಳು ಇದೇ ಕಾರಣಕ್ಕೆ ಕೊಲೆ ಮಾಡಿರಬಹುದು ಎಂದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ. ಪುಲಕೇಶಿನಗರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕೊಲೆಯಾಗಿರುವ ಸ್ಥಳದ ಅಕ್ಕಪಕ್ಕದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ವರದಿ- ಎಚ್. ಮಾರುತಿ,ಬೆಂಗಳೂರು)

Whats_app_banner