ಕನ್ನಡ ಸುದ್ದಿ  /  Karnataka  /  Bengaluru News Not Only Manson Is Reason For Bengaluru Water Crisis Excessive Concretization In Silicon City Mrt

Bengaluru Water Crisis: ಮುಂಗಾರಿನ ಕೊರತೆ ಮಾತ್ರವಲ್ಲ, ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಈ ಅಂಶವು ಕೂಡ ಪ್ರಮುಖ ಕಾರಣ

ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ನೀರಿನ ಸಮಸ್ಯೆ ಉಲ್ಭಣವಾಗುತ್ತಿದೆ. ಕಳೆದ ಬಾರಿ ಮುಂಗಾರು ಕಡಿಮೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ ಹೌದಾದರೂ ಅದರೊಂದಿಗೆ ಈ ಅಂಶವೂ ಕೂಡ ಪ್ರಮುಖ ಕಾರಣವಾಗಿದೆ. ಹಾಗಾದರೆ ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಕಾರಣವಾದ ಅಂಶ ಯಾವುದು ನೋಡಿ. (ವರದಿ: ಎಚ್‌. ಮಾರುತಿ)

ಮುಂಗಾರಿನ ಕೊರತೆ ಮಾತ್ರವಲ್ಲ, ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಈ ಅಂಶವು ಕೂಡ ಪ್ರಮುಖ ಕಾರಣ
ಮುಂಗಾರಿನ ಕೊರತೆ ಮಾತ್ರವಲ್ಲ, ಬೆಂಗಳೂರಿನ ನೀರಿನ ಬಿಕ್ಕಟ್ಟಿಗೆ ಈ ಅಂಶವು ಕೂಡ ಪ್ರಮುಖ ಕಾರಣ

ಬೆಂಗಳೂರು: ಮಹಾನಗರಿ ಬೆಂಗಳೂರು ಸದ್ಯ ಎದುರಿಸುತ್ತಿರುವ ತೀವ್ರ ನೀರಿನ ಬಿಕ್ಕಟ್ಟಿಗೆ ಕೇವಲ ಮುಂಗಾರಿನ ಅಭಾವ ಮಾತ್ರ ಕಾರಣವಲ್ಲ, ಮಾನವ ನಿರ್ಮಿತ ಪ್ರಕೃತಿ ವಿರೋಧಿ ಚಟುವಟಿಕೆಗಳೂ ಕಾರಣವಾಗಿವೆ. ಬೆಂಗಳೂರಿನ ಕೆರೆಗಳನ್ನು ಇಲ್ಲವಾಗಿಸಿ ಹಸಿರನ್ನು ಮಾಯ ಮಾಡಿ ಉದ್ಯಾನ ನಗರಿಯಲ್ಲಿ ಕಳೆದ 5 ದಶಕಗಳಲ್ಲಿ ಶೇ 1055 ಪಟ್ಟು ಕಾಂಕ್ರಿಟ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಇದರಿಂದ ಶೇ 79ರಷ್ಟು ನೀರಿನ ಮೂಲಗಳು ಬತ್ತಿ ಹೋಗಿವೆ ಮತ್ತು ಶೇ 88ರಷ್ಟು ಹಸಿರು ನುಂಗಿ ಹಾಕಿರುವುದು ಇವತ್ತಿನ ಸಮಸ್ಯೆಯ ಮೂಲ ಕಾರಣವಾಗಿದೆ.

ಸಂಶೋಧನೆ ಹೇಳುವುದೇನು ನೋಡಿ

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ಮಳೆಯ ಅಭಾವದ ಜೊತೆಗೆ ಬೇರೆ ಏನೆಲ್ಲಾ ಕಾರಣಗಳಿರಬಹದು ಎಂದು ವಿಜ್ಞಾನಿಗಳು ಸಂಶೋಧನೆ ನಡೆಸಿದಾಗ ಈ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಕಳೆದ 50 ವರ್ಷಗಳಲ್ಲಿ ಬೆಂಗಳೂರಿನಲ್ಲಿ ಆಗಿರುವ ಬದಲಾವಣೆಗಳ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ವಿಸ್ತೃತ ಅಧ್ಯಯನ ನಡೆಸಿದ್ದಾರೆ.

