Hebbal Flyover; ಹೆಬ್ಬಾಳ ಫ್ಲೈ ಓವರ್ ಸಂಚಾರವೇ ಒಂದು ಸಾಹಸ; ಜನಾಕ್ರೋಶಕ್ಕೆ ಕಾರಣವಾಗಿದೆ ಕಿರಿಕಿರಿ ಹೆಚ್ಚಿಸುವ ವಿಐಪಿ ಸಂಚಾರ-bengaluru news public outrage erupts over traffic chaos at hebbal flyover due to vip movement uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hebbal Flyover; ಹೆಬ್ಬಾಳ ಫ್ಲೈ ಓವರ್ ಸಂಚಾರವೇ ಒಂದು ಸಾಹಸ; ಜನಾಕ್ರೋಶಕ್ಕೆ ಕಾರಣವಾಗಿದೆ ಕಿರಿಕಿರಿ ಹೆಚ್ಚಿಸುವ ವಿಐಪಿ ಸಂಚಾರ

Hebbal Flyover; ಹೆಬ್ಬಾಳ ಫ್ಲೈ ಓವರ್ ಸಂಚಾರವೇ ಒಂದು ಸಾಹಸ; ಜನಾಕ್ರೋಶಕ್ಕೆ ಕಾರಣವಾಗಿದೆ ಕಿರಿಕಿರಿ ಹೆಚ್ಚಿಸುವ ವಿಐಪಿ ಸಂಚಾರ

Traffic Chaos at Hebbal Flyover; ಬೆಂಗಳೂರಲ್ಲಿ ಸಂಚಾರ ದಟ್ಟಣೆ ಕುಖ್ಯಾತಿ ಇರುವಂತಹ ಪ್ರದೇಶಗಳಲ್ಲಿ ಒಂದು ಈ ಹೆಬ್ಬಾಳ ಫ್ಲೈ ಓಔರ್‌. ಇಲ್ಲಿ ಸಂಚಾರವೇ ಒಂದು ಸಾಹಸ. ಹೀಗಿರುವಾಗ ಸಹಜವಾಗಿಯೇ ವಿಐಪಿ ಸಂಚಾರ ಕಿರಿಕಿರಿ ಉಂಟುಮಾಡುತ್ತದೆ. ಇದು ಜನಾಕ್ರೋಶಕ್ಕೂ ಕಾರಣವಾಗಿದೆ.

ಹೆಬ್ಬಾಳ ಫ್ಲೈ ಓವರ್ ಸಂಚಾರವೇ ಒಂದು ಸಾಹಸ; ಜನಾಕ್ರೋಶಕ್ಕೆ ಕಾರಣವಾಗಿದೆ ಕಿರಿಕಿರಿ ಹೆಚ್ಚಿಸುವ ವಿಐಪಿ ಸಂಚಾರ
ಹೆಬ್ಬಾಳ ಫ್ಲೈ ಓವರ್ ಸಂಚಾರವೇ ಒಂದು ಸಾಹಸ; ಜನಾಕ್ರೋಶಕ್ಕೆ ಕಾರಣವಾಗಿದೆ ಕಿರಿಕಿರಿ ಹೆಚ್ಚಿಸುವ ವಿಐಪಿ ಸಂಚಾರ (@vevck)

