Peak Bengaluru: ಕಚೇರಿಗೆ ಹೋಗುವ ಧಾವಂತಕ್ಕೆ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ್ರು ಬಾಸ್ ಮತ್ತು ಉದ್ಯೋಗಿ, ಆ ಮೇಲೆ ಏನಾಯ್ತು
ಬೆಂಗಳೂರು ಟ್ರಾಫಿಕ್‌ಗೆ ಬಹಳ ಕುಖ್ಯಾತಿ. ಇತ್ತೀಚೆಗೆ ಕಚೇರಿಗೆ ಹೋಗುವ ಧಾವಂತಕ್ಕೆ ಬಾಸ್ ಮತ್ತು ಉದ್ಯೋಗಿ ಇಬ್ರೂ ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ್ರು. ಅಕ್ಕಪಕ್ಕದಲ್ಲೇ ಇದ್ರು ಬೇರೆ.. ಆ ಮೇಲೆ ಏನಾಯ್ತು..(ವರದಿ- ಪ್ರಿಯಾಂಕಾ, ಬೆಂಗಳೂರು)
ಬೆಂಗಳೂರು: ಉದ್ಯಾನ ನಗರಿ ಬೆಂಗಳೂರು ಐಟಿ ಸಿಟಿ ಮಾತ್ರವಲ್ಲ, ಟ್ರಾಫಿಕ್‌ಗೂ ಹೆಸರುವಾಸಿಯಾಗಿರುವ ಮಹಾನಗರವಾಗಿದೆ. ನಗರದ ಸಿಲ್ಕ್ ಬೋರ್ಡ್, ಹೆಬ್ಬಾಳ ಫ್ಲೈ ಓವರ್ ಸಂಚಾರ ದಟ್ಟಣೆಯಂತೂ ಜನರನ್ನು ಹೈರಣಾಗಿಸಿದೆ. ಅದರಲ್ಲೂ ಮಳೆ ಏನಾದರೂ ಬಂದರೆ ಅಲ್ಲಿಗೆ ಕಥೆ ಅಷ್ಟೇ. ಒಮ್ಮೆ ಮನೆ ಸೇರಿದರೆ ಸಾಕಪ್ಪ ಅನ್ನೋ ತರಹ ಆಗಿರುತ್ತದೆ.
ಇನ್ನೂ ಕೆಲವರು ಟ್ರಾಫಿಕ್‌ನಿಂದಾಗಿ ಕಚೇರಿಗೆ ತಡವಾಗಿ ತಲುಪಿ ಮ್ಯಾನೇಜರ್ ಕೈಲಿ ಬೈಗುಳ ತಿಂದವರೂ ಇದ್ದಾರೆ. ಟ್ರಾಫಿಕ್‌ನಲ್ಲಿ ಮ್ಯಾನೇಜರ್ ಹಾಗೂ ಉದ್ಯೋಗಿ ಇಬ್ಬರೂ ಒಟ್ಟಿಗೆ ಸಿಲುಕಿಕೊಂಡರೆ ಹೇಗಿರಬಹುದು? ಇದೇ ರೀತಿಯ ಅನುಭವವನ್ನು ವ್ಯಕ್ತಿಯೊಬ್ಬರು ಮೈಕ್ರೋ ಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲಿ ಶೇರ್ ಮಾಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಕಥೆ- ಬಾಸ್ ಮತ್ತು ಉದ್ಯೋಗಿ ಜೊತೆಯಾದಾಗ
ಸಾಲ್ಟ್ ಮತ್ತು ಲೆಟ್ಸ್ ಟ್ರಾನ್ಸ್‌ಪೋರ್ಟ್ ಎಂಬ ಎರಡು ಕಂಪನಿಗಳ ಸಹ ಸಂಸ್ಥಾಪಕ ಅಂಕಿತ್ ಪರಾಶರ್ ಅವರು ತಮ್ಮ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿದ್ದಾರೆ. ವಾಹನಗಳು ಮಾರುದ್ದ ದೂರದವರೆಗೂ ನಿಂತಿತ್ತು. ಈ ಸಂಚಾರದಟ್ಟಣೆಯಿಂದ ಯಾವಾಗ ಮುಕ್ತಿ ಸಿಗುತ್ತೋ ಅಂತಾ ಅವರು ತಲೆಬಿಸಿ ಮಾಡಿಕೊಳ್ಳುತ್ತಿದ್ದಾಗ, ಕಾಕತಾಳೀಯವಾಗಿ ಪಕ್ಕದಲ್ಲೇ ತನ್ನ ಸಹೋದ್ಯೋಗಿಯನ್ನು ಗಮನಿಸಿದರು. ಇಬ್ಬರೂ ಮಾತುಕತೆ ಶುರುಮಾಡಿದರು. ಅದು ಕಚೇರಿ ಕೆಲಸಕ್ಕೆ ಸಂಬಂಧಿಸಿದ ಚಿಂತನ ಮಂಥನವೇ ಆಯಿತು.