ತಮ್ಮ ವರದಿಯ ಅಂಶಗಳನ್ನು ಆಡಳಿತ ನಡೆಸುವವರಿಗೆ ಅನುಕೂಲವಾಗಲಿ ಎಂದು ಎಲ್ಲರಿಗೂ ಲಭ್ಯವಾಗುವ ರೀತಿಯಲ್ಲಿ ಬೆಂಗಳೂರು ಮಾಹಿತಿ ವ್ಯವಸ್ಥೆ ಮತ್ತು ಬೆಂಗಳೂರು ಕೆರೆಗಳ ಮಾಹಿತಿ ವ್ಯವಸ್ಥೆ ಎಂಬ ಎರಡು ಸಾಫ್ಟ್‌ವೇರ್‌ಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಎಗ್ಗಿಲ್ಲದೆ ನಡೆದ ನಗರೀಕರಣ

1973ರಲ್ಲಿ ಬೆಂಗಳೂರಿನಲ್ಲಿ 2,324 ಹೆಕ್ಟೇರ್ ಪ್ರದೇಶದಲ್ಲಿದ್ದ ನೀರಿನ ಮೂಲಗಳು 2023ರ ಹೊತ್ತಿಗೆ 696 ಹೆಕ್ಟೇರ್‌ಗೆ ಇಳಿದಿದೆ. ಅಂತರ್ಜಲ ಕುಸಿಯಲು ಇದು ಪ್ರಮುಖ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಪ್ರೊ ಟಿ.ವಿ. ರಾಮಚಂದ್ರ ಅಭಿಪ್ರಾಯಪಡುತ್ತಾರೆ. 5 ದಶಕಗಳ ಹಿಂದೆ ಬೆಂಗಳೂರಿನಲ್ಲಿ 2,324 ಹೆಕ್ಟೇರ್ ಪ್ರದೇಶದಲ್ಲಿ ಕೆರೆಗಳು ಅಥವಾ ಇನ್ನಿತರ ನೀರಿನ ಮೂಲಗಳು ಇದ್ದವು. ಆದರೆ ಈ ಅವಧಿಯಲ್ಲಿ ಎಗ್ಗಿಲ್ಲದೆ ನಡೆದ ನಗರೀಕರಣ ಅಥವಾ ಕಾಂಕ್ರಿಟ್ ಕಾಡಿನ ಪರಿಣಾಮ ಅಂತರ್ಜಲ ಕುಸಿದಿದೆ.

ಕರೆ ಒತ್ತುವರಿ

ಈಗ ಉಳಿದಿರುವ ಕೆರೆಗಳಲ್ಲಿಯೂ ಶುದ್ದ ನೀರು ಲಭ್ಯವಿಲ್ಲ. ಶೇ 98ರಷ್ಟು ಕೆರೆಗಳಲ್ಲಿ ಕೊಳಚೆ ಮತ್ತು ಕೈಗಾರಿಕೆಗಳ ತ್ಯಾಜ್ಯ ನೀರು ತುಂಬಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಸ್ವಾಭಾವಿಕವಾಗಿ ಇದರ ದುಷ್ಪರಿಣಾಮ ಅಂತರ್ಜಲದ ಮೇಲೆ ಪರಿಣಾಮ

