ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ಇಂದು

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ಇಂದು

ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ಪುತ್ರಿ ವಿದ್ಯಾಶ್ರೀ ಎಚ್ಎಸ್ ಅವರ ರಂಗಾರೋಹಣ ಕಾರ್ಯಕ್ರಮ ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಶನಿವಾರ (ಮೇ 4) ಆಯೋಜನೆಯಾಗಿದೆ. ವಿದುಷಿ ರೂಪಶ್ರೀ ಮಧುಸೂದನ ಶಿಷ್ಯೆ ವಿದ್ಯಾಶ್ರೀ ಅವರ ರಂಗಾರೋಹಣವನ್ನು ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದ ಆಯೋಜನೆ ಮಾಡಿದೆ. (ಲೇಖನ-ಶಿವಮೊಗ್ಗ ರಾಮ್‌).

ವಿದುಷಿ ರೂಪಶ್ರೀ ಮಧುಸೂದನ ಶಿಷ್ಯೆ ವಿದ್ಯಾಶ್ರೀ ಎಚ್‌ಎಸ್ (ಚಿತ್ರದಲ್ಲಿರುವವರು) ಅವರ ಭರತನಾಟ್ಯ ರಂಗಾರೋಹಣ  ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಶನಿವಾರ (ಮೇ 4) ಆಯೋಜನೆಯಾಗಿದೆ.
ವಿದುಷಿ ರೂಪಶ್ರೀ ಮಧುಸೂದನ ಶಿಷ್ಯೆ ವಿದ್ಯಾಶ್ರೀ ಎಚ್‌ಎಸ್ (ಚಿತ್ರದಲ್ಲಿರುವವರು) ಅವರ ಭರತನಾಟ್ಯ ರಂಗಾರೋಹಣ ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಶನಿವಾರ (ಮೇ 4) ಆಯೋಜನೆಯಾಗಿದೆ.

ಬೆಂಗಳೂರು: ಹಿರಿಯ ವಿದುಷಿ ರೂಪಶ್ರೀ ಮಧುಸೂದನ ಶಿಷ್ಯೆ, ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ಪುತ್ರಿ ವಿದ್ಯಾಶ್ರೀ ಎಚ್.ಎಸ್. ಭರತನಾಟ್ಯ ರಂಗಪ್ರವೇಶ ಶನಿವಾರ (ಮೇ 4) ಬೆಳಗ್ಗೆ 9.30ಕ್ಕೆ ಸಂಪನ್ನಗೊಳ್ಳಲಿದೆ. ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಹಿರಿಯ ಕಲಾವಿದರು, ಖ್ಯಾತ ವಿದ್ವಾಂಸರ ಸಮ್ಮುಖ ರಂಗ ಪ್ರಸ್ತುತಿ ನೆರವೇರಲಿದೆ. ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ, ಹಿರಿಯ ನೃತ್ಯ ಪ್ರವೀಣೆ ಡಾ. ಪದ್ಮಜಾ ಸುರೇಶ, ಭರತನಾಟ್ಯ ವಿದ್ವಾಂಸ ಪ್ರವೀಣ ಕುಮಾರ್ ಆಗಮಿಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗುರು ವಿದುಷಿ ರೂಪಶ್ರೀ ಮಧುಸೂದನ್ ನಟುವಾಂಗ, ವಿದುಷಿ ದೀಪ್ತಿ ಶ್ರೀನಾಥ್ ಗಾಯನವಿದೆ. ಪಕ್ಕವಾದ್ಯ ಮೃದಂಗದಲ್ಲಿ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಕೊಳಲು- ವಿದ್ವಾನ್ ವಿವೇಕ ಕೃಷ್ಣ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಕಾರ್ತಿಕ್ ದಾತಾರ್ ಸಾಥ್ ನೀಡಲಿದ್ದಾರೆ. ಮನೋಜ್ಞ ನೃತ್ಯ ಪ್ರದರ್ಶನಕ್ಕೆ ಮುಖ್ಯ