ಈ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಂಕಿತ್ ಪರಾಶರ್ ಹಂಚಿಕೊಂಡಿದ್ದಾರೆ. ಬೆಂಗಳೂರಿಗೆ ಹೋಗುವ ಮುನ್ನ ಸ್ಟಾರ್ಟಪ್ ವೈಬ್ ಮತ್ತು ಇಲ್ಲಿನ ಟ್ರಾಫಿಕ್ ಬಗ್ಗೆ ಕೇಳಿದ್ದೆ. ಇಂದು ಅವರಿಬ್ಬರೂ ವಿಲೀನಗೊಂಡರು. ನಾವಿಬ್ಬರೂ ಕಚೇರಿಗೆ ತಡವಾಗಿ ಬಂದೆವು ಎಂದು ಫೋಟೋ ಹಂಚಿಕೊಳ್ಳುತ್ತಾ ಅವರು ಬರೆದಿದ್ದಾರೆ.
ಅಂಕಿತ್ ಪರಾಶರ್ ಕಾರಿನಲ್ಲಿ ಕುಳಿತಿದ್ದರೆ, ಅವರ ಸಹೋದ್ಯೋಗಿ ಬೈಕಿನಲ್ಲಿದ್ದಾಗ ಕುಳಿತಿರುವುದನ್ನು ಚಿತ್ರದಲ್ಲಿ ನೋಡಬಹುದು. ಕಾರಿನ ಕಿಟಕಿಯನ್ನು ಇಳಿಸಿರುವ ಪರಾಶರ್ ತಮ್ಮ ಸಹೋದ್ಯೋಗಿಯೊಂದಿಗೆ ಮಾತುಕತೆಯಲ್ಲಿ ಮುಳುಗಿದ್ದರು. ಕೆಂಪು ಬಣ್ಣಕ್ಕೆ ತಿರುಗಿದ್ದ ಸಿಗ್ನಲ್ ಯಾವಾಗ ಹಸಿರು ಬಣ್ಣಕ್ಕೆ ತಿರುಗುತ್ತೋ ಎಂದು ಕಾಯುತ್ತಾ, ಇಬ್ಬರೂ ಮಾತಿನಲ್ಲಿ ತಲ್ಲೀಣರಾಗಿರುವುದನ್ನು ಫೋಟೋದಲ್ಲಿ ಗಮನಿಸಬಹುದು.