ಬೆಂಗಳೂರು: ಸಂಚಾರ ದಟ್ಟಣೆ ಬೆಂಗಳೂರಿಗೆ ಹೊಸದಲ್ಲ. ಕೆಲವು ರಸ್ತೆಗಳು ವಿಪರೀತ ಸಂಚಾರ ದಟ್ಟಣೆ ಹೊಂದಿದ್ದು, ಅಂತಹ ಕುಖ್ಯಾತಿ ಇರುವ ಒಂದು ಪ್ರದೇಶ ಹೆಬ್ಬಾಳ ಫ್ಲೈಓವರ್. ಸಂಚಾರ ದಟ್ಟಣೆ ಕಾರಣಕ್ಕೆ ಬೆಂಗಳೂರಿಗರು ಸಂಚರಿಸಲು ಸಂಕಟ ಪಡುವ ರಸ್ತೆ ಇದು. ಇಲ್ಲೀಗ ರಸ್ತೆ ನವೀಕರಣದ ಪ್ರಯತ್ನವೂ ನಡೆಯುತ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡ್ರಾಯಿಂಗ್ ಬೋರ್ಡ್‌ಗೆ ಮರಳಲು ಮತ್ತು ಪ್ರಸ್ತುತ ನಡೆಯುತ್ತಿರುವ ರ‍್ಯಾಂಪ್ ನಿರ್ಮಾಣ ಕಾಮಗಾರಿಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಬೇಕು ಎಂಬ ಒತ್ತಡವಿದೆ. ಮೊದಲ ಹಂತವು ಈ ವರ್ಷ ಕೊನೆಗೆ (ಡಿಸೆಂಬರ್ 2024) ಅಥವಾ ಜನವರಿ 2025 ರೊಳಗೆ ಪೂರ್ಣಗೊಳಿಸಬೇಕು ಎಂಬ ಗುರಿಯನ್ನು ಇಟ್ಟುಕೊಂಡು ಕೆಲಸ ಶುರುಮಾಡಿದ್ದಾರೆ.

ಬ್ಯಾಪ್ಟಿಸ್ಟ್ ಆಸ್ಪತ್ರೆ ಕಡೆಯಿಂದ ನಿರ್ಮಿಸಲಾಗುತ್ತಿರುವ ಹೊಸ ರ‍್ಯಾಂಪ್ ಅನ್ನು ಕೆಆರ್ ಪುರ ಕಡೆಯಿಂದ ಭಾಗಶಃ ಕೆಡವಲಾದ ಲೂಪ್‌ನೊಂದಿಗೆ ಜೋಡಿಸುವ ಕೆಲಸ ನಡೆದಿದೆ. ಇದು ನಾಗವಾರ ದಿಕ್ಕಿನಿಂದ ವಾಹನ ಸವಾರರು ಮೆಹಕ್ರಿ ವೃತ್ತದ ಕಡೆಗೆ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ.

ಇದೆಲ್ಲ ಏನೇ ಇದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಇಲ್ಲಿನ ಸಂಚಾರ ದಟ್ಟಣೆಗೆ ಪರಿಹಾರ ಇಲ್ಲ. ಆದರೆ ಕೆಲವು ವರ್ತನೆಗಳು ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚುವಂತೆ ಮಾಡಿದೆ ಎಂಬುದು ಜನಾಕ್ರೋಶಕ್ಕೆ ಕಾರಣವಾಗಿದೆ. ಇದರಲ್ಲಿ ಮುಖ್ಯವಾಗಿ ಹೆಬ್ಬಾಳ ಫ್ಲೈ ಓವರ್‌ನಲ್ಲಿ ವಿಐಪಿ ಸವಾರಿ ಗಮನಸೆಳೆದಿದೆ.

ಹೆಬ್ಬಾಳ ಫ್ಲೈಓವರ್ ಸಂಚಾರ ಕಿರಿಕಿರಿ ಹೆಚ್ಚಿಸುವ ವಿಐಪಿ ಸವಾರಿ

ಬೆಂಗಳೂರು ನಗರದ ಹೆಬ್ಬಾಳ ಫ್ಲೈಓವರ್ ಸಂಚಾರ ಕಿರಿಕಿರಿ ಹೆಚ್ಚಿಸುವ ವಿಐಪಿ ಸವಾರಿ ಕಡೆಗೆ ವಿವೇಕ್ ಎಂಬುವವರು ಗಮನಸೆಳೆದಿದ್ದಾರೆ. “ಈಗಾಗಲೇ ಸಂಚಾರದಟ್ಟಣೆ ಇರುವ ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಿವಿಐಪಿ ಸಂಚಾರದ ಕಾರಣ ಜನಸಾಮಾನ್ಯರು ಪರದಾಡಬೇಕಾಗಿದೆ. ಈಗ ವಿಮಾನ ನಿಲ್ದಾಣಕ್ಕೆ ಹೋಗುವ ಎಲಿವೇಟೆಡ್ ಫ್ಲೈಓವರ್‌ನಲ್ಲಿ ಸಂಚಾರವನ್ನು ನಿರ್ಬಂಧಿಸಿದ್ದಾರೆ” ಎಂದು ಇದಕ್ಕೆ ಸಂಬಂಧಿಸಿದ ವಿಡಿಯೋವನ್ನೂ ಶೇರ್ ಮಾಡಿದ್ಧಾರೆ.

