Renuka Swamy: ಕೊಲೆಗೀಡಾದ ರೇಣುಕಾಸ್ವಾಮಿ ಯಾರು, ಕುತೂಹಲ ಕೆರಳಿಸಿದೆ ದರ್ಶನ್ ಅಭಿಮಾನಿ ಎನ್ನಲಾದ ವ್ಯಕ್ತಿಯ ನಿಗೂಢ ಕೊಲೆ ಕೇಸ್
ಕನ್ನಡ ಸುದ್ದಿ  /  ಕರ್ನಾಟಕ  /  Renuka Swamy: ಕೊಲೆಗೀಡಾದ ರೇಣುಕಾಸ್ವಾಮಿ ಯಾರು, ಕುತೂಹಲ ಕೆರಳಿಸಿದೆ ದರ್ಶನ್ ಅಭಿಮಾನಿ ಎನ್ನಲಾದ ವ್ಯಕ್ತಿಯ ನಿಗೂಢ ಕೊಲೆ ಕೇಸ್

Renuka Swamy: ಕೊಲೆಗೀಡಾದ ರೇಣುಕಾಸ್ವಾಮಿ ಯಾರು, ಕುತೂಹಲ ಕೆರಳಿಸಿದೆ ದರ್ಶನ್ ಅಭಿಮಾನಿ ಎನ್ನಲಾದ ವ್ಯಕ್ತಿಯ ನಿಗೂಢ ಕೊಲೆ ಕೇಸ್

Darshan Arrest: ಚಾಲೆಂಜಿಂಗ್ ಸ್ಟಾರ್ ದರ್ಶನ್, ಅವರ ಗೆಳತಿ ಪವಿತ್ರ ಗೌಡ ಸೇರಿ 10 ಜನರನ್ನು ಪೊಲೀಸರು ವಶಪಡಿಸುವುದಕ್ಕೆ ಕಾರಣವಾದ ಕೊಲೆ ಕೇಸ್ ದೇಶದ ಗಮನಸೆಳೆದಿದೆ. ದರ್ಶನ್ ಅಭಿಮಾನಿ ಎನ್ನಲಾದ ವ್ಯಕ್ತಿಯ ನಿಗೂಢ ಕೊಲೆ ಕೇಸ್ ಕುತೂಹಲ ಕೆರಳಿಸಿದೆ. ಕೊಲೆಗೀಡಾದ ರೇಣುಕಾಸ್ವಾಮಿ ಯಾರು ಎಂಬಿತ್ಯಾದಿ ವಿವರ ಇಲ್ಲಿದೆ.

Darshan Arrest: ಕೊಲೆಗೀಡಾದ ರೇಣುಕಾಸ್ವಾಮಿ ಯಾರು, ಕುತೂಹಲ ಕೆರಳಿಸಿದೆ ದರ್ಶನ್ ಅಭಿಮಾನಿಯ ನಿಗೂಢ ಕೊಲೆ ಕೇಸ್
Darshan Arrest: ಕೊಲೆಗೀಡಾದ ರೇಣುಕಾಸ್ವಾಮಿ ಯಾರು, ಕುತೂಹಲ ಕೆರಳಿಸಿದೆ ದರ್ಶನ್ ಅಭಿಮಾನಿಯ ನಿಗೂಢ ಕೊಲೆ ಕೇಸ್

ಬೆಂಗಳೂರು / ಚಿತ್ರದುರ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸೇರಿ 10 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿರುವ ಚಿತ್ರದುರ್ಗದ ರೇಣುಕಾಸ್ವಾಮಿ (33) ಕೊಲೆ ಕೇಸ್ ಬಹಳ ಕುತೂಹಲಕ್ಕೆ ಕಾರಣವಾಗಿದೆ. ಕಾಮಾಕ್ಷಿ ಪಾಳ್ಯದ ಸತ್ವ ಅಪಾರ್ಟ್‌ಮೆಂಟ್ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು.

ಅಲ್ಲಿನ ಸೆಕ್ಯೂರಿಟಿ ಗಾರ್ಡ್ ರಾಮ್ ದೌರ್‌ಜಿ ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದರು. ಈ ದೂರಿನಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ವಿಚಾರವಷ್ಟೇ ಇದೆ. ನಂತರ ಶವ ಚಿತ್ರದುರ್ಗದ ರೇಣುಕಾಸ್ವಾಮಿಯದ್ದು ಎಂಬುದು ದೃಢಪಟ್ಟಿತ್ತು. ಶವದ ಜೊತೆಗೆ ಸಿಕ್ಕ ದಾಖಲೆಗಳನ್ನು ಆಧರಿಸಿ ಗುರುತು ಹಿಡಿಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೊಲೆಗೀಡಾದ ರೇಣುಕಾಸ್ವಾಮಿ ಯಾರು

ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ಸಮೀಪ ನಿಗೂಢವಾಗಿ ಕೊಲೆಗೀಡಾದ ರೇಣುಕಾಸ್ವಾಮಿ ಯಾರು? ಎಂಬ ಕುತೂಹಲ ಸಹಜ. ಈತ ಕೆಇಬಿಯ ನಿವೃತ್ತ ಅಧಿಕಾರಿ ಶಿವನಗೌಡ ಮತ್ತು ರತ್ನಪ್ರಭಾ ದಂಪತಿಯ ಪುತ್ರ. ಚಿತ್ರದುರ್ಗದ ಲಕ್ಷ್ಮೀವೆಂಕಟೇಶ್ವರ ಬಡಾವಣೆಯ ನಿವಾಸಿ. ರೇಣುಕಾಸ್ವಾಮಿ ಎರಡು ವರ್ಷಗಳ ಹಿಂದೆ ಸಹನಾ ಎಂಬುವವರನ್ನು ವಿವಾಹವಾಗಿದ್ದ. ಪತ್ನಿ ಈಗ ಗರ್ಭಿಣಿ. ಚಿತ್ರದುರ್ಗದ ಅಪೊಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ. ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಎಂಬ ಮಾಹಿತಿ ಬಹಿರಂಗವಾಗಿದೆ.

ಶನಿವಾರ ಮಧ್ಯಾಹ್ನದಿಂದ ರೇಣುಕಾಸ್ವಾಮಿ ಸಂಪರ್ಕದಲ್ಲಿ ಇಲ್ಲ ಎಂದು ಅವರ ತಾಯಿ ರತ್ನಪ್ರಭಾ ಮತ್ತು ಪತ್ನಿ ಸಹನಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ರೇಣುಕಾಸ್ವಾಮಿ ಅವರ ಅಪ್ಪ, ಅಮ್ಮ, ಪತ್ನಿ ಅವರಿಗೆ ನಿನ್ನೆ ರೇಣುಕಾಸ್ವಾಮಿ ನಿಧನದ ಸುದ್ದಿಯನ್ನು ಕಾಮಾಕ್ಷಿಪಾಳ್ಯ ಪೊಲೀಸರು ತಿಳಿಸಿದ್ದರು. ಹೀಗಾಗಿ, ರೇಣುಕಾಸ್ವಾಮಿ ಕುಟುಂಬ ಪೊಲೀಸ್ ಠಾಣೆಗೆ ಆಗಮಿಸಿದ್ದು, ಮೃತದೇಹ ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕ್ರಿಯೆ ನಡೆಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದಲ್ಲಿ ರೇಣುಕಾಸ್ವಾಮಿ ಅವರ ಮೃತದೇಹ ಇರಿಸಲಾಗಿದೆ. ಅಲ್ಲಿಂದ ಶವಮಹಜರು ನಡೆಸಿದ ಬಳಿಕ ಅದನ್ನು ಕುಟುಂಬದ ವಶಕ್ಕೆ ನೀಡಲಾಗುತ್ತದೆ.

