ಬೆಂಗಳೂರಲ್ಲಿ ನಡಿತಿದೆ ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ; ಯುಗಾದಿ ಹೊಸ ತೊಡಕಿಗೆ ಮುದ್ದೆ ತಿಂದು, ಭರ್ಜರಿ ಬಹುಮಾನ ಗೆಲ್ಲಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಲ್ಲಿ ನಡಿತಿದೆ ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ; ಯುಗಾದಿ ಹೊಸ ತೊಡಕಿಗೆ ಮುದ್ದೆ ತಿಂದು, ಭರ್ಜರಿ ಬಹುಮಾನ ಗೆಲ್ಲಿ

ಬೆಂಗಳೂರಲ್ಲಿ ನಡಿತಿದೆ ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ; ಯುಗಾದಿ ಹೊಸ ತೊಡಕಿಗೆ ಮುದ್ದೆ ತಿಂದು, ಭರ್ಜರಿ ಬಹುಮಾನ ಗೆಲ್ಲಿ

ನೀವು ರಾಗಿಮುದ್ದೆ ಪ್ರಿಯರಾಗಿದ್ದು, ನಾಟಿ ಕೋಳಿ ಜೊತೆ ರಾಗಿ ಮುದ್ದೆ ತಿನ್ನೋದು ಇಷ್ಟ ಅಂದ್ರೆ ನಿಮಗಾಗಿ ಬೆಂಗಳೂರಿನಲ್ಲಿ ಒಂದು ಸ್ಪರ್ಧೆ ನಡಿತಿದೆ. ಯುಗಾದಿ ಹೊಸ ತೊಡಕು ಪ್ರಯುಕ್ತ ಕೆಂಪೇಗೌಡ ಚಾರಿಟೆಬಲ್‌ ಟ್ರಸ್ಟ್‌ ಈ ವಿಶೇಷ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ತಿನ್ನೋದು ಮಾತ್ರವಲ್ಲ, ಜಾಸ್ತಿ ತಿಂದೋರಿಗೆ ಭರ್ಜರಿ ಬಹುಮಾನ ಕೂಡ ಇದೆ.

ಬೆಂಗಳೂರಲ್ಲಿ ನಡಿತಿದೆ ರಾಗಿ ಮುದ್ದೆ, ನಾಳಿ ಕೋಳಿ ತಿನ್ನೋ ಸ್ಪರ್ಧೆ; ಯುಗಾದಿ ಹೊಸ ತೊಡಕಿಗೆ ಮುದ್ದೆ ತಿಂದು, ಭರ್ಜರಿ ಬಹುಮಾನ ಗೆಲ್ಲಿ
ಬೆಂಗಳೂರಲ್ಲಿ ನಡಿತಿದೆ ರಾಗಿ ಮುದ್ದೆ, ನಾಳಿ ಕೋಳಿ ತಿನ್ನೋ ಸ್ಪರ್ಧೆ; ಯುಗಾದಿ ಹೊಸ ತೊಡಕಿಗೆ ಮುದ್ದೆ ತಿಂದು, ಭರ್ಜರಿ ಬಹುಮಾನ ಗೆಲ್ಲಿ

ಕರ್ನಾಟಕ ಹಲವು ವೈಶಿಷ್ಟ್ಯಗಳ ತವರು. ಹಬ್ಬ, ಹರಿದಿನಗಳು ಬಂದ್ರೆ ಇಲ್ಲಿ ಸಂಭ್ರಮವೋ ಸಂಭ್ರಮ. ಹಳೆ ಮೈಸೂರು ಭಾಗದಲ್ಲಿ ಯುಗಾದಿ ಹಬ್ಬದ ಆಚರಣೆ ಬಹಳ ಭಿನ್ನ. ಯುಗಾದಿ ನಂತರ ಹೊಸ ತೊಡಕು ಆಚರಿಸಲಾಗುತ್ತದೆ. ಹೊಸ ತೊಡಕಿನಲ್ಲಿ ಬಗೆ ಬಗೆಯ ಮಾಂಸಾಹಾರಿ ಖಾದ್ಯಗಳನ್ನು ತಯಾರಿಸಿ ಸವಿಯಲಾಗುತ್ತದೆ. ಈ ಬಾರಿ ಬೆಂಗಳೂರಿನಲ್ಲಿ ಹೊಸ ತೊಡಕಿನ ಸಲುವಾಗಿ ವಿಶೇಷ ಸ್ಪರ್ಧೆಯೊಂದು ನಡೆಯುತ್ತಿದೆ. ಈ ಸ್ಪರ್ಧೆ ಹೆಸರು ಕೇಳಿದ್ರೆ ನಿಮ್ಮ ಬಾಯಲ್ಲಿ ನೀರೂರಬಹುದು. ಅದೇನೆಂದ್ರೆ ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ.

