ಬೆಂಗಳೂರಿನಲ್ಲಿ ಶಿಕ್ಷಕರು, ವೈದ್ಯರ ಮುಷ್ಕರ ಶುರು, ಶಾಲೆಗಳಲ್ಲಿ ಪಾಠಕ್ಕೆ ತೊಂದರೆ, ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಕಷ್ಟ-bengaluru news primary school teachers and resident doctors announce work strike demanding pay parity mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನಲ್ಲಿ ಶಿಕ್ಷಕರು, ವೈದ್ಯರ ಮುಷ್ಕರ ಶುರು, ಶಾಲೆಗಳಲ್ಲಿ ಪಾಠಕ್ಕೆ ತೊಂದರೆ, ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಕಷ್ಟ

ಬೆಂಗಳೂರಿನಲ್ಲಿ ಶಿಕ್ಷಕರು, ವೈದ್ಯರ ಮುಷ್ಕರ ಶುರು, ಶಾಲೆಗಳಲ್ಲಿ ಪಾಠಕ್ಕೆ ತೊಂದರೆ, ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಕಷ್ಟ

ಬೆಂಗಳೂರಿನಲ್ಲಿ ಇಂದಿನಿಂದ ಶಿಕ್ಷಕರು ಮತ್ತು ವೈದ್ಯರ ಮುಷ್ಕರ ಶುರುವಾಗಿದೆ. ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮತ್ತು ಊಟಕ್ಕೆ ತೊಂದರೆಯಾಗಿದೆ. ಅಂತೆಯೇ ಆಸ್ಪತ್ರೆಗಳಲ್ಲಿ ಹೊರ ರೋಗಿಗಳಿಗೆ ಕಷ್ಟ ಉಂಟಾಗಿದೆ. ಮುಷ್ಕರ ನಿರತರ ಬೇಡಿಕೆಗಳಾದರೂ ಏನು? ಇಲ್ಲಿದೆ ವಿವರ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರಿನಲ್ಲಿ ಶಿಕ್ಷಕರು, ವೈದ್ಯರ ಮುಷ್ಕರ ಶುರು, ಶಾಲೆಗಳಲ್ಲಿ ಪಾಠಕ್ಕೆ ತೊಂದರೆ, ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಕಷ್ಟ. (ಸಾಂಕೇತಿಕ ಚಿತ್ರ)
ಬೆಂಗಳೂರಿನಲ್ಲಿ ಶಿಕ್ಷಕರು, ವೈದ್ಯರ ಮುಷ್ಕರ ಶುರು, ಶಾಲೆಗಳಲ್ಲಿ ಪಾಠಕ್ಕೆ ತೊಂದರೆ, ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಕಷ್ಟ. (ಸಾಂಕೇತಿಕ ಚಿತ್ರ) (MRT)

ಬೆಂಗಳೂರು: ಇಂದಿನಿಂದ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ನಿವಾಸಿ ವೈದ್ಯರು ಮುಷ್ಕರ ಆರಂಭಿಸಿದ್ದಾರೆ. ಇಬ್ಬರ ಬೇಡಿಕೆಯೂ ಒಂದೇ, ವೇತನ ತಾರತಮ್ಯ. ಇತರ ರಾಜ್ಯಗಳ ನಿವಾಸಿ ವೈದ್ಯರಿಗೆ ನೀಡುತ್ತಿರುವ ಸ್ಟೈಫಂಡ್‌ ಗೂ ಕರ್ನಾಟಕದಲ್ಲಿ ನೀಡುತ್ತಿರುವ ಸ್ಟೈಫಂಡ್‌ ಗೂ ವ್ಯತ್ಯಾಸವಿರುವ ಕಾರಣ ಪ್ರತಿಭಟನೆ ನಡೆದಿದೆ. ಮೂರು ದಿನಗಳ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು ಮುಷ್ಕರ ಅನಿವಾರ್ಯ ಎಂದು ಶಿಕ್ಷಕರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಾ ಬರಲಾಗಿದ್ದರೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿದ್ದವು.

