ಕನ್ನಡ ಸುದ್ದಿ / ಕರ್ನಾಟಕ /
ಕಾರಿನ ಸನ್ ರೂಫ್ ತೆರೆದು ಅಸಭ್ಯವಾಗಿ ವರ್ತಿಸುತ್ತಿದ್ದ ಜೋಡಿ; ದಂಡ ವಿಧಿಸಿದ ಪೊಲೀಸರು
ಹಿಂಬದಿ ವಾಹನ ಸವಾರರೊಬ್ಬರು ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಬೆಂಗಳೂರು: ಚಲಿಸುತ್ತಿದ್ದ ಕಾರಿನ ಸನ್ ರೂಫ್ ತೆರೆದು, ಜೋಡಿಯೊಂದು ನಿಂತುಕೊಂಡು ಮುದ್ದಾಡುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ ಪ್ರಕರಣದಲ್ಲಿ ಕಾರಿನ ಮಾಲೀಕನಿಗೆ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ. ಹಲಸೂರು ಸಂಚಾರ ಠಾಣಾ ಪೊಲೀಸರು, ರೂ.1,500 ದಂಡ ವಿಧಿಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಮೇ 26ರಂದು ರಾತ್ರಿ 11.30ರ ವೇಳೆಗೆ ಈ ಘಟನೆ ನಡೆದಿದೆ.
ಈ ಜೋಡಿಯು ಕಾರಿನ ಸನ್ ರೂಫ್ ತೆರೆದು ಅಸಭ್ಯವಾಗಿ ವರ್ತಿಸುತ್ತಿದ್ದರು. ಹಿಂಬದಿ ವಾಹನ ಸವಾರರೊಬ್ಬರು ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದರು. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಳಿಕ ಸಂಚಾರ ಪೊಲೀಸರು ಕಾರಿನ ನೋಂದಣಿ ಸಂಖ್ಯೆ ಆಧರಿಸಿ, ಮಾಲೀಕನನ್ನು ಪತ್ತೆ ಹಚ್ಚಿ ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದಾರೆ.