ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್; ಫೆಬ್ರವರಿ 5ಕ್ಕೆ ಕೆಎಸ್‌ಆರ್‌ಟಿಸಿಯಿಂದ ಅಶ್ವಮೇಧ ನಾನ್ ಎಸಿ ಹೊಸ ಬಸ್‌ಗಳಿಗೆ ಚಾಲನೆ
ಕನ್ನಡ ಸುದ್ದಿ  /  ಕರ್ನಾಟಕ  /  ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್; ಫೆಬ್ರವರಿ 5ಕ್ಕೆ ಕೆಎಸ್‌ಆರ್‌ಟಿಸಿಯಿಂದ ಅಶ್ವಮೇಧ ನಾನ್ ಎಸಿ ಹೊಸ ಬಸ್‌ಗಳಿಗೆ ಚಾಲನೆ

ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್; ಫೆಬ್ರವರಿ 5ಕ್ಕೆ ಕೆಎಸ್‌ಆರ್‌ಟಿಸಿಯಿಂದ ಅಶ್ವಮೇಧ ನಾನ್ ಎಸಿ ಹೊಸ ಬಸ್‌ಗಳಿಗೆ ಚಾಲನೆ

ಕೆಎಸ್‌ಆರ್‌ಟಿಸಿ ಫೆಬ್ರವರಿ 5ಕ್ಕೆ ಹೊಸ ಬ್ರಾಂಡ್‌ನ 100 ಅಶ್ವಮೇಧ ನಾನ್ ಎಸಿ ಬಸ್‌ಗಳಿಗೆ ಚಾಲನೆ ನೀಡಲಿದೆ. ಇದು ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್ ಆಗಿದೆ.

ಕೆಎಸ್‌ಆರ್‌ಟಿಸಿ ಅಶ್ವಮೇಧ ನಾನ್ ಎಸಿ 100 ಹೊಸ ಬಸ್‌ಗಳಿಗೆ ಫೆಬ್ರವರಿ 5 ರಂದು ಚಾಲನೆ ನೀಡಿದೆ. (ಫೋಟೊ ಕೃಪೆ- Christin Mathew Philip)
ಕೆಎಸ್‌ಆರ್‌ಟಿಸಿ ಅಶ್ವಮೇಧ ನಾನ್ ಎಸಿ 100 ಹೊಸ ಬಸ್‌ಗಳಿಗೆ ಫೆಬ್ರವರಿ 5 ರಂದು ಚಾಲನೆ ನೀಡಿದೆ. (ಫೋಟೊ ಕೃಪೆ- Christin Mathew Philip)

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ-KSRTC ಸಾರಿಗೆ ಸೇವೆಯಲ್ಲಿ ಕಳೆದ ಕೆಲವು ವರ್ಷಗಳಿಂದ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಗುಣಮಟ್ಟದ ಸೇವೆಗೆ ಹೆಸರುವಾಸಿಯಾಗಿರುವ ಹೆಮ್ಮೆಯ ಕೆಎಸ್‌ಆರ್‌ಟಿಸಿ ಕಾಲಕ್ಕೆ ತಕ್ಕಂತೆ ಹೊಸ ಹೊಸ ಬಸ್‌ಗಳನ್ನು ಪರಿಚಯ ಮಾಡುವ ಮೂಲಕ ಪ್ರಯಾಣಿಕರ ನೆಚ್ಚಿನ ಹಾಗೂ ನಂಬಿಕೆಯ ಸಾರಿಗೆ ಸಂಸ್ಥೆಯಾಗಿ ಬೆಳೆದಿದೆ.

ಐರಾವತ ಹಾಗೂ ಅಂಬಾರಿ ನಂತರ ಇದೀಗ ಅಶ್ವಮೇಧ ಎಂಬ ಹೊಸ ಬಸ್‌ಗಳನ್ನು ಪರಿಚಯಿಸುತ್ತಿದೆ. ಹೊಸ ವಿನ್ಯಾಸದ 100 ಅಶ್ವೇಮಧ ಬಸ್ಸುಗಳಿಗೆ ಫೆಬ್ರವರಿ 5 ರ ಸೋಮವಾರ ಚಾಲನೆ ನೀಡಲಾಗುತ್ತದೆ. ಪ್ರಯಾಣದ ಮರು ಕಲ್ಪನೆ ಎಂಬ ಘೋಷವಾಕ್ಯದೊಂದಿಗೆ ನೂತನ ಬಸ್ ರಸ್ತೆಗಿಳಿಯಲಿದೆ. ಅಲ್ಲದೆ, ಬಸ್ ಮೇಲೆ ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಎಂದು ಬರೆಯಲಾಗಿದೆ.

ಕೆಎಸ್‌ಆರ್‌ಟಿಸಿ ಅಶ್ವಮೇಧ ನಾನ್ ಎಸಿ ಬಸ್ ವೈಶಿಷ್ಟ್ಯಗಳು

  • ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್ ಬಸ್‌ನ ಉದ್ದ 3,420 ಎಂಎಂ
  • ಸೀಟುಗಳ ಸಾಮರ್ಥ್ಯ - 52
  • ಬಸ್‌ ಒಳಗೆ ಲಗೇಜ್‌ ಇಡಲು ವಿಶಾಲವಾದ ಸ್ಥಳ
  • ಬಸ್ಸಿನ ಒಳಗೆ ನಿರಂತರವಾಗಿ ಉರಿಯುವ ಎಲ್‌ಇಡಿ ದೀಪಗಳು
  • ಎಲ್‌ಇಡಿ ಮಾರ್ಗ ಫಲಕಗಳು
  • ಸ್ವಯಂ ಚಾಲಿತ ಬಾಗಿಲು ವ್ಯವಸ್ಥೆ
  • ತುರ್ತು ಬಟನ್ ವ್ಯವಸ್ಥೆ
  • ಬಕೆಟ್ ರೀತಿಯ ವಿನ್ಯಾಸ
  • ವಿಶಾಲವಾಗಿರುವ ಬಸ್ಸಿನ ಮುಂದಿನ ಹಾಗೂ ಹಿಂದಿನ ಗಾಜುಗಳು

ಇದನ್ನೂ ಓದಿ: ಟಿಕೆಟ್ ಖರೀದಿಸಲು ಕ್ಯೂರ್ ಕೋಡ್ ವ್ಯವಸ್ಥೆ

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಿಂದ ರಾಜಧಾನಿ ಬೆಂಗಳೂರಿಗೆ ಸಂಕರ್ಪದ ಉದ್ದೇಶದಿಂದ ಈ ಬಸ್‌ಗಳಿಗೆ ರಸ್ತೆಗೆ ಇಳಿಸಲಾಗುತ್ತಿದೆ. ವಿಧಾನಸೌಧದ ಮುಂಭಾಗದಲ್ಲಿ ಫೆಬ್ರವರಿ 5 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಉಪಸ್ಥಿತಿ ಇರಲಿದ್ದಾರೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner