Viral Photo: ಟೊಮೆಟೊ ಕದ್ರೆ ಹುಷಾರ್: ಬೆಂಗಳೂರು ತರಕಾರಿ ಮಳಿಗೆಯಲ್ಲಿ ರಾರಾಜಿಸುತ್ತಿದೆ ಕೆಂಗಣ್ಣು ಬೀರಿದ ಮಹಿಳೆ ಫೋಟೊ
ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿನ ಮಹಿಳೆಯ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಓಹೋ ದೇವರೇ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು: ಅಂಗಡಿಗಳ ಗೋಡೆ ಮೇಲೆ ನೇತುಹಾಕಿರುವ ದೃಷ್ಟಿ ಫೋಟೊಗಳನ್ನ ನೋಡಿರುತ್ತೀರಿ. ಈ ಫೋಟೊಗಳು ಗ್ರಾಹಕರ ಗಮನ ಸೆಳೆಯಲು ಪ್ರಾಣಿಗಳು, ಪಕ್ಷಿಗಳು ಹಾಗೂ ನಗಿಸುವ ರೀತಿಯಲ್ಲಿರುವ ವಿವಿಧ ಬಗೆಯ ಚಿತ್ರಗಳನ್ನ ಹಾಕಿರುತ್ತಾರೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ತರಕಾರಿ ಅಂಗಡಿಯೊಂದರಲ್ಲಿ ನೇತುಹಾಕಿರುವ ಫೋಟೊವನ್ನು (Bengaluru Viral Photo) ನೀವು ಹಿಂದೆಂದು ನೋಡಿರಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿರುವ ಫೋಟೊವನ್ನು ನೋಡಿದ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯಿಗಳನ್ನು ನೀಡಿದ್ದಾರೆ.
ಅಷ್ಟಕ್ಕೂ ತರಕಾರಿ ಅಂಗಡಿಯಲ್ಲಿ ಕ್ರೆಟ್‌ಗಳಲ್ಲಿ ತುಂಬಿಟ್ಟಿರುವ ಟೊಮೆಟೊ ಮುಂದೆ ಮರವೊಂದಕ್ಕೆ ನೇತುಹಾಕಿರುವ ಫೋಟೊದಲ್ಲಿ ಮಹಿಳೆ ಕೋಪಗೊಂಡು ದಪ್ಪ ಕಣ್ಣುಗಳಿಂದ ಗುರಿಯಾಸಿಕೊಂಡು ನೋಡುತ್ತಿರುವಂತಿದೆ. ಕೆಂಗಣ್ಣು ಬೀರಿದ ಮಹಿಳೆಯ ಫೋಟೊವನ್ನು ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದು, ನಾನು ಇವತ್ತು ಹೊರಬಂದಿದ್ದೇನೆ ಎಂದು ನನಗೆ ತುಂಬಾ ಸಂತೋಷವಾಗಿದೆ ಎಂದು ನೆಟ್ಟಿಗರೊಬ್ಬರು ಈ ಫೋಟೊವನ್ನು ಹಂಚಿಕೊಂಡು ಕಾಮೆಂಟ್ ಮಾಡಿದ್ದಾರೆ. ಇದು ಭಯಾನದ ಫೋಟೊ ಎಂದು ಮತ್ತೊಬ್ಬ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಹೀಗೆ ನೋಡಿದರೆ ಪ್ರೀತಿಯಲ್ಲಿ ಬೀಳುವುದು ಕಷ್ಟ ಎಂದು ಮತ್ತೊಬ್ಬರು ಕಾಳೆಲೆದಿದ್ದಾರೆ. ಫೋಟೊ ನೋಡಿದ ಮೇಲೆ ಇನ್ನೇರಡು ದಿನ ನನಗೆ ನಿದ್ದೆ ಬರೋದಿಲ್ಲ, ವೈದ್ಯರನ್ನ ಸಂಪರ್ಕಿಸಬೇಕಾಗುತ್ತೆ ಎಂದು ಇನ್ನೊಬ್ಬ ನೆಟ್ಟಿಗರು ಪ್ರತಿಸಿದರೆ, ನೀವು ಟೊಮೆಟೊ ಕದಿಯಬೇಡಿ ಎಂದು ಹಲವರು ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಪಪ್ಪಾಯಿ, ಕಲ್ಲಂಗಡಿ ಹಣ್ಣುಗಳ ಜೊತೆಗೆ ಟೊಮೆಟೊ ಹಾಗೂ ಇತರೆ ತರಕಾರಿ ಮಳಿಗೆಯೊಳಗಿರುವ ಮರಕ್ಕೆ ನೇತುಹಾಕಿರುವ ಮಹಿಳೆಯ ಫೋಟೊ ಹಲವರಿಗೆ ಅಚ್ಚರಿ ತರಿಸಿದೆ. ಆಕೆಯ ಕಣ್ಣುಗಳನ್ನು ನೋಡಿದ ಕೆಲವರು ಬೆಚ್ಚಿಬಿದ್ದಿದ್ದಾರೆ. ಈ ಫೋಟೊ ಬಗ್ಗೆ ನಿಮಗೆ ಏನು ಅನಿಸುತ್ತೆ ಎಂಬುದನ್ನು ನೀವು ಕೂಡ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಬಹುದು.