ಕನ್ನಡ ಸುದ್ದಿ  /  Karnataka  /  Bengaluru News Slogan On Auto Rickshaw In Bangalore Goes Viral Bengaluru Auto Driver Viral News Mgb

Viral News: ‘ರಾಜಿ ಸಂಧಾನ ಸಾಧ್ಯವೇ ಇಲ್ಲ, ಹೋರಾಟ ಮಾತ್ರ’; ಆಟೋ ಮೇಲಿರುವ ಈ ವಾಕ್ಯದ ಒಳಾರ್ಥವೇನಿರಬಹುದು?

Bengaluru auto driver: ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ವಾಹನದ ಹಿಂಬದಿ ‘ನೋ ಕಾಂಪ್ರಮೈಸ್ ಓನ್ಲಿ ಫೈಟ್’ ಎಂದು ಬರೆದುಕೊಂಡಿದ್ದು, ಇದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. (ವರದಿ: ಪಿಂಕಿ ಪ್ರಿಯಾಂಕ ಗೌಡ)

ಆಟೋ ಮೇಲಿರುವ ವಾಕ್ಯ
ಆಟೋ ಮೇಲಿರುವ ವಾಕ್ಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಟೋ ರಿಕ್ಷಾಗಳು ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಅದರಲ್ಲೂ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಸವಾರರ ನಡುವಿನ ವಾಕ್ಸಮರಗಳು ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗಷ್ಟೇ ಪ್ರಯಾಣಿಕರೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದಕ್ಕೆ, ಆಟೋ ಚಾಲಕರು ವರ್ತಿಸಿದ ರೀತಿ ಬಗ್ಗೆ ಬೇಸರ ಹೊರಹಾಕಿದ್ದರು. ಆಟೋ ರಿಕ್ಷಾ ಚಾಲಕರ ಬಗ್ಗೆ ಬೆಂಗಳೂರಿಗರು ಆಗಾಗ್ಗೆ ವಿಷಾದಿಸುತ್ತಾರೆ. ಮೌಖಿಕ ನಿಂದನೆ, ಅತಿಯಾದ ದರಗಳು ಮತ್ತು ಇತರರೊಂದಿಗೆ ವರ್ತಿಸುವ ರೀತಿ ಅವರನ್ನು ವಿವಾದಾತ್ಮಕ ವ್ಯಕ್ತಿಗಳನ್ನಾಗಿ ಮಾಡಿದೆ. ಇದೀಗ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್​​) ನಲ್ಲಿ ಫೋಟೋವೊಂದು ವೈರಲ್ ಆಗಿದೆ.

ಆಟೋ ಚಾಲಕನೊಬ್ಬ ತನ್ನ ವಾಹನದ ಹಿಂಬದಿ ‘ನೋ ಕಾಂಪ್ರಮೈಸ್ ಓನ್ಲಿ ಫೈಟ್’ (ರಾಜಿ ಸಂಧಾನ ಸಾಧ್ಯವೇ ಇಲ್ಲ, ಹೋರಾಟ ಮಾತ್ರ) ಎಂದು ಬರೆದುಕೊಂಡಿದ್ದಾನೆ. ಇದನ್ನು ಅಕ್ಷತ್​ ಹೆಸರಿನ ಸೋಶಿಯಲ್​ ಮೀಡಿಯಾ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಇದು ಪ್ರಯಾಣಿಕರಿಗೆ ಚಾಲಕನ ಸಂದೇಶವನ್ನು ಸಂಕ್ಷಿಪ್ತವಾಗಿ ರವಾನೆ ಮಾಡಿದೆ. ಚಾಲಕನ ನಿಯಮಗಳನ್ನು ಪಾಲಿಸಿ, ವಾದಗಳಿಂದ ದೂರವಿರಿ ಅಥವಾ ಯಾವುದೇ ರಾಜಿಗೆ ಅವಕಾಶವಿಲ್ಲದೆ ದೂರವಿರಲು ಸಿದ್ಧರಾಗಿರಿ ಎಂಬುದು ಚಾಲಕನ ಘೋಷವಾಕ್ಯದ ಒಳಾರ್ಥ ಆಗಿರಬಹುದು ಎಂಬುದು ಈ ಮೂಲಕ ಅರಿಯಬಹುದು.

ಈ ಪೋಸ್ಟ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡ ಅಕ್ಷತ್​ ಅವರು, ಬೆಂಗಳೂರಿನ ಆಟೋರಿಕ್ಷಾ ಘೋಷಣೆಗಳು ಪ್ರಪಂಚದಲ್ಲಿಯೇ ಉತ್ತಮವಾಗಿವೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಆರಂಭದಲ್ಲಿ ಈ ಪೋಸ್ಚ್ ವ್ಯಾಪಕ ಗಮನವನ್ನು ಗಳಿಸದಿದ್ದರೂ, ಇದೀಗ ಎಲ್ಲರ ಗಮನ ಸೆಳೆದಿದೆ.

ಬೆಳೆಯುತ್ತಿರುವ ಮಹಾನಗರಿ ಬೆಂಗಳೂರಿನಲ್ಲಿ ಜನಸಾಮಾನ್ಯರು ಜೀವನ ಕಂಡುಕೊಳ್ಳಲು, ಸದ್ಯದ ಪರಿಸ್ಥಿತಿ ಇದೇ ಆಗಿದೆ ಎಂಬುದನ್ನು ಒತ್ತಿ ಹೇಳುತ್ತದೆ.ವಾಸ್ತವವಾಗಿ, ಬೆಂಗಳೂರಿನ ಆಟೋ-ರಿಕ್ಷಾಗಳ ಹಿಂಭಾಗದಲ್ಲಿ ಹಲವಾರು ಮಂದಿ ಭಿನ್ನ-ವಿಭಿನ್ನವಾಗಿ ಬರೆದುಕೊಳ್ಳುತ್ತಾರೆ. ಬಹುತೇಕ ಆಟೋರಿಕ್ಷಾಗಳಲ್ಲಿ ನಟ ಶಂಕರ್ ನಾಗ್ ಅವರ ಭಾವಚಿತ್ರವಿರುತ್ತದೆ. ಇನ್ನು ಕೆಲವರು ನಟ ವಿಷ್ಣುವರ್ಧನ್, ವರನಟ ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮುಂತಾದ ಮೇರು ನಟರ ಭಾವಚಿತ್ರಗಳನ್ನೂ ಸಹ ಅಳವಡಿಸಿರುತ್ತಾರೆ.

ಆಟೋರಿಕ್ಷಾ ಚಾಲಕರ ವಿಭಿನ್ನ ಘೋಷವಾಕ್ಯಗಳು ಮಾತ್ರ ಇಂಟರ್ನೆಟ್ ಸೆನ್ಸೇಶನ್​ ಆಗಿ ಮಾರ್ಪಟ್ಟಿವೆ. ಈ ಹಿಂದೆ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಆಟೋ ರಿಕ್ಷಾವನ್ನು ಒಳಗೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದರು. ಆ ಚಿತ್ರದಲ್ಲಿನ ಆಟೋ ಮೇಲೆ‘ಪ್ರೀತಿಯೆಂದರೆ ಉದ್ಯಾನವನದಲ್ಲಿ ನಡೆದಂತೆ’ ಎಂಬ ಸುಂದರ ವಾಕ್ಯವನ್ನು ಬರೆಯಲಾಗಿತ್ತು. ಇದು ಹಲವರ ಗಮನ ಸೆಳೆದಿತ್ತು.

(ವರದಿ: ಪಿಂಕಿ ಪ್ರಿಯಾಂಕ ಗೌಡ)

IPL_Entry_Point