ಕನ್ನಡ ಸುದ್ದಿ  /  Karnataka  /  Bengaluru News Rcb Vs Lsg Ipl Match At Chinnaswamy Stadium Today Bengaluru Traffic Police Issues Traffic Advisory Mrt

Traffic Advisory: ಬೆಂಗಳೂರಲ್ಲಿ ಇಂದು ಆರ್‌ಸಿಬಿ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ; ಪಾರ್ಕಿಂಗ್ ವಿವರ, ಕ್ಯಾಬ್‌ಗಳಿಗೆ ಪ್ರತ್ಯೇಕ ಸ್ಥಳ

ಬೆಂಗಳೂರಲ್ಲಿ ಇಂದು (ಏಪ್ರಿಲ್ 2) ಆರ್‌ಸಿಬಿ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ ನಡೆಯಲಿದೆ. ಹೀಗಾಗಿ ಸುಗಮ ಸಂಚಾರ ನಿರ್ವಹಣೆಗಾಗಿ ಪಾರ್ಕಿಂಗ್ ಸ್ಥಳ, ಕ್ಯಾಬ್‌ಗಳಿಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಅದರ ವಿವರ ಇಲ್ಲಿದೆ. (ವರದಿ - ಎಚ್. ಮಾರುತಿ, ಬೆಂಗಳೂರು)

ಬೆಂಗಳೂರಲ್ಲಿ ಇಂದು ಆರ್‌ಸಿಬಿ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ; ಪಾರ್ಕಿಂಗ್ ವಿವರ
ಬೆಂಗಳೂರಲ್ಲಿ ಇಂದು ಆರ್‌ಸಿಬಿ vs ಎಲ್‌ಎಸ್‌ಜಿ ಐಪಿಎಲ್ ಪಂದ್ಯ; ಪಾರ್ಕಿಂಗ್ ವಿವರ

ಬೆಂಗಳೂರು: ಟಾಟಾ ಐಪಿಎಲ್ 2024ರ ಸರಣಿಯ ರಾಯಲ್‌ ಚಾಲೆಂಜರ್ಸ್ ಬೆಂಗಳೂರು vs ಲಕ್ನೋ ಸೂಪರ್ ಜೈಂಟ್ಸ್‌ ಪಂದ್ಯ (RCB vs LSG IPL match) ಇಂದು (ಏಪ್ರಿಲ್ 2) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ನಂತರ 3 ಗಂಟೆಯಿಂದ ರಾತ್ರಿ 11 ಗಂಟೆ ತನಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಐಪಿಎಲ್ ಪಂದ್ಯದ ಕಾರಣ ವಾಹನಗಳ ನಿಲುಗಡೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಕ್ರೀಡಾಂಗಣದ ಸುತ್ತ ಮುತ್ತಲಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಆದರೆ ಕ್ರಿಕೆಟ್ ಪ್ರೇಮಿಗಳ ಅನುಕೂಲಕ್ಕಾಗಿ ಸಾರ್ವಜನಿಕ ವಾಹನಗಳ ನಿಲುಗಡೆಗೆ ಕೆಲವು ಸ್ಥಳಗಳನ್ನು ಗುರುತಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಇಂದು (ಏ.2) ಇಲ್ಲಿ ವಾಹನ ನಿಲುಗಡೆ ನಿಷೇಧ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಇರುವ ಕಾರಣ ಕ್ರೀಡಾಂಗಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಾಹನ ನಿಲುಗಡೆ ನಿಷೇಧ ಮಾಡಿರುವ ಪ್ರದೇಶಗಳ ವಿವರ ಹೀಗಿದೆ -

ಕ್ವೀನ್ಸ್ ರಸ್ತೆ, ಎಂ.ಜಿ ರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆ.

ಇಂದು (ಏ.2) ಇಲ್ಲಿ ಪಾರ್ಕ್‌ ಮಾಡಬಹುದು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್‌ಸಿಬಿ ವರ್ಸಸ್ ಎಲ್‌ಎಸ್‌ಜಿ ಐಪಿಎಲ್ ಪಂದ್ಯ ವೀಕ್ಷಣಗೆ ಬರುವವರು ತಮ್ಮ ವಾಹನಗಳನ್ನು ಪಾರ್ಕ್‌ ಮಾಡುವುದಕ್ಕೆ ಕೆಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಅಲ್ಲೇ ವಾಹನ ಪಾರ್ಕ್ ಮಾಡಬೇಕು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕ್ ಮಾಡಬಹುದಾದ ನಿರ್ದಿಷ್ಟ ಸ್ಥಳಗಳ ವಿವರ ಹೀಗಿದೆ -

ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಯುಬಿ ಸಿಟಿ ಪಾರ್ಕಿಂಗ್ ಸ್ಥಳ, ಬಿಎಂಟಿಸಿ ಬಸ್ ನಿಲ್ದಾಣದ ಮೊದಲನೆ ಮಹಡಿ ಮತ್ತು ಓಲ್ಡ್ ಕೆಜಿಐಡಿ ಬಿಲ್ಡಿಂಗ್, ಕಿಂಗ್ಸ್ ರಸ್ತೆ, (ಕಬ್ಬನ್ ಪಾರ್ಕ್ ಒಳಭಾಗ).

