ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ಪುತ್ರ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ಪುತ್ರ

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ಪುತ್ರ

ಬೆಂಗಳೂರು ಅಪರಾಧ ಸುದ್ದಿ; ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಪೊಲೀಸ್ ಅಧಿಕಾರಿ ಪುತ್ರ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಇನ್ನೊಂದು ಪ್ರಕರಣದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಪೊಲೀಸ್ ಅಧಿಕಾರಿ ಪುತ್ರ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಅಪ್ಪನ ವೈರಿಗಳು ಹೊಡೆದರು ಎಂದು ಸುಳ್ಳು ಹೇಳಿ ಪೊಲೀಸ್ ಅಧಿಕಾರಿ ಪುತ್ರ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. (ಸಾಂಕೇತಿಕ ಚಿತ್ರ) (Canva)

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವಾಗ ಬಿದ್ದು ಮೈ ಕೈ ಗಾಯ ಮಾಡಿಕೊಂಡು ಯಾರೋ ಬೀಳಿಸಿ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ಪುತ್ರನ ಕಥೆ ಇದು. 22 ವರ್ಷದ ಗೌತಮ್ ಸುಭಾಷ್ ಸುಳ್ಳು ಹೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ ಪುತ್ರ.

ಸ್ನೇಹಿತರನ್ನು ಭೇಟಿ ಮಾಡಿ ಕೆಂಗೇರಿಯಿಂದ ಬೈಕಿನಲ್ಲಿ ಹೊರಟು ರಾತ್ರಿ ಸುಮಾರು 9.30 ಗಂಟೆ ಸಮಯದಲ್ಲಿ ಪಬ್ ಹೌಸ್‌ನ ಹತ್ತಿರದ ರಸ್ತೆಯಲ್ಲಿ ಬರುತ್ತಿರುವಾಗ ಮೂರು ದ್ವಿಚಕ್ರ ವಾಹನಗಳಲ್ಲಿ ಆರು ಜನ ಅಪರಿಚಿತರು ಅಡ್ಡಗಟ್ಟಿದರು. ಅವರು ನೀನು ಎ.ಎಸ್.ಐ. ಸುರೇಶರವರ ಪುತ್ರ ಅಲ್ಲವೇ ಎಂದು ಪ್ರಶ್ನಿಸಿದರು. ಹೌದು ಎಂದು ಉತ್ತರಿಸಿದಾಗ ಅವರು ನಿನ್ನ ತಂದೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಸ್ಟೇಷನ್‌ನಲ್ಲಿ ಕರ್ತವ್ಯದಲ್ಲಿದ್ದಾಗ ನಮಗೆ ತುಂಬಾ ತೊಂದರೆ ಕೊಟ್ಟಿದ್ದಾರೆ ಎಂದು ಹೇಳಿ ಅವರೇ ನನ್ನ ಬೈಕ್ ಚಾಲನೆ ಮಾಡಿಕೊಂಡು ಬಲವಂತದಿಂದ ಹತ್ತಿರದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಎಡಗೈ, ಎಡ ಭುಜ ಮತ್ತು ಮೊಣಕ್ಕೆ ಗೆ ತಿವಿದು ಗಾಯ ಮಾಡಿದ್ದಾರೆ. ಕಾಲುಗಳಿಂದ ಒದ್ದು ಹಲ್ಲೆ ಮಾಡಿ ಕಾಲೇಜಿಗೆ ಹೋಗುವ ನಿನ್ನ ತಂಗಿಯನ್ನು ರೇಪ್ ಮಾಡುತ್ತೇವೆ ಹಾಗೂ ನಿನ್ನ ತಂದೆ ತಾಯಿಯನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.

ದರೋಡೆ ಪ್ರಕರಣ; ಅಸಲಿ ಕಥೆ ಇದು…

ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದಾಗ ದೂರಿನಲ್ಲಿ ತಿಳಿಸಿರುವಂತೆ ಘಟನೆ ನಡೆದಿರುವ ಬಗ್ಗೆ ಸಂದೇಹ ಉಂಟಾಗಿತ್ತು. ಗೌತಮ್ ಸುಭಾಷ್ ನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಸತ್ಯ ಹೊರಬಿದ್ದಿದೆ.