ಬೀರಿರುತ್ತದೆ. 1973ರಲ್ಲಿ ಬೆಂಗಳೂರಿನ ಒಟ್ಟು ಭೂ ಪ್ರದೇಶದಲ್ಲಿ ನಿರ್ಮಾಣ ಪ್ರದೇಶ ಕೇವಲ ಶೇ 8 ರಷ್ಟಿತ್ತು. 2002ರಲ್ಲಿ ನಿರ್ಮಾಣ ಪ್ರದೇಶ ಶೇ 37.7 ರಷ್ಟಿದ್ದರೆ ಹಸಿರು ವಲಯ ಶೇ 38.7 ರಷ್ಟಿತ್ತು. 2010ರಲ್ಲಿ ನಿರ್ಮಾಣ ಪ್ರದೇಶ ಶೇ 54.5 ರಷ್ಟಿದ್ದರೆ ಹಸಿರು ವಲಯ ಶೇ 28.2 ರಷ್ಟಿತ್ತು. ಆದರೆ 2023ರಲ್ಲಿ ನಿರ್ಮಾಣ ಪ್ರದೇಶ ಶೇ 86.6 ರಷ್ಟಿದ್ದು, ಹಸಿರು ಪ್ರದೇಶ ಶೇ 2.9 ಕ್ಕೆ ಕುಸಿದಿದೆ.

ಇದರಿಂದ ವಾಯುಮಾಲಿನ್ಯ ಹೆಚ್ಚಳವಾಗಿದ್ದು, ಅಧಿಕ ಉಷ್ಣಾಂಶಕ್ಕೆ ಕಾರಣವಾಗಿದೆ. ನಗರದ 9.5 ಮಿಲಿಯನ್ ಜನಸಂಖ್ಯೆಗೆ ರಿಮೋಟ್ ಸೆನ್ಸಾರ್ ಡಾಟಾ ಪ್ರಕಾರ ನಗರದಲ್ಲಿ 1.5 ಮಿಲಿಯನ್

7 ಮಂದಿಗೆ ಒಂದೇ ಮರ

ಮರಗಳು ಮಾತ್ರ ಇವೆ. ಅಂದರೆ ಪ್ರತಿ ಏಳು ಮಂದಿಗೆ 1 ಮರ! ಇಂತಹ ಪರಿಸ್ಥಿತಿಯಲ್ಲಿ ಅಮ್ಲಜನಕ ಎಲ್ಲಿಂದ ಲಭಿಸೀತು? ಇದೇ ಕಾರಣಕ್ಕೆ ಉದ್ಯಾನ ನಗರಿಯ ಪ್ರತಿ ಮನುಷ್ಯ 540-900 ಗ್ರಾಂ ಗಳಷ್ಟು ಇಂಗಾಲವನ್ನು ಉಸಿರಾಡುತ್ತಾನೆ.

ಕಡಿಮೆ ಅವಧಿಯಲ್ಲಿ ಅವೈಜ್ಞಾನಕವಾಗಿ ಬೆಂಗಳೂರು ಬೆಳೆದಿದೆ. ಯೋಜನೆಗಳಿಲ್ಲದ ನಗರೀಕರಣ, ನೈಸರ್ಗಿಕ ಸಂಪನ್ಮೂಲಗಳ ಅವೈಜ್ಞಾನಿಕ ವಿಸ್ತರಣೆ, ವಾಹನ ದಟ್ಟಣೆ, ಕೊಳಚೆ ಪ್ರದೇಶಗಳ ಹೆಚ್ಚಳ, ನಿರುದ್ಯೋಗ, ಪಳೆಯುಳಿಕೆ ಇಂಧನಗಳ ಮೇಲಿನ ಅತಿಯಾದ ಅವಲಂಬನೆ, ನಿಯಂತ್ರಣವಿಲ್ಲದೆ ವಿಸ್ತಾರಗೊಳ್ಳುತ್ತಿರುವ ಬೆಂಗಳೂರು ನೀರಿನ ಸಮಸ್ಯೆಗೆ ಕಾರಣವಾಗಿವೆ. ಆಳುವ ಮಂದಿ ಈಗಲಾದರೂ ಬೆಂಗಳೂರಿನ ಬೆಳವಣಿಗೆಗೆ ಕಡಿವಾಣ ಹಾಕಬೇಕು. ಇಲ್ಲದೆ ಹೋದಲ್ಲಿ ಉಸಿರಾಡಲೂ ಗಾಳಿಯೂ ಲಭ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಯಿಲ್ಲ.