ರಾಗಿ ಮುದ್ದೆ, ನಾಟಿ ಕೋಳಿ ತಿನ್ನೋ ಸ್ಪರ್ಧೆ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಯುಗಾದಿ ಹೊಸ ತೊಡಕಿನ ಸಲುವಾಗಿ ರಾಗಿ ಮುದ್ದೆ, ನಾಟಿ ಕೋಳಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ವರ್ಷ ಏಪ್ರಿಲ್‌ 7ರ ಭಾನುವಾರ ಈ ಸ್ಪರ್ಧೆ ನಡೆಯಲಿದೆ.

ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಗ್ರಾಮೀಣ ಸೊಡಗನ್ನು ಪಟ್ಟಣದಲ್ಲಿ ಪರಿಚಯಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಕಳೆದ ವರ್ಷ ಮೊದಲು ಬಾರಿ ಸ್ಪರ್ಧೆ ಆಯೋಜಿಸಿದ್ದು, ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸ್ಪರ್ಧೆಯ ನಿಯಮಗಳು

ಈ ಸ್ಪರ್ಧೆಯಲ್ಲಿ ಗಂಡಸರು ಹಾಗೂ ಹೆಂಗಸರು ಎಲ್ಲರೂ ಭಾಗವಹಿಸಬಹುದು. 150 ರೂ ನೀಡಿ ರಿಜಿಸ್ಟರ್‌ ಮಾಡಿಕೊಳ್ಳಬೇಕು. ಮೊದಲು ರಿಜಿಸ್ಟರ್‌ ಮಾಡಿಕೊಂಡ 150 ಮಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ರಾಜ್ಯದ ಯಾವುದೇ ಭಾಗದವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ರಾಗಿಮುದ್ದೆ ತಿನ್ನೋರಿಗೆ ಭರ್ಜರಿ ಬಹುಮಾನ

ಅತಿ ಹೆಚ್ಚು ರಾಗಿ ಮುದ್ದೆ ತಿಂದು ಮೊದಲ ಬಹುಮಾನ ಪಡೆದವರಿಗೆ 25 ಕೆಜಿ ಮೇಕೆಯನ್ನು ಬಹುಮಾನವಾಗಿ ನೀಡಲಾಗುತ್ತದೆ. ಎರಡನೇ ಬಹುಮಾನ ಪಡೆದವರಿಗೆ ಗಂಡು ಕುರಿ ಹಾಗೂ ಮೂರನೇ ಬಹುಮಾನ ಪಡೆದವರಿಗೆ 10 ಹುಂಜಗಳನ್ನು ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಕೋಳಿಗಳನ್ನು ಬಹುಮಾನವಾಗಿ ನೀಡಲಾಗುತ್ತದೆ.

ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಬಗ್ಗೆ

ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನ ನಂದಿನಿ ಬಡಾವಣೆಯಲ್ಲಿರುವ ಕೆಂಪೇಗೌಡ ಚಾರಿಟೇಬಲ್‌ ಟ್ರಸ್ಟ್‌ ಸಮಾನ ಮನಸ್ಕರ ಒಂದು ತಂಡ. ಇದರಲ್ಲಿ 27 ಮಂದಿ ಸದಸ್ಯರಿದ್ದು, ಇವರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ʼಗ್ರಾಮೀಣ ಸೊಡಗನ್ನು ಮರು ಸೃಷ್ಟಿಸುವ ಉದ್ದೇಶದಿಂದ ನಾವು ಬೆಂಗಳೂರಿನಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸುತ್ತಿದ್ದೇವೆʼ ಎನ್ನುತ್ತಾರೆ ಟ್ರಸ್ಟ್‌ನ ಸದಸ್ಯ ದೀಕ್ಷಿತ್‌ ರವಿ.

ರಾಗಿ ಮುದ್ದೆ ತಿನ್ನೋ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾ, ಹಾಗಿದ್ರೆ ಇಂದೇ ರಿಜಿಸ್ಟರ್‌ ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗೆ 9686394458, 9900150608, 9986228080 ಈ ಮೊಬೈಲ್‌ ನಂಬರ್‌ಗಳನ್ನು ಸಂಪರ್ಕಿಸಿ.

Whats_app_banner