Bengaluru news: ಬೆಂಗಳೂರಿನಲ್ಲಿ ನೀವು ಮನೆ ಬಾಡಿಗೆ ಪಡೆಯಬೇಕೇ? ಹಾಗಿದ್ದರೆ ಮನೆಯ ಓನರ್‌ ನಡೆಸುವ ಸಂದರ್ಶನದಲ್ಲಿ ಮೊದಲು ಪಾಸಾಗಿ-bengaluru news you should pass the interview conducted by the house owner to get rented house in bengaluru mgb ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಬೆಂಗಳೂರಿನಲ್ಲಿ ನೀವು ಮನೆ ಬಾಡಿಗೆ ಪಡೆಯಬೇಕೇ? ಹಾಗಿದ್ದರೆ ಮನೆಯ ಓನರ್‌ ನಡೆಸುವ ಸಂದರ್ಶನದಲ್ಲಿ ಮೊದಲು ಪಾಸಾಗಿ

Bengaluru news: ಬೆಂಗಳೂರಿನಲ್ಲಿ ನೀವು ಮನೆ ಬಾಡಿಗೆ ಪಡೆಯಬೇಕೇ? ಹಾಗಿದ್ದರೆ ಮನೆಯ ಓನರ್‌ ನಡೆಸುವ ಸಂದರ್ಶನದಲ್ಲಿ ಮೊದಲು ಪಾಸಾಗಿ

Rented house in Bengaluru: ಬೆಂಗಳೂರಿನಲ್ಲಿ ಇದೀಗ ಮನೆ ಬಾಡಿಗೆ ಪಡೆಯಲು ಸಂದರ್ಶನವನ್ನು ಎದುರಿಸಿ ಅದರಲ್ಲಿ ಪಾಸ್‌ ಆಗಲೇಬೇಕು. ಈ ಬಗ್ಗೆ ತಮ್ಮ ಅನುಭವವನ್ನು ವ್ಯಕ್ತಿಯೊಬ್ಬರು ಟ್ವಿಟರ್​​​ನಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲೂ ಸಂದರ್ಶನ
ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲೂ ಸಂದರ್ಶನ

ಬೆಂಗಳೂರು: ನೀವು ಬಾಡಿಗೆ ಮನೆ ಹುಡುಕುತ್ತಿದ್ದೀರಾ? ಅದರಲ್ಲೂ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದರೆ ಮನೆಯ ಮಾಲೀಕ ಮಾಡುವ ಸಂದರ್ಶನದಲ್ಲಿ ನೀವು ಪಾಸ್ ಆಗಲೇಬೇಕು. ಆಗ ಮಾತ್ರ ನಿಮಗೆ ಆ ಮನೆ ಬಾಡಿಗೆಗೆ ಸಿಗುತ್ತದೆ.

ಹೌದು, ಬೆಂಗಳೂರಿನಲ್ಲಿ ಇದೀಗ ಮನೆ ಬಾಡಿಗೆ ಪಡೆಯಲು ಸಂದರ್ಶನವನ್ನು ಎದುರಿಸಿ ಅದರಲ್ಲಿ ಪಾಸ್‌ ಆಗಲೇಬೇಕು. ಈ ಬಗ್ಗೆ ತಮ್ಮ ಅನುಭವವನ್ನು ವ್ಯಕ್ತಿಯೊಬ್ಬರು ಟ್ವಿಟರ್​​​ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಬಹಳಷ್ಟು ಜನರು ಪ್ರತಿಕ್ರಿಯೆ ನೀಡಿದ್ದಾರೆ.

ನೀರಜ್‌ ಮೆಂಟಾ ಎಂಬುವರು ತಮ್ಮ ಸಂದರ್ಶನದ ಅನುಭವವನ್ನು ಹೀಗೆ ಬಿಚ್ಚಿಟ್ಟಿದ್ದಾರೆ. “ಮನೆಯ ಓನರ್ ಕೇಳುವ ಪ್ರಶ್ನೆಗಳು ಯಾವುದೋ ಒಂದು ಕಂಪನಿಯ ಉದ್ಯೋಗಕ್ಕಾಗಿ ನಡೆಸುವ ಸಂದರ್ಶನಕ್ಕಿಂತ ಹೆಚ್ಚಾಗಿದೆ. ನಮ್ಮ ಮೂಲ ಬೇರಿನಿಂದ ಹಿಡಿದು, ನಮ್ಮ ಎಲ್ಲಾ ಹಿಸ್ಟರಿಗಳನ್ನು ಕೇಳುವುದಲ್ಲದೆ ಪರಿಶೀಲನೆ ಕೂಡ ನಡೆಸಿದ್ದಾರೆ. ಸಂದರ್ಶನವು ಒಂದು ಘೋರವಾಗಿತ್ತು ಎಂದರೆ ತಪ್ಪಲ್ಲ” ಎಂದು ಹೇಳಿಕೊಂಡಿದ್ದಾರೆ.

