ವಿಂಟೇಜ್ ಸೀಲಿಂಗ್ ಫ್ಯಾನ್‍ಗೆ ಆಧುನಿಕ ಟಚ್; ರೆಸ್ಟೋರೆಂಟ್ ಪ್ಲಾನ್‌ಗೆ ಗ್ರಾಹಕರು ಫಿದಾ, ರಾತ್ರಿ ಭಯಾನಕವಾಗಿ ಕಾಣುತ್ತೆ ಎಂದ ನೆಟ್ಟಿಗರು
ಮಾರುಕಟ್ಟೆಗೆ ರಿಮೋಟ್ ಕಂಟ್ರೋಲ್ ಸೇರಿದಂತೆ ಹೈಟೆಕ್ ಫ್ಯಾನ್‍ಗಳು ಲಗ್ಗೆಯಿಟ್ಟಿವೆ. ತಮ್ಮ ಬಜೆಟ್‍ಗನುಗುಣವಾಗಿ ಹಲವರು ಸೀಲಿಂಗ್ ಫ್ಯಾನ್‍ಗಳನ್ನು ಆಯ್ಕೆ ಮಾಡುತ್ತಾರೆ. ಆದರೆ, ಇಲ್ಲೊಂದು ರೆಸ್ಟೋರೆಂಟ್ ಹಳೆಯ ಕಾಲದತ್ತ ಕರೆದೊಯ್ದಿದೆ. ವಿಂಟೇಜ್ ಶೈಲಿಯ ಸೀಲಿಂಗ್ ಫ್ಯಾನ್‍ಗೆ ಆಧುನಿಕ ಸ್ಪರ್ಶ ಕೊಡಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರು: ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಮಾರುಹೋಗುತ್ತಿರುವುದು ಎಲ್ಲರಿಗೂ ತಿಳಿದಿದ್ದೇ. ಅದರಲ್ಲೂ ರೆಸ್ಟೋರೆಂಟ್‍ಗಳಂತೂ ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು, ಗ್ರಾಹಕರನ್ನು ಆಕರ್ಷಿಸಲು ಸ್ಪರ್ಧೆಗಿಳಿಯುತ್ತಿದೆ. ಈ ನಡುವೆ ಇಲ್ಲೊಂದು ರೆಸ್ಟೋರೆಂಟ್‍ನಲ್ಲಿ ಹಳೆಯ ಸಾಂಪ್ರದಾಯಿಕ ಶೈಲಿಗೆ ತಮ್ಮ ಗ್ರಾಹಕರನ್ನು ಮರಳಿ ಕರೆದೊಯ್ದಿದೆ. ಹೌದು, ಬೆಂಗಳೂರಿನ ರೆಸ್ಟೋರೆಂಟ್‍ವೊಂದು ತನ್ನ ಗ್ರಾಹಕರನ್ನು ಆಧುನಿಕ ಸ್ಪರ್ಶ ಕೊಟ್ಟು ಗತ ಕಾಲದತ್ತ ಕರೆದೊಯ್ದಿದೆ. ನೀವು ರೆಸ್ಟೋರೆಂಟ್‍ಗಳಿಗೆ ಹೋದರೆ, ಫ್ಯಾನ್ ಅಥವಾ ಎಸಿಗಳು ಇರುವುದನ್ನು ಸಾಮಾನ್ಯ ನೋಡಿರುತ್ತೀರಿ. ಆದರೆ, ಈ ರೆಸ್ಟೋರೆಂಟ್‍ವೊಂದರಲ್ಲಿ ಹಳೆಯ ಕಾಲದಂತೆ ಬೀಸಣಿಗೆಯನ್ನು ಬಳಸಲಾಗಿದೆ. ಆದರೆ, ಇದನ್ನು ಸೀಲಿಂಗ್ ಫ್ಯಾನ್‍ನಂತೆ ಮೇಲ್ಛಾವಣಿಯಲ್ಲಿ ಅಳವಡಿಸಲಾಗಿದ್ದು, ವಿದ್ಯುತ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ.