ವಿಆರ್ ಹೆಡ್‌ಸೆಟ್ ಧರಿಸಿ ಊಟ ಮಾಡುತ್ತಿದ್ದ ವಿಡಿಯೋ ವೈರಲ್
ಇದಕ್ಕೂ ಮೊದಲು, ಬೆಂಗಳೂರಿನ ಇನ್ನೊಂದು ಘಟನೆಯ ವಿಡಿಯೋವೊಂದು ಈ ಹಿಂದೆ ವೈರಲ್ ಆಗಿತ್ತು. ವ್ಯಕ್ತಿಯೊಬ್ಬ ವಿಆರ್ (ವರ್ಚುವಲ್ ರಿಯಾಲಿಟಿ) ಹೆಡ್‌ಸೆಟ್ ಧರಿಸಿ ಊಟ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ವ್ಯಕ್ತಿಯು ಪಾನೀಯವನ್ನು ಸೇವಿಸುತ್ತಿದ್ದನು. ಅಲ್ಲದೆ ವಿಆರ್ ತಂತ್ರಜ್ಞಾನದೊಂದಿಗೆ ಸಂವಹನ ನಡೆಸಲು ಕೈ ಸನ್ನೆಗಳನ್ನು ಮಾಡುತ್ತಿದ್ದನು. ಆತ ತಿನ್ನುವಾಗ ವಿಆರ್ ಹೆಡ್‌ಸೆಟ್ ಧರಿಸಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋಗೆ ಪ್ರತಿಕ್ರಿಯಿಸಿದ ಬಳಕೆದಾರನೊಬ್ಬ, ಇದು ಬಳಸಲು ಯೋಗ್ಯವಾಗಿದೆ. ಆದರೆ, ಇದು ದೈನಂದಿನ ಬಳಕೆಗೆ ಉತ್ತಮವಾಗಿಲ್ಲ ಎಂದಿದ್ದರು. ಮತ್ತೊಬ್ಬ ಬಳಕೆದಾರ, ಇತ್ತೀಚಿನ ದಿನಗಳಲ್ಲಿ ಆಪಲ್ ಉತ್ಪಾದಿಸಲು ಸಮರ್ಥವಾಗಿರುವ ಟೆಕ್ ಸ್ಲೇಸ್‌ಗಳ ಪ್ರಮಾಣವು ತುಂಬಾ ಶ್ಲಾಘನೀಯ ಕ್ರಮವಾಗಿದೆ ಎಂದು ಬರೆದಿದ್ದರು.
ಇನ್ನು ಪೀಕ್ ಬೆಂಗಳೂರಿನ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಈ ವಿಡಿಯೋಗೆ ಪ್ರತಿಕ್ರಿಯಿಸಿತು. ನಗುವ ಎಮೋಜಿಕಾನ್ ಹಂಚಿಕೊಳ್ಳುವ ಮೂಲಕ ವಿಡಿಯೋಗೆ ಪ್ರತಿಕ್ರಿಯೆ ನೀಡಿತು.
(ವರದಿ- ಪ್ರಿಯಾಂಕಾ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ಎಸ್ಕಾಂ ತಂತ್ರಾಂಶ ಉನ್ನತೀಕರಣ; ಮಾರ್ಚ್ ತಿಂಗಳ ಕರೆಂಟ್ ಬಿಲ್ ತಡವಾಗಿ ಕಟ್ಟಿದ್ರೂ ದಂಡ ಇಲ್ಲ, ಫ್ಯೂಸ್ ಕಿತ್ಕೊಂಡು ಹೋಗಲ್ಲ - ವಿವರ ವರದಿ ಇಲ್ಲಿದೆ.
2) ಸುಧಾಮೂರ್ತಿ ಮನೆಯ ಒಗ್ಗಟ್ಟು ಕೆಡಿಸಲು ಬಂದ ಭಾರ್ಗವಿಯೇ ಸಹನಾಳ ತಾಯಿ, ಬೃಂದಾವನದಲ್ಲೊಂದು ಬಿಗ್ ಟ್ವಿಸ್ಟ್
3) ಸುರೇಶನ ಮನೆಯಲ್ಲಿರುವುದು ಒಟ್ಟು ಎಷ್ಟು ಜನ? ಯೋಚ್ನೆ ಮಾಡಿ ಉತ್ತರ ಹೇಳಿ; ನಿಮ್ಮ ಜಾಣ್ಮೆಗೊಂದು ಸವಾಲು