ಕನ್ನಡ ಸುದ್ದಿ  /  Karnataka  /  Bengaluru News Reach Bengaluru Airport In Just 90 Minutes By Train Ticket Fare Timings And Other Dets Uks

Bengaluru News: ಬೆಂಗಳೂರು ವಿಮಾನ ನಿಲ್ದಾಣ ತಲುಪಲು 90 ನಿಮಿಷ ಸಾಕು ಈ ರೈಲಿಗೆ, ಟಿಕೆಟ್ ದರ, ಸಮಯ ಇತ್ಯಾದಿ ವಿವರ ಇಲ್ಲಿದೆ

ಬೆಂಗಳೂರು ಮೆಜೆಸ್ಟಿಕ್‌, ಯಶವಂತಪುರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ರೈಲು ಸೇವೆ ಲಭ್ಯ ಇವೆ. 8 ರೈಲುಗಳು ಸಂಚರಿಸುತ್ತಿದ್ದು, ಇದರ ಪ್ರಯಾಣದರ ಮತ್ತು ಪ್ರಯಾಣ ಅವಧಿ, ಅನುಕೂಲಕರವಾಗಿದ್ದು ನಿಧಾನವಾಗಿ ಜನಪ್ರಿಯವಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣ ತಲುಪಲು 90 ನಿಮಿಷ ಸಾಕು ಈ ರೈಲಿಗೆ, ಟಿಕೆಟ್ ದರ, ಸಮಯ ಇತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ನೇರ ರೈಲು ಸಂಚಾರ (ಸಾಂಕೇತಿಕ ಚಿತ್ರ)
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ನೇರ ರೈಲು ಸಂಚಾರ (ಸಾಂಕೇತಿಕ ಚಿತ್ರ)

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ತಲುಪುವುದಕ್ಕೆ ಹರಸಾಹಸ ಪಡಬೇಕಾಗಿಲ್ಲ. ಈ ರೈಲು ಹತ್ತಿದರೆ ಟ್ರಾಫಿಕ್ ಕಿರಿಕಿರಿಯೂ ಇಲ್ಲ. ಜೇಬಿಗೆ ಹೊರೆಯೂ ಆಗಲ್ಲ. ನೈಋತ್ಯ ರೈಲ್ವೆಯು ವಿವಿಧ ರೈಲ್ವೆ ನಿಲ್ದಾಣಗಳಿಂದ ವಿಮಾನ ನಿಲ್ಧಾಣಕ್ಕೆ ಸಂಪರ್ಕ ಕಲ್ಪಿಸುವ 8 ರೈಲುಗಳನ್ನು ಪರಿಚಯಿಸಿದೆ. ಇವೆಲ್ಲವೂ 90 ನಿಮಿಷದಲ್ಲಿ ವಿಮಾನ ನಿಲ್ದಾಣದ ರೈಲ್ವೆ ನಿಲ್ದಾಣಕ್ಕೆ ತಲುಪುತ್ತವೆ ಎಂಬುದು ವಿಶೇಷ.

ಆದರೆ, ಮೆಟ್ರೋ ಸಂಪರ್ಕವಿರುವ ಪ್ರದೇಶಗಳಿಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸುವಂತೆ ಪ್ರಯಾಣಿಕರು ಸಲಹೆ ನೀಡಿದ್ದಾರೆ. ಇದಲ್ಲದೆ, ಯಶವಂತಪುರ ಜಂಕ್ಷನ್ ತನಕ ಮಾತ್ರ ಹೋಗುವ ಕಾರಣ, ಮೆಟ್ರೋ ಸೇವೆಯನ್ನು ವಿಸ್ತರಿಸುವಂತೆಯೂ ಆಗ್ರಹಿಸುತ್ತಿದ್ದಾರೆ. ಈ ಸವಾಲುಗಳು ಒಂದೆಡೆಯಾದರೆ, ಇನ್ನೊಂದೆರಡ ಈ ರೈಲು ಸೇವೆಯ ಕುರಿತು ಕಡಿಮೆ ಜಾಗೃತಿ ಕಾರಣ ಹೆಚ್ಚು ಪ್ರಚಾರ ಪಡೆದಿಲ್ಲ. ಆದಾಗ್ಯೂ ಇದು ಜನರಿಗೆ ಬೇಗ ವಿಮಾನ ನಿಲ್ದಾಣ ತಲುಪಲು ನೆರವಾಗುತ್ತಿರುವುದು ನಿಜ ಎನ್ನುತ್ತಿದೆ ವರದಿ.

