ಕನ್ನಡ ಸುದ್ದಿ  /  Karnataka  /  Bengaluru News Namma Metro Bmrcl Contemplates Construction Of Double-decker Flyover In 3 Coridors In Bengaluru

Bengaluru News: ಹೊಸ ಹೆಜ್ಜೆಯತ್ತ ನಮ್ಮ ಮೆಟ್ರೋ; 3ನೇ ಹಂತದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಚಿಂತನೆ

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್), ನಗರದ ಮೂರು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳ ನಿರ್ಮಾಣದ ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರಿಸಲು ಟೆಂಡರ್ ಕರೆದಿದೆ. ಈ ಕಾರಿಡಾರ್‌ಗಳು ಯಾವ್ಯಾವು ಇಲ್ಲಿದೆ ಮಾಹಿತಿ. (ವರದಿ: ಪ್ರಿಯಾಂಕ ಗೌಡ)

3ನೇ ಹಂತದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಚಿಂತನೆ
3ನೇ ಹಂತದಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣಕ್ಕೆ ಬಿಎಂಆರ್‌ಸಿಎಲ್‌ ಚಿಂತನೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಬಹಳ ವೇಗವಾಗಿ ಬೆಳೆಯುತ್ತಿರುವ ಮಹಾನಗರಿ. ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಕೆಲಸ ಅರಸಿಕೊಂಡು ಇಲ್ಲಿಗೆ ಬರುತ್ತಾರೆ. ಹೀಗಾಗಿ ಟ್ರಾಫಿಕ್ ಕಿರಿಕಿರಿ ಇರುವುದು ಸಾಮಾನ್ಯ. ಮೆಟ್ರೋ ಬಂದ ಮೇಲಂತೂ ಜನ ಹೆಚ್ಚಾಗಿ ಅದನ್ನೇ ನೆಚ್ಚಿಕೊಂಡಿದ್ದಾರೆ. ಸಾರ್ವಜನಿಕರ ಬೇಡಿಕೆಗೆ ಅನುಸಾರವಾಗಿ ಮೆಟ್ರೋ ಮಾರ್ಗ ಕೂಡ ವಿಸ್ತರಣೆಯಾಗುತ್ತಿದೆ. ಇದರ ಜೊತೆಗೆ ಮೂರು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ನಿರ್ಮಾಣದ ಕಾರ್ಯಸಾಧ್ಯತೆಯ ಅಧ್ಯಯನ ವರದಿಗಾಗಿ ಬಿಎಂಆರ್ ಸಿಎಲ್ ಟೆಂಡರ್ ಆಹ್ವಾನಿಸಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್), ನಗರದ ಮೂರು ಮೆಟ್ರೋ ಕಾರಿಡಾರ್‌ಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳ ನಿರ್ಮಾಣದ ಕಾರ್ಯಸಾಧ್ಯತೆಯ ಅಧ್ಯಯನ ವರದಿಯನ್ನು ತಯಾರಿಸಲು ಟೆಂಡರ್ ಕರೆದಿದೆ. ಈ ಕಾರಿಡಾರ್‌ಗಳು ಯಾವ್ಯಾವು ಇಲ್ಲಿದೆ ಮಾಹಿತಿ..

ಯಾವ ಕಾರಿಡಾರ್‌ಗಳಲ್ಲಿ ಡಬ್ಬಲ್‌ ಡೆಕ್ಕರ್‌ ಮೇಲ್ಸೇತುವೆ ಇರಲಿದೆ?

ಪಿ ನಗರ 4ನೇ ಹಂತ - ಹೆಬ್ಬಾಳ (29 ಕಿ.ಮೀ), ಹೊಸಹಳ್ಳಿ - ಕಡಬಗೆರೆ (11.45 ಕಿಮೀ), ಸರ್ಜಾಪುರ - ಇಬ್ಬಲೂರು (ಒಆರ್‌ಆರ್ ಜಂಕ್ಷನ್ 14 ಕಿ.ಮೀ) ಮತ್ತು ಸರ್ಜಾಪುರ ಭಾಗವಾಗಿರುವ ಅಗರ-ಕೋರಮಂಗಲ 3ನೇ ಬ್ಲಾಕ್ (2.4 ಕಿಮೀ). ಹೆಬ್ಬಾಳ ಕಾರಿಡಾರ್ (37ಕಿ.ಮೀ)ವರೆಗೆ ಈ ಯೋಜನೆ ಕೈಗೊಳ್ಳಲು ಚಿಂತಿಸಲಾಗಿದೆ ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.

ಆದಾಗ್ಯೂ 2022ರ ನವೆಂಬರ್‌ನಿಂದ, ಮೆಟ್ರೋದ 3ನೇ ಹಂತದ ಕಾರಿಡಾರ್‌ಗಳಲ್ಲಿ ಎರಡು, ಜೆಪಿ ನಗರ 4ನೇ ಹಂತ-ಕೆಂಪಾಪುರ, ಒಆರ್‌ಆರ್ ವೆಸ್ಟ್ ಮತ್ತು ಮಾಗಡಿ ರಸ್ತೆಯ ಹೊಸಹಳ್ಳಿ-ಕಡಬಗೆರೆ ಮಾರ್ಗವು ಬಾಕಿ ಉಳಿದಿದೆ.