ಮನೆ ಹುಡುಕಲು ಬ್ರೋಕರ್ ಜೊತೆ ಹೋದಾಗ ಪೂರ್ವಭಾವಿ ಸಂದರ್ಶನವನ್ನು ನಡೆಸಿದರು. ಅದರಲ್ಲಿ ನನ್ನ ಹಾಗೂ ನನ್ನ ಪತ್ನಿಯ ಲಿಂಕಡ್​ಇನ್​ ಪ್ರೊಫೈಲ್ ಅನ್ನು ಶೇರ್ ಮಾಡಲು ತಿಳಿಸಿದರು. ಇದರ ಜೊತೆ ನಮ್ಮ ಹಿನ್ನೆಲೆ, ಕುಟುಂಬದ ಸದಸ್ಯರು ಸೇರಿದಂತೆ ಸಣ್ಣ ಡೇಟಾ ಅನ್ನು ಕೂಡ ಕಳಿಸಲು ಹೇಳಿದ್ದರು. ಇಷ್ಟೇ ಅಲ್ಲದೆ ನನ್ನ ಬಿಸಿನೆಸ್ ಬಗ್ಗೆಯೂ ಕೂಡ ಅವರು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ನಾವು ಶಾರ್ಟ್ ಲಿಸ್ಟ್ ಮಾಡಿ ನಿಮಗೆ ತಿಳಿಸುತ್ತೇವೆ ಎಂದರು.

ಕೆಲ ದಿನಗಳ ಬಳಿಕ ಆ ಮನೆಯನ್ನು ಬಾಡಿಗೆಗೆ ಪಡೆಯಲು ಇಚ್ಚಿಸುವವರನ್ನು ಕರೆಸಿ, ಕೊನೆಯ ಹಂತದ ಸಂದರ್ಶನ ನಡೆಸಿ ನಂತರ ಮನೆ ಬಾಡಿಗೆ ನೀಡಿದ್ದಾರೆ. ನಾನು ಆ ಸಂದರ್ಶನಕ್ಕೆ ಹೋಗಿ ಬಂದೆ, ನನ್ನ ಹೆಂಡತಿ ಹೇಗಾಯಿತು ಸಂದರ್ಶನ? ಏನಾಗಬಹುದು ಎಂದು ಕೇಳುತ್ತಿದ್ದಳು. ನಾನು ಚೆನ್ನಾಗಿ ಆಗಿದೆ ಎಂದು ಹೇಳಿದೆ ಎಂದು ಟ್ವಿಟ್ಟರ್​​ನಲ್ಲಿ ತಿಳಿಸಿದ್ದಾರೆ.

ಬಳಿಕ ಟ್ವಿಟರ್‌ ಬಳಕೆದಾರರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಕೊನೆಗೆ ನಿಮಗೆ ಮನೆ ಸಿಕ್ಕಿತೆ ಎಂದು ಕೇಳಿದಾಗ, ಅದಕ್ಕೆ ಬಾಡಿಗೆದಾರ ನೀರಜ್‌ ಪ್ರತಿಕ್ರಿಯಿಸಿ, ಹೌದು ಮನೆ ಸಿಕ್ಕಿದೆ ಎಂದಿದ್ದಾರೆ. ಈ ವೇಳೆ ಟ್ವಿಟರ್‌ ಬಳಕೆದಾರರು

ಬೇರೆ ಬೇರೆ ಊರುಗಳಲ್ಲಿ ಮನೆಯ ಓನರ್​​ಗಳೊಂದಿಗೆ ತಮಗೆ ಆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಬ್ಬರು ಇದು ಟಿವಿ ಸೀರಿಯಲ್‌ ಗಿಂತ ಹೆಚ್ಚು ತಮಾಷೆಯಾಗಿದೆ ಎಂದಿದ್ದಾರೆ.

ಒಟ್ಟಾರೆ ಬೆಂಗಳೂರಿನಲ್ಲಿ ಮನೆ ಅಥವಾ ಫ್ಲಾಟ್​​​ಗಳನ್ನು ಬಾಡಿಗೆ ಪಡೆಯಲು ಹರಸಾಹಸವೇ ಪಡಬೇಕಾಗಿದೆ. ಮಾಲೀಕರು ಇಎಂಐ ಕಟ್ಟುತ್ತಿರುತ್ತಾರೆ. ಹೀಗಾಗಿ, ಸರಿಯಾದ ಸಮಯಕ್ಕೆ ಬಾಡಿಗೆ ಬರಬೇಕು ಎಂಬುದು ಅವರ ಉದ್ದೇಶವಾಗಿರುತ್ತದೆ. ಹಿಂದೆ ಮುಂದೆ ನೋಡದೇ ಯಾವುದೇ ಆಧಾರಗಳಿಲ್ಲದೆ ಬಾಡಿಗೆ ನೀಡುವುದಾದರೂ ಹೇಗೆ ಎಂಬುದು ಮನೆಯ ಓನರ್​​​ಗಳ ವಾದ.

ವರದಿ: ಅಕ್ಷರಾ ಕಿರಣ್

mysore-dasara_Entry_Point