ಕನ್ನಡ ಸುದ್ದಿ  /  Karnataka  /  Bengaluru North East Dcp: New Rules For Police To Get Leave In North East Dcp Limits Circular Sent To All Stations

Bengaluru North East DCP: ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತುಕ್ರಮ ಎಂದ ಬೆಂಗಳೂರು ಡಿಸಿಪಿ; ರಜೆಯ ಕಾರಣಗಳ ಪಟ್ಟಿ ಪ್ರಕಟಿಸಿದ ಅಧಿಕಾರಿ!

Bengaluru North East DCP: ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಕಾರಣ ಮುಂದಿಟ್ಟುಕೊಂಡು ಬೆಂಗಳೂರು ಆಗ್ನೇಯ ಡಿಸಿಪಿ, ರಜೆಯ ಕಾರಣಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೇಕಾಬಿಟ್ಟಿ ರಜೆ ತಗೊಂಡ್ರೆ ಶಿಸ್ತುಕ್ರಮ ಎಂದು ಎಚ್ಚರಿಸಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

ಕರ್ನಾಟಕ ಪೊಲೀಸ್‌ (ಸಾಂದರ್ಭಿಕ ಚಿತ್ರ)
ಕರ್ನಾಟಕ ಪೊಲೀಸ್‌ (ಸಾಂದರ್ಭಿಕ ಚಿತ್ರ) (ANI)

ಬೆಂಗಳೂರು: ಪೊಲೀಸ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಗೆ ಹತ್ತಾರು ಕೆಲಸಗಳಿವೆ. ಸಣ್ಣಪುಟ್ಟ ಪೊಲೀಸ್‌ ಸೇವೆ ಸಿಗದೆ ಜನ ಪರದಾಡುತ್ತಿದ್ದಾರೆ. ಎಲ್ಲ ಠಾಣೆಗಳಲ್ಲೂ ಇರುವ ಕಾರಣ, ಪರಿಹಾರವನ್ನು ಠಾಣಾ ವ್ಯಾಪ್ತಿಯಲ್ಲೇ ಕಂಡಕೊಳ್ಳಲು ಪ್ರಯತ್ನಿಸುತ್ತಾರೆ.

ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ (Bengaluru North East DCP) ಸಿ.ಕೆ.ಬಾಬು ಹೊಸ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಸಿಬ್ಬಂದಿ ರಜೆಯ ಮೇಲೆ ನಿಗಾ ಇಟ್ಟಿದ್ದಾರೆ. ಅಲ್ಲದೆ, ಬೇಕಾಬಿಟ್ಟಿ ರಜೆ ಹಾಕದಂತೆ ಎಚ್ಚರಿಕೆ ನೀಡಿ ಜ್ಞಾಪನಾ ಪತ್ರವನ್ನು ತಮ್ಮ ವಿಭಾಗದ ಎಲ್ಲ ಠಾಣೆಗಳಿಗೂ ರವಾನಿಸಿದ್ದಾರೆ ಎಂದು ಟಿವಿ9 ಕನ್ನಡ ವರದಿ ಮಾಡಿದೆ.

ಜ್ಞಾಪನಾ ಪತ್ರದಲ್ಲಿ ಅವರು, ಬೇಕಾಬಿಟ್ಟಿ ರಜೆ ಕೇಳಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ, ಯಾವ ಸಂದರ್ಭದಲ್ಲಿ ರಜೆ ಕೇಳಬಹುದು ಎಂಬ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಅದರಲ್ಲಿ, ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರು ನಿಧನರಾದರೆ ಮಾತ್ರ ಸಿಬ್ಬಂದಿ ರಜೆ ಕೇಳಬಹುದು ಎಂಬ ಉಲ್ಲೇಖವಿದೆ.

ಯಾಕೆ ಈ ಜ್ಞಾಪನಾ ಪತ್ರ?

ಆಗ್ನೇಯ ವಿಭಾಗದಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಇನ್​ಸ್ಪೆಕ್ಟರ್ ದರ್ಜೆಯ ಅಧಿಕಾರಿಗಳಿಂದಲೂ ರಜೆಗೆ ನಿರಂತರ ಬೇಡಿಕೆ ಇದೆ. ಕೆಲವರು ಸಮರ್ಪಕ ಕಾರಣ ಕೊಡದೇ ರಜೆ ಕೇಳುತ್ತಿದ್ದಾರೆ. ಹೀಗೆ ಅನಗತ್ಯ ರಜೆ ತೆಗೆದುಕೊಳ್ಳುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಕಷ್ಟವಾಗುತ್ತದೆ. ಕಚೇರಿ ಕೆಲಸದಲ್ಲಿ ತೊಂದರೆಯಾಗುತ್ತಿದೆ. ಹೀಗೆ ನಿತ್ಯದ ಕಾರ್ಯನಿರ್ವಹಣೆಗೆ ಸಮಸ್ಯೆಯಾದ ಕಾರಣ ಡಿಸಿಪಿ ಸಿ.ಕೆ.ಬಾಬು ಈ ಜ್ಞಾಪನಾ ಪತ್ರ ರವಾನಿಸಿದ್ದಾರೆ.

ಜ್ಞಾಪನಾ ಪತ್ರದಲ್ಲಿ ಇರುವುದೇನು?

