ರೋಗಿಗಳ ಗೂಗಲ್ ರಿವ್ಯೂಗೆ ಅಸಭ್ಯ ಉತ್ತರ ಕೊಟ್ಟ ಬೆಂಗಳೂರು ಆಸ್ಪತ್ರೆಗೆ ಗೂಗಲ್ ರೇಟಿಂಗ್ 4.7; ನಕಲಿ ರೇಟಿಂಗ್, ರಿವ್ಯೂ ಬಗ್ಗೆ ಅಸಮಾಧಾನ
ಬೆಂಗಳೂರಿನ ಆಸ್ಪತ್ರೆಯೊಂದು ಋಣಾತ್ಮಕ ಗೂಗಲ್ ರಿವ್ಯೂಗೆ “ಅಸಭ್ಯ” ಮತ್ತು “ಸೊಕ್ಕಿನ” ಪ್ರತಿಕ್ರಿಯೆ ನೀಡಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ. ರೋಗಿಗಳ ಗೂಗಲ್ ರಿವ್ಯೂಗೆ ಅಸಭ್ಯ ಉತ್ತರ ಕೊಟ್ಟ ಬೆಂಗಳೂರು ಆಸ್ಪತ್ರೆಗೆ ಗೂಗಲ್ ರೇಟಿಂಗ್ 4.7 ಇದ್ದು, ಇದು ನಕಲಿ ರೇಟಿಂಗ್, ರಿವ್ಯೂ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಬೆಂಗಳೂರಿನ ಆಸ್ಪತ್ರೆಯೊಂದು ಋಣಾತ್ಮಕ ಗೂಗಲ್ ರಿವ್ಯೂಗೆ “ಅಸಭ್ಯ” ಮತ್ತು “ಸೊಕ್ಕಿನ” ಪ್ರತಿಕ್ರಿಯೆ ನೀಡಿರುವುದು ಸಾಕಷ್ಟು ಟೀಕೆಗೆ ಒಳಗಾಗಿದೆ. ಆಸ್ಪತ್ರೆಯ ಪ್ರತಿಕ್ರಿಯೆಗಳ ಸ್ಕ್ರೀನ್ ಶಾಟ್ ವೈರಲ್ ಆಗಿವೆ. ಗೂಗಲ್ ರೇಟಿಂಗ್ 4.7 ಮತ್ತು ಮೇಲ್ನೋಟದ ಉತ್ತಮ ಪ್ರತಿಕ್ರಿಯೆ ಗಮನಿಸಿ ಅಲ್ಲಿ ಹೋಗಿ ಬಂದವರು ತಮ್ಮ ಕೆಟ್ಟ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಗೂಗಲ್‌ನಲ್ಲಿ ಆತ್ರೇಯ ಹಾಸ್ಪಿಟಲ್ (ಓನರ್) ಎಂಬ ಖಾತೆಯಿಂದ ಆಸ್ಪತ್ರೆ ಕುರಿತಾದ ನೆಗೆಟಿವ್ ಕಾಮೆಂಟ್‌ಗಳಿಗೆ “ಅಸಭ್ಯ” ಮತ್ತು “ಸೊಕ್ಕಿನ” ಪ್ರತಿಕ್ರಿಯೆ ವ್ಯಕ್ತವಾಗಿರುವುದು ಗಮನಸೆಳೆದಿದೆ.
