ಕನ್ನಡ ಸುದ್ದಿ  /  ಕರ್ನಾಟಕ  /  Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುತ್ತಿದ್ದು, ರಣ ಬಿಸಿಲಿಗೆ ಬೆಂದಿದ್ದ ಜನರು ಫುಲ್ ಖುಷ್ ಆಗಿದ್ದಾರೆ. ಮಳೆಯ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಮೇ 3ರ ಶುಕ್ರವಾರ ಬೆಂಗಳೂರಿಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ರಣ ಬಿಸಿಲಿನಿಂದ ತತ್ತರಿಸಿದ್ದ ಜನರು ಫುಲ್ ಖುಷ್ ಆಗಿದ್ದಾರೆ.
ಮೇ 3ರ ಶುಕ್ರವಾರ ಬೆಂಗಳೂರಿಿನಲ್ಲಿ ಗುಡುಗು ಸಹಿತ ಮಳೆಯಾಗಿದೆ. ರಣ ಬಿಸಿಲಿನಿಂದ ತತ್ತರಿಸಿದ್ದ ಜನರು ಫುಲ್ ಖುಷ್ ಆಗಿದ್ದಾರೆ.

ಬೆಂಗಳೂರು: ರಣ ಬಿಸಿಲಿಗೆ ಬೆಂದು ಬೆಂಡಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರು ಜನರಿಗೆ ಇಂದು (ಮೇ 3, ಶುಕ್ರವಾರ) ಕೂಡ ವರುಣ ಕೃಪೆ ತೋರಿದ್ದು, ನಗರದ ಹಲವೆಗೆ ಮಧ್ಯಾಹ್ನದ ಬಳಿಕ ಮಳೆಯಾಗಿದೆ (Bangalore Rains). ಜೆಪಿ ನಗರ, ಪುಟ್ಟೇನಹಳ್ಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಕಳೆದ 6 ತಿಂಗಳ ಬಳಿಕ ನಗರದಲ್ಲಿ ಮಳೆಯಾಗುತ್ತಿದ್ದು, ಜನರು ಫುಲ್ ಖುಷ್ ಆಗಿದ್ದಾರೆ. ಕೆಲವರು ಮಳೆಯೂಂದಿಗೆ ಸೆಲ್ಫಿ ತೆಗೆದುಕೊಂಡರೆ ಇನ್ನೂ ಕೆಲವರು ಮಳೆ ಬೀಳುತ್ತಿರುವುದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ರಾತ್ರಿಯೂ ಮಳೆಯಾಗುವ ಸಾಕಷ್ಟು ಸಾಧ್ಯತೆಗಳಿವೆ. ನಿನ್ನೆಯೂ (ಮೇ 2, ಗುರುವಾರ) ಬೆಂಗಳೂರಿನ ಅಲ್ಲಲ್ಲಿ ಮಳೆಯಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಕೊನೆಗೂ ಬೆಂಗಳೂರಿಗೆ ಮಳೆ ಬಂತು ಎಂತ ರಿಲೀಫ್ ಇದು ಎಂದು ದೀಪ ಎಂಬುವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊ ಸಹಿತ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಕೊನೆಗೂ ಬೆಂಗಳೂರಿಗೆ ಮಳೆ ಬಂತು ಎಂದು ನಿವೇದಿತಾ ಝಾ ಎಂಬುವರು ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಏಪ್ರಿಲ್ 2ರ ಗುರುವಾರವೂ ಅಲ್ಲಲ್ಲಿ ಮಳೆಯಾಗಿತ್ತು. ನೂತನ ಎಂಬುವರು ಮತ್ತೆ ಮತ್ತೆ ಮಳೆಯ ಆಗಮನ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

2024ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಶೂನ್ಯ ಮಳೆ ದಾಖಲಾಗಿದ್ದು, ಹೀಗೆ ಮಳೆ ಇಲ್ಲದೆ ಏಪ್ರಿಲ್ ತಿಂಗಳು ಮುಗಿಸಿದ್ದು 4 ದಶಕಗಳಲ್ಲೇ ಮೊದಲು ಅಂತ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ನಗರದಲ್ಲಿ ದಾಖಲೆಯ ಪ್ರಮಾಣದಲ್ಲಿ ತಾಪಮಾನ ದಾಖಲಾಗುತ್ತಿದೆ. ಅದರಲ್ಲೂ ರಾತ್ರಿಯ ವೇಳೆಯೂ 25 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವುದು ಏಪ್ರಿಲ್ ತಿಂಗಳ ದಾಖಲೆಯಾಗಿತ್ತು. ನಿರೀಕ್ಷೆಯಂತೆ ಮೇ ತಿಂಗಳಲ್ಲಿ ಮಳೆಯಾಗುತ್ತಿರುವುದು ನಗರದ ಜನರನ್ನು ಕೊಂಚ ಕೂಲ್ ಆಗಿಸಿದೆ.

IPL_Entry_Point