‘ಆಗ್ನೇಯ ವಿಭಾಗದ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಸಿ ಹುದ್ದೆಯಿಂದ ಪಿಐ ಹುದ್ದೆಯ ತನಕ ಎಲ್ಲ ಪೊಲೀಸ್ ಸಿಬ್ಬಂದಿ ಬೇರೆಬೇರೆ ಕಾರಣಗಳಿಂದ ರಜೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಠಾಣಾ ಕರ್ತವ್ಯಕ್ಕೆ ಹಾಗೂ ಕಚೇರಿ ಕರ್ತವ್ಯಕ್ಕೆ ಇದರಿಂದಾಗಿ ತೊಂದರೆ ಆಗುತ್ತಿದೆ. ಇನ್ನು ಮುಂದೆ ಯಾವುದೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಜೆ ತೆಗೆದುಕೊಳ್ಳಬೇಕಾದರೆ ಸಕಾರಣ ಇರಬೇಕು.

ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರೆ ಮಾತ್ರ ಹಾಗೂ ಮನೆಗಳಲ್ಲಿ ಯಾರಾದರೂ ಮೃತಪಟ್ಟಲ್ಲಿ ಮಾತ್ರ ರಜೆ ಪಡೆಯಲು ಸೂಚಿಸಲಾಗಿದೆ. ಸಕಾರಣವಿಲ್ಲದೆ ರಜೆ ಪಡೆಯುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು.

ಅದೇ ರೀತಿ, ಯಾವುದೇ ಠಾಣಾಧಿಕಾರಿಗಳು ಹಾಗೂ ಎಸಿಪಿ ಅವರು ಮೇಲೆ ತಿಳಿಸಿರುವ ಕಾರಣ ಹೊರತುಪಡಿಸಿ ಯಾವುದೇ ರೀತಿಯ ರಜೆಗೆ ಶಿಫಾರಸು ಮಾಡಬಾರದು ಸೂಚಿಸಲಾಗಿದೆ.

ಈ ಬಗ್ಗೆ ಪದೇಪದೆ ಡಿಸಿಪಿ ಕಚೇರಿಗೆ ಬಂದು ರಜೆಯ ಬಗ್ಗೆ ಪ್ರಸ್ತಾಪಿಸಿದರೂ ಸೂಕ್ತ ಶಿಸ್ತುಕ್ರಮ ಎದುರಿಸಬೇಕಾದೀತು. ರಜೆ ಹೋಗುವ ಎಲ್ಲ ಪೊಲೀಸ್ ಅಧಿಕಾರಿ / ಸಿಬ್ಬಂದಿ ಹಾಗೂ ಲಿಪಿಕ ಸಿಬ್ಬಂದಿ ಡಿಸಿಪಿಯಿಂದ ರಜೆ ಮಂಜೂರು ಮಾಡಿಸಿಕೊಳ್ಳಬೇಕು’ ಎಂಬ ಸಾರಾಂಶದ ಒಕ್ಕಣೆ ಜ್ಞಾಪನಾ ಪತ್ರದಲ್ಲಿ ಇದೆ.

ಅಪರಾಧ ಸುದ್ದಿಗಳು

ಹೊನ್ನಾಳಿ ಶಾಸಕ ರೇಣುಕಾಚಾರ್ಯರ ತಮ್ಮನ ಮಗ ನಾಪತ್ತೆ

Chandrashekhar missing case: ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ (Honnali BJP MLA MP Renukacharya) ಅವರ ಸಹೋದರನ ಪುತ್ರ ಚಂದ್ರಶೇಖರ್‌ ಭಾನುವಾರ ನಾಪತ್ತೆಯಾಗಿದ್ದಾರೆ. ಅವರ ಸುಳಿವು ಸಿಗದೆ ಸಂಕಟದಲ್ಲಿದೆ ಕುಟುಂಬ. ಶಾಸಕ ರೇಣುಕಾಚಾರ್ಯ ಕೂಡ ಕಳವಳಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

Fake Raid in Shivamogga: ಸರ್ಕಾರಿ ವಾಹನದಲ್ಲೇ ಬಂದು ವಸೂಲಿಗೆ ಇಳಿದ; ಜನರ ಪ್ರಶ್ನೆಗಳಿಗೆ ಅಂಜಿ ಓಡಿ ಹೋದ!; ಸ್ಕಾರ್ಪಿಯೋ ಈಗ ಪೊಲೀಸ್‌ ವಶ

ಆತ ಬಂದದ್ದು ಸರ್ಕಾರಿ ವಾಹನದಲ್ಲೇ. ವಸೂಲಿಗೂ ಇಳಿದ. ಜನರ ಪ್ರಶ್ನೆಗಳನ್ನು ಎದುರಿಸಲಾಗದೆ ತತ್ತರಿಸಿ ಅಲ್ಲಿಂದ ಕಾಲ್ಕಿತ್ತ. ಸ್ಕಾರ್ಪಿಯೋ ಈಗ ಪೊಲೀಸ್‌ ವಶದಲ್ಲಿದೆ. ಕುತೂಹಲಕಾರಿ ಪ್ರಕರಣ ಹಲವು ಸಂದೇಹಗಳನ್ನು ಹುಟ್ಟುಹಾಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ

IPL_Entry_Point