ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ-bengaluru news new palike bazaar an air conditioned underground market will open soon in vijayanagar bangalore uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ

ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ

Palike Bazaar in Bengaluru; ದೆಹಲಿಯಲ್ಲಿರುವಂತೆಯೇ ಬೆಂಗಳೂರಲ್ಲೂ ಪಾಲಿಕೆ ಬಜಾರ್ ಸಿದ್ದವಾಗಿದೆ. ಪೂರ್ಣ ಪ್ರಮಾಣದಲ್ಲಿ ಹವಾನಿಯಂತ್ರಿತ ಅಂಡರ್‌ಗ್ರೌಂಡ್ ಮಾರುಕಟ್ಟೆ ವಿಜಯನಗರದಲ್ಲಿ ಸಿದ್ಧವಾಗಿದೆ. ಇದರ ವಿವರ ಇಲ್ಲಿದೆ.

ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ
ದೆಹಲಿಯಂತೆ ಬೆಂಗಳೂರಲ್ಲೂ ಪಾಲಿಕೆ ಬಜಾರ್‌; ವಿಜಯನಗರದಲ್ಲಿ ಸಿದ್ಧವಾಗಿದೆ ಹವಾನಿಯಂತ್ರಿತ ಅಂಡರ್‌ಗ್ರೌಂಡ್‌ ಮಾರುಕಟ್ಟೆ (HT Photo )

ಬೆಂಗಳೂರು: ದೆಹಲಿಯಂತೆಯೇ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ವಿಜಯನಗರದಲ್ಲಿ ಪಾಲಿಕೆ ಬಜಾರ್ ನಿರ್ಮಾಣವಾಗಿದ್ದು, ಈ ತಿಂಗಳ ಕೊನೆಗೆ ಲೋಕಾರ್ಪಣೆಗೊಳ್ಳಲಿದೆ. ಇದು ಅಂಡರ್‌ಗ್ರೌಂಡ್ ಮಾರುಕಟ್ಟೆಯಾಗಿದ್ದು, ಹವಾನಿಯಂತ್ರಿತ ಮಾರುಕಟ್ಟೆಯಾಗಿರಲಿದೆ. ಈ ಹೊಸ ಮಾರುಕಟ್ಟೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಸಮೀಪ ಇದ್ದು, ಅನುಕೂಲಕರ ಸ್ಥಳದಲ್ಲಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಗರೋತ್ಥಾನ ಯೋಜನೆಯಡಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ 75 ಕ್ಕೂ ಹೆಚ್ಚು ಮಳಿಗೆಗಳು ಇರಲಿವೆ. ಆದಾಗ್ಯೂ, ಸ್ಟಾಲ್ ಹಂಚಿಕೆಗೆ ಸಂಬಂಧಿಸಿ ವ್ಯಾಪಾರಿಗಳಲ್ಲಿ ಗೊಂದಲ ಉಂಟಾಗಿದ್ದು, ಭೂಗತ ವ್ಯವಸ್ಥೆಯಲ್ಲಿ ವ್ಯಾಪಾರದ ಭವಿಷ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.

ಈ ಹೊಸ ಮಾರುಕಟ್ಟೆ ನಿರ್ಮಾಣವಾಗಿರುವ ಪ್ರದೇಶದಲ್ಲಿ ಈ ಹಿಂದೆ 150 ಕ್ಕೂ ಹೆಚ್ಚು ಮಾರಾಟಗಾರರು ತರಕಾರಿಗಳು, ಹೂವುಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸುವ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಹೊಸ ಅಂಡರ್‌ಗ್ರೌಂಡ್‌ ಮಾರುಕಟ್ಟೆಗೆ ಸ್ಥಳಾವಕಾಶ ಕಲ್ಪಿಸಲು ಹಳೆಯ ಸರ್ವೀಸ್‌ ರಸ್ತೆಯನ್ನು ಪರಿವರ್ತಿಸಲಾಗಿದೆ. 2017ರ ಡಿಸೆಂಬರ್ ನಲ್ಲಿ ಶುರುವಾದ ಯೋಜನೆ ಇದು.

ಬೆಂಗಳೂರು ವಿಜಯನಗರದಲ್ಲಿರುವ ನೂತನ ಅಂಡರ್‌ ಗ್ರೌಂಡ್ ಪಾಲಿಕೆ ಬಜಾರ್‌ ಹೇಗಿದೆ

ಬೆಂಗಳೂರು ವಿಜಯನಗರದಲ್ಲಿ ಉದ್ಘಾಟನೆಗೆ ಕಾಯುತ್ತಿರುವ ನೂತನ ಅಂಡರ್‌ ಗ್ರೌಂಡ್ ಪಾಲಿಕೆ ಬಜಾರ್‌ 100 ಮೀಟರ್ ಉದ್ದ, 11 ಮೀಟರ್ ಅಗಲ ಇದ್ದು, 3 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ 75ಕ್ಕೂ ಹೆಚ್ಚು ಮಳಿಗೆಗಳಿವೆ.