ಶಿಕ್ಷಕರ ಪ್ರತಿಭಟನೆ ಮತ್ತು ಅದಕ್ಕೆ ಕಾರಣಗಳಿವು

ಪದವಿ ಪೂರ್ಣಗೊಳಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಘೋಷಿಸಬೇಕು. 2017ರ ಹೊಸ ವೃಂದ ಮತ್ತು ನೇಮಕಾತಿಗಳನ್ನು 2016ರ ಮೊದಲು ನೇಮಕೊಗೊಂಡವರಿಗೆ ಪೂರ್ವಾನ್ವಯಗೊಳಿಸಬಾರದು ಎನ್ನುವುದು ಇವರ ಪ್ರಮುಖ ಬೇಡಿಕೆಯಾಗಿದೆ.

ಪದವಿ ಪೂರ್ಣಗೊಳಿಸಿರುವ ಶಿಕ್ಷಕರನ್ನು ಪದವೀಧರ ಶಿಕ್ಷರೆಂದು ಪರಿಗಣಿಸಿ ಮುಂದಿನ ಅವರ ಸೇವಾ ಬಡ್ತಿಗೆ ಪರಿಗಣಿಸಬೇಕು. ಅದೇ ರೀತಿ 2017ರ ಹೊಸ ನಿಯಮ ಜಾರಿಗೆ ಬಂದ ನಂತರ 1ರಿಂದ 7ನೇ ತರಗತಿವರೆಗಿನ ಭೋದನೆಗೆಂದು ನೇಮಕಾತಿ ಮಾಡಿಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪಿಎಸ್‌ ಟಿ ಎಂದು ಪರಿಗಣಿಸಿ 1ರಿಂದ 5ನೇ ತರಗತಿ ಬೋಧನೆಗೆ ಮಾತ್ರ ಸೀಮಿತ ಎಂದು ಹಿಂಬಡ್ತಿ ನೀಡಲಾಗಿದೆ. ಇದರಿಂದ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡುವಲ್ಲಿ ಅನ್ಯಾಯವಾಗುತ್ತಾ ಬಂದಿದೆ. ಈ ಎಲ್ಲ ಸಮಸ್ಯೆಗಳು ಮತ್ತು ಅನ್ಯಾಯವನ್ನು ಬಗೆಹರಿಸುವಂತೆ ಮನವಿ ಮಾಡಿಕೊಳ್ಳುತ್ತಾ ಬರಲಾಗಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯ ಎಂದು ಶಿಕ್ಷಕರು ವಾದಿಸುತ್ತಾರೆ.

2016ಕ್ಕಿಂತ ಮುಂಚಿತವಾಗಿ ನೇಮಕಗೊಂಡ ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಅವಧಿ ಮುಗಿಯುವವರೆಗೂ ಈ ಹಿಂದಿನಂತೆ 1ರಿಂದ8ನೇ ತರಗತಿವರೆಗೆ ಬೋಧನೆಗೆ ಅವಕಾಶ ನೀಡಬೇಕು.

ಸೇವಾ ಜೇಷ್ಠತೆ ಮೇಲೆ ಅವರಿಗೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಈ ಹಿಂದಿನಂತೆಯೇ ಮುಖ್ಯ ಶಿಕ್ಷಕರ ಹುದ್ದಗೆ ಬಡ್ತಿ ನೀಡಬೇಕು. ಪದವೀಧರ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂಬ ಬೇಡಿಕೆಗಳನ್ನೂ ಮುಂದಿರಿಸಿದ್ದಾರೆ.

ಇದರಿಂದ ರಾಜ್ಯದ 1.30 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗುತ್ತದೆ.ಇದರಿಂದ 48 ಸಾವಿರ ಪ್ರಾಥಮಿಕ ಶಾಲೆಗಳು ಇಂದಿನಿಂದ ಬಾಗಿಲು ಮುಚ್ಚಲಿವೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶಿಕ್ಷಕರ ಮುಷ್ಕರ ಆರಂಭವಾಗಲಿದೆ.