ಅಲ್ಲದೆ, ಬಿಎಂಆರ್‌ಸಿಎಲ್ ನಮ್ಮ ಮೆಟ್ರೋ ಹಂತ-3ಎ ಅಡಿಯಲ್ಲಿ ಸರ್ಜಾಪುರದಿಂದ ಅಗರ, ಕೋರಮಂಗಲ, ಡೈರಿ ಸರ್ಕಲ್ ಮತ್ತು ಮೇಖ್ರಿ ವೃತ್ತದ ಮೂಲಕ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗವನ್ನು ನಿರ್ಮಿಸಲು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಪರಿಶೀಲಿಸುತ್ತಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ಅದಕ್ಕೆ ಅನುಮೋದನೆ ನೀಡಿಲ್ಲ.

ಇನ್ನು ಇತ್ತೀಚೆಗೆಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಡಬಲ್ ಡೆಕ್ಕರ್ ಫ್ಲೈಓವರ್‌ಗಳ ಬಗ್ಗೆ ಪ್ರಸ್ತಾಪಿಸಿದ್ದರು. ನಮ್ಮ ಮೆಟ್ರೋ ರೈಲು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದರು.

ಕೆಳ ಡೆಕ್‌ನಲ್ಲಿ ಮತ್ತು ಮೆಟ್ರೋ ಮೇಲಿನ ಡೆಕ್‌ನಲ್ಲಿ ವಾಹನಗಳನ್ನು ನಿಲ್ಲಿಸಲು ವಿನ್ಯಾಸಗೊಳಿಸಲಾದ ಡಬಲ್ ಡೆಕ್ಕರ್ ಮೇಲ್ಸೇತುವೆಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದರು. ಇದರಿಂದ ರೈಲಿನ ವಿಳಂಬ ಮತ್ತು ಮೆಟ್ರೋಗೆ ಹೆಚ್ಚುವ ವೆಚ್ಚಗಳ ಬಗ್ಗೆಯೂ ಕಳವಳವಿದೆ. ಸಾಮಾನ್ಯವಾಗಿ ರೈಲು ಸಾರಿಗೆಯು ರಸ್ತೆ ಸಂಚಾರಕ್ಕೆ ಹೋಲಿಸಿದರೆ ವೇಗವಾಗಿರುತ್ತದೆ. ಆದರೆ, ಡಬಲ್ ಡೆಕ್ಕರ್ ಫ್ಲೈಓವರ್‌ಗಳನ್ನು ನಿರ್ಮಿಸುವುದರಿಂದ ಮೆಟ್ರೋ ರೈಲಿನ ಸವಾರರ ಮೇಲೆ ಪರಿಣಾಮ ಬೀರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.

ನಿರ್ಮಾಣವಾಗಲಿದೆಯೇ ರಸ್ತೆ ಕಂ ಮೆಟ್ರೊ ಮಾರ್ಗ?

ರಸ್ತೆ ಕಂ ರೈಲು ಯೋಜನೆಯಡಿ ಮೆಟ್ರೋ ಮಾರ್ಗವನ್ನು ಮೇಲ್ಸೇತುವೆಗಳ ಮೇಲೆ ನಿರ್ಮಾಣ ಮಾಡಲಾಗುವುದು. ರಸ್ತೆ ಮೇಲ್ಸೇತುವೆ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಬಿಎಂಆರ್‌ಸಿಎಲ್ ಮೆಟ್ರೋ ವೆಚ್ಚವನ್ನು ನಿರ್ವಹಿಸುತ್ತದೆ. ಇದರಿಂದ ಬೆಂಗಳೂರಿನ ಟ್ರಾಫಿಕ್ ಬಿಕ್ಕಟ್ಟನ್ನು ಪರಿಹರಿಸಬಹುದು. ನಾಗ್ಪುರದಲ್ಲಿ ಇದೇ ರೀತಿಯ ಯೋಜನೆಯಿದ್ದು, ಭವಿಷ್ಯದಲ್ಲಿ ಮೆಟ್ರೋ ಜೊತೆಗೆ ರಸ್ತೆ ಮಾರ್ಗಗಳನ್ನು ಅಳವಡಿಸಲು ಯೋಜಿಸಲಾಗುವುದು ಎಂದು ಡಿಕೆ ಶಿವಕುಮಾರ್ ಹೇಳಿದ್ದರು.

ಪ್ರಸ್ತುತ, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಮೇಲ್ಸೇತುವೆ, ಮಾರೇನಹಳ್ಳಿ ರಸ್ತೆಯಲ್ಲಿ ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ 3.35 ಕಿ.ಮೀ ವ್ಯಾಪಿಸಿದ್ದು, ನಿರ್ಮಾಣ ಹಂತದಲ್ಲಿದೆ. ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕೆಳಗಿನ ಡೆಕ್‌ನಲ್ಲಿ ಮತ್ತು ಮೆಟ್ರೋ ಮೇಲಿನ ಡೆಕ್‌ನಲ್ಲಿ ವಾಹನಗಳ ನಿಲುಗಡೆಗಾಗಿ ವಿನ್ಯಾಸಗೊಳಿಸಲಾಗಿದೆ.

IPL_Entry_Point