ನಗರೋತ್ಥಾನ ಸ್ಕೀಮ್‌ನಲ್ಲಿ 5 ಕೋಟಿ ವೆಚ್ಚದ ಯೋಜನೆ ಇದು. ಸೆನ್ಸರ್‌ ಹೊಂದಿದ ಸ್ಲೈಡಿಂಗ್ ಡೋರ್‌ಗಳು, ಎಸ್ಕಲೇಟರ್‌ಗಳು ಮತ್ತು ಲಿಫ್ಟ್ ಸೌಲಭ್ಯವನ್ನು ಹೊಂದಿರುವ ಮಾರುಕಟ್ಟೆಗೆ ಎರಡು ಗೇಟ್‌ಗಳ ಮೂಲಕ ಸುಲಭವಾಗಿ ಪ್ರವೇಶಿಸಬಹುದು. ಮಾರುಕಟ್ಟೆಗೆ ನೀರು ನುಗ್ಗದಂತೆ ಅದರ ಸುತ್ತ ಪ್ರತ್ಯೇಕ ಪೈಪ್‌ಲೈನ್‌ ನಿರ್ಮಿಸಿ ಮಳೆ ನೀರನ್ನು ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿಯುವಂತೆ ಮಾಡಲಾಗಿದೆ ಎಂದು ವರದಿ ವಿವರಿಸಿದೆ.

ಈ ಹೊಸ ಅಂಡರ್‌ ಗ್ರೌಂಡ್ ಮಾರುಕಟ್ಟೆ ಬಗ್ಗೆ ಜನರಲ್ಲಿ ಈಗಾಗಲೇ ಕುತೂಹಲ ಹೆಚ್ಚಾಗಿದೆ. ಶಾಪಿಂಗ್ ಪ್ರಿಯರು ಕಾತರರಾಗಿದ್ದು, ಶಾಪಿಂಗ್ ಮಾಡುವುದಕ್ಕೆ ಹೊಸ ಬಜಾರ್‌ ಸಿಗಬಹುದೆಂದು ಕುತೂಹಲಿಗಳಾಗಿದ್ದಾರೆ.

ತಿಂಗಳೊಳಗೆ ಬಾಕಿ ಕಾಮಗಾರಿ ಪೂರ್ಣ; ವಿವರ ನೀಡಿದ ವಿಜಯನಗರ ಶಾಸಕ ಎಂ ಕೃಷ್ಣಪ್ಪ

ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಈ ತಿಂಗಳ ಅಂತ್ಯದೊಳಗೆ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

"ಕೆಲವು ಸಣ್ಣಪುಟ್ಟ ಕೆಲಸಗಳು ಇನ್ನೂ ಪೂರ್ಣಗೊಳ್ಳಬೇಕಾಗಿದೆ. ತಿಂಗಳ ಅಂತ್ಯದ ವೇಳೆಗೆ ಮಾರುಕಟ್ಟೆಯನ್ನು ಉದ್ಘಾಟಿಸುವ ಭರವಸೆ ಹೊಂದಿದ್ದೇವೆ. ಅದಕ್ಕೂ ಮೊದಲೆ ಮಳಿಗೆಗಳ ಮಾರಾಟಗಾರರನ್ನು ನಿರ್ಧರಿಸಿ, ಮಳಿಗೆಗಳನ್ನು ಅವರಿಗೆ ನೀಡಲಾಗುತ್ತದೆ " ಎಂದು ವಿಜಯನಗರ ಶಾಸಕ ಎಂ ಕೃಷ್ಣಪ್ಪ ವಿವರಿಸಿದ್ದಾಗಿ ವರದಿ ಹೇಳಿದೆ.

ಈ ನಡುವೆ, ಹಳೆಯ ವ್ಯಾಪಾರಿಗಳಿಗೆ ಮಳಿಗೆ ಸಿಗುವುದೇ ಇಲ್ಲವೇ ಎಂಬ ಗೊಂದಲ ಶುರುವಾಗಿದೆ. 150ಕ್ಕೂ ಹೆಚ್ಚು ವ್ಯಾಪಾರಿಗಳು ಅಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಯಾರಿಗೆಲ್ಲ ಮಳಿಗೆ ಸಿಗಲಿದೆ ಎಂಬ ಆತಂಕಭರಿತ ಕುತೂಹಲ ವ್ಯಾಪಾರಿಗಳಲ್ಲಿದೆ. ಅದೂ ಅಲ್ಲದೆ, ಅದು ಅಂಡರ್‌ಗ್ರೌಂಡ್ ಮಾರುಕಟ್ಟೆಯಾದ ಕಾರಣ ವ್ಯಾಪಾರ ನಡೆಯುವುದೇ ಎಂಬ ಕಳವಳವನ್ನೂ ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.