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರೀಡಾಭಿಮಾನಿಗಳನ್ನು ಕರೆದುಕೊಂಡು ಬರುವ ಓಲಾ, ಉಬರ್, ಆಟೋ ಇತ್ಯಾದಿ ಕ್ಯಾಬ್‌ಗಳು ಪಿಕ್ ಆಪ್ ಮತ್ತು ಟ್ರಾಪ್ ಮಾಡಲು ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದೆ.

ಕ್ಯಾಬ್‌ಗಳು ರಾಜಭವನ ರಸ್ತೆಯ ಸಿ ಟಿ ಓ ಜಂಕ್ಷನ್ ಮತ್ತು ಬಿ ಆರ್ ವಿ ಮೈದಾನದ ಬಳಿ ಪಿಕ್ ಅಪ್ ಮಾಡಬೇಕು. ಕಬ್ಬನ್ ಪಾರ್ಕ್ ಮೆಟ್ರೋ ಹಾಗೂ ಆರ್ ವಿ ಮೈದಾನದ ಗೇಟ್ ನಂ. 6 ರ ಬಳಿ ಡ್ರಾಪ್ ಮಾಡಬೇಕು.

ಇಂದಿನ ಐಪಿಎಲ್ ಪಂದ್ಯದ ಬಗ್ಗೆ ಒಂದಿಷ್ಟು

ಐಪಿಎಲ್ 17ನೇ ಸೀಸನ್ ನ 15ನೇ ಪಂದ್ಯ ಏಪ್ರಿಲ್ 2 ರಂದು ರಾತ್ರಿ 7:30ಕ್ಕೆ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡ ಮುಖಾಮುಖಿಯಾಗಲಿವೆ.

ಈ ಸೀಸನ್ ನಲ್ಲಿ ಈ ಪಂದ್ಯ ಲಕ್ನೋಗೆ 3ನೇ ಮತ್ತು ಆರ್‌ಸಿಬಿಗೆ 4ನೇ ಪಂದ್ಯವಾಗಿದೆ. ಲಕ್ನೋ ಮತ್ತು ಬೆಂಗಳೂರು ಎರಡೂ ತಂಡಗಳು ಇದುವರೆಗೂ ಆಡಿರುವ ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದಿವೆ. ಅಂಕಪಟ್ಟಿಯಲ್ಲಿ ಲಕ್ನೋ ತಂಡ ಆರನೇ ಮತ್ತು ಆರ್‌ಸಿಬಿ ಒಂಬತ್ತನೇ ಸ್ಥಾನದಲ್ಲಿದೆ.

(ವರದಿ - ಎಚ್. ಮಾರುತಿ, ಬೆಂಗಳೂರು)

------------------------------------------

ಐಪಿಎಲ್‌ 2024, ಐಪಿಎಲ್ ಶೆಡ್ಯೂಲ್ 2024, ಐಪಿಎಲ್‌ 2024 ಪಾಯಿಂಟ್ಸ್‌ ಟೇಬಲ್, ಐಪಿಎಲ್ 2024 ಆರೆಂಜ್‌ ಕ್ಯಾಪ್, ಐಪಿಎಲ್ 2024 ಪರ್ಪಲ್‌ ಕ್ಯಾಪ್, ಐಪಿಎಲ್‌ 2024 ಟೀಮ್‌ ಸ್ಟಾಟ್, ಐಪಿಎಲ್‌ 2024 ಪ್ಲೇಯರ್‌ ಸ್ಟಾಟ್ಸ್, ಸೇರಿದಂತೆ ಕ್ರಿಕೆಟ್ ಸುದ್ದಿ, ಲೈವ್ ಕ್ರಿಕೆಟ್ ಸ್ಕೋರ್‌ಗಳು, ಐಪಿಎಲ್ ವೇಳಾಪಟ್ಟಿ, ಮ್ಯಾಚ್ ಅಪ್‌ಡೇಟ್‌, ಕ್ರಿಕೆಟ್ ವೇಳಾಪಟ್ಟಿ ನೋಡಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರಿಕೆಟ್ ವಿಭಾಗ ನೋಡಿ.

IPL_Entry_Point