Bengaluru or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ಚರ್ಚೆ ಹುಟ್ಟುಹಾಕಿದ ನಾಮಫಲಕ
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ಚರ್ಚೆ ಹುಟ್ಟುಹಾಕಿದ ನಾಮಫಲಕ

Bengaluru or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ಚರ್ಚೆ ಹುಟ್ಟುಹಾಕಿದ ನಾಮಫಲಕ

Bengaluru ಮತ್ತು Bangaluru ಎಂದು ಎರಡು ಹೆಸರುಗಳನ್ನು ಉಲ್ಲೇಖಿಸಿರುವ ನಾಮಫಲಕವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿ ಕಂಡಿದ್ದು, ಚರ್ಚೆ ಹುಟ್ಟು ಹಾಕಿದೆ. (ವರದಿ-ಎಚ್.ಮಾರುತಿ)

Bengaluru or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ವ್ಯಾಕರಣ ತಪ್ಪಾಗಿದ್ದಕ್ಕೆ ಎಷ್ಟು ಗೊಂದಲ ನೋಡಿ
Bengaluru or Bangaluru ಯಾವುದು ಸರಿ? ಅಥವಾ ಎರಡೂ ಸ್ಥಳಗಳು ಇವೆಯೇ? ವ್ಯಾಕರಣ ತಪ್ಪಾಗಿದ್ದಕ್ಕೆ ಎಷ್ಟು ಗೊಂದಲ ನೋಡಿ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಪ್ರವೇಶಿಸುವ ಮಾರ್ಗದಲ್ಲಿರುವ ನಾಮ ಫಲಕವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಗೆ ಉಕ್ಕಿಸುವುದರ ಜತೆ ಜತೆಗೆ ಗಂಭೀರವಾಗಿ ಚಿಂತಿಸುವಂತೆಯೂ ಮಾಡಿದೆ. ಈ ಸೈನ್‌ ಬೋರ್ಡ್‌ ಅನ್ನು ಎಕ್ಸ್​​ನಲ್ಲಿ ಪೋಸ್ಟ್‌ ಮಾಡಿರುವ ಸಂಜೀವ್‌ ಎಂಬುವರು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ತುಂಬಾ ಹಗುರವಾಗಿ ಜೋಕ್‌ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರೆ, ಕೆಲವರು ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಂಜೀವ್‌ ಅವರು ಬೆಂಗಳೂರಿನ ಉದ್ಯಮಿ. ವಿಮಾನ ನಿಲ್ದಾಣ ಕಡೆಯಿಂದ ಹಿಂತಿರುಗುವಾಗ ಈ ಸೈನ್‌ ಬೋರ್ಡ್‌ ಅವರ ಕಣ್ಣಿಗೆ ಬಿದ್ದಿದ್ದು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸೈನ್‌ ಬೋರ್ಡ್​ನಲ್ಲಿ ನಾಲ್ಕು ಮಾರ್ಗಗಳನ್ನು ತೋರಿಸುತ್ತದೆ. ಮೊದಲನೆಯದ್ದು Bengaluru ಗೆ ದಾರಿ ತೋರಿಸಿದರೆ ನಾಲ್ಕನೆಯದ್ದು Bangaluruಗೆ ದಾರಿ ತೋರಿಸುತ್ತದೆ. ಪುಣ್ಯಕ್ಕೆ ಎರಡರ ದಿಕ್ಕು ಒಂದೇ ಕಡೆ ತೋರಿಸುತ್ತದೆ. ಮಧ್ಯದ ಎರಡೂ ಮಾರ್ಗಗಳಲ್ಲಿ ಒಂದು ಕೆಆರ್‌ ಪುರಂ ಮತ್ತು ತುಮಕೂರಿಗೆ ತೋರಿಸುತ್ತದೆ.