ಏರ್‌ಪೋರ್ಟ್‌ ಟ್ಯಾಕ್ಸಿಗೆ 1000 ರೂಪಾಯಿ ಇದ್ದರೆ ಈ ರೈಲಿನ ಟಿಕೆಟ್ ದರ 10 ರೂಪಾಯಿ

ಬೆಂಗಳೂರು ನಗರದಿಂದ (ಮೆಜೆಸ್ಟಿಕ್) ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನೇರ ರೈಲು ಪ್ರಯಾಣ ದರ 10 ರೂಪಾಯಿ. ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ರೈಲು ಪ್ರಯಾಣ ದರ 15 ರೂಪಾಯಿ. ವಿಮಾನ ನಿಲ್ದಾಣವನ್ನು ತಲುಪಲು ಇದು ಅತ್ಯಂತ ಅಗ್ಗದ ಮಾರ್ಗವಾಗಿದೆ.

ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿ ದರ 600 ರೂಪಾಯಿಯಿಂದ 1,000 ರೂಪಾಯಿ ಇದೆ. ಆದಾಗ್ಯೂ, ಪ್ರಯಾಣಿಕರು ರೈಲನ್ನು ತೆಗೆದುಕೊಂಡ ನಂತರ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಶಟಲ್ ಬಸ್‌ ಸೇವೆಯನ್ನು ಪಡೆಯಬೇಕಾಗುತ್ತದೆ. ರೈಲು ವೇಳಾಪಟ್ಟಿಯ ಪ್ರಕಾರ, ಭಾನುವಾರ ಹೊರತುಪಡಿಸಿ ವಾರದಲ್ಲಿ ಆರು ದಿನ ರೈಲುಗಳು ಚಲಿಸುತ್ತವೆ.

ಕೆಂಪೇಗೌಡ ವಿಮಾನ ನಿಲ್ಧಾಣಕ್ಕೆ ನೇರ ರೈಲುಗಳ ವೇಳಾಪಟ್ಟಿ

ಮೆಜೆಸ್ಟಿಕ್‌ನಿಂದ ಬೆಳಗ್ಗೆ 4.45ಕ್ಕೆ ಹೊರಟು ಕೆಐಎಗೆ ಬೆಳಗ್ಗೆ 5.50ಕ್ಕೆ ತಲುಪುತ್ತದೆ.

ಯಲಹಂಕದಿಂದ ಬೆಳಗ್ಗೆ 7ಕ್ಕೆ ಹೊರಟು ಕೆಐಎಗೆ ಬೆಳಗ್ಗೆ 7.20ಕ್ಕೆ ತಲುಪುತ್ತದೆ

ಯಶವಂತಪುರ ದಿಂದ ಬೆಳಗ್ಗೆ 8.30ಕ್ಕೆ ಹೊರಟು ಕೆಐಎಗೆ 9.17ಕ್ಕೆ ತಲುಪುತ್ತದೆ

ಕಂಟೋನ್ಮೆಂಟ್‌ನಿಂದ ಬೆಳಗ್ಗೆ 5.55ಕ್ಕೆ ಹೊರಟು ಕೆಐಎಗೆ 6.50ಕ್ಕೆ ತಲುಪುತ್ತದೆ

ಮೆಜೆಸ್ಟಿಕ್‌ನಿಂದ ರಾತ್ರಿ 9 ಗಂಟೆಗೆ ಹೊರಟು ಕೆಐಎಗೆ ರಾತ್ರಿ 10.05ಕ್ಕೆ ತಲುಪುತ್ತದೆ.

