ಕನ್ನಡ ಸುದ್ದಿ  /  ಕರ್ನಾಟಕ  /  Bangalore Rain: ಬಿಸಿಲಿಗೆ ತತ್ತರಿಸಿದ ಬೆಂಗಳೂರು ಜನರಿಗೆ ಸಿಹಿ ಸುದ್ದಿ; ಯುಗಾದಿ ನಂತರ ನಗರದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ

Bangalore Rain: ಬಿಸಿಲಿಗೆ ತತ್ತರಿಸಿದ ಬೆಂಗಳೂರು ಜನರಿಗೆ ಸಿಹಿ ಸುದ್ದಿ; ಯುಗಾದಿ ನಂತರ ನಗರದಲ್ಲಿ ಸಾಧಾರಣ ಮಳೆಯ ಮುನ್ಸೂಚನೆ

ಬೆಂಗಳೂರಿನಲ್ಲಿ ಸದ್ಯ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ. ಈ ಬಿಸಿಯ ವಾತಾವರಣ ಇನ್ನ ಕೆಲವು ದಿನಗಳ ವರೆಗೆ ಮಾತ್ರ ಇರಲಿದೆ. ಯುಗಾದಿಯ ನಂತರ ನಗರಕ್ಕೆ ವರುಣ ಆಗಮನದ ಮುನ್ಸೂಚನೆ ಇದೆ.

ಯುಗಾದಿ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ. (ಸಂಗ್ರಹ ಚಿತ್ರ)
ಯುಗಾದಿ ಹಬ್ಬದ ಬಳಿಕ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ ಎಂದು ವರದಿಯಾಗಿದೆ. (ಸಂಗ್ರಹ ಚಿತ್ರ)

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು (Bangalore Rain) ಮಂದಿ ಕಳೆದ ಹಲವು ದಿನಗಳಿಂದ ರಣ ಬಿಸಿಲಿಗೆ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಬೆಂಗಳೂರಿಗರಿಗೆ ಸಿಹಿ ಸುದ್ದಿಯೊಂದು ಇದೆ. ಯುಗಾದಿ ಹಬ್ಬದ ಮುಗಿದ ಬಳಿಕ ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ವರದಿಯಾಗಿದೆ. ಏಪ್ರಿಲ್ 9 ರಂದು ಯುಗಾದಿ ಹಬ್ಬದ ನಂತರ ಬೆಂಗಳೂರಿನಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಐಟಿ-ಬಿಟಿ ರಾಜಧಾನಿ ಪ್ರಸ್ತುತ 35 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನವನ್ನು ದಾಖಲಿಸುತ್ತಿದೆ. ಈ ಬಿಸಿಯ ವಾತಾವರಣ ಕಡಿಮೆ ಎಂದರೂ ಯುಗಾದಿಯವರೆಗೆ (Ugadi 2024) ಮಾತ್ರ ಹೆಚ್ಚಾಗುವ ನಿರೀಕ್ಷೆಯಿದೆ.

ಟ್ರೆಂಡಿಂಗ್​ ಸುದ್ದಿ

ವರದಿಯ ಪ್ರಕಾರ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಏಪ್ರಿಲ್ ಎರಡನೇ ವಾರದಲ್ಲಿ ಬೆಂಗಳೂರಿನಾದ್ಯಂತ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದ್ದು, ತಿಂಗಳ ಅಂತ್ಯದವರೆಗೆ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಿದೆ. ಐಎಂಡಿ ಹಿರಿಯ ವಿಜ್ಞಾನಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, "ನಗರದಲ್ಲಿ ಯುಗಾದಿ ನಂತರ ಲಘು ಮಳೆಯಾಗಬಹುದು. ಅದೇ ವಾರದಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಏಪ್ರಿಲ್ ದ್ವಿತೀಯಾರ್ಧದಲ್ಲಿ ನಗರದಾದ್ಯಂತ ಗುಡುಗು ಮತ್ತು ಬಲವಾದ ಗಾಳಿಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಮಳೆಯು ಹೆಚ್ಚಿರುವ ತಾಪಮಾನವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಜೊತೆಗೆ ನಗರದಲ್ಲಿ ಒಣಗಿದ ಕೊಳವೆಬಾವಿಗಳಿಗೆ ಮರು ಜೀವ ನೀಡುವ ನಿರೀಕ್ಷೆಯಿದೆ. ಇದು ಕಳೆದ ಎರಡು ತಿಂಗಳಲ್ಲಿ ತೀವ್ರ ನೀರಿನ ಬಿಕ್ಕಟ್ಟಿಗೆ ಕಾರಣವಾಗಿದೆ. ಹೆಚ್ಚಿನ ತಾಪಮಾನ ಯುಗಾದಿ ಹಬ್ಬದವರೆಗೂ ಯಾವುದೇ ಕರುಣೆಯನ್ನು ತೋರಿಸುವುದಿಲ್ಲ. ಗುರುವಾರ (ಏಪ್ರಿಲ್ 4) ಬೆಂಗಳೂರಿನಲ್ಲಿ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಏಪ್ರಿಲ್ ತಿಂಗಳ ಸರಾಸರಿಗಿಂತ ಮೂರು ಡಿಗ್ರಿ ಹೆಚ್ಚಾಗಿದೆ. ಹಬ್ಬದವರೆಗೆ ವಾರಾಂತ್ಯದ ವೇಳೆಗೆ ಮಾತ್ರ ತಾಪಮಾನ ಹೆಚ್ಚಾಗಬಹುದು ಎಂದು ಮತ್ತೊಬ್ಬ ಹಿರಿಯ ವಿಜ್ಞಾನಿ ಹೇಳಿದ್ದಾರೆ.

ಬಿಸಿಲಿನಿಂದ ಆರೋಗ್ಯ ಕಾಪಾಡಿಕೊಳ್ಳಲು ಕೆಎಸ್‌ಡಿಎಂಎಂ ಸಲಹೆಗಳನ್ನ ಪಾಲಿಸಿ

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಈಗಾಗಲೇ ಹೊಸ ಶಾಖಗಾಳಿ ಸಲಹೆಯನ್ನು ನೀಡಿದ್ದು, ಗರಿಷ್ಠ ತಾಪಮಾನದಲ್ಲಿ, ವಿಶೇಷವಾಗಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ ಜನರು ಮನೆಯೊಳಗೆ ಇರಬೇಕು ಎಂದು ಹೇಳಿದೆ. ಈ ಬಗ್ಗೆ ಹೊರಡಿಸಿರುವ ಸುತ್ತೋಲೆಯಲ್ಲಿ ಮತ್ತಷ್ಟು ಸಲಹೆ ಸೂಚನೆಗಳನ್ನು ನೀಡಿದ್ದು, ಜನರಿಗೆ ಹೈಡ್ರೇಟ್ ಆಗಿರಲು ಮತ್ತು ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಲು ಸಲಹೆ ನೀಡಿದೆ ಎಂದು ವರದಿಯಾಗಿದೆ. ಶಾಖದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸನ್‌ಗ್ಲಾಸ್, ಛತ್ರಿಗಳು ಮತ್ತು ಟೋಪಿಗಳ ಬಳಕೆಯನ್ನು ಶಿಫಾರಸು ಮಾಡಿದೆ. ಜನರು ಕೆಫೀನ್, ಕಾರ್ಬೊನೇಟೆಡ್ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ಇದು ದೇಹವನ್ನು ವೇಗವಾಗಿ ನಿರ್ಜಲೀಕರಣಗೊಳಿಸುತ್ತದೆ ಎಂದು ಕೆಎಸ್‌ಡಿಎಂಎ ಸಲಹೆಗಳನ್ನು ನೀಡಿದೆ.

IPL_Entry_Point