ಹೆಚ್ಚಿನ ಸ್ಟೈಫಂಡ್‌ ಗೆ ಆಗ್ರಹಿಸಿ ವೈದ್ಯರ ಮುಷ್ಕರ

ಮತ್ತೊಂದು ಕಡೆ ರಾಜ್ಯದ ಆಸ್ಪತ್ರೆಗಳ ನಿವಾಸಿ ವೈದ್ಯರೂ ಮುಷ್ಕರ ಆರಂಭಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇಂಟರ್ನ್‌ ಶಿಪ್‌ ಮಾಡುತ್ತಿರುವ ಸ್ನಾತಕೋತ್ತರ ಪದವೀಧರ ವೈದ್ಯರು, ಸೂಪರ್‌ ಸ್ಪೆಷಾಲಿಟಿ ನಿವಾಸಿ ವೈದ್ಯರು ಮತ್ತು ಹಿರಿಯ ನಿವಾಸಿ ವೈದ್ಯರು ರಾಜ್ಯ ನಿವಾಸಿ ವೈದ್ಯರ ಸಂಘದ ಸದಸ್ಯರಾಗಿರುತ್ತಾರೆ.

ಇತರ ರಾಜ್ಯಗಳ ನಿವಾಸಿ ವೈದ್ಯರಿಗೆ ನೀಡುತ್ತಿರುವ ಸ್ಟೈಫಂಡ್‌ ಗೂ ಕರ್ನಾಟಕದಲ್ಲಿ ನೀಡುತ್ತಿರುವ ಸ್ಟೈಫಂಡ್‌ ಗೂ ವ್ಯತ್ಯಾಸವಿದೆ. ಆದ್ದರಿಂದ ಇತರೆ ರಾಜ್ಯಗಳಿಗೆ ಸರಿಸಮನಾಗಿ ಸ್ಟೈಫಂಡ್‌ ನೀಡಬೇಕು ಎನ್ನುವುದು ಇವರ ಬೇಡಿಕೆಯಾಗಿದೆ.

ಬೇರೆ ರಾಜ್ಯಗಳ ವೈದ್ಯರು ಪಡೆಯುತ್ತಿರುವ ಸ್ಟೈಫಂಡ್‌ ಗೂ ರಾಜ್ಯದ ವೈದ್ಯರು ಪಡೆಯುತ್ತಿರುವ ಸ್ಟೈಫಂಡ್‌ ಗೂ ಶೇ.50ರಷ್ಟು ವ್ಯತ್ಯಾಸವಿದೆ. ಜೀವನ ನಡೆಸಲು, ಶೈಕ್ಷಣಿಕ ವೆಚ್ಚ, ಮತ್ತು ಕಟುಂಬದ ಅಗತ್ಯಗಳನ್ನು ಪೂರೈಸಲು ಈ ಮೊತ್ತ ಸಾಕಾಗುವುದಿಲ್ಲ. ಅಗತ್ಯ ಸೇವೆ ಮತ್ತು ದಿನವಿಡೀ ಸೇವೆ ಸಲ್ಲಿಸುತ್ತಿದ್ದರೂ ಈ ಮೊತ್ತ ಸಾಕಾಗುವುವುದಿಲ್ಲ. ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಲೂ ಆಗುತ್ತಿಲ್ಲ ಎಂದು ವೈದ್ಯರು ವಾದಿಸುತ್ತಿದ್ದಾರೆ.

ಇವರ ಮುಷ್ಕರದಿಂದ ವಿಶೇಷವಾಗಿ ಹೊರ ರೋಗಿಗಳಿಗೆ ತೊಂದರೆಯಾಗಲಿದ ಎಂದು ಭಾವಿಸಲಾಗಿದೆ.

(ವರದಿ- ಎಚ್.ಮಾರುತಿ, ಬೆಂಗಳೂರು)