Bengaluru News; ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು-bengaluru news vehicles staying at bengaluru smvt for over 10 minutes have to pay parking fees indian railways uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News; ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು

Bengaluru News; ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು

Parking Fees; ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನ ರೈಲು ನಿಲ್ದಾಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ನಿಂತರೆ ಶುಲ್ಕ ಪಾವತಿಸಬೇಕಾದೀತು. ಯಾವ ವಾಹನಕ್ಕೆ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣ (ಸಾಂಕೇತಿಕ ಚಿತ್ರ)
ಬೆಂಗಳೂರು ಎಸ್‌ಎಂವಿಟಿ ರೈಲು ನಿಲ್ದಾಣ (ಸಾಂಕೇತಿಕ ಚಿತ್ರ)

ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆಯು ವಾಹನಗಳಿಗೆ ಹೊಸ ಪ್ರವೇಶ ನಿಯಂತ್ರಣ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಂತೆ, ಈ ರೈಲು ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಇಳಿಸುವ ಮತ್ತು ಹತ್ತಿಸುವ ವಾಹನಗಳು 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಉಳಿದರೆ ಪಾರ್ಕಿಂಗ್ ಶುಲ್ಕ ಪಾವತಿಸಬೇಕಾಗುತ್ತದೆ.

ಅಂದರೆ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಅಲ್ಲಿದ್ದರೆ ಸಮಯಕ್ಕಿಂತ ಹೆಚ್ಚು ಹೊತ್ತು ಇದ್ದ ಕಾರಣ ವಿಳಂಬ ಶುಲ್ಕವನ್ನು ಪಾವರಿಸಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

"ರೈಲು ನಿಲ್ಧಾಣದಲ್ಲಿ ವಾಹನಗಳಿಗೆ ಪ್ರವೇಶ-ನಿಯಂತ್ರಣ ವ್ಯವಸ್ಥೆಯು ತುಂಬಾ ಅವಶ್ಯಕ. ಇಲ್ಲಿ ನಿಲ್ದಾಣದ ಒಳಗೆ ಬಂದು ತಡವಾಗಿ ಹೊರಡುವ ಅನೇಕ ವಾಹನಗಳ ಕಾರಣ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್‌ ಉಂಟುಮಾಡುತ್ತವೆ. ಈ ಹೊಸ ವ್ಯವಸ್ಥೆಯು ಯಾವುದೇ ಜಾಮ್‌ಗಳಿಲ್ಲದಂತೆ ಮಾಡುತ್ತದೆ. ಅಲ್ಲದೆ, ನಿಲ್ದಾಣದೊಳಗೆ ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತದೆ ಎಂದು ಎಸ್‌ಡಬ್ಲ್ಯೂಆರ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ದ ಹಿಂದೂ ವರದಿ ಮಾಡಿದೆ.

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಪಾರ್ಕಿಂಗ್ ಶುಲ್ಕ ಎಷ್ಟು

ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ ಪಾರ್ಕಿಂಗ್ ಮತ್ತು ವಾಹನಗಳ ಸುಗಮ ಸಂಚಾರ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗುತ್ತಿದ್ದು, ಇದನ್ನು ಟೆಂಡರ್ ಮೂಲಕ ಒದಗಿಸಲಾಗುತ್ತದೆ. ಈ ಕಂಪನಿ ನಿಲ್ದಾಣದ ಸಂಪೂರ್ಣ ಸಂಚಾರ ನಿರ್ವಹಣೆಯ ಹೊಣೆಹೊತ್ತುಕೊಳ್ಳಲಿದೆ.

ಒಂದೊಮ್ಮೆ ವಾಹನ 10 ನಿಮಿಷಕ್ಕಿಂತ ಹೆಚ್ಚು ಹೊತ್ತು ಅಂದರೆ 20 ನಿಮಿಷದ ತನಕ ಕಾಯಬೇಕಾಗಿ ಬಂದರೆ ದ್ವಿಚಕ್ರ ವಾಹನಗಳಾದರೆ 40 ರೂಪಾಯಿ, ನಾಲ್ಕು ಚಕ್ರದ ವಾಹನಗಳಾದರೆ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಧ ಗಂಟೆ ತನಕ ವಿಸ್ತರಣೆಯಾದರೆ ದ್ವಿಚಕ್ರ ವಾಹನಗಳು 100 ರೂಪಾಯಿ, ನಾಲ್ಕು ಚಕ್ರದ ವಾಹನಗಳು 200 ರೂಪಾಯಿ ಪಾವತಿಸಬೇಕಾಗುತ್ತದೆ ಎಂದು ವರದಿ ವಿವರಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲೂ ಇದೇ ಮಾದರಿಯ ಸಂಚಾರ ನಿರ್ವಹಣಾ ವ್ಯವಸ್ಥೆ ಮೇ 20 ರಿಂದ ಇದು ಜಾರಿಗೆ ಬಂದಿತ್ತು.. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸುವುದಕ್ಕೆ ಮತ್ತು ಹತ್ತಿಸಿಕೊಂಡು ಹೋಗಲು 7 ನಿಮಿಷ ಕಾಲಾವಕಾಶವನ್ನು ಬಿಐಎಎಲ್‌ ನೀಡಿದೆ. ಇದರಾಚೆಗೆ 150 ರೂಪಾಯಿ ಶುಲ್ಕ ಪಾವತಿಸಬೇಕು. ಆದಾಗ್ಯೂ, ವಾಣಿಜ್ಯ ಬಳಕೆ ವಾಹನಗಳು ಸಮಯ ಮಿತಿ ಇಲ್ಲದೆ ಪಾರ್ಕಿಂಗ್ ಶುಲ್ಕವಾಗಿ 150 ರೂಪಾಯಿ ಪಾವತಿಸಬೇಕು. ಆದರೆ ಈ ವ್ಯವಸ್ಥೆಯ ವಿರುದ್ದ ಟ್ಯಾಕ್ಸಿ ಚಾಲಕರು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ ಕಾರಣ ಮಾರನೇ ದಿನವೇ ಈ ವ್ಯವಸ್ಥೆಯನ್ನು ಬಿಐಎಎಲ್‌ ಹಿಂಪಡೆಯಿತು.