ಪುರಾತನ ಕಾಲದಂತಹ ಬೀಸಣಿಗೆಯನ್ನು ಮೋಟಾರೀಕೃತ ಸೀಲಿಂಗ್ ಫ್ಯಾನ್‌ಗಳಂತೆ ಇವುಗಳನ್ನು ಬಳಸಲಾಗಿದ್ದು, ಸದ್ಯ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಸಖತ್ ವೈರಲ್ (Viral News) ಆಗಿದ್ದು, ಬಳಕೆದಾರರೊಬ್ಬರು ವಿಡಿಯೊವನ್ನ ಹಂಚಿಕೊಂಡಿದ್ದಾರೆ. ಜೀವನ ಒಂದು ವೃತ್ತವಿದ್ದಂತೆ ಎಂದು ಪೋಸ್ಟ್ ನಲ್ಲಿ ಹಂಚಿಕೊಳ್ಳಲಾಗಿದೆ. ಬಿಳಿ ಬಣ್ಣದ ಫ್ಯಾಬ್ರಿಕ್ ಜೊತೆಗೆ ಗೋಲ್ಡನ್ ಟಸೆಲ್ ಇರುವ ಬೀಸಣಿಗೆ ನೋಡಲು ಆಕರ್ಷಣೀಯವಾಗಿದೆ. ಇದು ಆಯತಾಕಾರವಾಗಿದ್ದು, ವಿದ್ಯುತ್ ಸಹಾಯದಿಂದ ಬೀಸಣಿಗೆಯಂತೆ ತೂಗುತ್ತವೆ. ಈ ವಿಭಿನ್ನ ಕಾನ್ಸೆಪ್ಟ್ ಗೆ ಹಲವರು ಫಿದಾ ಆಗಿದ್ದಾರೆ.
ಹಿಂದೆಲ್ಲಾ ಈ ರೀತಿಯ ಬೀಸಣಿಗೆಯನ್ನು ಕೈಯಲ್ಲಿ ಬೀಸಲಾಗುತ್ತಿತ್ತು. ರಾಜರು, ರಾಣಿಯರಿಗೆ ಅವರ ಸೇವಕರುಗಳು ಬೀಸುತ್ತಿದ್ದರು. ಇಲ್ಲಿ ಸ್ವಲ್ಪ ಆಧುನಿಕ ಟಚ್ ಕೊಟ್ಟು ವಿದ್ಯುತ್ ಶಕ್ತಿ ಮೂಲಕ ಬೀಸಲಾಗುತ್ತಿದೆ. ಇನ್ನು, ಈ ರೆಸ್ಟೋರೆಂಟ್‍ನಲ್ಲಿ ಸಾಂಪ್ರದಾಯಿಕ ಕಲಾಕೃತಿಗಳು ಮತ್ತು ಗೋಡೆಗಳ ಮೇಲಿನ ಇತರ ಅಲಂಕಾರಗಳು ನೋಡಲು ಬಹಳ ಸುಂದರವಾಗಿದೆ. ಈ ವಿಶಿಷ್ಟ ರೀತಿಯ ಅಲಂಕಾರವು ಹಲವರ ಗಮನಸೆಳೆದಿದೆ. ಸದ್ಯ ಈ ಪೋಸ್ಟ್ 7.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು, 9,000 ಕ್ಕೂ ಹೆಚ್ಚು ಲೈಕ್ಸ್ ಗಳು ಹಾಗೂ 180 ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಭಾರತದಲ್ಲಿ ವಸಾಹತುಶಾಹಿ ಯುಗದಲ್ಲಿ ವಿದ್ಯುತ್ ಫ್ಯಾನ್ ಬಳಕೆ ಇರಲಿಲ್ಲ. ಈ ಸಮಯದಲ್ಲಿ ಪ್ರಾಚೀನ ಕಾಲದಂತೆ ಬೀಸಣಿಗೆಗಳನ್ನೇ ಗಾಳಿ ಬೀಸಲು ಬಳಸಲಾಗುತ್ತಿತ್ತು ಎಂದು ಎಕ್ಸ್ ಬಳಕೆದಾರ ಸಂಭವ್ ಗುಪ್ತಾ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಬ್ರಿಟೀಷರ ಕಾಲದಲ್ಲಿ ತನಗೆ ಬೀಸಣಿಗೆಗಳನ್ನು ನೆನಪಿಸುತ್ತದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಬಳಕೆದಾರ ತಮಾಷೆಯಾಗಿ ಪ್ರತಿಕ್ರಿಯಿಸಿದ್ದು, ಮಧ್ಯರಾತ್ರಿ ಎಚ್ಚರಗೊಂಡಾಗ ಇದನ್ನು ನೀವು ನೋಡಿದರೆ ಹೇಗೆ ಕಾಣಿಸಬಹುದು ಎಂದು ಕಲ್ಪಿಸಿಕೊಳ್ಳಿ ಅಂತಾ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇದು ಫ್ಯಾನ್ ಬೀಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಸಾಮಾನ್ಯ ಫ್ಯಾನ್‌ಗಿಂತ ಇದು ಕಡಿಮೆ ಶಕ್ತಿಯನ್ನು ಬಳಸುತ್ತದೆ ಎಂದು ಇನ್ನೊಬ್ಬ ಬಳಕೆದಾರರು ಹೇಳಿದರು. ಬೆಂಗಳೂರಿನ ಹೊಸ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ರಾಜರಂತೆಯೇ ಇರುತ್ತಾರೆ ಎಂದು ಆರಿಫ್ ಫಲಾಹ್ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)