ಕೆಂಪೇಗೌಡ ವಿಮಾನ ನಿಲ್ಧಾಣದಿಂದ ನೇರ ರೈಲುಗಳ ವೇಳಾಪಟ್ಟಿ

ಕೆಐಎನಿಂದ ಬೆಳಗ್ಗೆ 6.22ಕ್ಕೆ ಹೊರಟು ಯಲಹಂಕಕ್ಕೆ 6.05ಕ್ಕೆ ತಲುಪುತ್ತದೆ.

ಕೆಐಎನಿಂದ ಬೆಳಗ್ಗೆ 7.45ಕ್ಕೆ ಹೊರಟು ಕಂಟೋನ್ಮೆಂಟ್‌ಗೆ 8.50ಕ್ಕೆ ತಲುಪುತ್ತದೆ.

ಕೆಐಎನಿಂದ ಬೆಳಗ್ಗೆ 8.21ಕ್ಕೆ ಹೊರಟು ಯಶವಂತಪುರಕ್ಕೆ 9.25ಕ್ಕೆ ತಲುಪುತ್ತದೆ.

ಕೆಐಎನಿಂದ ಸಂಜೆ 6.43ಕ್ಕೆ ಹೊರಟು ಮೆಜೆಸ್ಟಿಕ್‌ಗೆ 8.20ಕ್ಕೆ ತಲುಪುತ್ತದೆ.

ಕೆಐಎನಿಂದ ರಾತ್ರಿ 10.37ಕ್ಕೆ ಹೊರಟು ಮೆಜೆಸ್ಟಿಕ್‌ಗೆ 11.55ಕ್ಕೆ ತಲುಪುತ್ತದೆ.

ರೈಲು ಸಂಖ್ಯೆ 06269/06270 ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡಲಿದೆ. 5:55 ಕ್ಕೆ ಮತ್ತು ಒಂದು ನಿಮಿಷದ ನಿಲುಗಡೆಯೊಂದಿಗೆ 6:50 ಕ್ಕೆ ಕೆಂಪೇಗೌಡ ನಿಲ್ದಾಣಕ್ಕೆ ತಲುಪುತ್ತದೆ. ಪ್ರಯಾಣಿಕರು ಬೆಂಗಳೂರು ಪೂರ್ವ, ಬೈಯ್ಯಪ್ಪನಹಳ್ಳಿ, ಚನ್ನಸಂದ್ರ, ಯಲಹಂಕ, ಬೆಟ್ಟಹಲಸೂರು ಮತ್ತು ದೊಡ್ಡಜಾಲದಿಂದ ಈ ರೈಲನ್ನು ಹತ್ತಬಹುದು.

ರೈಲು ಸಂಖ್ಯೆ 06279/06280 ಯಶವಂತಪುರದಿಂದ ಬೆಳಿಗ್ಗೆ 8:30 ಕ್ಕೆ ಹೊರಟು 9:17 ಕ್ಕೆ ವಿಮಾನ ನಿಲ್ದಾಣವನ್ನು ತಲುಪುತ್ತದೆ. ವಿಮಾನ ನಿಲ್ದಾಣದಿಂದ, ರೈಲು 8:21 ಕ್ಕೆ ವಿಮಾನ ನಿಲ್ದಾಣದ ನಿಲುಗಡೆ ನಿಲ್ದಾಣದಿಂದ ಹೊರಡುತ್ತದೆ, ದೊಡ್ಡಜಾಲ, ಬೆಟ್ಟಹಲಸೂರು, ಯಲಹಂಕ, ಕೊಡಿಗೇಹಳ್ಳಿ, ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿಲುಗಡೆ ಮತ್ತು 9:25 ಕ್ಕೆ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ. ಇನ್ನೊಂದು ರೈಲು ವಿಮಾನ ನಿಲ್ದಾಣದಿಂದ ಸಂಜೆ 6:43ಕ್ಕೆ ಹೊರಟು ರಾತ್ರಿ 8:20ಕ್ಕೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point