ಮನೆಯ ಸಂಸ್ಕಾರ ನೀಡಿದ ಫಲ

ಸುಸಂಸ್ಕೃತ ಮನೆಯಲ್ಲಿ ಹಿರಿಯರಿಂದ ದೊರಕುವ ಸಂಸ್ಕಾರವೇ ಮಕ್ಕಳ ಕಲಾಸಕ್ತಿಗೆ ಭೂಮಿಕೆಯಾಗಿತ್ತದೆ ಎಂಬುದಕ್ಕೆ ಯುವ ಪ್ರತಿಭೆ ವಿದ್ಯಾಶ್ರೀ ಪ್ರತೀಕವಾಗಿದ್ದಾರೆ ಎನ್ನಬಹುದು. ಹೌದು. ಕೋಲಾರ ಮೂಲದ ಇಂಜಿನಿಯರ್ ಎಚ್.ಎಸ್. ಸುರೇಶ್ ಮತ್ತು ಸಂಸ್ಕೃತ ಶಿಕ್ಷಕಿ ಕೆ. ಸಿ. ನಾಗಶ್ರೀ ಅವರ ವಂಶದಲ್ಲಿ ಎಲ್ಲರಿಗೂ ಸಂಗೀತ- ನೃತ್ಯದ ಬಗ್ಗೆ ಅಪಾರ ಗೌರವ ಇದೆ. ಆದರೆ ಯಾರೂ ಅದರಲ್ಲಿ ಈ ಮಟ್ಟಿನ ಸಾಧನೆ ಮಾಡಿದವರಿಲ್ಲ. ಆದರೂ ವಿದ್ಯಾಶ್ರೀಗೆ ಹೇಗೆ ಭರತನಾಟ್ಯ ಕಲೆ ಒಲಿಯಿತು ಎಂದು ಅವಲೋಕಿಸಿದಾಗ ಇದರ ಹಿಂದೆ ಅವರ ಮನೆಯ ಸಂಸ್ಕಾರ ಢಾಳಾಗಿ ಎದ್ದು ಕಾಣುತ್ತದೆ.

ಈ ಬಗ್ಗೆ ವಿದ್ಯಾಶ್ರೀ ಅವರ ತಾಯಿ ನಾಗಶ್ರೀ ಪ್ರತಿಕ್ರಿಯಿಸಿದ್ದು ಹೀಗೆ. ನನ್ನ ಮಗಳು ವಿದ್ಯಾಶ್ರೀಗೆ 6ನೇ ವರ್ಷದಿಂದಲೇ ಸಂಗೀತ- ನೃತ್ಯದ ಆಸಕ್ತಿ ಕಾಣಿಸಿತು. ಮನೆಯ ಸಮೀಪದಲ್ಲೇ ಶಾರದಾ ಸುಗಮ ಸಂಗೀತ ಶಾಲೆಯಲ್ಲಿ ಗಾಯನ, ಚಿತ್ರಕಲಾ ತರಗತಿಗೆ ಸೇರಿದಳು. ಮಗಳು ವ್ಯಾಸಂಗ ಮಾಡುತ್ತಿದ್ದ ವಿದ್ಯಾನಿಕೇತನ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ವಿದುಷಿ ರೂಪಶ್ರೀ ಮಧುಸೂದನ ಅವರು ಈಕೆ ಪ್ರತಿಭೆ ಗುರುತಿಸಿದರು. ಸರಿ. ಅವರ ಬಳಿಯೇ

ನೃತ್ಯಗಂಗಾ ಕಲಾ ಶಾಲೆಯಲ್ಲಿ ನೃತ್ಯಾಭ್ಯಾಸ ಆರಂಭವಾಯಿತು. 16 ವರ್ಷದಿಂದ ನಾವು ಈಕೆಗೆ ಎಂದೂ ‘ಅಭ್ಯಾಸ ಮಾಡು’, ನೃತ್ಯ ಪರೀಕ್ಷೆ ಕಟ್ಟು ಎಂದು ಹೇಳಿಲ್ಲ. ಎಲ್ಲವೂ ಅವಳ ಸ್ವಯಂ ಸ್ಫೂರ್ತಿಯೇ- ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಶಾಲಾ ಕಲಿಕೆಗೆ ಪೂರಕವಾದ ನೃತ್ಯ

ಸಾಮಾನ್ಯವಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಂತಕ್ಕೆ ಬಂದ ಮಕ್ಕಳಿಗೆ ಪಾಲಕರು ಸಂಗೀತ- ನೃತ್ಯ- ಕಲೆ- ಕ್ರೀಡೆ- ಹೀಗೆ ಎಲ್ಲ ಚಟುವಟಿಕೆಗಳನ್ನೂ ಸ್ಟಾಪ್ ಮಾಡಿಬಿಡುತ್ತಾರೆ. ‘ಓದಬೇಕು, ಅಂಕ ಗಳಿಸಬೇಕು’ ಅಷ್ಟೇ ಪರಮ ಗುರಿ ! ಆದರೆ ವಿದ್ಯಾಶ್ರೀ ವಿಭಿನ್ನ. ಕಲೆ ಎಂದಿಗೂ ಶಾಲಾ ಪಠ್ಯಕ್ರಮಕ್ಕೆ ಪೂರಕವಾಗಿ ಇರುತ್ತದೆ ಎಂದು ಶಿಕ್ಷಣ ತಜ್ಞರು ಹೇಳುವ ಮಾತನ್ನು ಈಕೆ ದಿಟಗೊಳಿಸಿದಳು. 10ನೇ ತರಗತಿ ವ್ಯಾಸಂಗದ ನಡುವೆಯೇ ಭರತನಾಟ್ಯ ಸೀನಿಯರ್ ಪರೀಕ್ಷೆಯನ್ನು ಉತ್ತಮ ಅಂಕದೊಂದಿಗೇ ಉತ್ತೀರ್ಣಳಾಗಿದ್ದು ಸಾಧನೆಯೇ ಸರಿ.

