ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ, ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ, ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ, ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ

Bengaluru Namma metro; ಬಿಎಂಆರ್‌ಸಿಎಲ್‌ ಇತ್ತೀಚೆಗೆ ಬಿಡುಗಡೆ ಮಾಡಿದ ದತ್ತಾಂಶ ಪ್ರಕಾರ, ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ ಇತ್ತು. ಇನ್ನು ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ ಎಂಬುದನ್ನು ದತ್ತಾಂಶ ದೃಢೀಕರಿಸಿದೆ. ಇನ್ನಷ್ಟು ವಿವರ ಇಲ್ಲಿದೆ.

ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ, ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ನಮ್ಮ ಮೆಟ್ರೋದಲ್ಲಿ ಜೂನ್ ತಿಂಗಳ ಪ್ರಯಾಣಿಕರ ಸಂಚಾರ ದಿನಕ್ಕೆ 7.5 ಲಕ್ಷ, ಒಂದೇ ದಿನ 8 ಲಕ್ಷ ಪ್ರಯಾಣಿಸಿದ್ದು ದಾಖಲೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. (ಸಾಂಕೇತಿಕ ಚಿತ್ರ) (PTI)

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಜನರಿಗೆ ಸಂಚಾರ ಸೇವೆ ಒದಗಿಸುತ್ತಿರುವ ನಮ್ಮ ಮೆಟ್ರೋ ರೈಲು ಜೂನ್ ತಿಂಗಳಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ದು ಐತಿಹಾಸಿಕ ದಾಖಲೆ ಬರೆದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳು ಈ ವಿಚಾರವನ್ನು ದೃಢೀಕರಿಸಿವೆ.

ಬೆಂಗಳೂರಿನ ನಮ್ಮ ಮೆಟ್ರೋ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಮೆಟ್ರೋ ವ್ಯವಸ್ಥೆಯು ತಿಂಗಳಾದ್ಯಂತ ದಿನಕ್ಕೆ ಸರಾಸರಿ 7,45,659 ಪ್ರಯಾಣಿಕರನ್ನು ಸಾಗಿಸಿತ್ತು. ಇದರ ಪರಿಣಾಮ ಒಟ್ಟು 58.23 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿದ್ದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ದಾಖಲೆಯ ಪ್ರಯಾಣಿಕರ ಸಂಖ್ಯೆಯು ಮೇ ತಿಂಗಳಲ್ಲಿ ದಾಖಲಾದ ದಿನಕ್ಕೆ 7,18,170 ಪ್ರಯಾಣಿಕರ ಹಿಂದಿನ ಗರಿಷ್ಠ ಮಟ್ಟವನ್ನು ಮೀರಿದೆ. ವರ್ಷದ ಆರಂಭದಲ್ಲಿ, ಸರಾಸರಿ ದೈನಂದಿನ ಪ್ರಯಾಣಿಕರ ಅಂಕಿಅಂಶಗಳು ಫೆಬ್ರವರಿಯಲ್ಲಿ 7.05 ಲಕ್ಷ, ಜನವರಿಯಲ್ಲಿ 7.01 ಲಕ್ಷ ಮತ್ತು 2023ರ ಡಿಸೆಂಬರ್‌ನಲ್ಲಿ 6.88 ಲಕ್ಷ ಇತ್ತು.

ಜೂನ್‌ ತಿಂಗಳ ಗಮನಾರ್ಹ ಕಾರ್ಯಕ್ಷಮತೆಯು ತಿಂಗಳಲ್ಲಿ ಒಟ್ಟು 2,23,69,774 ಪ್ರಯಾಣಿಕರು ಮೆಟ್ರೋ ಸೇವೆಗಳನ್ನು ಬಳಸಿರುವುದನ್ನು ಗುರುತಿಸಿದೆ. ಜೂನ್ 19 ರಂದು ಒಂದೇ ದಿನ 8,08,071 ಪ್ರಯಾಣಿಕರು ಪ್ರಯಾಣಿಸಿದ್ದು, ಇದುವರೆಗಿನ ಗರಿಷ್ಠ ದೈನಿಕ ಪ್ರಯಾಣಿಕರ ಸಂಖ್ಯೆ ಇದು ಎಂದು ಬಿಎಂಆರ್‌ಸಿಎಲ್ ಹೇಳಿದೆ. ಜೂನ್ 3 ರಂದು ಅತಿ ಹೆಚ್ಚು ಆದಾಯ ಗಳಿಸಿದ ದಿನವಾಗಿದ್ದು, ಇದು 2.51 ಕೋಟಿ ರೂಪಾಯಿ ಆದಾಯ ಬಂದಿರುವುದಾಗಿ ವರದಿ ವಿವರಿಸಿದೆ.

ಅಕ್ಟೋಬರ್‌ನಲ್ಲಿ ನಾಗಸಂದ್ರದಿಂದ ಮಾದಾವರ ಮಾರ್ಗದಲ್ಲಿ ಮೆಟ್ರೋ ಸಂಚಾರ

ತುಮಕೂರು ರಸ್ತೆಯ ನಾಗಸಂದ್ರದಿಂದ ಮಾದಾವರದವರೆಗೆ (ಬಿಐಇಸಿ) ವಿಸ್ತರಿಸಿರುವ ಬೆಂಗಳೂರು ಮೆಟ್ರೋದ ವಿಸ್ತರಿತ ಹಸಿರು ಮಾರ್ಗದಲ್ಲಿ ಅಕ್ಟೋಬರ್ ವೇಳೆಗೆ ಮೆಟ್ರೋ ಸಂಚಾರ ಶುರುಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ನಿಗಮವು ಈ ವರ್ಷದ ಅಂತ್ಯದ ವೇಳೆಗೆ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿಲೋಮೀಟರ್ ಉದ್ದದ ಬಹು ನಿರೀಕ್ಷಿತ ಹಳದಿ ಮಾರ್ಗವನ್ನು ಪ್ರಾರಂಭಿಸಲಿದ್ದು, ಕನಿಷ್ಠ ಎಂಟು ರೈಲುಗಳು 15 ನಿಮಿಷಗಳ ಅಂತರದಲ್ಲಿ ಕಾರ್ಯನಿರ್ವಹಿಸಲಿವೆ.

ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಹೊಸ ಮಾರ್ಗಗಳು ಮತ್ತು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಿಲ್ಕ್ ಬೋರ್ಡ್ ಸೇರಿದಂತೆ 2, 2ಎ ಮತ್ತು 2ಬಿ ಹಂತಗಳ ಅಡಿಯಲ್ಲಿ ಉಳಿದ ಮೆಟ್ರೋ ಮಾರ್ಗಗಳು ಬಿಎಂಆರ್ಸಿಎಲ್ಗೆ ಮತ್ತಷ್ಟು ಪ್ರಯಾಣಿಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಆಗಸ್ಟ್ 6 ರಿಂದ ನಾಗಸಂದ್ರ ಮಾದಾವಾರ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ

ನಮ್ಮ ಮೆಟ್ರೋ ಆ.6 ರಿಂದ ನಾಗಸಂದ್ರದಿಂದ ಮಾದಾವರವರೆಗಿನ ಗ್ರೀನ್‌ಲೈನ್‌ ವಿಸ್ತರಿತ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಈ ಮಾರ್ಗವನ್ನು ಮೆಟ್ರೋ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಸಂಯುಕ್ತ ಕರ್ನಾಟಕ ವರದಿ ಹೇಳಿದೆ.

298 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮಾರ್ಗವು 3.7 ಕಿ.ಮೀ. ಉದ್ದದ ಈ ಮಾರ್ಗ ಮಂಜುನಾಥನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ) ನಿಲ್ದಾಣಗಳನ್ನು ಒಳಗೊಂಡಿದೆ. ಈಗಾಗಲೇ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ. ವಿವಿಧ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಒಂದು ತಿಂಗಳು ಪ್ರಾಯೋಗಿಕ ಸಂಚಾರ ನಡೆಯಲಿದೆ. ನಾವು ಸೆಪ್ಟೆಂಬರ್ ಎರಡನೇ ವಾರದೊಳಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರನ್ನು ತಪಾಸಣೆಗೆ ಆಹ್ವಾನಿಸಲು ಯೋಜಿಸುತ್ತಿದ್ದೇವೆ ಎಂದು ಅಧಿಕಾರಿ ವರದಿ ಹೇಳಿದೆ.

Whats_app_banner