ಭಾರತದ ಮೊದಲ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ನಿಲ್ದಾಣ

ಭಾರತೀಯ ರೈಲ್ವೆ ಈ ರೈಲು ನಿಲ್ದಾಣವನ್ನು 314 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತೀಕರಿಸಿ ವಿಶ್ವದರ್ಜೆಯ ಮೂಲಸೌಕರ್ಯವನ್ನು ಒದಗಿಸಿದೆ. ವಿಮಾನ ನಿಲ್ದಾಣದಲ್ಲಿ ಇರುವಂತಹ ಇತ್ತೀಚಿನ ತಂತ್ರಜ್ಞಾನವನ್ನು ಇಲ್ಲೂ ಬಳಸಲಾಗಿದೆ.

1) ಕೇಂದ್ರೀಯ ಹವಾನಿಯಂತ್ರಿತ ವ್ಯವಸ್ಥೆ ಇರುವ ದೇಶದ ಮೊದಲ ರೈಲು ನಿಲ್ದಾಣ ಇದು.

2) ಮಹಿಳೆಯರು ಮತ್ತು ಪುರುಷರಿಗಾಗಿ ಕಾಯುವ ಹಾಲ್ ಜೊತೆಗೆ, ಕಾಯ್ದಿರಿಸಿದ ಲಾಂಜ್ ಮತ್ತು ಫುಡ್ ಕೋರ್ಟ್ ಇದೆ.

3) ನಿಲ್ದಾಣದಲ್ಲಿ ಏಳು ಪ್ಲಾಟ್‌ಫಾರ್ಮ್‌ಗಳಿದ್ದು, ಪ್ರಯಾಣಿಕರು ವಿರಮಿಸುವುದಕ್ಕೆ ಸ್ಥಳಾವಕಾಶ ಇದೆ.

4) ಎರಡು ಸುರಂಗಮಾರ್ಗ ಮತ್ತು ಅಗಲ ಕಾಲು ಸೇತುವೆಗಳಿದ್ದು ಎಲ್ಲಾ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕ ಸುಗಮವಾಗಿದೆ.

5) ಪಾದಚಾರಿ ಸೇತುವೆಗಳು, ಸುರಂಗಮಾರ್ಗ ಎಸ್ಕಲೇಟರ್‌ಗಳು ಮತ್ತು ಲಿಫ್ಟ್‌ಗಳು ಎಲ್ಲವೂ ದಿವ್ಯಾಂಗರಿಗೂ ಬಳಸುವಂತೆ ಇದೆ. ವಿಕಲಚೇತನರಿಗಾಗಿ ಮೀಸಲಾದ ಟಿಕೆಟ್ ಕೌಂಟರ್ ಕೂಡ ಇದೆ.

6) ಟರ್ಮಿನಲ್‌ನಲ್ಲಿ 250 ನಾಲ್ಕು-ಚಕ್ರ ವಾಹನಗಳು, 900 ದ್ವಿಚಕ್ರ ವಾಹನಗಳು, 50 ಆಟೋರಿಕ್ಷಾಗಳು ಮತ್ತು 20 ಟ್ಯಾಕ್ಸಿಗಳಿಗೆ ಪಾರ್ಕಿಂಗ್ ಸ್ಥಳವಿದೆ.

7) ಒಂದು ಬಸ್-ಬೇ ಕೂಡ ಇದ್ದು, ಇಲ್ಲಿಂದ ನಗರದ ವಿವಿಧ ಭಾಗಗಳಲ್ಲಿ ಪ್ರಯಾಣಿಕರ ಸಂಚಾರಕ್ಕೆ ಬಸ್‌ ಸೌಲಭ್ಯವನ್ನೂ ಒದಗಿಸಲಾಗಿದೆ.