ಈತ ತನ್ನ ಇಬ್ಬರು ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ ಮನೆಗೆ ಹೋಗುತ್ತಿದ್ದಾಗ ತುಂತುರು ಮಳೆ ಬೀಳುತ್ತಿತ್ತು. ಆಗ ಅಮ್ಮ ಆಶ್ರಮ ರಸ್ತೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು, ಬೈಕ್ ಜಖಂಗೊಂಡಿತ್ತು. ಮೊಬೈಲ್ ಒಡೆದು ಹೋಗಿತ್ತು. ಸತ್ಯ ಗೊತ್ತಾದರೆ ತನ್ನ ತಂದೆ ಕೋಪಿಸಿಕೊಳ್ಳುತ್ತಾರೆ ಎಂದು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನೇ ಷೇವಿಂಗ್ ಬ್ಲೆಡ್‌ ನಿಂದ ತನ್ನ ಎಡಗೈ, ಎಡಭುಜಕ್ಕೆ ಕೊಯ್ದುಕೊಂಡು ಗಾಯ ಮಾಡಿಕೊಂಡು ತನ್ನ ತಂದೆ ಹಾಗೂ ಸ್ನೇಹಿತರಿಗೆ ಕರೆಮಾಡಿ ಸುಳ್ಳು ಮಾಹಿತಿ ನೀಡಿದ್ದಾನೆ. ನಂತರ ಆತನ ತಂದೆ ಮಗನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.

ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ಮೇಲೆ ದಾಳಿ, ಇಬ್ಬರ ವಶ

ಹಣದ ಆಮಿಷವೊಡ್ಡಿ ಅಸಹಾಯಕ ಹೆಣ್ಣು ಮಕ್ಕಳಿಂದ ಬಲವಂತವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್ ನ ಸ್ವಾಗತಕಾರ ಮತ್ತು ಮತ್ತೊಬ್ಬ ಆರೋಪಿಯನ್ನು ಜೀವನ್ ಭೀಮಾ ನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೀವನ್ ಭೀಮಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಮರ ಜ್ಯೋತಿ ಲೇಔಟ್ ನ ಹೋಟೆಲ್‌ ವೊಂದರಲ್ಲಿ ಅಮಾಯಕ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುತ್ತದೆ.

ಪೊಲೀಸರು ಓರ್ವ ಬಾತ್ಮೀದಾರನ ಮೂಲಕ ಗಿರಾಕಿಯಂತೆ, ದಂಧೆ ನಡೆಸುತ್ತಿದ್ದ ಆರೋಪಿಯೊಂದಿಗೆ ಮೊಬೈಲ್ ಮುಖಾಂತರ ಸಂಪರ್ಕಿಸಿ ವ್ಯವಹಾರ ಕುದುರಿಸಿಕೊಂಡು ಆತನ ಸೂಚನೆಯಂತೆ ಹೋಟೆಲ್‌ಗೆ ಹೋಗಿ ವ್ಯವಹಾರ ಕುದುರಿಸುತ್ತಾರೆ. ಹೋಟೆಲ್ ಸ್ವಾಗತಕಾರ ಮತ್ತೊಬ್ಬರೊಂದಿಗೆ ಮಾತನಾಡಿ ಖಚಿತಪಡಿಸಿಕೊಂಡ ನಂತರ ಬಾತ್ಮೀದಾರನಿಂದ ಹಣ ಪಡೆದು ಯುವತಿ ಇದ್ದ ಕೊಠಡಿಗೆ ಕಳುಹಿಸುತ್ತಾನೆ.

ಕೂಡಲೇ ಪೊಲೀಸರು ಹೋಟೆಲ್ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿ ಸ್ವಾಗತಕಾರ ಮತ್ತು ಮತ್ತೊಬ್ಬನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner