ಕನ್ನಡ ಸುದ್ದಿ  /  Karnataka  /  Bengaluru News Woman Pays <Span Class='webrupee'>₹</span>3500 For Bengaluru Flight Then Pays <Span Class='webrupee'>₹</span>2000 For Uber Viral News Uks

Viral News: ಪುಣೆ- ಬೆಂಗಳೂರು ವಿಮಾನ ಟಿಕೆಟ್ 3,500 ರೂ., ವಿಮಾನ ನಿಲ್ಧಾಣದಿಂದ ಮನೆಗೆ ಕ್ಯಾಬ್ ದರ 2,000 ರೂ!

ಪುಣೆ- ಬೆಂಗಳೂರು ವಿಮಾನ ಟಿಕೆಟ್ 3,500 ರೂಪಾಯಿ ಮತ್ತು ಬೆಂಗಳೂರು ವಿಮಾನ ನಿಲ್ಧಾಣದಿಂದ ಮನೆಗೆ ಕ್ಯಾಬ್ ದರ 2,000 ರೂಪಾಯಿ ಎಂಬ ಎಕ್ಸ್ ಪೋಸ್ಟ್ ಒಂದು ವೈರಲ್ ಆಗಿದೆ. ಮನಸ್ವಿ ಶರ್ಮಾ ಎಂಬ ಮಹಿಳೆ ಈ ಪೋಸ್ಟ್‌ ಮಾಡಿದ್ದು, ಬಹುಜನರ ಚರ್ಚೆಗೆ ಇದು ಗ್ರಾಸ ಒದಗಿಸಿದೆ.

ಮನಸ್ವಿ ಶರ್ಮಾ ಅವರು ಟ್ವೀಟ್‌ನಲ್ಲಿ ಶೇರ್ ಮಾಡಿಕೊಂಡಿದ್ದ ಉಬರ್ ಟ್ಯಾಕ್ಸಿ ದರಗಳ ಸ್ಕ್ರೀನ್ ಶಾಟ್ (ಎಡ ಚಿತ್ರ); ಬೆಂಗಳೂರು ವಿಮಾನ ನಿಲ್ದಾಣ (ಬಲ ಚಿತ್ರ)
ಮನಸ್ವಿ ಶರ್ಮಾ ಅವರು ಟ್ವೀಟ್‌ನಲ್ಲಿ ಶೇರ್ ಮಾಡಿಕೊಂಡಿದ್ದ ಉಬರ್ ಟ್ಯಾಕ್ಸಿ ದರಗಳ ಸ್ಕ್ರೀನ್ ಶಾಟ್ (ಎಡ ಚಿತ್ರ); ಬೆಂಗಳೂರು ವಿಮಾನ ನಿಲ್ದಾಣ (ಬಲ ಚಿತ್ರ) (X/@manasvisharmaaa)

ಬೆಂಗಳೂರು: ಮಹಿಳೆಯೊಬ್ಬರು ಪುಣೆಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದ್ರು. ಅಲ್ಲಿಂದ ಅವರ ಮನೆಗೆ ಉಬರ್ ಬುಕ್‌ ಮಾಡಿದ್ರು. ಉಬರ್‌ ತೋರಿಸಿದ ದರ ವಿವರ ನೋಡಿ ಹೌಹಾರಿದ್ರು.. ಕಾರಣ ಇಷ್ಟೆ- ಪುಣೆ - ಬೆಂಗಳೂರು ವಿಮಾನ ಪ್ರಯಾಣದ ದರಕ್ಕೂ, ಬೆಂಗಳೂರು ವಿಮಾನ ನಿಲ್ದಾಣದಿಂದ ಅವರ ಮನೆಗೆ ಹೋಗಲು ಉಬರ್ ಟ್ಯಾಕ್ಸಿ ದರಕ್ಕೂ ಇದ್ದ ವ್ಯತ್ಯಾಸ ಕೇವಲ 1,500 ರೂಪಾಯಿ!

ಮನಸ್ವಿ ಶರ್ಮಾ ಎಂಬುವವರಿಗೇ ಈ ರೀತಿ ಅಚ್ಚರಿ ಉಂಟಾಗಿದ್ದು. ಅವರು ಈ ಅನುಭವವನ್ನು ಪೀಕ್ ಬೆಂಗಳೂರು ಕ್ಷಣ ಎಂದು ದಾಖಲಿಸಿದ್ದು, ಎಕ್ಸ್‌ನಲ್ಲಿ ವಿವರವನ್ನು ಟ್ವೀಟ್ ಮಾಡಿದ್ದಾರೆ. ಪುಣೆಯಿಂದ ಬೆಂಗಳೂರಿಗೆ ವಿಮಾನ ಟಿಕೆಟ್ ದರ ಅವರು ನೀಡಿದ್ದು 3,500 ರೂಪಾಯಿ. ಉಬರ್ ಟ್ಯಾಕ್ಸಿ ದರ 2,000 ರೂಪಾಯಿಗೂ ಹೆಚ್ಚು!

ಮನಸ್ವಿ ಶರ್ಮಾ ಅವರು, “ನಾನು ಪುಣೆಯಿಂದ ಬೆಂಗಳೂರಿಗೆ 3,500 ರೂಪಾಯಿ ಪಾವತಿಸಿ ಟಿಕೆಟ್ ಬುಕ್ ಮಾಡಿದ್ದೆ. ನಂತರ ಬೆಂಗಳೂರಿಗೆ ಬಂದಿಳಿದು ವಿಮಾನ ನಿಲ್ದಾಣದಿಂದ ಮನೆಗೆ ಉಬರ್ ಕ್ಯಾಬ್ ಬುಕ್ ಮಾಡಿದೆ. ಅದಕ್ಕೆ 2,000 ರೂಪಾಯಿ ಆಯಿತು” ಎಂದು ಟ್ವೀಟ್ ಮಾಡಿದ್ದಾರೆ. ಅವರು ತಮ್ಮ ಪೋಸ್ಟ್ನಲ್ಲಿ ಉಬರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ. ಇದಲ್ಲದೆ, ಉಬರ್‌ ಟ್ಯಾಕ್ಸಿ ಸೇವೆಗಳು ತೋರಿಸುತ್ತಿದ್ದ ದರಗಳ ಸ್ಕ್ರೀನ್ ಶಾಟ್‌ ಅನ್ನೂ ಶೇರ್ ಮಾಡಿದ್ದಾರೆ.

ಮನಸ್ವಿ ಶರ್ಮಾ ಅವರ ಟ್ವೀಟ್ ಇಲ್ಲಿದೆ ನೋಡಿ;

ಮನಸ್ವಿ ಶರ್ಮಾ ಅವರು ಏಪ್ರಿಲ್ 1ರಂದು ಈ ಟ್ವೀಟ್ ಮಾಡಿದ್ದಾರೆ. ಇದುವರೆಗೆ 8.5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಹೊಂದಿರುವ ಟ್ವೀಟ್‌ಗೆ 6700ಕ್ಕೂ ಹೆಚ್ಚು ಲೈಕ್ಸ್ ಬಂದಿವೆ. 1,100ಕ್ಕೂ ಹೆಚ್ಚು ಜನ ಕಾಮೆಂಟ್ ಮಾಡಿದ್ದಾರೆ.

ಮನಸ್ವಿ ಶರ್ಮಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ಹೀಗಿದೆ ನೋಡಿ

ಉಬರ್‌ ಟ್ಯಾಕ್ಸಿ ದರಗಳ ಕೆಳಗೆ ಇರುವ ಅಫೋರ್ಡೆಬಲ್‌ (ಕೈಗೆಟಕುವ ದರ) ಕುರಿತು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಪ್ರಯಾಣಕ್ಕೆ ದುಬಾರಿ ದರ ವಿಧಿಸುವ ಬಗ್ಗೆ, ಉಬರ್‌ ಸೇವೆಯ ಬಗ್ಗೆ ಬಹಳಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೈಗೆಟುಕುವ ದರದಲ್ಲಿ ಎಂದು ಬರೆಯುವ ಧೈರ್ಯ" ನೋಡಿ ಎಂದು ಎಕ್ಸ್ ಬಳಕೆದಾರ ರೊಬ್ಬರು ಕಾಮೆಂಟ್ ಮಾಡಿದ್ದಾರೆ.

“ಬದಲಾವಣೆಗೆ ಇದು ಸಮಯ” ಎಂದು ಒಬ್ಬರು ಕಾಮೆಂಟ್ ಮಾಡಿದ್ದು, ಅದಕ್ಕೆ ಮನಸ್ವಿ ಶರ್ಮಾ ಸಹಮತ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇನ್ನು ಕೆಲವರು ಪ್ರತಿಕ್ರಿಯೆ ನೀಡಿದ್ದು, ಉಬರ್ ಮಾತ್ರವಲ್ಲ ಇತರೆ ಕ್ಯಾಬ್ ಚಾಲಕರು ಕೂಡ ವಿಮಾನ ನಿಲ್ದಾಣದಿಂದ ಕರೆದೊಯ್ಯಬೇಕಾದರೆ 2,000 ರೂಪಾಯಿ ಬಾಡಿಗೆ ನಿರೀಕ್ಷಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಇನ್ನೊಬ್ಬ ಬಳಕೆದಾರ, “ಉಬರ್‌ನಲ್ಲಿರುವ ಮಾರುತಿ ಎಸ್‌ಪ್ರೆಸ್ಸೋ ವಾಹನಗಳ ಜೊತೆಗಿನ ಒಪ್ಪಂದ ಕೈಬಿಡಿ. ಆ ವಾಹನಗಳನ್ನು ವಿಮಾನ ನಿಲ್ದಾಣದ ಸೇವೆಗೆ ಕಳುಹಿಸಬೇಡಿ. ಅದರಲ್ಲಿ ನಮ್ಮ ಲಗೇಜ್ ಹಾಕಿಕೊಂಡು ಪ್ರಯಾಣಿಸುವುದಕ್ಕಾಗುವುದಿಲ್ಲ” ಎಂದು ಮತ್ತೊಂದು ಸಮಸ್ಯೆ ಕಡೆಗೆ ಗಮನಸೆಳೆದಿದ್ದಾರೆ.

ಬಿಎಂಟಿಸಿ ನೀಲಿ ಬಸ್ ಆರಾಮದಾಯಕ. ಅವುಗಳನ್ನು ಬಳಸುವುದಕ್ಕೆ ನೋಡಿ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.

ಬಸ್‌ ಸಿಗದೇ ಇದ್ದರೆ ಅಥವಾ ಅನುಕೂಲವಲ್ಲ ಎಂದೆನಿಸಿದರೆ ಸ್ನೇಹಿತರಿಗೆ ಪರಿಚಿತರಾಗಿರುವ ವಿಶ್ವಾಸಾರ್ಹ ಚಾಲಕರನ್ನು ಪಿಕ್‌ ಅಪ್, ಡ್ರಾಪ್‌ಗೆ ಬರಹೇಳಿ. ಅವರು ಖಚಿತವಾಗಿಯೂ 2000 ರೂಪಾಯಿಗಿಂತ ಕಡಿಮೆ ಚಾರ್ಜ್‌ ಕೇಳುತ್ತಾರೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

"ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ನಗರಕ್ಕೆ ಪ್ರಯಾಣಿಸುವುದು ನನ್ನ ಜೀವನದಲ್ಲಿ ಅತ್ಯಂತ ಕೆಟ್ಟ ಪ್ರಯಾಣಗಳಲ್ಲಿ ಒಂದು" ಎಂದು ಮಗದೊಬ್ಬರು ಬರೆದುಕೊಂಡಿದ್ದಾರೆ.

IPL_Entry_Point