ಗೊಂದಲ ಸೃಷ್ಟಿಸೃತ್ತಿದೆ ಈ ಸೈನ್​ ಬೋರ್ಡ್

ಒಂದು ವೇಳೆ ಬೆಂಗಳೂರಿಗೆ ಯಾರಾದರೂ ಹೊಸಬರು ಬಂದರೆ Bengaluru ಮತ್ತು Bangaluru ಎರಡೂ ಬೇರೆ ಬೇರೆ ಎಂದು ಭಾವಿಸಿಕೊಂಡು ಗೊಂದಲಕ್ಕೀಡಾಗುತ್ತಾರೆ ಎಂದು ಕೆಲವರು ಬರೆದುಕೊಂಡಿದ್ದಾರೆ. ಸಂಜೀವ್‌ ಅವರ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಒಬ್ಬರು ಈ ಸೈನ್‌ ಬೋರ್ಡ್‌ ಹೆಬ್ಬಾಳ ಪ್ರವೇಶ ಮಾಡುವಾಗ ಕಾಣಿಸುತ್ತದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ವಾಹನ ಚಾಲಕರು ಗೊಂದಲಕ್ಕೀಡಾಗಿ ಚಾಲನೆ ನಿಧಾನಗೊಳಿಸದರೆ ಅಪಘಾತಗಳು ಕಡಿಮೆಯಾಗಬಹುದು ಎಂಬ ಉದ್ಧೇಶದಿಂದ ಈ ಫಲಕವನ್ನು ಹಾಕಿರಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರೇ ಗೊಂದಲಕ್ಕೀಡಾಗಬಹುದು ಎಂದಿದ್ದಾರೆ.

Bengaluru, bangaluru, ಕೆಆರ್‌ ಪುರ ಎಲ್ಲವೂ ಬೆಂಗಳೂರಿನ ಒಡಲಲ್ಲಿಯೇ ಇದೆ. ಇದರಲ್ಲಿ ನಗುವಂತಹುದ್ದೇನೂ ಇಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಇಲ್ಲಿ ಒಂದು ಸೈನ್‌ ಬೋರ್ಡ್‌ ಆದರೂ ಇದೆ. ಕೆಲವು ರಸ್ತೆ, ಏರಿಯಾ ಜಂಕ್ಷನ್​ಗಳಲ್ಲಿ  ನಾಮಫಲಕಗಳೇ ಇರುವುದಿಲ್ಲ. ವಿಳಾಸ ಹುಡುಕುವುದರಲ್ಲೇ ಸಮಯ ಕಳೆದು ಹೋಗುತ್ತದೆ ಎಂದು ಅಲವತ್ತುಕೊಂಡರೆ ಮತ್ತೊಬ್ಬರು ಇನ್ನೂ ಕೆಲವು ಕಡೆ ಗೂಗಲ್‌ ಕೂಡಾ ಸಹಾಯಕ್ಕೆ ಬರಲಾರದು ಎಂದು ಉತ್ತರಿಸಿದ್ದಾರೆ. ಮತ್ತೊಬ್ಬರು ಇರುವುದು banglore ( ಬ್ಯಾಂಗಲೋರ್), ಬೆಂಗಳೂರು ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಎಲ್ಲರೂ ಬ್ಯಾಂಗಲೋರ್ ಎಂದೇ ಉಚ್ಛರಿಸುವುದನ್ನು ನೋಡಿ ಹೀಗೆಂದಿದ್ದಾರೆ.

ಎರಡನ್ನೂ ಕನ್ನಡದಲ್ಲಿ ಓದಿಕೊಂಡರೆ ಬೆಂಗಳೂರು ಎಂದೇ ಓದಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕನ್ನಡ ಕಲಿಯಿರಿ ಎಂದು ಸಲಹೆ ನೀಡಿದ್ದಾರೆ. ಕೆಲವರು ಬಿಬಿಎಂಪಿ, ಪೊಲೀಸ್‌, ಸಂಚಾರ ಪೊಲೀಸ್‌, ಸಚಿವರು ಮತ್ತು ಸರ್ಕಾರವನ್ನು ಟ್ಯಾಗ್‌ ಮಾಡಿ ಸರಿಪಡಿಸಿ ಎಂದು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ಅನೇಕ ಸೈನ್‌ ಬೋರ್ಡ್​ಗಳನ್ನು ಕಾಣಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಒಂದು ಒಂದೇ ಸ್ಪೆಲ್ಲಿಂಗ್ ಮಿಸ್ಟೇಕ್​ನಿಂದಾಗಿ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ.

Whats_app_banner