ವಿವೇಕ್ ಅವರು ಶುಕ್ರವಾರ ಸಂಜೆ ಈ ಪೋಸ್ಟ್ ಮಾಡಿದ್ದು, ಹೆಬ್ಬಾಳ ಸಂಚಾರ ಪೊಲೀಸ್, ಬೆಂಗಳೂರು ಸಂಚಾರ ಪೊಲೀಸ್ ಖಾತೆಯನ್ನು ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದ ಪೋಸ್ಟ್‌ಗೆ ಬಹಳಷ್ಟು ಜನ ಕಾಮೆಂಟ್ ಮಾಡಿದ್ದಾರೆ.

ಹೆಬ್ಬಾಳ ಫ್ಲೈ ಓವರ್ ಸಂಚಾರ ದಟ್ಟಣೆ; ವಿವಿಐಪಿ ಸವಾರಿ ಕಿರಿಕಿರಿ ವಿರುದ್ಧ ಜನಾಕ್ರೋಶ

ಶಶಿ ಕುಮಾರ್ ಎಂಬುವವರು “ಹೆಬ್ಬಾಳ ಸಂಚಾರ ದಟ್ಟಣೆಗೆ ಇದುವೇ ಮುಖ್ಯ ಕಾರಣ. ವಿಐಪಿ ಸವಾರಿಗಾಗಿ ವಾಹನ ಸಂಚಾರ ತಡೆದು ಸಂಚಾರ ಪೊಲೀಸರೇ ಸಂಚಾರ ದಟ್ಟಣೆ ಹೆಚ್ಚಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಇಎಲ್‌ ಸರ್ಕಲ್‌ನಿಂದ ಮಾನ್ಯತಾ ಕಡೆಗೆ ಹೋಗಲು ಬೆಳಗ್ಗೆ ಪೀಕ್ ಅವರ್‌ನಲ್ಲಿ 20 ನಿಮಿಷ ಒಂದೆಡೆ ನಿಲ್ಲಬೇಕಾಗುತ್ತದೆ. ವಾಸ್ತವದಲ್ಲಿ 15 ರಿಂದ 20 ನಿಮಿಷದ ಪ್ರಯಾಣದ ದೂರ ಇದು” ಎಂದು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಜೀವನವನ್ನು ಆನಂದಿಸಲು ನೀವು ರಾಜಕಾರಣಿ ಅಥವಾ ಶ್ರೀಮಂತರಾಗಿರಬೇಕು. ಉಳಿದವರು ಶಾಶ್ವತವಾಗಿ ಹೋರಾಡಬಹುದು ಎಂದು ಅಸ್ಲಾಂ ಶೇಖ್ ಎಂಬುವವರು ಎಕ್ಸ್‌ನಲ್ಲಿ ಕಾಮೆಂಟ್ ಮಾಡಿದ್ದಾರೆ.

ಕಲ್ಯಾಣ್ ಕುಮಾರ್ ದೇಸಾಯಿ ಎಂಬುವವರು, ಅವರೇಕೆ ಹೆಲಿಕಾಪ್ಟರ್ ಬಳಸುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.

ಯಾರು ಆ ವಿಐಪಿ, ಮುಂದಿನ ಸಲ ಅವರಿಗೆ ಮತ ಚಲಾಯಿಸುವುದಿಲ್ಲ ನಾನು ಎಂದು ಶಿಬಂ ಸರ್ಕಾರ್ ಟ್ವೀಟ್ ಮಾಡಿದ್ದಾರೆ.

ರೋಮಿತ್ ಎಂಬುವವರು ಮೂರು ಚುಟುಕು ವಾಕ್ಯಗಳಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ - ತೆರಿಗೆ ಪಾವತಿಸುತ್ತ ಇರಿ, ಮತ ಚಲಾಯಿಸುತ್ತ ಇರಿ, ಬಾಯ್ಮಿಚ್ಚಿ ಮತ್ತು ಕೊರಗುತ್ತಿರಿ.

mysore-dasara_Entry_Point