ಕನ್ನಡ ಸುದ್ದಿ  /  Karnataka  /  Bengaluru News Police Raid Luxury Thai Spa In Yelahanka Rescued 7 Thailand Women Bangalore Crime News Mrt

ಬೆಂಗಳೂರು ಅಪರಾಧ ಸುದ್ದಿ; ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ, 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ

ಬೆಂಗಳೂರು ಅಪರಾಧ ಸುದ್ದಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ ನಡೆಸಿದ್ದು, 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು ಅಪರಾಧ ಸುದ್ದಿ; ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ ನಡೆಸಿದ್ದು 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.
ಬೆಂಗಳೂರು ಅಪರಾಧ ಸುದ್ದಿ; ವೇಶ್ಯಾವಾಟಿಕೆ ನಡೆಸುತ್ತಿದ್ದ ಐಷಾರಾಮಿ ಥಾಯ್ ಸ್ಪಾ ಮೇಲೆ ಪೊಲೀಸ್ ದಾಳಿ ನಡೆಸಿದ್ದು 7 ಥಾಯ್ಲೆಂಡ್ ಮಹಿಳೆಯರ ರಕ್ಷಣೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮೂವರನ್ನು ಬಂಧಿಸಿದ್ದಾರೆ.

ಬೆಂಗಳೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿಯಲ್ಲಿ ಬೆಂಗಳೂರಿನ ಯಲಹಂಕ ಉಪನಗರದಲ್ಲಿರುವ ರೋರಾ ಲಕ್ಷುರಿ ಥಾಯ್‌ ಸ್ಪಾ ಮೇಲೆ ದಾಳಿ ಮಾಡಿರುವ ಪೊಲೀಸರು ಏಳು ವಿದೇಶಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಈ ಸ್ಪಾ ದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಮಹಿಳೆಯರನ್ನು ರಕ್ಷಿಸಿರುವುದರ ಜೊತೆಗೆ ಸ್ಪಾ ವ್ಯವಸ್ಥಾಪಕ ಕಿಶೋರ್‌, ಆಂಜನೇಯಗೌಡ, ಹರೀಶ್ ಅವರನ್ನು ಬಂಧಿಸಿದ್ದಾರೆ. ಸ್ಪಾ ಮಾಲೀಕ ವೈಶಾಖ ಸೇರಿದಂತೆ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ಯಲಹಂಕ ನ್ಯೂಟೌನ್ ಪೊಲೀಸರು ಹೇಳಿದ್ದಾರೆ.

ಪ್ರವಾಸ ಮತ್ತು ಬ್ಯುಸಿನೆಸ್ ವೀಸಾದಡಿ ಥಾಯ್ಲೆಂಡ್‌ನಿಂದ ಮಹಿಳೆಯರನ್ನು ನಗರಕ್ಕೆ ಕರೆಸುತ್ತಿದ್ದ ಆರೋಪಿಗಳು, ಸ್ಪಾನಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತಿದ್ದರು. ಸ್ಪಾ ಹೆಸರಿನಲ್ಲಿ ಮಧ್ಯವರ್ತಿಗಳ ಮೂಲಕ ಗ್ರಾಹಕರನ್ನು ಆಕರ್ಷಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹಣದಾಸೆಗೆ ವೇಶ್ಯಾವಾಟಿಕೆ ಆರಂಭಿಸಿದ ಟೆಕ್ಕಿ

ಐದಂಕಿ ಸಂಬಳ ಪಡೆಯುತ್ತಿದ್ದ ಸಾಫ್ಟ್ ವೇರ್ ಉದ್ಯೋಗಿ ವೈಶಾಖ ಹಣದಾಸೆಗೆ ಬಿದ್ದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ವಿಪರೀತ ಸಾಲ ಮಾಡಿರುತ್ತಾನೆ. ತಂತ್ರಜ್ಞಾನದಲ್ಲಿ ಪ್ರಾವೀಣ್ಯತೆ ಹೊಂದಿದ್ದ ಈತ ಕೆಲಸಕ್ಕೆ ಗುಡ್ ಬೈ ಹೇಳಿ ಮ್ಯಾಟ್ರಿಮೋನಿ ಮಾದರಿಯ ಆ್ಯಪ್ ಅಭಿವೃದ್ಧಿ ಮಾಡಿ ಹಣ ಸಂಪಾದಿಸುತ್ತಿರುತ್ತಾನೆ.