ನೆಚ್ಚಿನ ನಟನ ಸಂಸಾರ ಉಳಿಸಲು ಪವಿತ್ರ ಗೌಡಗೆ ಮೆಸೇಜ್ ಮಾಡಿದ್ದನಾ ರೇಣುಕಾಸ್ವಾಮಿ

ಕೊಲೆಗೀಡಾದ ರೇಣುಕಾಸ್ವಾಮಿ ಕೂಡ ದರ್ಶನ್ ಅಭಿಮಾನಿಆತ ತನ್ನ ನೆಚ್ಚಿನ ನಾಯಕ ದರ್ಶನ್ ಸಂಸಾರ ಚೆನ್ನಾಗಿರಲಿ ಎಂಬ ಆಶಯ ಹೊಂದಿದ್ದ. ಪವಿತ್ರ ಗೌಡ ಅದಕ್ಕೆ ಅಡ್ಡಿ ಎಂದೇ ನಂಬಿಕೊಂಡಿದ್ದ ಹೀಗಾಗಿ, ಪವಿತ್ರ ಗೌಡಗೆ ಕೆಟ್ಟದಾಗಿ, ಅಶ್ಲೀಲ ಕಾಮೆಂಟ್‌ಗಳನ್ನು ಅವರ ಸೋಷಿಯಲ್ ಮೀಡಿಯಾದಲ್ಲಿ ಕಳುಹಿಸಿದ್ದ ಎಂದು ಹೇಳಲಾಗುತ್ತಿದೆ. ಇಂತಹ ಆಶಯ ಹೊಂದಿದ್ದ ರೇಣುಕಾಸ್ವಾಮಿ ನಿಗೂಢವಾಗಿ ಕೊಲೆಯಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ರೇಣುಕಾಸ್ವಾಮಿ ಈ ರೀತಿ ಮಾಡುತ್ತಿದ್ದ. ಇದರಿಂದಾಗಿ ಪವಿತ್ರಗೌಡ ಮಾತ್ರವಲ್ಲದೆ, ದರ್ಶನ್ ಕೂಡ ಕಿರಿಕಿರಿ ಅನುಭವಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಘಟಕದ ಅಧ್ಯಕ್ಷ ರಾಘವೇಂದ್ರ ಅವರನ್ನು ದರ್ಶನ್ ಮನೆಯಿಂದ ಸಂಪರ್ಕಿಸಲಾಗಿದೆ. ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವಂತೆ ಸೂಚಿಸಲಾಗಿದೆ ಎಂದು ಟಿವಿ 9 ಕನ್ನಡ ವರದಿ ಮಾಡಿದೆ.

ಜೂನ್ 8ರಂದು ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರುವ ಸಂಚು ರೂಪಿಸಲಾಗಿತ್ತು. ಅದರಂತೆ, ರೇಣುಕಾಸ್ವಾಮಿಯನ್ನು ಹುಡುಗಿ ಮಾತನಾಡುವಂತೆ ಮಾತನಾಡಿ ಕರೆಯಿಸಿಕೊಂಡು ಚಿತ್ರದುರ್ಗದಿಂದ ಒಂಟಿಯಾಗಿಸಿ ಅಲ್ಲಿಂದ ಅಪಹರಿಸಲಾಗಿದೆ. ಬೆಂಗಳೂರಿನಲ್ಲಿ ಕಾಮಾಕ್ಷಿಪಾಳ್ಯ ಸಮೀಪದ ವಿನಯ್ ಎಂಬುವವರ ಕಾರಿನ ಶೆಡ್‌ಗೆ ಕರೆತಂದು ಅಲ್ಲಿ, ತರಾಟೆಗೆ ತೆಗೆದುಕೊಳ್ಳಲಾಗಿದೆ. ಅಲ್ಲಿ ರೇಣುಕಾಸ್ವಾಮಿ ಹತ್ಯೆ ನಡೆದಿದೆ ಎಂಬ ಮಾಹಿತಿಯನ್ನು ಆರೋಪಿಗಳು ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ ಎಂದು ವರದಿ ಹೇಳಿದೆ.

Whats_app_banner