ರೆಡ್ಡಿಟ್ ಬಳಕೆದಾರ (u/Friendly_Enemy-99)ರೊಬ್ಬರು ಸೋಮವಾರ ಆತ್ರೇಯಾ ಹಾಸ್ಪಿಟಲ್‌ನಲ್ಲಿ ತಮಗಾದ ಕೆಟ್ಟ ಅನುಭವವನ್ನು ಪೋಸ್ಟ್ ಮಾಡಿದಾಗ ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಮುನ್ನೆಲೆಗೆ ಬಂತು. "ನಾವು ಹೆಚ್ಚಾಗಿ ನಕಲಿ ಗೂಗಲ್ ವಿಮರ್ಶೆಗಳನ್ನು ಪರಿಶೀಲಿಸಿದ್ದೇವೆ ಆದರೆ ಮಾಲೀಕರು ನಕಾರಾತ್ಮಕ ವಿಮರ್ಶೆಗಳಿಗೆ ಹೇಗೆ ಪ್ರತಿಕ್ರಿಯಿಸಿದ್ದಾರೆಂದು ನೋಡಿ!" ಎಂದು ಗೂಗಲ್ ರಿವ್ಯೂಗೆ ಬಂದ ಹಲವಾರು ಪ್ರತಿಕ್ರಿಯೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ಆಸ್ಪತ್ರೆಯು ರೋಗಿಗಳನ್ನು ಅವಮಾನಿಸುತ್ತಿದೆ ಮತ್ತು ಗೌಪ್ಯವಾಗಿಡಬೇಕಾದ ವೈದ್ಯಕೀಯ ಮಾಹಿತಿಯನ್ನು ಆನ್‌ಲೈನ್ ಮೂಲಕ ಜಗಜ್ಜಾಹೀರು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ರೆಡ್ಡಿಟ್ ಬಳಕೆದಾರ ಆತ್ರೇಯ ಹಾಸ್ಪಿಟಲ್ ಬಗ್ಗೆ ಹೇಳಿದ್ದೇನು
ರೆಡ್ಡಿಟ್ ಬಳಕೆದಾರ (u/Friendly_Enemy-99), “ಎಲುಬು ತಜ್ಞರನ್ನು ನೋಡಲು ಚಂದಾಪುರದ ಆತ್ರೇಯಾ ಆಸ್ಪತ್ರೆಗೆ ಹೋದೆವು. ನಾವು ಶುಲ್ಕ ಮತ್ತು ಎಲ್ಲವನ್ನೂ ಪಾವತಿಸಿದ್ದೇವೆ. ಎಲುಬು ತಜ್ಞರು ತುರ್ತು ಆಪರೇಶನ್ ಕೆಲಸದಲ್ಲಿದ್ದಾರೆ ಎಂದು ತಿಳಿಸದ ಕಾರಣ ಕಾಯುತ್ತಿದ್ದೆವು. ಬಳಿಕ ಎಲುಬು ಸಮಸ್ಯೆ ಕುರಿತು ಹೆಚ್ಚೇನೂ ತಿಳಿದಿರದ ಡ್ಯೂಟಿ ಡಾಕ್ಟರ್ ಬಳಿಗೆ ನಮ್ಮನ್ನು ಕಳುಹಿಸಿ ಪರಿಶೀಲಿಸುವಂತೆ ಸೂಚಿಸಿದ್ದರು. ಅವರು ನೋವು ನಿವಾರಕ ಕೊಟ್ಟು ನಾಳೆ ಬಂದು ಎಲುಬು ತಜ್ಞರನ್ನು ಭೇಟಿ ಮಾಡುವಂತೆ ಸೂಚಿಸಿದರು. ಅದರಂತೆ ಮಾರನೇ ದಿನ ಹೋದಾಗ, ಉಚಿತವಾಗಿ ಅವರನ್ನು ಭೇಟಿ ಮಾಡಲು ಬಿಡಲಿಲ್ಲ. ಕೊಟ್ಟ ಹಣ ಮರುಪಾವತಿಸಲು ಕೇಳಿದಾಗ ಅದಕ್ಕೂ ಒಪ್ಪಲಿಲ್ಲ. ಇದಾದ ಬಳಿಕ ಗೂಗಲ್ ವಿಮರ್ಶೆ ಪರಿಶೀಲಿಸಿದ್ದೇವೆ. ಬಹಳಷ್ಟು ನಕಲಿ ರಿವ್ಯೂ ಇದ್ದವು. ಕೆಲವು ನೆಗೆಟಿವ್ ಕಾಮೆಂಟ್‌ಗಳಿಗೆ ಹಾಸ್ಪಿಟಲ್ ಮಾಲೀಕರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ” ಎಂದು ಬರೆದುಕೊಂಡಿದ್ದಾರೆ.
ರೆಡ್ಡಿಟ್ ಬಳಕೆದಾರರ ಪೋಸ್ಟ್ ಹೀಗಿದೆ ನೋಡಿ
ರೂಡ್ ಆಂಡ್ ಅನ್‌ಪ್ರೊಫೆಷನಲ್ ಹಾಸ್ಪಿಟಲ್ ಎಂಬ ಶೀರ್ಷಿಕೆಯಲ್ಲಿ ಗೂಗಲ್ ರಿವ್ಯೂನ ಪೋಸ್ಟ್‌ಗಳನ್ನು ಶೇರ್ ಮಾಡಿದ್ದಾರೆ.
ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು, ಅನೇಕ ಗೂಗಲ್ ರಿವ್ಯೂ ಲಿಂಕ್‌ಗಳನ್ನು ಶೇರ್ ಮಾಡಿದ್ದಾರೆ. ಆದರೆ, ಗೂಗಲ್ ಬಹುತೇಕ ಪ್ರತಿಕ್ರಿಯೆಗಳನ್ನು ಈಗ ಬ್ಲಾಕ್ ಮಾಡಿದೆ. ರೆಡ್ಡಿಟ್‌ನಲ್ಲಿ ಕೊಟ್ಟ ಲಿಂಕ್‌ಗಳು ತೆರೆದುಕೊಳ್ಳುತ್ತಿಲ್ಲ.
ಆತ್ರೇಯ ಹಾಸ್ಪಿಟಲ್ (ಓನರ್) ಖಾತೆಯಿಂದ ವ್ಯಕ್ತವಾಗಿರುವ ಅಸಭ್ಯ ಪ್ರತಿಕ್ರಿಯೆ ಹೀಗಿವೆ
ಗೂಗಲ್ ರಿವ್ಯೂ ಸ್ಕ್ರೀನ್ ಶಾಟ್‌ಗಳನ್ನು ಗಮನಿಸಿದರೆ ಆತ್ರೇಯ ಹಾಸ್ಪಿಟಲ್ (ಓನರ್) ಖಾತೆಯಿಂದ ವ್ಯಕ್ತವಾಗಿರುವ ಅಸಭ್ಯ ಪ್ರತಿಕ್ರಿಯೆಗಳ ಪೈಕಿ ಕೆಲವು ಹೀಗಿವೆ.
ಅತೃಪ್ತ ರೋಗಿಯೊಬ್ಬರು ಆಸ್ಪತ್ರೆಯ ಸಿಬ್ಬಂದಿಯ ಅಸಭ್ಯ ವರ್ತನೆಯನ್ನು ಉಲ್ಲೇಖಿಸಿ ಆತ್ರೇಯ ಹಾಸ್ಪಿಟಲ್‌ನ ಆರೋಗ್ಯ ಸೇವೆಯ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಇದಕ್ಕೆ ಆತ್ರೇಯ ಹಾಸ್ಪಿಟಲ್ (ಓನರ್) ಪ್ರತಿಕ್ರಿಯೆ ಹೀಗಿದೆ - "ರೋಗಿಯು ತಮ್ಮ ಸ್ನೇಹಿತನ “ಒಂಬತ್ತು ತಿಂಗಳಲ್ಲಿ ಆರನೇ ಗರ್ಭಪಾತದ ಮೇಲೆ ರಿಯಾಯಿತಿ ಕೇಳಿದ್ದರು” ಎಂದು ಬರೆದು ಅಸಭ್ಯ ವರ್ತನೆ ತೋರಿದ್ದಾರೆ.
ಇನ್ನೊಂದು ವಿಮರ್ಶೆಯಲ್ಲಿ, ರೋಗಿಯೊಬ್ಬರು ಆಸ್ಪತ್ರೆಯನ್ನು ಹಣ-ದೋಚುತ್ತಾರೆ ಎಂದು ಹೇಳಿದ್ದಕ್ಕೆ ಆತ್ರೇಯ ಹಾಸ್ಪಿಟಲ್ (ಓನರ್) ಪ್ರತಿಕ್ರಿಯಿಸುತ್ತ, "ನಿಮ್ಮ ವಿಮರ್ಶೆಯನ್ನು ನೋಡಿದರೆ, ನಿಮ್ಮ ಶಾಲಾ ಶಿಕ್ಷಣದುದ್ದಕ್ಕೂ ನೀವು ತುಂಬಾ ಬಡ ವಿದ್ಯಾರ್ಥಿಯಾಗಿರಬಹುದು ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಹ ಹ ಹ" ಎಂದು ಹೇಳಿದ್ದಾರೆ.
ಹಾಸ್ಪಿಟಲ್ ಓನರ್ ಖಾತೆಯಿಂದ ವ್ಯಕ್ತವಾದ ಅಸಭ್ಯ ಮತ್ತು ಸೊಕ್ಕಿನ ಕಾಮೆಂಟ್‌ಗಳು ವ್ಯಾಪಕ ಟೀಕೆಗೆ ಒಳಗಾಗಿದ್ದು, ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಬಹುತೇಕರು ಆಗ್ರಹಿಸಿದ್ದು ಕಂಡುಬಂದಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)
Facebook Embed Test
Twitter Embed
Instagram Embed