ಈತನದ್ದೇ ಆಪ್ ಮೂಲಕ ಬಿಟೆಕ್ ಪದವೀಧರ ಗೋವಿಂದರಾಜು ಎಂಬಾತನ ಪರಿಚಯವಾಗುತ್ತದೆ. ವೈಶಾಖನಿಗೆ ಮ್ಯಾಟ್ರಿಮೋನಿ ಬದಲಾಗಿ ಹೈ ಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುವಂತೆ ಗೋವಿಂದರಾಜು ಸಲಹೆ ನೀಡಿರುತ್ತಾನೆ. ನಂತರ ದುರಾಸೆಗೆ ಬಿದ್ದ ಈತ ವೇಶ್ಯಾವಾಟಿಕೆ ದಂಧೆಯ ಹಾದಿ ಹಿಡಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಜೀನ್ಸ್ ಪ್ಯಾಂಟ್‌ ನಲ್ಲಿ ಚಿನ್ನ ಕಳ್ಳಸಾಗಣೆ

ಶಾರ್ಜಾದಿಂದ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕನೊಬ್ಬ ಪ್ಯಾಂಟ್‌ನಲ್ಲಿ ಚಿನ್ನದ ಪುಡಿಯನ್ನು ಕಳ್ಳಸಾಗಣೆ ಮಾಡುವಾಗ ಸಿಕ್ಕಿ ಬಿದ್ದಿದ್ದಾನೆ. ಬಂಧಿತ ಪ್ರಯಾಣಿಕನಿಂದ ಒಟ್ಟು 367.7 ಗ್ರಾಂ ಚಿನ್ನದ ಪುಡಿಯನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಚಿನ್ನದ ಮೌಲ್ಯ ರೂ. 22.58 ಲಕ್ಷ ಎಂದು ತಿಳಿದು ಬಂದಿದೆ.

ಚಿನ್ನ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿರುವವರು ಬೇರೆ ಬೇರೆ ವಿಧಾನಗಳನ್ನು ಅನುಸರಿಸುತ್ತಾರೆ. ಅದು ಇಂಥದ್ದೇ ವಿಧಾನ ಎಂದೇನೂ ಇಲ್ಲ. ಬಹುತೇಕ ಈ ವಿಧಾನಗಳು ಪತ್ತೆಯಾಗುವಂಥದ್ದೇ ಆಗಿರುತ್ತವೆ. ಈ ಪ್ರಯಾಣಿಕ ತನ್ನ ಜೀನ್ಸ್ ಪ್ಯಾಂಟ್‌ ಅನ್ನು ಎರಡು ಪದರದಲ್ಲಿ ಹೊಲಿಸಿರುತ್ತಾನೆ. ಅದರೊಳಗೆ ಚಿನ್ನದ ಪುಡಿ ತುಂಬಿಸಿಕೊಂಡಿದ್ದು, ಯಾರಿಗೂ ಅರಿವಿಗೆ ಬರುವುದಿಲ್ಲ ಎಂದು ಭಾವಿಸಿರುತ್ತಾನೆ. ಚಿನ್ನ ಕಳ್ಳಸಾಗಣೆ ಮಾಡಲೆಂದೇ ಈ ರೀತಿಯ ಕಪ್ಪುಬಣ್ಣದ ಜೀನ್ಸ್ ಪ್ಯಾಂಟ್‌ ಸಿದ್ಧಪಡಿಸಲಾಗಿತ್ತು. ಈ ರೀತಿಯ ಜೀನ್ಸ್ ಪ್ಯಾಂಟ್‌ ಧರಿಸಿ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point