ಹೆಸರಿಗೆ ಅನ್ವರ್ಥ- ವಿದ್ಯಾಶ್ರೀ

ವಿದುಷಿ ದಿವ್ಯಾ ಗಿರಿಧರ ಅವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ಪಾಠಕ್ರಮ ಪೂರ್ಣಗೊಳಿಸಿಕೊಂಡಳು. ಶಾಲಾ- ಕಾಲೇಜಿನ ಯಾವ ಹಂತದ ಪರೀಕ್ಷೆಗೂ ಸಂಗೀತ- ನೃತ್ಯ ಎಂಬುದು ಚೈತನ್ಯ ಕೊಟ್ಟಿತು. ಇದು ನಮ್ಮೆಲ್ಲಾ ಪಾಲಕರಿಗೆ ಮಾದರಿಯಾಗಬೇಕು. ಆ ಮಟ್ಟಿನ ಸಾಧನೆ ಮಾಡಿದ ವಿದ್ಯಾಶ್ರೀ, ಹಿಂತಿರುಗಿ ನೋಡಲೇ ಇಲ್ಲ. ಬಿಇ- ಎಂಎ. ಫೈನ್ ಆರ್ಟ್ಸ್ ಸಂದರ್ಭದಲ್ಲೂ ನೃತ್ಯ ಕಲಿಕೆ ಮರೆಯಲಿಲ್ಲ. ಆ ಮಟ್ಟಿಗಿನ ಬಾಂಧವ್ಯ, ಗುರು- ಶಿಷ್ಯ ಪರಂಪರೆಯನ್ನು ಬಿಗಿಗೊಳಿಸಿದ ಕೀರ್ತಿ ವಿದುಷಿ ರೂಪಶ್ರೀ ಅವರಿಗೂ ಸಲ್ಲುತ್ತದೆ. 16 ವರ್ಷ ನರ್ತನ ಕಲಿಕೆ ಫಲವಾಗಿ ವಿದ್ಯಾಶ್ರೀ ಇದೀಗ ಭರತನಾಟ್ಯ ವಿದ್ವತ್ ಪೂರ್ಣಗೊಳಿಸಿ ಕ್ರೈಸ್ಟ್ ವಿಶ್ವ ವಿದ್ಯಾಲಯದಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯನ್ನೂ (ವಾರಾಂತ್ಯ ತರಗತಿಗೆ ಬದ್ಧವಾಗಿ) ಪಡೆದಿರುವುದು ಸಾಧನೆಯ ಛಾವಣಿಯ ನಿಚ್ಚಣಿಕೆಯಾಗಿದೆ.

ಇದರೊಂದಿಗೆ ಈಕೆ ಸಂಸ್ಕೃತ ಭಾಷೆಯಲ್ಲೂ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. 15 ವರ್ಷಗಳಿಂದ ವಿದ್ವಾನ್. ಸುಬ್ರಮಣಿಯನ್ ಅವರ ಮಾರ್ಗದರ್ಶನದಲ್ಲಿ ಸಂಸ್ಕೃತ ಭಾಷಾಧ್ಯಯನ ಸಾಗಿದೆ. ವಿದುಷಿ ಅನಂತಲಕ್ಷ್ಮೀ ನಟರಾಜನ್ ರವರು ಸ್ಥಾಪಿಸಿದ ಗೀತಾಗೋವಿಂದ ಸಂಸ್ಕೃತ ಸಂಘದಲ್ಲಿ ಈಕೆ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ. ವ್ಯೋಮಾ ಲಿಂಗ್ವಿಸ್ಟಿಕ್ ಲ್ಯಾಬ್ಸ್, ಸಂಸ್ಕೃತ ಇ - ಲರ್ನಿಂಗ್ ಸಂಸ್ಥೆಯಲ್ಲಿ ಸ್ವಯಂ ಸೇವಕಿಯಾಗಿ ಸೇವೆ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಅನ್ನ ನೀಡುವ ‘ ಆಪ್ತ ಸಹಾಯ ಫೌಂಡೇಷನ್’ ಎಂಬ ಎನ್‌ಜಿಒದಲ್ಲೂ ವಿದ್ಯಾಶ್ರೀ ವಾಲಂಟಿಯರ್. ಹೆತ್ತವರಿಗೆ, ವಿದ್ಯೆ ಕಲಿಸಿದ ಗುರುವಿಗೆ ಇದಕ್ಕಿಂತ ಇನ್ನೇನು ಕಾಣಿಕೆ ಬೇಕು.

(ಲೇಖನ-ಶಿವಮೊಗ್ಗ ರಾಮ್‌)

IPL_Entry_Point